-
ಯಾರು ಸ್ವರ್ಗಕ್ಕೆ ಹೋಗುತ್ತಾರೆ?ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
-
-
ಎಷ್ಟು ಜನ ಸ್ವರ್ಗಕ್ಕೆ ಹೋಗುತ್ತಾರೆ?
ಬೈಬಲ್ ಹೇಳುವ ಪ್ರಕಾರ 1,44,000 ಮಂದಿ ಸ್ವರ್ಗಕ್ಕೆ ಹೋಗುತ್ತಾರೆ. (ಪ್ರಕಟನೆ 7:4) ಪ್ರಕಟನೆ 14:1-3ರಲ್ಲಿ ಅಪೊಸ್ತಲ ಯೋಹಾನ ನೋಡಿದ ದರ್ಶನದಲ್ಲಿ, “ಕುರಿಮರಿ ಚೀಯೋನ್ ಬೆಟ್ಟದ ಮೇಲೆ ನಿಂತಿತ್ತು. ಅದ್ರ ಜೊತೆ 1,44,000 ಜನ ಇದ್ರು.” ಈ ದರ್ಶನದಲ್ಲಿರುವ “ಕುರಿಮರಿ” ಯೇಸು. (ಯೋಹಾನ 1:29; 1 ಪೇತ್ರ 1:19) ಯೇಸು ಮತ್ತು ಅವನ ಜೊತೆ ಆಳ್ವಿಕೆ ಮಾಡುವ 1,44,000 ಜನರು ನಿಂತಿರೋ ಉನ್ನತ ಸ್ಥಾನವೇ “ಚೀಯೋನ್ ಬೆಟ್ಟ.”—ಕೀರ್ತನೆ 2:6; ಇಬ್ರಿಯ 12:22.
ಕ್ರಿಸ್ತನ ಜೊತೆ ಆಳ್ವಿಕೆ ಮಾಡಕ್ಕೆ “ದೇವರು ಯಾರನ್ನ ಕರೆದಿದ್ದಾನೋ ಯಾರನ್ನ ಆರಿಸ್ಕೊಂಡಿದ್ದಾನೋ” ಅವರನ್ನ ‘ಚಿಕ್ಕ ಹಿಂಡು’ ಅಂತ ಕರೆಯುತ್ತಾರೆ. (ಪ್ರಕಟನೆ 17:14; ಲೂಕ 12:32) ಯೇಸುವಿನ ಇಡೀ ಮಂದೆಗೆ ಹೋಲಿಸಿದ್ರೆ ಈ ಗುಂಪು ತುಂಬ ಚಿಕ್ಕದು ಅಂತ ಗೊತ್ತಾಗುತ್ತೆ.—ಯೋಹಾನ 10:16.
-
-
ಯಾರು ಸ್ವರ್ಗಕ್ಕೆ ಹೋಗುತ್ತಾರೆ?ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
-
-
ತಪ್ಪು: ಪ್ರಕಟನೆಯಲ್ಲಿ ಹೇಳಿರುವ 1,44,000 ಈ ಸಂಖ್ಯೆ ಸಾಂಕೇತಿಕವಾಗಿದೆ, ಅಕ್ಷರಾರ್ಥಕವಾಗಿಲ್ಲ.
ಸರಿ: ಪ್ರಕಟನೆ ಪುಸ್ತಕದಲ್ಲಿ ಸಾಂಕೇತಿಕ ಸಂಖ್ಯೆಗಳು ಇವೆ. ಕೆಲವು ಅಕ್ಷರಾರ್ಥಕ ಸಂಖ್ಯೆಗಳು ಇವೆ. ಉದಾಹರಣೆಗೆ “ಕುರಿಮರಿಯ 12 ಅಪೊಸ್ತಲರ ಹೆಸ್ರು” ಬರೆಯಲಾಗಿದೆ. (ಪ್ರಕಟನೆ 21:14) ಪ್ರಕಟನೆ ಪುಸ್ತಕದಲ್ಲಿ 1,44,000 ಈ ಸಂಖ್ಯೆಯನ್ನ ಅಕ್ಷರಾರ್ಥಕವಾಗಿ ಬಳಸಲಾಗಿದೆ. ಅದಕ್ಕಿರುವ ಕಾರಣಗಳನ್ನ ನಾವೀಗ ನೋಡೋಣ.
ಪ್ರಕಟನೆ 7:4ರಲ್ಲಿ “ಮುದ್ರೆ ಒತ್ತಿಸ್ಕೊಂಡವ್ರ ಸಂಖ್ಯೆ” 1,44,000 ಅಂತ ಇದೆ. ಇವರು ಸ್ವರ್ಗಕ್ಕೆ ಹೋಗಲು ಆಯ್ಕೆಯಾದವರು. ಮುಂದಿನ ವಚನಗಳಲ್ಲಿ ಇನ್ನೊಂದು ಗುಂಪಿನ ಬಗ್ಗೆ ಹೇಳ್ತಾ “ಯಾರಿಂದಾನೂ ಲೆಕ್ಕಮಾಡೋಕೆ ಆಗದಷ್ಟು ಜನ್ರ ಒಂದು ದೊಡ್ಡ ಗುಂಪು ಕಾಣಿಸ್ತು” ಅಂತ ಇದೆ. “ದೊಡ್ಡ ಗುಂಪು” ಕೂಡ ದೇವರಿಂದ ರಕ್ಷಣೆ ಪಡೆಯುತ್ತೆ. (ಪ್ರಕಟನೆ 7:9, 10) ಒಂದುವೇಳೆ 1,44,000 ಸಂಖ್ಯೆ ಸಾಂಕೇತಿಕವಾಗಿದ್ದರೆ ಮತ್ತು ಒಂದು ನಿರ್ದಿಷ್ಟ ಸಂಖ್ಯೆ ಇಲ್ಲದ ಗುಂಪಿಗೆ ಸೂಚಿಸಿದ್ರೆ ಈ ಗುಂಪಿಗೂ ದೊಡ್ಡ ಗುಂಪಿಗೂ ಯಾವ ವ್ಯತ್ಯಾಸನೂ ಇರುತ್ತಿರಲಿಲ್ಲ.a
ಅಷ್ಟೇ ಅಲ್ಲ 1,44,000 ಮಂದಿಯನ್ನ “ಮನುಷ್ಯರಿಂದ ಮೊದಲ ಬೆಳೆಯಾಗಿ ಕೊಂಡ್ಕೊಂಡ್ರು” ಅಂತ ಬೈಬಲ್ ಹೇಳುತ್ತೆ. (ಪ್ರಕಟನೆ 14:4) “ಮೊದಲ ಬೆಳೆ” ಅನ್ನೋ ಪದನೇ ಒಂದು ಚಿಕ್ಕ ಗುಂಪನ್ನ ಪ್ರತಿನಿಧಿಯಾಗಿ ಆರಿಸಿಕೊಂಡಿದ್ದಾರೆ ಅಂತ ಸೂಚಿಸುತ್ತೆ. ಇವರು ಯೇಸು ಕ್ರಿಸ್ತನ ಜೊತೆ ಸ್ವರ್ಗದಿಂದ ಭೂಮಿ ಮೇಲಿರೋ ಅಸಂಖ್ಯಾತ ಜನರ ಮೇಲೆ ಆಳ್ವಿಕೆ ಮಾಡ್ತಾರೆ. ಯೆಹೋವನ ಆ ಉದ್ದೇಶವನ್ನ ನೆರವೇರಿಸೋ ಅವಕಾಶ ಇವರಿಗಿದೆ.—ಪ್ರಕಟನೆ 5:10.
a ಪ್ರಕಟನೆ 7:4ರಲ್ಲಿರೋ 1,44,000 ಸಂಖ್ಯೆ ಬಗ್ಗೆ ಪ್ರೋಫೆಸರ್ ರಾಬರ್ಟ್ ಎಲ್. ಥಾಮಸ್ ಹೀಗೆ ಹೇಳ್ತಾರೆ: “ಇದು ಒಂದು ನಿರ್ದಿಷ್ಟ ಸಂಖ್ಯೆಯಾಗಿದೆ. ಪ್ರಕಟನೆ 7:9ರಲ್ಲಿ ದೊಡ್ಡ ಗುಂಪಿನ ಬಗ್ಗೆ ಯಾರಿಂದಲೂ ಎಣಿಸೋಕ್ಕಾಗದ ಸಂಖ್ಯೆ ಬಗ್ಗೆ ಹೇಳಲಾಗಿದೆ. ಒಂದುವೇಳೆ ಈ ಸಂಖ್ಯೆ ಅಕ್ಷರಾರ್ಥಕವಾಗಿಲ್ಲ ಅಂದ್ರೆ ಬೈಬಲಿನಲ್ಲಿರೋ ಯಾವ ಸಂಖ್ಯೆಯನ್ನು ನಾವು ಅಕ್ಷರಾರ್ಥಕವಾಗಿ ತೊಗೊಳಕ್ಕಾಗಲ್ಲ.”—ಪ್ರಕಟನೆ 1–7: ಆ್ಯನ್ ಎಕ್ಸೆಜೆಟಿಕಲ್ ಕಾಮೆಂಟ್ರಿ, ಪುಟ 474.
-