-
ಯೋಹಾನನು ಮಹಿಮಾಭರಿತ ಯೇಸುವನ್ನು ನೋಡುತ್ತಾನೆಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
12. “ಹದವಾದ, ಉದ್ದ ಇಬ್ಬಾಯಿ ಕತ್ತಿ”ಯ ಸೂಚಿತಾರ್ಥವೇನು?
12 “ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, ಮತ್ತು ಅವನ ಬಾಯಿಯಿಂದ ಹದವಾದ, ಉದ್ದ ಇಬ್ಬಾಯಿ ಕತ್ತಿಯು ಮುಂದಕ್ಕೆ ಚಾಚಿತ್ತು, ಮತ್ತು ಅವನ ಮುಖವು ಶಕ್ತಿಯಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು. ಮತ್ತು ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು.” (ಪ್ರಕಟನೆ 1:16, 17ಎ, NW) ಯೇಸುವು ಸ್ವತಃ ಏಳು ನಕ್ಷತ್ರಗಳ ಅರ್ಥವನ್ನು ಸ್ವಲ್ಪ ಸಮಯದ ನಂತರ ವಿವರಿಸುತ್ತಾನೆ. ಆದರೆ ಅವನ ಬಾಯಿಯಿಂದ ಏನು ಹೊರಡುತ್ತದೋ ಅದನ್ನು ಗಮನಿಸಿರಿ: “ಒಂದು ಹದವಾದ, ಉದ್ದ ಇಬ್ಬಾಯಿ ಕತ್ತಿ.” ಎಂತಹ ಒಂದು ಹೊಂದಿಕೆಯಿರುವ ಲಕ್ಷಣ! ಯಾಕಂದರೆ ಅವನ ವಿರೋಧಿಗಳ ವಿರುದ್ಧವಾಗಿ ಯೆಹೋವನ ಕಟ್ಟಕಡೆಯ ನ್ಯಾಯತೀರ್ಪನ್ನು ಉಚ್ಚರಿಸಲು ನೇಮಿಸಲ್ಪಟ್ಟವನು ಯೇಸುವಾಗಿದ್ದಾನೆ. ಅವನ ಬಾಯಿಯಿಂದ ಬರುವ ನಿರ್ಧಾರಾತ್ಮಕ ಉಚ್ಚಾರಣೆಗಳು ಎಲ್ಲಾ ದುಷ್ಟರ ಹತಿಸುವಿಕೆಯಲ್ಲಿ ಅಂತ್ಯಗೊಳ್ಳುವುವು.—ಪ್ರಕಟನೆ 19:13, 15.
13. (ಎ) ಯೇಸುವಿನ ಹೊಳೆಯುವ, ಪ್ರಕಾಶಮಯ ಮುಖವು ನಮಗೆ ಯಾವುದನ್ನು ನೆನಪಿಸುತ್ತದೆ? (ಬಿ) ಯೇಸುವಿನ ಕುರಿತಾದ ಯೋಹಾನನ ವಿವರಣೆಯಿಂದ ನಾವು ಪಡೆಯುವ ಸಮಗ್ರ ಅಭಿಪ್ರಾಯವೇನು?
13 ಯೇಸುವಿನ ಹೊಳಪಿನ, ಪ್ರಕಾಶಮಯ ಮುಖವು, ಸೀನಾಯಿ ಬೆಟ್ಟದ ಮೇಲೆ ಯೆಹೋವನೊಂದಿಗೆ ಮೋಶೆಯು ಸಂಭಾಷಣೆ ನಡಿಸಿದ ಅನಂತರ ಅವನ ಮುಖದಿಂದ ಪ್ರಕಾಶಿಸುವ ಕಿರಣಗಳು ಹೊರಟದ್ದನ್ನು ನಮ್ಮ ನೆನಪಿಗೆ ತರುತ್ತದೆ. (ವಿಮೋಚನಕಾಂಡ 34:29, 30) 1,900 ವರ್ಷಗಳ ಹಿಂದೆ ತನ್ನ ಮೂವರು ಅಪೊಸ್ತಲರ ಮುಂದೆ ಯೇಸುವು ರೂಪಾಂತರಗೊಂಡಾಗ ನಡೆದದ್ದನ್ನೂ ನೆನಪಿಸಿರಿ, “ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು, ಮತ್ತು ಆತನ ಹೊರ ಉಡುಪುಗಳು ಬೆಳಕಿನಂತೆ ಬೆಳ್ಳಗಾದವು.” (ಮತ್ತಾಯ 17:2) ಈಗ, ಕರ್ತನ ದಿನದಲ್ಲಿ ಯೇಸುವಿನ ಪ್ರತಿನಿಧಿತ್ವದ ದರ್ಶನವೊಂದರಲ್ಲಿ, ಅವನ ಮುಖವು ತದ್ರೀತಿಯಲ್ಲಿ ಯೆಹೋವನ ಸಮ್ಮುಖದಲ್ಲಿರುವವನೊಬ್ಬನ ಪ್ರಜ್ವಲಿಸುವ ಕಾಂತಿಯನ್ನು ಪ್ರತಿಬಿಂಬಿಸುತ್ತದೆ. (2 ಕೊರಿಂಥ 3:18) ವಾಸ್ತವದಲ್ಲಿ, ಯೋಹಾನನ ದರ್ಶನದ ಮೂಲಕ ನೀಡಲ್ಪಟ್ಟ ಒಂದು ಸಮಗ್ರ ಭಾವವು ಮಹಿಮೆಯ ಪ್ರಜ್ವಲತೆಯಾಗಿರುತ್ತದೆ. ಹಿಮದಂತಹ ಬಿಳಿ ಕೂದಲುಗಳಿಂದ, ಉರಿಯುವ ಕಣ್ಣುಗಳು, ಮತ್ತು ಹೊಳೆಯುವ ಮುಖಭಾವ, ಮಿರುಗುವ ಪಾದಗಳ ತನಕ, ಈಗ “ಅಗಮ್ಯವಾದ ಬೆಳಕಿನಲ್ಲಿ” ವಾಸಿಸುವಾತನ ಒಂದು ಪರಮ ಶ್ರೇಷ್ಠ ದರ್ಶನವಾಗಿರುತ್ತದೆ. (1 ತಿಮೊಥೆಯ 6:16) ಈ ಪ್ರೇಕ್ಷಣದ ನೈಜತೆಯು ಅಷ್ಟೊಂದು ಸ್ಫುಟವಾಗಿದೆ! ಭಯಭ್ರಾಂತನಾದ ಯೋಹಾನನು ಹೇಗೆ ಪ್ರತಿವರ್ತಿಸಿದನು? ಅಪೊಸ್ತಲನು ನಮಗನ್ನುವುದು: “ಮತ್ತು ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು.”—ಪ್ರಕಟನೆ 1:17, NW.
-
-
ಒಂದು ಪವಿತ್ರ ರಹಸ್ಯವನ್ನು ಹೊರಗೆಡಹುವುದುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
2. (ಎ) ಯೇಸುವು ತನ್ನನ್ನು ಯಾವ ಬಿರುದಿನಿಂದ ಸಾದರಪಡಿಸಿಕೊಳ್ಳುತ್ತಾನೆ? (ಬಿ) “ನಾನು ಮೊದಲನೆಯವನು ಮತ್ತು ನಾನು ಕಡೆಯವನು” ಎಂದು ಯೆಹೋವನು ಹೇಳುವದರ ಅರ್ಥವೇನು? (ಸಿ) “ಮೊದಲನೆಯವನೂ ಕಡೆಯವನೂ” ಎಂಬ ಯೇಸುವಿನ ಬಿರುದು ಯಾವುದಕ್ಕೆ ಗಮನ ಸೆಳೆಯುತ್ತದೆ?
2 ಆದಾಗ್ಯೂ, ನಮ್ಮ ಭಯಭಕ್ತಿಯು ಅನಾರೋಗ್ಯಕರ ಹೆದರಿಕೆಗೆ ಎಡೆಕೊಡುವ ಆವಶ್ಯಕತೆಯಿಲ್ಲ. ಯೋಹಾನನಿಗೆ ಯೇಸುವು ಆಶ್ವಾಸನೆಯನ್ನೀಯುವುದನ್ನು ಅಪೊಸ್ತಲನು ತದನಂತರ ವರ್ಣಿಸುತ್ತಾನೆ: “ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, ಅಂದದ್ದು: ‘ಹೆದರಬೇಡ. ನಾನು ಮೊದಲನೆಯವನೂ ಕಡೆಯವನೂ, ಮತ್ತು ಜೀವಿಸುವವನೂ ಆಗಿದ್ದೇನೆ.’” (ಪ್ರಕಟನೆ 1:17ಬಿ, 18ಎ, NW) ಯೆಶಾಯ 44:6 ರಲ್ಲಿ, ಯೆಹೋವನು ಒಬ್ಬನೇ, ಮತ್ತು ಏಕಮಾತ್ರ ಸರ್ವಶಕ್ತ ದೇವರು ಎಂದು ತನ್ನ ಸ್ವಂತ ಸ್ಥಾನವನ್ನು ಯೋಗ್ಯವಾಗಿಯೇ ವರ್ಣಿಸುತ್ತಾ, ಹೇಳುವುದು: “ನಾನು ಮೊದಲನೆಯವನು ಮತ್ತು ನಾನು ಕಡೆಯವನು ಆಗಿದ್ದೇನೆ, ಮತ್ತು ನನ್ನ ಹೊರತು ಬೇರೆ ದೇವರು ಇಲ್ಲ.”a (NW) ಯೇಸುವು ತನ್ನನ್ನು “ಮೊದಲನೆಯವನೂ ಕಡೆಯವನೂ” ಎಂಬ ಬಿರುದಿನಿಂದ ಸಾದರ ಪಡಿಸುವಾಗ, ಅವನು ಮಹಾ ನಿರ್ಮಾಣಿಕನಾದ ಯೆಹೋವನೊಂದಿಗೆ ಸಮಾನತೆಯನ್ನು ವಾದಿಸುವದಿಲ್ಲ. ದೇವರಿಂದ ಅವನಿಗೆ ಯೋಗ್ಯವಾಗಿಯೇ ನೀಡಲ್ಪಟ್ಟ ಒಂದು ಬಿರುದನ್ನು ಅವನು ಬಳಸುತ್ತಾನೆ. ಯೆಶಾಯದಲ್ಲಿ, ಒಬ್ಬ ಸತ್ಯ ದೇವರೋಪಾದಿ ತನ್ನ ಅದ್ವಿತೀಯ ಸ್ಥಾನದ ಕುರಿತು ಯೆಹೋವನು ಒಂದು ಉಲ್ಲೇಖವನ್ನು ಮಾಡುತ್ತಾನೆ. ಅವನು ಶಾಶ್ವತತೆಯ ದೇವರಾಗಿದ್ದಾನೆ, ಮತ್ತು ಅವನ ಹೊರತಾಗಿ ಬೇರೆ ದೇವರು ಖಂಡಿತವಾಗಿಯೂ ಇಲ್ಲ. (1 ತಿಮೊಥೆಯ 1:17) ಪ್ರಕಟನೆಯಲ್ಲಿ, ಯೇಸುವು ತನಗೆ ನೀಡಲ್ಪಟ್ಟ ಬಿರುದಿನ ಕುರಿತು ಮಾತಾಡುತ್ತಾ, ಅವನ ಅದ್ವಿತೀಯ ಪುನರುತ್ಥಾನದ ಕಡೆಗೆ ಗಮನವನ್ನು ಸೆಳೆಯುತ್ತಾನೆ.
3. (ಎ) ಯಾವ ರೀತಿಯಲ್ಲಿ ಯೇಸುವು “ಮೊದಲನೆಯವನೂ ಕಡೆಯವನೂ” ಆಗಿದ್ದನು? (ಬಿ) “ಮರಣದ ಮತ್ತು ಹೇಡೀಜ್ನ ಬೀಗದ ಕೈಗಳು” ಯೇಸುವಿನೊಡನೆ ಇವೆ ಎನ್ನುವದರ ಅರ್ಥವೇನು?
3 ಮಾನವರಲ್ಲಿ ಅಮರ ಆತ್ಮ ಜೀವಕ್ಕೆ ಎಬ್ಬಿಸಲ್ಪಟ್ಟವರಲ್ಲಿ ಯೇಸುವು “ಮೊದಲನೆಯವನು” ಆಗಿದ್ದಾನೆ. (ಕೊಲೊಸ್ಸೆ 1:18) ಇನ್ನೂ ಹೆಚ್ಚಾಗಿ, ವ್ಯಕ್ತಿಶಃ ಯೆಹೋವನಿಂದ ಹಾಗೆ ಪುನರುತ್ಥಾನಗೊಳಿಸಲ್ಪಟ್ಟವರಲ್ಲಿ ಅವನು “ಕಡೆಯವನೂ” ಆಗಿರುತ್ತಾನೆ. ಆದಕಾರಣ, ಅವನು “ಜೀವಿಸುವವನೂ . . . ಯುಗಯುಗಾಂತರಗಳಲ್ಲಿ ಬದುಕುವವನೂ” ಆಗಿದ್ದಾನೆ. ಅವನು ಅಮರತ್ವವನ್ನು ಅನುಭೋಗಿಸುತ್ತಿದ್ದಾನೆ. ಈ ರೀತಿಯಲ್ಲಿ “ಜೀವಸ್ವರೂಪನಾದ ದೇವರು” ಎಂದು ಕರೆಯಲ್ಪಡುವ ಅವನ ಅಮರ ತಂದೆಯಂತೆ ಇರುತ್ತಾನೆ. (ಪ್ರಕಟನೆ 7:2; ಕೀರ್ತನೆ 42:2) ಮಾನವವರ್ಗದ ಬೇರೆ ಎಲ್ಲರಿಗಾಗಿ, ಯೇಸುವು ಸ್ವತಃ “ಪುನರುತ್ಥಾನವೂ, ಜೀವವೂ” ಆಗಿದ್ದಾನೆ. (ಯೋಹಾನ 11:25) ಇದಕ್ಕೆ ಹೊಂದಿಕೆಯಲ್ಲಿ, ಅವನು ಯೋಹಾನನಿಗೆ ಹೇಳುವುದು: “ನಾನು ಸತ್ತವನಾದೆನು, ಆದರೆ, ನೋಡು! ನಾನು ಸದಾ ಸರ್ವದಾ ಬದುಕುವವನಾಗಿದ್ದೇನೆ, ಮತ್ತು ಮರಣದ ಮತ್ತು ಹೇಡೀಜ್ನ ಬೀಗದ ಕೈಗಳು ನನ್ನಲ್ಲಿ ಅವೆ.” (ಪ್ರಕಟನೆ 1:18ಬಿ, NW) ಸತ್ತವರನ್ನು ಪುನರುತ್ಥಾನಗೊಳಿಸಲು ಯೆಹೋವನು ಅವನಿಗೆ ಅಧಿಕಾರವನ್ನು ಕೊಟ್ಟಿರುತ್ತಾನೆ. ಆದುದರಿಂದ ಮರಣ ಮತ್ತು ಹೇಡೀಜ್ನಿಂದ (ಸಮಾಧಿಕ್ಷೆತ್ರ) ಬಂಧಿತರಾಗಿರುವವರಿಗಾಗಿ ದ್ವಾರಗಳನ್ನು ತೆರೆಯಲು ಅವನ ಹತ್ತಿರ ಬೀಗದ ಕೈಗಳು ಇವೆ ಎಂದು ಯೇಸುವು ಹೇಳಶಕ್ತನಾಗಿದ್ದಾನೆ.—ಹೋಲಿಸಿರಿ ಮತ್ತಾಯ 16:18.
-