-
ಮೊದಲನೆಯ ವಿಪತ್ತು—ಮಿಡಿತೆಗಳುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
13. ಮಿಡಿತೆಗಳಿಗೆ ಯಾವ ತೋರಿಕೆಯು ಇದೆ?
13 ಆ ಮಿಡಿತೆಗಳಿಗೆ ಎಂಥ ಗಮನಾರ್ಹ ತೋರಿಕೆಯಿದೆ! ಯೋಹಾನನು ಅದನ್ನು ವರ್ಣಿಸುತ್ತಾನೆ: “ಆ ಮಿಡಿತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು; ಆವುಗಳ ತಲೆಯ ಮೇಲೆ ಚಿನ್ನದಂತಹ ಕಿರೀಟಗಳಂತೆ ತೋರಿ ಬಂದ ಏನೋ ಇದ್ದವು; ಅವುಗಳ ಮುಖಗಳು ಪುರುಷರ ಮುಖಗಳ ಹಾಗೆ ಇದ್ದವು; ಆದರೆ ಸ್ತ್ರೀಯರ ಕೂದಲಿನಂತಿರುವ ಕೂದಲು ಇತ್ತು; ಅವುಗಳ ಹಲ್ಲುಗಳು ಸಿಂಹದ ಹಲ್ಲುಗಳ ಹಾಗಿದ್ದವು. ಅವುಗಳಿಗೆ ಕಬ್ಬಿಣದ ಕವಚಗಳಂತಿದ್ದ ಕವಚಗಳು ಇದ್ದವು; ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ಅನೇಕ ಕುದುರೆಗಳ ರಥಗಳ ಶಬ್ದದ ಹಾಗೆ ಇತ್ತು.”—ಪ್ರಕಟನೆ 9:7-9, NW.
-
-
ಮೊದಲನೆಯ ವಿಪತ್ತು—ಮಿಡಿತೆಗಳುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
15. ಮಿಡಿತೆಗಳ (ಎ) ಕಬ್ಬಿಣದ ಕವಚಗಳು, (ಬಿ) ಪುರುಷರಂತಹ ಮುಖಗಳು (ಸಿ) ಸ್ತ್ರೀಯರದ್ದಂತಹ ಕೂದಲುಗಳು (ಡಿ) ಸಿಂಹಕ್ಕಿರುವಂತಹ ಹಲ್ಲುಗಳು (ಇ) ಬಹಳ ಶಬ್ದವನ್ನು ಮಾಡುವುದು—ಇವುಗಳಿಂದ ಏನು ಸೂಚಿತವಾಗಿದೆ?
15 ದರ್ಶನದಲ್ಲಿ, ಮಿಡಿತೆಗಳಿಗೆ ಕಬ್ಬಿಣದ ಕವಚಗಳಿದ್ದವು, ಇದು ಮುರಿಯಲಸಾಧ್ಯವಾದ ನೀತಿಯನ್ನು ಸಂಕೇತಿಸುತ್ತವೆ. (ಎಫೆಸ 6:14-18) ಅವುಗಳಿಗೆ ಪುರುಷರ ಮುಖಗಳು ಸಹ ಇವೆ, ಪ್ರೀತಿಯ ದೇವರಾಗಿರುವವನ ಸ್ವರೂಪದಲ್ಲಿ ಮನುಷ್ಯನು ಉಂಟುಮಾಡಲ್ಪಟ್ಟದ್ದರಿಂದ ಈ ವೈಶಿಷ್ಟ್ಯವು ಪ್ರೀತಿಯ ಗುಣವನ್ನು ತೋರಿಸುತ್ತದೆ. (ಆದಿಕಾಂಡ 1:26; 1 ಯೋಹಾನ 4:16) ಅವುಗಳ ಕೂದಲು ಸ್ತ್ರೀಯರದ್ದರಂತೆ ಉದ್ದವಾಗಿವೆ, ಅದು ತಮ್ಮ ರಾಜನಿಗೆ, ಅಧೋಲೋಕದ ದೂತನಿಗೆ ಅಧೀನತೆಯನ್ನು ಯುಕ್ತವಾಗಿಯೇ ಚಿತ್ರಿಸುತ್ತದೆ. ಮತ್ತು ಅವರ ಹಲ್ಲುಗಳು ಸಿಂಹದ ಹಲ್ಲುಗಳನ್ನು ಹೋಲುತ್ತವೆ. ಸಿಂಹವು ಮಾಂಸವನ್ನು ಹರಿಯಲು ತನ್ನ ಹಲ್ಲುಗಳನ್ನು ಉಪಯೋಗಿಸುತ್ತದೆ. ಯೋಹಾನ ವರ್ಗವು 1919 ರಿಂದ ಇಂದಿನ ವರೆಗೂ ಗಟ್ಟಿಯಾದ ಆತ್ಮಿಕ ಆಹಾರವನ್ನು—ವಿಶೇಷವಾಗಿ “ಯೂದಾ ಕುಲದಲ್ಲಿ ಜನಿಸಿದ ಸಿಂಹ” ವಾದ ಯೇಸು ಕ್ರಿಸ್ತನಿಂದ ಆಳಲ್ಪಡುತ್ತಿರುವ ದೇವರ ರಾಜ್ಯದ ಕುರಿತಾದ ಸತ್ಯಗಳನ್ನು—ಪುನಃ ತೆಗೆದುಕೊಳ್ಳಲು ಶಕ್ತವಾಗಿದೆ. ಸಿಂಹವು ಹೇಗೆ ಧೈರ್ಯವನ್ನು ಸಂಕೇತಿಸುತ್ತದೋ, ಹಾಗೆಯೇ ಈ ಕಠಿನವಾಗಿ ಬಡಿಯುವ ಸಂದೇಶವನ್ನು ಜೀರ್ಣಿಸುವುದಕ್ಕೆ, ಅದನ್ನು ಪ್ರಕಾಶನಗಳಲ್ಲಿ ಮುಂತರಲಿಕ್ಕೆ ಮತ್ತು ಭೂಸುತ್ತಲೂ ಅದನ್ನು ಹಂಚುವುದಕ್ಕೆ ಮಹಾ ಧೈರ್ಯವು ಬೇಕಿತ್ತು. “ಅನೇಕ ಕುದುರೆಗಳ ರಥಗಳ ಶಬ್ದದ ಹಾಗೆ” ಈ ಲಾಕ್ಷಣಿಕ ಮಿಡಿತೆಗಳು ಬಹಳ ದೊಡ್ಡ ಶಬ್ದವನ್ನು ಮಾಡುತ್ತವೆ. ಪ್ರಥಮ ಶತಮಾನದ ಕ್ರೈಸ್ತರ ಮಾದರಿಯ ಬಳಿಕ, ಅವರು ಸುಮ್ಮನಿರಲು ಉದ್ದೇಶಿಸಿರುವುದಿಲ್ಲ.—1 ಕೊರಿಂಥ 11:7-15; ಪ್ರಕಟನೆ 5:5.
-