ಚೌಕ 10ಬಿ
‘ಒಣಗಿದ ಮೂಳೆಗಳು’ ಮತ್ತು ‘ಇಬ್ರು ಸಾಕ್ಷಿಗಳಿಗೆ’ ಯಾವ ಸಂಬಂಧ ಇದೆ?
1919 ರಲ್ಲಿ ಒಂದಕ್ಕೊಂದು ಸಂಬಂಧಿಸಿದ ಎರಡು ಭವಿಷ್ಯವಾಣಿಗಳು ನೆರವೇರಿದವು. ಒಂದು, ‘ಒಣಗಿಹೋದ ಮೂಳೆಗಳ’ ಭವಿಷ್ಯವಾಣಿ, ಎರಡು, “ಇಬ್ರು ಸಾಕ್ಷಿಗಳ” ಭವಿಷ್ಯವಾಣಿ. ಮೂಳೆಗಳ ಒಣಗಿ ಹೋದ ಸ್ಥಿತಿ ದೀರ್ಘ ಕಾಲಾವಧಿಯನ್ನ ಸೂಚಿಸ್ತಿತ್ತು. (ಇದು ಅನೇಕ ಶತಮಾನಗಳ ಸಮಯವನ್ನ ಸೂಚಿಸ್ತಿತ್ತು ಅಂತ ಆಮೇಲೆ ಗೊತ್ತಾಯ್ತು) ದೇವಜನರ ದೊಡ್ಡ ಗುಂಪು ಜೀವಕ್ಕೆ ಬಂದಾಗ ಈ ಕಾಲಾವಧಿ ಮುಗಿಯಿತು. (ಯೆಹೆ. 37:2-4; ಪ್ರಕ. 11:1-3, 7-13) “ಇಬ್ರು ಸಾಕ್ಷಿಗಳ” ಭವಿಷ್ಯವಾಣಿಯು ಸ್ವಲ್ಪ ಕಾಲಾವಧಿಯನ್ನ ಸೂಚಿಸ್ತಿತ್ತು. (1914 ರ ಕೊನೆಯಿಂದ 1919 ರ ಆರಂಭ) ಈ ಸಮಯಾವಧಿಯು ದೇವಜನರ ಒಂದು ಚಿಕ್ಕ ಗುಂಪು ಆರಂಭವಾದಾಗ ಕೊನೆಯಾಯ್ತು. ಈ ಎರಡು ಭವಿಷ್ಯವಾಣಿಗಳು ಸಾಂಕೇತಿಕವಾಗಿ ಮತ್ತೆ ಜೀವಕ್ಕೆ ಬರೋದನ್ನ ಸೂಚಿಸ್ತಿದ್ವು ಮತ್ತು ಈ ಭವಿಷ್ಯವಾಣಿಗಳು 1919 ರಲ್ಲಿ ನೆರವೇರಿದವು. ಆಗ ಯೆಹೋವ ದೇವರು ತನ್ನ ಅಭಿಷಿಕ್ತ ಸೇವಕರನ್ನ ಮಹಾ ಬಾಬೆಲಿನ ಬಂಧಿವಾಸದಿಂದ ಬಿಡಿಸಿದನು ಮತ್ತು ಅವರನ್ನ ಒಂದು ಸಭೆಯಾಗಿ ಒಟ್ಟುಗೂಡಿಸಿ ಪುನಃಸ್ಥಾಪಿಸುವ ಮೂಲಕ ತಮ್ಮ ಕಾಲಿನ ಮೇಲೆ ‘ನಿಂತ್ಕೊಳ್ಳುವಂತೆ’ ಮಾಡಿದನು.—ಯೆಹೆ. 37:10.
ಈ ಎರಡೂ ಭವಿಷ್ಯವಾಣಿಗಳ ನೆರವೇರಿಕೆಯಲ್ಲಿ ಒಂದು ಪ್ರಾಮುಖ್ಯ ವ್ಯತ್ಯಾಸ ಇದೆ ಅನ್ನೋದನ್ನ ನೆನಪಲ್ಲಿಡಿ. ‘ಒಣಗಿಹೋದ ಮೂಳೆಗಳ’ ಬಗ್ಗೆ ಇರೋ ಭವಿಷ್ಯವಾಣಿ ಎಲ್ಲಾ ಅಭಿಷಿಕ್ತ ಉಳಿಕೆಯವರು ಮತ್ತೆ ಜೀವಂತವಾಗಿ ಎದ್ದು ಬರುತ್ತಾರೆ ಅನ್ನೋದನ್ನ ಸೂಚಿಸುತ್ತವೆ. ಆದ್ರೆ “ಇಬ್ರು ಸಾಕ್ಷಿಗಳ” ಬಗ್ಗೆ ಇರೋ ಭವಿಷ್ಯವಾಣಿ ಬಗ್ಗೆ ಏನು? ಇವರು ಸಾಂಕೇತಿಕವಾಗಿ ದೇವರ ಅಭಿಷಿಕ್ತ ಸೇವಕರಲ್ಲಿ ಕೆಲವರು ಮತ್ತೆ ಜೀವಂತವಾಗಿ ಎದ್ದು ಬರೋದನ್ನ ಸೂಚಿಸುತ್ತಾರೆ. ಇವರು ಸಂಘಟನೆಯ ಮೇಲ್ವಿಚಾರಣೆ ನಡೆಸುವ “ನಂಬಿಗಸ್ತ, ವಿವೇಕಿ ಆದ ಆಳು” ಆಗಿದ್ದಾರೆ. ಅವರೇ ಆಡಳಿತ ಮಂಡಲಿಯ ಸದಸ್ಯರು.—ಮತ್ತಾ. 24:45; ಪ್ರಕ. 11:6.a
‘ಮೂಳೆಗಳಿಂದ ತುಂಬಿದ್ಧ ಕಣಿವೆ ಬಯಲು’—ಯೆಹೆ. 37:1
ಕ್ರಿ.ಶ. 100 ರ ನಂತ್ರ
ಕ್ರಿ.ಶ. 2 ನೇ ಶತಮಾನದಿಂದ ಅಭಿಷಿಕ್ತ ಕ್ರೈಸ್ತ ಸಭೆ ಸಾಂಕೇತಿಕವಾಗಿ ಕೊಲ್ಲಲ್ಪಟ್ಟಾಗ ‘ಕಣಿವೆ ಬಯಲು’ ‘ಮೂಳೆಗಳಿಂದ’ ತುಂಬಿಕೊಂಡಿತು
1919 ರ ಆರಂಭದಿಂದ
1919: ‘ಒಣಗಿದ ಮೂಳೆಗಳಿಗೆ’ ಜೀವ ಬಂತು. ಇದು ಯೆಹೋವ ದೇವರು ಅಭಿಷಿಕ್ತರನ್ನ ಮಹಾ ಬಾಬೆಲಿಂದ ಬಿಡುಗಡೆ ಮಾಡಿ, ಸಭೆಯನ್ನ ಪುನಃಸ್ಥಾಪಿಸಿದಾಗ ನೆರವೇರಿತು
‘ಇಬ್ರು ಸಾಕ್ಷಿಗಳು’—ಪ್ರಕ. 11:3
1914 ರ ಕೊನೆಯಲ್ಲಿ
“ಗೋಣಿ ಉಟ್ಕೊಂಡು” ಸಾರ್ತಿದ್ದಾರೆ
1914: ‘ಇಬ್ರು ಸಾಕ್ಷಿಗಳು’ ‘ಗೋಣಿ ಬಟ್ಟೆಯನ್ನ’ ಹಾಕಿಕೊಂಡು ಮೂರುವರೆ ವರ್ಷ ಸಾರಿದ್ರು. ಆ ಕಾಲದ ಕೊನೆಯಲ್ಲಿ ಅವರು ಸಾಂಕೇತಿಕವಾಗಿ ಕೊಲ್ಲಲ್ಪಟ್ಟರು
ಸಾಂಕೇತಿಕ ಸಾವು
1919 ರ ಆರಂಭದಿಂದ
1919: ‘ಇಬ್ರು ಸಾಕ್ಷಿಗಳಿಗೆ’ ಜೀವ ಬಂತು. ಸಂಘಟನೆಯಲ್ಲಿ ಮೇಲ್ವಿಚಾರಣೆ ಮಾಡ್ತಿದ್ದ ಅಭಿಷಿಕ್ತ ಸಹೋದರರ ಚಿಕ್ಕ ಗುಂಪನ್ನ ‘ನಂಬಿಗಸ್ತ, ವಿವೇಕಿ ಆದ ಆಳಾಗಿ’ ನೇಮಿಸಿದಾಗ ಈ ಭವಿಷ್ಯವಾಣಿ ನೆರವೇರಿತು
a ಮಾರ್ಚ್, 2016 ಕಾವಲಿನಬುರುಜುವಿನಲ್ಲಿರೋ “ವಾಚಕರಿಂದ ಪ್ರಶ್ನೆಗಳು” ನೋಡಿ.