-
ದೇವರ ರೌದ್ರವು ಮುಕ್ತಾಯಕ್ಕೆ ತರಲ್ಪಡುವುದುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
17. (ಎ) ಐದನೆಯ ಪಾತ್ರೆಯ ಹೊಯ್ಯುವಿಕೆಯು, ಕಾಡು ಮೃಗದ ರಾಜ್ಯವನ್ನು ಸದಾ ಸುತ್ತುವರಿದಿರುವ ಆತ್ಮಿಕ ಕತ್ತಲೆಗೆ ಹೇಗೆ ಸಂಬಂಧಿಸಿದೆ? (ಬಿ) ದೇವರ ಕೋಪದ ಐದನೆಯ ಪಾತ್ರೆಯ ಹೊಯ್ಯುವಿಕೆಗೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ?
17 ಈ ಕಾಡು ಮೃಗದ ರಾಜ್ಯವು ಅದರ ಆರಂಭದಿಂದಲೂ ಆತ್ಮಿಕ ಕತ್ತಲಿನಲ್ಲಿ ಇದೆ. (ಮತ್ತಾಯ 8:12 ಹೋಲಿಸಿರಿ; ಎಫೆಸ 6:11, 12.) ಐದನೆಯ ಪಾತ್ರೆಯು ಈ ಕತ್ತಲಿನ ತೀಕ್ಷೈವಾದ ಬಹಿರಂಗ ತಿಳಿಸುವಿಕೆಯನ್ನು ತರುತ್ತದೆ. ದೇವರ ಕೋಪದ ಪಾತ್ರೆಯು ಆ ಸಾಂಕೇತಿಕ ಕಾಡು ಮೃಗದ ಸಿಂಹಾಸನದ ಮೇಲೆ ಹೊಯ್ಯಲ್ಪಡುತ್ತದೆಂದು ಹೇಳಿ ಇದು ಅದರ ನಾಟಕೀಕರಣವನ್ನೂ ಮಾಡುತ್ತದೆ. “ಮತ್ತು ಅದರ ರಾಜ್ಯವು ಕತ್ತಲಾಯಿತು, ಮತ್ತು ಅವರು ನೋವಿಗಾಗಿ ತಮ್ಮ ನಾಲಿಗೆಗಳನ್ನು ಕಚ್ಚಿಕೊಳ್ಳಲಾರಂಭಿಸಿದರು, ಆದರೆ ತಮ್ಮ ನೋವುಗಳಿಗಾಗಿ ಮತ್ತು ತಮ್ಮ ಹುಣ್ಣುಗಳಿಗಾಗಿ ಅವರು ಪರಲೋಕದ ದೇವರನ್ನು ದೂಷಿಸಿದರು, ಮತ್ತು ತಮ್ಮ ಕೃತ್ಯಗಳಿಗೆ ಅವರು ಮಾನಸಾಂತರಪಡಲಿಲ್ಲ.”—ಪ್ರಕಟನೆ 16:10ಬಿ, 11, NW.
-
-
ದೇವರ ರೌದ್ರವು ಮುಕ್ತಾಯಕ್ಕೆ ತರಲ್ಪಡುವುದುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
19. ಪ್ರಕಟನೆ 16:10, 11 ರೊಂದಿಗೆ ಹೊಂದಿಕೆಯಲ್ಲಿ, ಸೈತಾನನನ್ನು ಈ ವಿಷಯಗಳ ವ್ಯವಸ್ಥೆಯ ದೇವರೆಂಬ ಬಯಲುಗೊಳಿಸುವಿಕೆಯು ಯಾವುದಕ್ಕೆ ಕಾರಣವಾಗುತ್ತದೆ?
19 ಇಹಲೋಕಾಧಿಪತಿಯಾಗಿ, ಸೈತಾನನು ಬಹಳ ಅಸಂತೋಷವನ್ನು ಮತ್ತು ಕಷ್ಟಾನುಭವಗಳನ್ನು ಉಂಟುಮಾಡಿದ್ದಾನೆ. ಕ್ಷಾಮ, ಯುದ್ಧಗಳು, ಬಲಾತ್ಕಾರ, ಪಾತಕ, ಅಮಲೌಷಧದ ದುರುಪಯೋಗ, ಅನೈತಿಕತೆ, ರತಿ ರವಾನಿತ ರೋಗಗಳು, ಅಪ್ರಾಮಾಣಿಕತೆ, ಧಾರ್ಮಿಕ ಕಪಟತನ—ಇವು ಮತ್ತು ಹೆಚ್ಚಿನವು ಸೈತಾನನ ವಿಷಯಗಳ ವ್ಯವಸ್ಥೆಯ ಚೊಕ್ಕ ಮುದ್ರೆಗಳಾಗಿವೆ. (ಗಲಾತ್ಯ 5:19-21 ಹೋಲಿಸಿರಿ.) ಹೀಗಿದ್ದರೂ, ಈ ವಿಷಯಗಳ ವ್ಯವಸ್ಥೆಯ ದೇವರಾಗಿ ಸೈತಾನನ ಬಹಿರಂಗ ಬಯಲುಗೊಳಿಸುವಿಕೆಯು ಅವನ ಮಟ್ಟಗಳಿಗನುಸಾರ ಜೀವಿಸುವವರೆಲ್ಲರಿಗೆ ನೋವು ಮತ್ತು ಪೇಚಾಟಕ್ಕೆ ಕಾರಣವಾಗಿದೆ. “ಅವರು ನೋವಿಗಾಗಿ ತಮ್ಮ ನಾಲಿಗೆಗಳನ್ನು ಕಚ್ಚಿಕೊಳ್ಳಲಾರಂಭಿಸಿದರು”, ವಿಶೇಷವಾಗಿ ಕ್ರೈಸ್ತಪ್ರಪಂಚದಲ್ಲಿ. ಸತ್ಯವು ತಮ್ಮ ಜೀವನ ಶೈಲಿಯನ್ನು ಬಯಲುಗೊಳಿಸುತ್ತದೆಂದು ಅನೇಕರು ಕೋಪಿಸಿಕೊಳ್ಳುತ್ತಾರೆ. ಕೆಲವರಿಗೆ ಅದು ಬೆದರಿಕೆಯೋಪಾದಿ ಕಂಡುಬರುತ್ತದೆ ಮತ್ತು ಅದನ್ನು ಪ್ರಕಾಶಿಸುವವರನ್ನು ಅವರು ಹಿಂಸಿಸುತ್ತಾರೆ. ಅವರು ದೇವರ ರಾಜ್ಯವನ್ನು ತ್ಯಜಿಸುತ್ತಾರೆ ಮತ್ತು ಯೆಹೋವನ ಪರಿಶುದ್ಧ ಹೆಸರನ್ನು ದೂಷಿಸುತ್ತಾರೆ. ಅವರ ಧಾರ್ಮಿಕವಾದ ರೋಗಗ್ರಸ್ತ, ಉರಿಹುಣ್ಣಿನ ಅವಸ್ಥೆಯು ಬಯಲುಗೊಳಿಸಲ್ಪಡುತ್ತದೆ, ಆದುದರಿಂದ ಅವರು ಪರಲೋಕದ ದೇವರನ್ನು ದೂಷಿಸುತ್ತಾರೆ. ಇಲ್ಲ, ಅವರು “ತಮ್ಮ ಕೃತ್ಯಗಳ ವಿಷಯದಲ್ಲಿ ಮಾನಸಾಂತರಪಡುವುದಿಲ್ಲ.” ಆದುದರಿಂದ ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಮುಂಚೆ ಒಂದು ಬಹುಸಂಖ್ಯಾಕ ಪರಿವರ್ತನೆಯನ್ನು ನಾವು ನಿರೀಕ್ಷಿಸಲಾರೆವು.—ಯೆಶಾಯ 32:6.
-