-
ದೇವರ ರಾಜ್ಯವು ಜನಿಸುತ್ತದೆ!ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
7. ಪರಲೋಕದಲ್ಲಿ ಯೋಹಾನನು ಕಾಣುವ ಇನ್ನೊಂದು ಸೂಚನೆ ಏನು?
7 ಯೋಹಾನನು ಅನಂತರ ಏನನ್ನು ಅವಲೋಕಿಸುತ್ತಾನೆ? “ಮತ್ತು ಪರಲೋಕದಲ್ಲಿ ಮತ್ತೊಂದು ಸೂಚನೆ ಕಾಣಿಸಿತು, ಮತ್ತು ಇಗೋ! ಏಳು ತಲೆಗಳು ಮತ್ತು ಹತ್ತು ಕೊಂಬುಗಳು ಇರುವ ಒಂದು ಅಗ್ನಿವರ್ಣದ ಮಹಾ ಘಟಸರ್ಪ ಮತ್ತು ಅದರ ತಲೆಗಳ ಮೇಲೆ ಏಳು ಮುಕುಟಗಳು; ಮತ್ತು ಅದರ ಬಾಲವು ಆಕಾಶದ ನಕ್ಷತ್ರಗಳೊಳಗೆ ಮೂರರಲ್ಲೊಂದು ಭಾಗವನ್ನು ಎಳೆಯುತ್ತದೆ, ಮತ್ತು ಅದು ಅವುಗಳನ್ನು ಕೆಳಗೆ ಭೂಮಿಗೆ ಎಸೆಯಿತು. ಮತ್ತು ಹೆರಲಿದ್ದ ಆ ಸ್ತ್ರೀಯು ಮುಂದೆ, ಆಕೆ ಹೆತ್ತಾಗ ಆಕೆಯ ಮಗುವನ್ನು ನುಂಗಿಬಿಡಬಹುದೆಂಬ ಕಾರಣದಿಂದ ಆ ಘಟಸರ್ಪವು ನಿಂತುಕೊಂಡಿತ್ತು.”—ಪ್ರಕಟನೆ 12:3, 4, NW.
-
-
ದೇವರ ರಾಜ್ಯವು ಜನಿಸುತ್ತದೆ!ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
9. ಘಟಸರ್ಪನ ಬಾಲವು “ಆಕಾಶದಲ್ಲಿರುವ ನಕ್ಷತ್ರಗಳೊಳಗೆ ಮೂರರಲ್ಲೊಂದು ಭಾಗವನ್ನು” ಎಳೆದು ಭೂಮಿಗೆ ಹಾಕುವುದರಿಂದ ಏನು ಸೂಚಿತವಾಗಿದೆ?
9 ಘಟಸರ್ಪನಿಗೆ ಆತ್ಮ ಕ್ಷೇತ್ರದಲ್ಲೂ ಅಧಿಕಾರವಿದೆ. ತನ್ನ ಬಾಲದಿಂದ, ಅವನು “ಆಕಾಶದಲ್ಲಿರುವ ನಕ್ಷತ್ರಗಳೊಳಗೆ ಮೂರರಲ್ಲೊಂದು ಭಾಗವನ್ನು ಎಳೆಯುತ್ತಾನೆ.” ನಕ್ಷತ್ರಗಳು ದೇವದೂತರನ್ನು ಪ್ರತಿನಿಧಿಸಬಲ್ಲವು. (ಯೋಬ 38:7) “ಮೂರರಲ್ಲೊಂದು ಭಾಗ”ದ ಉಲ್ಲೇಖವು ಗಮನಾರ್ಹ ಸಂಖ್ಯೆಯಲ್ಲಿ ದೇವದೂತರು ಸೈತಾನನಿಂದ ತಪ್ಪು ದಾರಿಗೆ ಎಳೆಯಲ್ಪಟ್ಟರು ಎಂಬುದನ್ನು ಒತ್ತಾಗಿ ಹೇಳುತ್ತದೆ. ಒಮ್ಮೆ ಅವರು ಅವನ ಹತೋಟಿಯೊಳಗೆ ಬಂದನಂತರ, ಅಲ್ಲಿಂದ ಪಾರಾಗುವುದಿಲ್ಲ. ಅವರು ದೇವರ ಪವಿತ್ರ ಸಂಸ್ಥೆಯೊಳಗೆ ಪುನಃ ಹಿಂದಿರುಗಲು ಸಾಧ್ಯವಿಲ್ಲ. ತಮ್ಮ ಅರಸನಾದ ಯಾ ಅಧಿಪತಿಯಾದ ಸೈತಾನನಿಂದ ಎಳೆಯಲ್ಪಟ್ಟವರೋ ಎಂಬಂತೆ ಅವರು ದೆವ್ವಗಳಾದರು. (ಮತ್ತಾಯ 12:24) ಸೈತಾನನು ಅವರನ್ನು ಕೂಡ ಭೂಮಿಗೆ ದೊಬ್ಬಿಬಿಡುತ್ತಾನೆ. ಇದು ಜಲಪ್ರಲಯಕ್ಕೆ ಮುಂಚಿನ ನೋಹನ ದಿನಗಳಿಗೆ ಸೂಚಿತವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ, ಆಗ ಅವಿಧೇಯ ದೇವ ಪುತ್ರರು ಭೂಮಿಗೆ ಬರುವಂತೆ ಮತ್ತು ಮಾನವರ ಪುತ್ರಿಯರೊಂದಿಗೆ ಕೂಡುಬಾಳುವೆ ನಡಿಸುವಂತೆ ಸೈತಾನನು ಪ್ರೇರಿಸಿದನು. ದಂಡನೆಯೋಪಾದಿ, ‘ಪಾಪಮಾಡಿದ ದೇವದೂತರು’ ಟಾರ್ಟರಸ್ ಎಂದು ಕರೆಯಲ್ಪಡುವ ಸೆರೆಮನೆಯಂಥ ಸ್ಥಿತಿಯೊಳಗೆ ದೇವರಿಂದ ದೊಬ್ಬಲ್ಪಟ್ಟಿದ್ದಾರೆ.—ಆದಿಕಾಂಡ 6:4; 2 ಪೇತ್ರ 2:4; ಯೂದ 6.
10. ವಿರೋಧತ್ವದ ಯಾವ ಸಂಸ್ಥೆಗಳು ಗೋಚರಕ್ಕೆ ಬರುತ್ತವೆ, ಮತ್ತು ಸ್ತ್ರೀಯು ಮಗುವನ್ನು ಹೆರುವಾಗ, ಘಟಸರ್ಪನು ಯಾಕೆ ಅದನ್ನು ನುಂಗಲು ಹವಣಿಸುತ್ತಾನೆ?
10 ಹೀಗೆ, ವಿರೋಧಿಸುತ್ತಿರುವ ಎರಡು ಸಂಸ್ಥೆಗಳು ನೋಟಕ್ಕೆ ಸ್ಪಷ್ಟವಾಗಿಗಿ ತೋರಿಬಂದವು—ಸ್ತ್ರೀಯಿಂದ ಚಿತ್ರಿತವಾದ ಯೆಹೋವನ ಸ್ವರ್ಗೀಯ ಸಂಸ್ಥೆ ಮತ್ತು ದೇವರ ಸಾರ್ವಭೌಮತೆಯನ್ನು ಪಣಕ್ಕೊಡ್ಡುವ ಸೈತಾನನ ಪೈಶಾಚಿಕ ಸಂಸ್ಥೆ. ಸಾರ್ವಭೌಮತೆಯ ಮಹಾ ವಿವಾದಾಂಶವು ತೀರ್ಮಾನಿಸಲ್ಪಡತಕ್ಕದ್ದು. ಆದರೆ ಹೇಗೆ? ದೆವ್ವಗಳನ್ನು ಇನ್ನೂ ತನ್ನ ಬಳಿಗೆ ಎಳೆಯುತ್ತಿರುವ ಸೈತಾನನು, ತನ್ನ ಸಂಭಾವ್ಯ ಆಹುತಿಯ ಮೇಲೆ ಕಣ್ಣಿಟ್ಟಿರುವ ಕ್ರೂರವಾದ ಮೃಗದಂತಿದ್ದಾನೆ. ಸ್ತ್ರೀಯು ಪ್ರಸವಿಸುವುದನ್ನು ಅವನು ಕಾದಿರುತ್ತಾನೆ. ಆ ನಿರೀಕ್ಷಿತ ಕೂಸನ್ನು ನುಂಗಲು ಅವನು ಬಯಸುತ್ತಾನೆ, ಯಾಕಂದರೆ ತನ್ನ ಮುಂದರಿದ ಅಸ್ತಿತ್ವಕ್ಕೆ ಮತ್ತು ತನ್ನ ಆಧಿಪತ್ಯ ನಡಿಸುವ ಲೋಕದ ಮೇಲೆ ಕೇಡು ಸೂಚಕ ಬೆದರಿಕೆಯನ್ನು ಅದು ಒಡ್ಡುತ್ತದೆ ಎಂದು ಅವನಿಗೆ ತಿಳಿದದೆ.—ಯೋಹಾನ 14:30.
-