ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 1-3
“ನಿನ್ನ ಕೃತ್ಯಗಳನ್ನು ಬಲ್ಲೆನು”
“ಏಳು ನಕ್ಷತ್ರಗಳು”: ಮುಖ್ಯವಾಗಿ ಅಭಿಷಿಕ್ತ ಹಿರಿಯರಿಗೆ ಸೂಚಿಸುತ್ತೆ. ಸಭೆಯಲ್ಲಿರುವ ಬೇರೆ ಎಲ್ಲಾ ಹಿರಿಯರನ್ನು ಸೂಚಿಸುತ್ತೆ ಸಹ.
“(ಯೇಸುವಿನ) ಬಲಗೈಯಲ್ಲಿ”: ಅಂದರೆ, ನಕ್ಷತ್ರಗಳು ಯೇಸುವಿನ ಪೂರ್ಣ ಹತೋಟಿಯಲ್ಲಿ ಇದೆ. ಯೇಸುಗೆ ಅವುಗಳ ಮೇಲೆ ಅಧಿಕಾರ ಇದೆ. ಆತನೇ ಅವನ್ನು ಮಾರ್ಗದರ್ಶಿಸುತ್ತಾನೆ. ಹಾಗಾಗಿ ಹಿರಿಯ ಮಂಡಲಿಯ ಸದಸ್ಯರಲ್ಲಿ ಯಾರನ್ನಾದರೂ ತಿದ್ದುವ ಅವಶ್ಯಕತೆ ಇದ್ದರೆ, ಅವರನ್ನು ಯೇಸು ತಕ್ಕ ಸಮಯದಲ್ಲಿ, ತನ್ನದೇ ಆದ ವಿಧಾನದಲ್ಲಿ ಸರಿಪಡಿಸುತ್ತಾನೆ.
“ಚಿನ್ನದ ಏಳು ದೀಪಸ್ತಂಭಗಳು”: ಅಂದರೆ ಕ್ರೈಸ್ತ ಸಭೆಗಳು. ಗುಡಾರದಲ್ಲಿದ್ದ ದೀಪಸ್ತಂಭ ಬೆಳಕನ್ನು ಪ್ರಕಾಶಿಸುತ್ತಿತ್ತು. ಅದೇ ರೀತಿಯಲ್ಲಿ ಇಂದು ಕ್ರೈಸ್ತ ಸಭೆಗಳು ಆಧ್ಯಾತ್ಮಿಕ ಬೆಳಕನ್ನು ಪ್ರಕಾಶಿಸುತ್ತವೆ. (ಮತ್ತಾ 5:14) ಯೇಸು “ದೀಪಸ್ತಂಭಗಳ ಮಧ್ಯೆ ನಡೆದಾಡುವವನು” ಅಂದರೆ ಅವನು ಎಲ್ಲಾ ಸಭೆಗಳ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾನೆ.