ಧರ್ಮದ ಭವಿಷ್ಯ ಅದರ ಗತಕಾಲದ ನೋಟದಲ್ಲಿ
ಭಾಗ 22: 1900ರಿಂದ ಮುಂದಕ್ಕೆ ಸುಳ್ಳು ಧರ್ಮ ಅದರ ಗತಕಾಲದಿಂದ ಹಿಡಿಯಲ್ಪಟಿರುವುದು!
“ಒಂದು ರಾಷ್ಟ್ರದ ಭವಿಷ್ಯತ್ತಿನ ಕೀಲಿ ಕೈ ಅದರ ಗತಕಾಲದಲ್ಲಿದೆ.”—ಆರ್ಥರ್ ಬ್ರಾಯಂಟ್, 20ನೆಯ ಶತಮಾನದ ಇಂಗ್ಲಿಷ್ ಇತಿಹಾಸಗಾರ
ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವನ್ನು ಬೈಬಲು ಮಹಾ ಬಾಬೆಲೆಂದು ಕರೆದು ಅದನ್ನು ಪುರಾತನ ಕಾಲದ ಬಾಬೆಲ್ ಜನಾಂಗಕ್ಕೆ ಹೋಲಿಸುತ್ತದೆ. (ಪ್ರಕಟನೆ 18:2) ಆ ಹಳೆಯ ಸಾಮ್ರಾಜ್ಯಕ್ಕೆ ಏನಾಯಿತೊ ಅದು ಅದರ ಆಧುನಿಕ ಸ್ವನಾಮಕಕ್ಕೆ ಶುಭಸೂಚಕವಾಗಿರುವುದಿಲ್ಲ. ಸಾ.ಶ.ಪೂ. 539ರ ಒಂದೇ ರಾತ್ರಿಯಲ್ಲಿ ಬಾಬೆಲು ಮಹಾ ಕೋರೆಷನ ಕೆಳಗಿದ್ದ ಮೇದ್ಯ, ಫಾರಸಿಯರ ವಶವಾಯಿತು. ನಗರವನ್ನು ಹಾದು ಹರಿಯುತ್ತಿದ್ದ ಯೂಫ್ರೆಟೀಸ್ ನದಿಯ ನೀರಿನ ದಿಕ್ಕನ್ನು ಬದಲಾಯಿಸಿದುದರಿಂದ ಆಕ್ರಮಿಸುತ್ತಿದ್ದ ಸೈನ್ಯಗಳು ಯಾರಿಗೂ ತಿಳಿಯದಂತೆ ನದೀತಳದ ಮೇಲಿಂದ ಬರುವಂತಾಯಿತು.
ಯೆಹೋವ ದೇವರು ಮತ್ತು ಕೋರೇಷನಿಗಿಂತ ಮಹಾ ಅರಸನಾದ ಯೇಸು ಕ್ರಿಸ್ತನು, ಅಪನಂಬಿಗಸ್ತಳಾದ ಮಹಾ ಬಾಬೆಲಿನ ಮೇಲೆ ಇದೇ ರೀತಿಯ ವಿಜಯವನ್ನು ಪಡೆಯುವರು. ಬಹಳ ನೀರುಗಳ ಮೇಲೆ ಕುಳಿತಿರುವ ಮಹಾ ವೇಶ್ಯೆಯಾಗಿ ಬೈಬಲು ಅವಳನ್ನು ಚಿತ್ರಿಸುತ್ತದೆ. ಇದು, ಆಕೆ “ಪ್ರಜೆ, ಸಮೂಹ, ಜನ, ಭಾಷೆ”ಗಳಿಂದ ಪಡೆಯುವ ಬೆಂಬಲವನ್ನು ಸೂಚಿಸುತ್ತದೆ. ಆದರೆ, ನಾಶಕ್ಕೆ ಮೊದಲು, “ಯೂಫ್ರೆಟೀಸ್ ಎಂಬ ಮಹಾ ನದಿ”ಯಂತೆ, ಈ ಬೆಂಬಲವು “ಇಂಗಿ” ಹೋಗಿ “ಮೂಡಣ ದಿಕ್ಕಿನಿಂದ ಬರುವ ರಾಜರಿಗೆ ಮಾರ್ಗವು ಸಿದ್ಧ”ವಾಗಬೇಕು.—ಪ್ರಕಟನೆ 16:12; 17:1,15.
ಇಂದು ಇಂಥ ಇಂಗಿ ಹೋಗುವಿಕೆ ನಡೆಯುತ್ತಿದೆ ಎಂಬುದಕ್ಕೆ ರುಜುವಾತು ಸುಳ್ಳು ಧರ್ಮವನ್ನು ಪತ್ತೆ ಹಚ್ಚಲು ಅಮೂಲ್ಯ ಸಾಧನವಾಗಿರುವುದು.
ಒಂದು ಉಜ್ವಲ ಹೊರನೋಟ ಕುಂದುತ್ತದೆ
ಇಪ್ಪತ್ತನೆಯ ಶತಮಾನ ಉದಯವಾದಾಗ ಭೂಮಿಯಲ್ಲಿದ್ದ ಪ್ರತಿ ಮೂರನೆಯ ವ್ಯಕ್ತಿ ಕ್ರೈಸ್ತತ್ವ ವಿಶ್ವಾಸಿ ಎಂದು ಹೇಳಿಕೊಳ್ಳುತ್ತಿದ್ದನು. ಕ್ರೈಸ್ತ ಪ್ರಪಂಚದ ಮುಂದುನೋಟ ಉಜ್ವಲವಾಗಿತ್ತು. 1900ರಲ್ಲಿ ಉಪದೇಶಿ ಮತ್ತು ನೋಬೆಲ್ ಪಾರಿತೋಷಿಕ ವಿಜೇತ ಜಾನ್ ಆರ್. ಮಾಟ್, ದಿ ಇವ್ಯಾಂಜಲೈಸೇಶನ್ ಆಫ್ ದ ವರ್ಲ್ಡ್ ಇನ್ ದಿಸ್ ಜನರೇಶನ್ ಎಂಬ ಪುಸ್ತಕವನ್ನು ಪ್ರಕಟಿಸಿ ಶುಭ ಪ್ರತೀಕ್ಷೆಯನ್ನು ಸೂಚಿಸಿದರು.
ಆದರೆ, ವರ್ಲ್ಡ್ ಕ್ರಿಶ್ಚನ್ ಎನ್ಸೈಕ್ಲೊಪೀಡಿಯ ಒಪ್ಪುವುದು: “ಈ 20ನೆಯ ಶತಮಾನ ಈ ಪ್ರತೀಕ್ಷೆಗಳಿಗಿಂತ ಬೆಚ್ಚಿಸುವ ರೀತಿಯಲ್ಲಿ ಭಿನ್ನವಾಗಿದೆ.” “ಪಶ್ಚಿಮ ಯೂರೋಪಿನಲ್ಲಿ ಜಾತ್ಯತೀತತೆ, ರಷ್ಯ ಮತ್ತು ಆ ಬಳಿಕ ಪೂರ್ವ ಯೂರೋಪಿನಲ್ಲಿ ಸಮತಾವಾದ ಮತ್ತು ಅಮೇರಿಕಗಳಲ್ಲಿ ಪ್ರಾಪಂಚಿಕತೆಯ ಕಾರಣ ಕ್ರೈಸ್ತತ್ವದಿಂದ ಅಷ್ಟು ದೊಡ್ಡ ರೀತಿಯಲ್ಲಿ ಧರ್ಮ ಪರಿತ್ಯಾಗವಾಗುವುದೆಂದು ಯಾರೂ ನಿರೀಕ್ಷಿಸಿರಲಿಲ್ಲ” ಎಂದು ವಿವರಿಸುತ್ತಾ, ಇವು ಮತ್ತು ಇತರ “ಸುಳ್ಳು ಧರ್ಮಗಳು 1900ರಲ್ಲಿ ಚಿಕ್ಕದಾಗಿ ಭೂಮಿಯ ಸಂಖ್ಯೆಯಲ್ಲಿ ಕೇವಲ 0.2% ಅಂಶವಾಗಿ ಅಸ್ತಿತ್ವದಲ್ಲಿದ್ದು. . .1980ರೊಳಗೆ ಭೂಮಿಯ ಸಂಖ್ಯೆಯಲ್ಲಿ 20.8 ಕ್ಕೆ” ಥಟ್ಟನೆ ಬೆಳೆದವೆ ಎಂದು ಅದು ಹೇಳುತ್ತದೆ.
ಇಂಥ “ದೊಡ್ಡ ರೀತಿಯ ಪರಿತ್ಯಾಗಗಳು” ಪಶ್ಚಿಮ ಯೂರೋಪಿನ ಚರ್ಚುಗಳನ್ನು ಖಾಲಿ ಮಾಡಿವೆ. 1970ರಿಂದ ಹಿಡಿದು ಜರ್ಮನಿಯ ಫೆಡರಲ್ ರಿಪಬ್ಲಿಕಿನ ಲೂಥರನ್ ಚರ್ಚು 12 ಸೇಕಡ ಸದಸ್ಯರನ್ನು ಕಳೆದುಕೊಂಡಿದೆ. ನೆದರ್ಲೆಂಡ್ಸಿನ ಚರ್ಚುಗಳಲ್ಲಿ ಮೂರರಲ್ಲಿ ಒಂದಂಶಕ್ಕೂ ಹೆಚ್ಚು ಮಚ್ಚಲ್ಪಟ್ಟಿವೆ. ಇವುಗಳಲ್ಲಿ ಕೆಲವನ್ನು ಮಳಿಗೆಗಳಾಗಿ, ಹೋಟೇಲುಗಳಾಗಿ, ವಸತಿ ಗೃಹಗಳಾಗಿ ಮತ್ತು ಡಿಸ್ಕೊಗಳಾಗಿಯೂ ಮಾಡಲಾಗಿದೆ. ಮತ್ತು ಬ್ರಿಟನಿನಲ್ಲಿ 30 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಸುಮಾರು ಪ್ರತಿ ಎಂಟನೆಯ ಆ್ಯಂಗ್ಲಿಕನ್ ಚರ್ಚು ಈಗ ಉಪಯೋಗಿಸಲ್ಪಡುವುದಿಲ್ಲ. ಕಳೆದ ವರ್ಷ, ಯೂರೋಪಿನ ಪ್ರಾಟೆಸ್ಟಂಟ್ ದೇವಶಾಸ್ತ್ರಜ್ಞರ ಮತ್ತು ಪಾದ್ರಿಗಳ ಒಂದು ಪರಿಷತ್ತಿನಲ್ಲಿ ಒಬ್ಬ ಪುರೋಹಿತರು, “ಹಿಂದಿನ ‘ಕ್ರೈಸ್ತ ಪಶ್ಚಿಮ ದೇಶಗಳು’ ತಮ್ಮನ್ನು ಇನ್ನು ಮುಂದೆ ಕ್ರೈಸ್ತರೆಂದು ಕರೆಯಸಾಧ್ಯವಿಲ್ಲ. . . .ಯೂರೋಪು ಮಿಶನೆರಿ ಕ್ಷೇತ್ರವಾಗಿದೆ” ಎಂದು ಹೇಳಿದ್ದು ಆಶ್ಚರ್ಯವಲ್ಲ.
ಆದರೂ, ಸಮಸ್ಯೆ ಕ್ರೈಸ್ತ ಪ್ರಪಂಚ ಮತ್ತು ಯೂರೋಪನ್ನು ಮೀರಿ ಹೋಗಿದೆ. ಉದಾಹರಣೆಗೆ, ಲೋಕಾದ್ಯಂತ ಬೌದ್ಧ ಧರ್ಮ ವರ್ಷಕ್ಕೆ 9,00,000 ಜನರನ್ನು ಅಜೇಯ್ಞತಾ ವಾದಕ್ಕೆ ಕಳೆದುಕೊಳ್ಳುತ್ತದೆ ಎಂದು ಅಂದಾಜು ಮಾಡಲಾಗುತ್ತದೆ.
ಸಿಬ್ಬಂದಿಗಳ ಕೊರತೆ
ಒಂದು ಜ್ಯಾಪನೀಸ್ ನಾಣ್ಣುಡಿ, “ಗ್ರಾಮವನ್ನು ಉತ್ತೇಜಿಸಬೇಕಾದರೆ ಮೊದಲು ಅದರ ಪುರೋಹಿತರನ್ನು ಉತ್ತೇಜಿಸಿರಿ” ಎಂದು ಬುದ್ಧಿ ಹೇಳುತ್ತದೆ. 1983ಕ್ಕೆ ಹಿಂದಿನ ಹತ್ತು ವರ್ಷಗಳಲ್ಲಿ, ಲೋಕವ್ಯಾಪಕವಾಗಿ ಕ್ಯಾಥಲಿಕ್ ಪುರೋಹಿತರ ಸಂಖ್ಯೆಯಲ್ಲಿ 7 ಸೇಕಡ ಅವನತಿಯಾಗಿತ್ತು. 15 ವರ್ಷಗಳಲ್ಲಿ ನನ್ಗಳಲ್ಲಿ 33 ಸೇಕಡ ಅವನತಿಯಿತ್ತು. ಆದರೆ ಸ್ಥಾನಭರ್ತಿಯ ಮುಂದುನೋಟ ನಿರಾಶಾಜನಕ. 20ಕ್ಕೂ ಕಡಮೆ ವರುಷಗಳಲ್ಲಿ, ಅಮೆರಿಕದ ಕ್ಯಾಥಲಿಕ್ ಸೆಮಿನೆರಿಗಳಲ್ಲಿ ಸೇರುವವರ ಸಂಖ್ಯೆ 48,992 ರಿಂದ 11,262ಗೆ ಕುಸಿದು ಬಿದದ್ದೆ.
ಕ್ಯಾಥಲಿಕ್ ಧರ್ಮವರ್ಗಗಳೂ ಬಾಧೆ ಪಡುತ್ತಿವೆ. ಒಂದು ಸಮಯದಲ್ಲಿ, 1534ರಲ್ಲಿ ಪ್ಯಾರಿಸಿನಲ್ಲಿ ಲೊಯೊಲಾದ ಇಗ್ನೇಷಿಯಸನಿಂದ ಸ್ಥಾಪಿಸಲ್ಪಟ್ಟ ಸೊಸೈಟಿ ಆಫ್ ಜೀಸಸ್, ಅನೇಕ ದೇಶಗಳಲ್ಲಿ ವಿದ್ಯಾಭ್ಯಾಸವನ್ನು ನಿಯಂತ್ರಿಸಿತು. ಅದರ ಜನಪ್ರಿಯವಾಗಿ ಜೆಸಿಟ್ವ್ ಎಂದು ಕರೆಯಲ್ಪಟ್ಟ ಸದಸ್ಯರು ಮಿಶನೆರಿ ಚಟುವಟಿಕೆಯಲ್ಲಿ ನಾಯಕತ್ವ ವಹಿಸಿದರು. ಆದರೆ, 1965 ರಿಂದ ಹಿಡಿದು ಸದಸ್ಯತನ ಕಾಲು ಭಾಗಕ್ಕೂ ಹೆಚ್ಚು ಕೆಳಗಿಳಿದಿದೆ.
ಸಿಬ್ಬಂದಿಗಳ ಸಂಖ್ಯೆಯಲ್ಲಿ ಅವನತಿ ಕೆಟ್ಟ ಸುದ್ದಿಯಾದರೂ ಅವರಲ್ಲಿ ಅನೇಕರನ್ನು ನಂಬಲಾಗುವುದಿಲ್ಲವೆಂಬುದು ಇನ್ನೂ ಕೆಟ್ಟ ಸುದ್ದಿ. ಬ್ರಹ್ಮಚರ್ಯೆ, ಸಂತಾನ ನಿರೋಧ ಮತ್ತು ಸ್ತ್ರೀಯರ ಧಾರ್ಮಿಕ ಪಾತ್ರದ ಕುರಿತ ಅಧಿಕೃತ ಚರ್ಚ್ ಪಾಲಿಸಿಯನ್ನು ವಿರೋಧಿಸುವ ಪುರೋಹಿತರ ಮತ್ತು ನನ್ಗಳ ಸಂಖ್ಯೆ ಹೆಚ್ಚುತ್ತಿದೆ. 1989ರ ಜನವರಿಯಲ್ಲಿ 163 ಜನ ಯೂರೋಪಿನ ಕ್ಯಾಥಲಿಕ್ ದೇವಶಾಸ್ತ್ರಜ್ಞರು ಒಂದು ಬಹಿರಂಗ ಹೇಳಿಕೆಯನ್ನು ಮಾಡಿದಾಗ ಇದು ತೋರಿಬಂತು. ಮೇ 1ರೊಳಗೆ ಇನ್ನು 500 ಮಂದಿ ಇದಕ್ಕೆ ಹಸ್ತಾಕ್ಷರ ಮಾಡಿದ್ದರು. ಆ ಹೇಳಿಕೆ ವ್ಯಾಟಿಕನಿನ ಮೇಲೆ ನಿರಂಕುಶತೆ ಹಾಗೂ ಅಧಿಕಾರದ ದುರುಪಯೋಗದ ಆಪಾದನೆಯನ್ನು ಹಾಕಿತು.
ಕ್ರೈಸ್ತ ಪ್ರಪಂಚದಲ್ಲಿ ಲಕ್ಷಾಂತರ ಜನರು ಆತ್ಮಿಕ ನ್ಯೂನ ಪೋಷಣೆಯ ಫಲವಾಗಿ ಆತ್ಮಿಕವಾಗಿ ಸತ್ತಿದ್ದಾರೆ. ಅಮೆರಿಕದ ಒಬ್ಬ ಚರ್ಚ್ ಅಧಿಕಾರಿ ಇದನ್ನು ಒಪ್ಪುತ್ತಾ ಗೊಣಗಿದ್ದು: “ಚರ್ಚು ದಾರಿಹೋಕರಿಗೆ ಪುಷ್ಟಿರಹಿತ ಆಹಾರವನ್ನು ಹಂಚುವ ಸೂಪರ್ಮಾರ್ಕಟಿನಂತೆ(ಆಗಿದೆ). ಪಾಸ್ಟರನ ಪ್ರಸಂಗ ಗಿರಾಕಿಗಳಿಗೆ ಅವರು ಕಮ್ಮಿ ಬದ್ಧರಾಗುವಂತೆ ಕೊಡಲ್ಪಡುವ ಕಡಮೆ ಕ್ರಯದ ‘ವಾರದ ವಿಶೇಷ ಆಹಾರ’ಕ್ಕಿಂತ ಹೆಚ್ಚೇನೂ ಅಲ್ಲ.”
ಇಸವಿ 1965 ರಿಂದ ಅಮೆರಿಕದ ಪ್ರಧಾನ ಐದು ಪ್ರಾಟೆಸ್ಟಂಟ್ ಪಂಗಡಗಳಲ್ಲಿ ಸದಸ್ಯತನವು ಸುಮಾರು 20 ಪ್ರತಿಶತ ಮತ್ತು ಸಂಡೇಸ್ಕೂಲ್ ವಿದ್ಯಾರ್ಥಿಗಳ ಸಂಖ್ಯೆ ಪ್ರತಿಶತ 50 ಕ್ಕೂ ಹೆಚ್ಚು ಕೆಳಗಿಳಿದದೆ. ಟೈಮ್ ಪತ್ರಿಕೆ ಬರೆಯುವುದು: “ತಮ್ಮ ಸಂದೇಶವನ್ನು ದಾಟಿಸುವುದರಲ್ಲಿ ಸಾಂಪ್ರದಾಯಿಕ ಪಂಗಡಗಳು ನಿಷ್ಫಲರಾಗುತ್ತಿರುವುದು ಮಾತ್ರವಲ್ಲ ಸಂದೇಶವೇನೆಂಬುದರ ವಿಷಯದಲ್ಲಿಯೂ ಅವರು ಹೆಚ್ಚೆಚ್ಚು ಅನಿಶ್ಚಿತರಾಗಿದ್ದಾರೆ.” ಇಂಥ ಆತ್ಮಿಕ ಕ್ಷಾಮವಿರುವಾಗ ಅನೇಕ ಚರ್ಚ್ ಪತ್ರಿಕೆಗಳು ತಮ್ಮ ಪ್ರಕಾಶನವನ್ನು ನಿಲ್ಲಿಸಿರುವುದರಲ್ಲಿ ಸಂದೇಹವಿಲ್ಲ. 1970ರ ದಶಕದ ಮಧ್ಯ ಭಾಗದಲ್ಲಿಯೆ ಅವುಗಳಲ್ಲಿ ಒಂದು ಪ್ರಲಾಪಿಸಿದ್ದು: “ಸಾಮಾನ್ಯ ಚರ್ಚ್ ಪತ್ರಿಕೆಯ ಯುಗ. . .ಗತಿಸಿ ಹೋಗಿದೆ.”
ಔದಾಸೀನ್ಯ ಮತ್ತು ಪ್ರತಿವರ್ತನೆರಹಿತ ಹಿಂಡು
ಹದಿನೆಂಟನೆಯ ಶತಮಾನದಲ್ಲಿ, ಇಂಗ್ಲಿಷ್ ರಾಷ್ಟ್ರಕಾರಣಿ ಎಡ್ಮಂಡ್ ಬರ್ಕ್, “ಧರ್ಮಕ್ಕೆ ಔದಾಸೀನ್ಯದಷ್ಟು ಮಾರಕವಾದ ವಸ್ತು ಇನ್ನಾವುದೂ ಇಲ್ಲ” ವೆಂದು ತಿಳಿದರು. ಅವರು ಇಂದು ಜೀವಿಸುತ್ತಿದ್ದರೆ ಉದಾಸೀನಭಾವದ ಧರ್ಮಾವಲಂಬಿಗಳನ್ನು ಧಾರಾಳ ನೋಡುತ್ತಿದ್ದರು.
ಉದಾಹರಣೆಗೆ, ಕೆಲವು ವರ್ಷಗಳಿಗೆ ಹಿಂದೆ ಪ್ರಶ್ನಿಸಲಾದ, ಅಮೆರಿಕದ ಲೂಥರನರಲ್ಲಿ 44 ಸೇಕಡ ಜನರು, ತಮ್ಮ ಪಾಸ್ಟರ್, ತಾವು ಚರ್ಚೇತರ ಕುಟುಂಬಗಳಿಗೆ ತಮ್ಮ ನಂಬಿಕೆಯ ವಿಷಯ ಮಾತಾಡಬೇಕೆಂದು ಹೇಳುವಲ್ಲಿ ತಾವು ಮಾತಾಡೆವು ಎಂದು ಹೇಳಿದರು. ಇನ್ನೂ ಇತ್ತೀಚಿನ ಎಣಿಕೆಯೊಂದು, ತಾವು ಪೋಪರೊಂದಿಗೆ ನೈತಿಕ ವಿಷಯಗಳಲ್ಲಿ ಅಸಮ್ಮತಿ ಸೂಚಿಸಿದರೂ ತಾವು ಒಳ್ಳೆಯ ಕ್ಯಾಥಲಿಕರಾಗಲು ಅನರ್ಹರಾಗುವುದಿಲ್ಲವೆಂದು ಅಮೆರಿಕದ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ಕಾಥಲಿಕರು ನಂಬುತ್ತಾರೆಂದು ತೋರಿಸಿತು.
ಜಪಾನಿನಲ್ಲಿ, ಜನಸಂಖ್ಯೆಯಲ್ಲಿ 79 ಸೇಕಡ ಜನರು ಧಾರ್ಮಿಕತೆ ಪ್ರಾಮುಖ್ಯವೆಂದು ಹೇಳುತ್ತಾರೆ. ಆದರೆ, ರಿಲಿಜನ್ಸ್ ಇನ್ ಮಾಡರ್ನ್ ಮ್ಯಾನ್ ಹೇಳುವಂತೆ ಮೂರರಲ್ಲಿ ಒಂದು ಭಾಗ ಮಾತ್ರ ತಮಗೆ ಧರ್ಮವಿದೆ ಎಂದು ಹೇಳುವುದರಿಂದ, ಅನೇಕರು ಧರ್ಮವನ್ನು ಅನುಸರಿಸಲು ತೀರಾ ಉದಾಸೀನ ಭಾವ ತೋರಿಸುತ್ತಾರೆಂಬುದು ವ್ಯಕ್ತ.
ಧಾರ್ಮಿಕವಾಗಿ ಉದಾಸೀನರಾಗಿರುವ ವಯಸ್ಕರಿಗೆ ಸಾಮಾನ್ಯವಾಗಿ ಹುರುಪಿನ ಮತ್ತು ಪ್ರತಿಕ್ರಿಯಾತ್ಮಕರಾದ ಮಕ್ಕಳಿರುವುದಿಲ್ಲ. ಜರ್ಮನಿಯ ಬಾನ್ ವಿಶ್ವ ವಿದ್ಯಾಲಯದ ಸೈಖಾಲಜಿ ಸಂಘದ ಡೈರೆಕ್ಟರು 11 ರಿಂದ 16 ವಯಸ್ಸಿನವರ ಮಧ್ಯೆ ಮಾಡಿದ ಸರ್ವೆಯಲ್ಲಿ, ಯುವ ಜನರು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿ ವರ್ತನೆಗಳನ್ನು ಅನುಸರಿಸಲು ವ್ಯಕ್ತಿ ಮಾಡೆಲ್ಗಳನ್ನು ನೋಡುತ್ತಿದ್ದಾರೆಂದು ತೋರಿಸಿತು. ಆದರೆ ಅವರ ಆದರ್ಶಗಳು ಯಾರೆಂದು ಕೇಳಲಾದಾಗ ಒಮ್ಮೆಯಾದರೂ ಅವರು ಚರ್ಚ್ ನಾಯಕರುಗಳನ್ನು ಹೆಸರಿಸಲಿಲ್ಲ.
ರಾಜಕೀಯ ಬಲದಲ್ಲಿ ಇಳಿತ
ಈಗ ಸಂಘಟಿತ ಧರ್ಮಕ್ಕೆ ಅದಕ್ಕೆ ಒಮ್ಮೆ ಇದ್ದ ರಾಜಕೀಯ ಬಲವಿಲ್ಲ. ದೃಷ್ಟಾಂತಕ್ಕೆ, ದೊಡ್ಡ ಕ್ಯಾಥಲಿಕ್ ದೇಶಗಳಲ್ಲಿ ಸಹ, ವ್ಯಾಟಿಕನ್ ತನಗೆ ನಿಜವಾಗಿಯೂ ಇಷ್ಟವಿಲ್ಲದ ಗರ್ಭಪಾತ, ವಿವಾಹ ವಿಚ್ಛೇದನ, ಮತ್ತು ಆರಾಧನಾ ಸ್ವಾತಂತ್ಯಗಳ ವಿರುದ್ಧ ಶಾಸನದ ಅಂಗೀಕಾರವನ್ನು ನಿಲ್ಲಿಸಶಕ್ತವಾಗಲಿಲ್ಲ. ಇದೇ ರೀತಿ, 1984ರಲ್ಲಿ ಕ್ಯಾಥಲಿಕ್ ಧರ್ಮ ಇಟೆಲಿಯ ಸ್ಥಾಪಿತ ಧರ್ಮವೆಂಬುದರ ವಿರುದ್ಧ ಮಾಡಿದ ಕರಾರನ್ನು ಒಪ್ಪುವಂತೆ ವ್ಯಾಟಿಕನ್ ನಿರ್ಬಂಧಕ್ಕೊಳಗಾಯಿತು!
ಸುಳ್ಳು ಧರ್ಮ ಈ ಮೊದಲು ಯಾವುದನ್ನು ಕುತಂತ್ರದ ರಾಜಕೀಯ ಒತ್ತಡದಿಂದ ಸಾಧಿಸಿತ್ತೊ ಅದನ್ನು ಅದು ಈಗ ಅದರ ಪ್ರಸಿದ್ಧ ಪುರೋಹಿತರು—ದೃಷ್ಟಾಂತಕ್ಕೆ, ದಕ್ಷಿಣ ಆಫ್ರಿಕದ ಆ್ಯಂಗ್ಲಿಕನ್ ಆರ್ಚ್ಬಿಷಪ್ ಡೆಸ್ಮಂಡ್ ಟುಟು—ನಾಯಕರಾಗಿರುವ ಸಾರ್ವಜನಿಕ ಪ್ರತಿಭಟನೆಗಳಿಂದ ಸಾಧಿಸಲು ಪ್ರಯತ್ನಿಸುತ್ತದೆ.
ಒಗ್ಗಟ್ಟಿದ್ದರೆ ನಿಲ್ಲುತ್ತೇವೆ, ಒಡಕಿದ್ದರೆ ಬೀಳುತ್ತೇವೆ
ಸ್ಕಾಟ್ಲೆಂಡಿನ ಎಡಿನ್ಬರ್ಗಿನಲ್ಲಿ 1910ರಲ್ಲಿ ನಡೆದ ಪ್ರಾಟೆಸ್ಟಂಟ್ ಮಿಶನೆರಿ ಸೊಸೈಟಿಗಳ ಒಂದು ಸಮ್ಮೇಳನ ಆಧುನಿಕ ಎಕ್ಯುಮೆನಿಕಲ್ ಚಳವಳಿಯನ್ನು ಹುಟ್ಟಿಸಿತು. ಧಾರ್ಮಿಕ ಸಹಕಾರವನ್ನು ಮತ್ತು ಪರಸ್ಪರ ತಿಳಿವಳಿಕೆಯನ್ನು ಬೆಳೆಸಲು ಮತ್ತು ಹೀಗೆ, “ಕ್ರೈಸ್ತ ಧರ್ಮ” ಒಂದೇ ಸ್ವರದಿಂದ ಮಾತನಾಡುವಂತೆ ಮಾಡಲು ಈ ಚಳವಳಿಯನ್ನು ಇತ್ತೀಚೆಗೆ ತೀವ್ರಗೊಳಿಸಲಾಗಿದೆ.
ಈ ಎಕ್ಯುಮೆನಿಕಲ್ ಚಳವಳಿ ಅನೇಕ ರೂಪಗಳನ್ನು ತೆಗೆದುಕೊಳ್ಳುತ್ತದೆ. 1948ರಲ್ಲಿ ಆ್ಯಮ್ಸರ್ಟೆಮ್ಡ್ನಲ್ಲಿ ವರ್ಲ್ಡ್ ಕೌನ್ಸಿಲ್ ಆಫ್ ಚರ್ಚಸ್ ರಚಿಸಲ್ಪಟ್ಟಾಗ ಒಂದು ಗಮನಾರ್ಹ ಹೆಜ್ಜೆ ಮುಂದಿಡಲ್ಪಟ್ಟಿತು. ಮೊದಲಲ್ಲಿ ಪ್ರಾಟೆಸ್ಟಂಟ್, ಆ್ಯಂಗ್ಲಿಕನ್ ಮತ್ತು ಆರ್ಥಡಕ್ಸ್ ಚರ್ಚುಗಳ ಸುಮಾರು 150 ಪಂಗಡಗಳನ್ನು ಒಳಗೊಂಡಿದ್ದ ಇದು ಈಗ ಅದಕ್ಕೆ ಇಮ್ಮಡಿ ಸದಸ್ಯರದ್ದಾಗಿರುತ್ತದೆ.
ವರ್ಲ್ಡ್ ಕೌನ್ಸಿಲ್ ಆಫ್ ಚರ್ಚಸಿನ ಸದಸ್ಯಳಲ್ಲವಾದರೂ, ರೋಮನ್ ಕ್ಯಾಥಲಿಕ್ ಚರ್ಚು ಈಗ ಆ ದಿಕ್ಕಿನಲ್ಲಿ ನಿಧಾನ ಮುಂದುವರಿಯುತ್ತದೆ. 1984ರಲ್ಲಿ, ಕೌನ್ಸಿಲಿನ ಸ್ವಿಸ್ ಪ್ರಧಾನ ಕಚೇರಿಯಲ್ಲಿ ಕೌನ್ಸಿಲಿನ ನಿವೃತ್ತರಾಗಲಿದ್ದ ಜನರಲ್ ಸೆಕ್ರೆಟರಿಯೊಂದಿಗೆ ಪೋಪ್ ಜಾನ್ ಪೌಲರು ಎಕ್ಯುಮೆನಿಕಲ್ ಪ್ರಾರ್ಥನಾಕೂಟದಲ್ಲಿ ನಾಯಕತ್ವ ವಹಿಸಿದರು. ಮತ್ತು ಮೇ 1989ರಲ್ಲಿ, ಸ್ವಿಟ್ಸರ್ಲೆಂಡಿನ ಬಾಸೆಲ್ನಲ್ಲಿ ಕೂಡಿಬಂದ ಮತ್ತು ಒಂದು ವೃತ್ತಪತ್ರಿಕೆ ಯಾವುದನ್ನು “ಸುಧಾರಣೆಯ ಕಾಲದಿಂದ ಹಿಡಿದು ಅತ್ಯಂತ ದೊಡ್ಡ ಎಕ್ಯುಮೆನಿಕಲ್ ಸಂಭವ” ವೆಂದು ಕರೆಯಿತೊ ಅಂಥ 700 ಚರ್ಚ್ ನಾಯಕರುಗಳಲ್ಲಿ ಕ್ಯಾಥಲಿಕರೂ ಇದ್ದರು.
ಮತ್ತು 1930ಗಳ ಮಧ್ಯ ಭಾಗದಿಂದ ಹಿಡಿದು ಈ ಒಪ್ಪಂದದ ಮನಸ್ಸು, ಎಲ್ಲ “ಕ್ರೈಸ್ತ” ಧರ್ಮಗಳಲ್ಲಿ ಅಂತರ್ಗತವಾದ ದೇವದತ್ತ ಐಕ್ಯವಿದೆ ಎಂಬ ವಿಚಾರದ ಹೆಚ್ಚುತ್ತಿರುವ ಅಂಗೀಕಾರದ ಕಾರಣ ಹೆಚ್ಚು ಸ್ಪಷ್ಟವಾಗುತ್ತಾ ಬರುತ್ತಿದೆ. ಈ ಅಂತರ್ಗತ ಐಕ್ಯದ “ರುಜುವಾತಾಗಿ” ವರ್ಲ್ಡ್ ಕೌನ್ಸಿಲ್ ಆಫ್ ಚರ್ಚಸ್, ಅದರ ಎಲ್ಲ ಸದಸ್ಯರು “ಯೇಸು ಕ್ರಿಸ್ತನನ್ನು ದೇವರೂ ರಕ್ಷಕನೂ” ಎಂದು ಅಂಗೀಕರಿಸುವ ತ್ರಯೈಕ್ಯ ತತ್ವವನ್ನು ಒತ್ತಿ ಹೇಳುತ್ತದೆ.
ಕ್ರೈಸ್ತ ಪ್ರಪಂಚ ಕ್ರೈಸ್ತೇತರ ಧರ್ಮಗಳೊಂದಿಗೂ ಮಾತುಕತೆ ನಡೆಸಿದೆ. ದಿ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಪುಸ್ತಕಕ್ಕನುಸಾರ ಇದು, “ಯಾವುದು ಒಂದು ವಿಶ್ವಾಸ ಸತ್ಯವಾದರೆ ಇನ್ನಾವ ವಿಶ್ವಾಸಗಳಿಗೂ ಅಸ್ತಿತ್ವದಲ್ಲಿರುವ ಹಕ್ಕಿಲ್ಲ ಎಂದು ಸೂಚಿಸುವ ದೇವಶಾಸ್ತ್ರೀಯ ಸಾಮ್ರಾಜ್ಯ ತತ್ವ ಮನೋಭಾವ ಮತ್ತು ವಿವಾದವನ್ನು ಎಬ್ಬಿಸುವಷ್ಟು ವ್ಯತ್ಯಾಸಗಳು ವಿಶ್ವಾಸಗಳಲ್ಲಿಲ್ಲ ಮತ್ತು ಇವುಗಳ ತುಸು ಮಿಶ್ರಣವು ಭವಿಷ್ಯತ್ತಿನಲ್ಲಿ ಹೊಸ ವಿಶ್ವಾಸವನ್ನು ಹುಟ್ಟಿಸುವುದು ಎಂದು ಸೂಚಿಸುವ ಸಿಂಕ್ರೆಟಿಸ್ಮ್ನ ಮಧ್ಯೆ” ಕಾರ್ಯಾತ್ಮಕ ರಾಜಿಯನ್ನು ಕಂಡು ಹಿಡಿಯುವ ಕಾರಣದಿಂದಲೆ.
ವಾಸ್ತವವಾಗಿ, ಸುಳ್ಳು ಧರ್ಮ ಅನೇಕ ಎಳೆಗಳಿರುವ ಹಗ್ಗಕ್ಕೆ ಸಮಾನ. ಎಲ್ಲ ಎಳೆಗಳು ವಿವಿಧ ದಿಕ್ಕುಗಳಿಗೆ ಎಳೆಯುತ್ತವೆ. ಇದು ವಿಪತ್ತಿಗೆ ಪೂರ್ವರಂಗ. ಏಕೆಂದರೆ ಯೇಸುವಿನ ಈ ಮಾತುಗಳನ್ನು ಇನ್ನೂ ಅಬದ್ಧವೆಂದು ಸ್ಥಾಪಿಸಲಾಗಿರುವುದಿಲ್ಲ: “ಯಾವ ರಾಜ್ಯವಾದರೂ ತನ್ನಲ್ಲಿ ಭೇದ ಹುಟ್ಟಿದರೆ ಹಾಳಾಗುವುದು; ತನ್ನಲ್ಲಿ ಭೇದ ಹುಟ್ಟಿದ ಯಾವ ಪಟ್ಟಣವಾದರೂ ಮನೆಯಾದರೂ ನಿಲ್ಲದು.”—ಮತ್ತಾಯ 12:25.
ಸತ್ಯವಾಗಿರುವುದನ್ನು ಅಂಗೀಕರಿಸಿ ಸುಳ್ಳನ್ನು ತ್ಯಜಿಸಿರಿ!
ಕೆಲವರು ರುಜುವಾತನ್ನು ಅಸಡ್ಡೆ ಮಾಡಲು ಆಯ್ದುಕೊಳ್ಳಬಹುದು. ಆದರೆ ಆಧಾರವಿಲ್ಲದ ಆಶಾವಾದ ಅಪಾಯಕರ. “ಚರ್ಚುಗಳು ಒಂದು ಸಂತತಿಗಿಂತಲೂ ಹೆಚ್ಚುಕಾಲ ವಿಷಯಗಳು ತಮ್ಮಷ್ಟಕ್ಕೆ ಉತ್ತಮಗೊಳ್ಳುವುವು ಎಂಬ ಪ್ರತೀಕ್ಷೆಯಿಂದ ಜೀವಿಸಿವೆ” ಎಂದಿತು ಅಕ್ಟೋಬರ 1988ರ ಲಂಡನಿನ ದ ಟೈಮ್ಸ್ ಪತ್ರಿಕೆ. ಅದು ಮುಂದುವರಿಸಿದ್ದು: “ಬ್ರಿಟನಿನಲ್ಲಿ ಚರ್ಚ್ ಸದಸ್ಯತನ ಬಹು ಕಾಲದಿಂದ ಕ್ರಮೇಣ ಇಳಿದಿರುವುದಾದರೂ ಚರ್ಚುಗಳಲ್ಲಿ ಇದನ್ನು ವಿವರಿಸಲು ಯಾ ಅದನ್ನು ಹಿಮ್ಮೊಗ ಮಾಡಲು ಯಾ ಅದಕ್ಕನುಸಾರ ಕಾರ್ಯನೀತಿಗಳನ್ನು ರಚಿಸಲು ಮಾಡಿರುವ ಅವಿಶ್ರಾಂತ ಪ್ರಯತ್ನ ಕೊಂಚವೇ ಸರಿ.” ಅದು ಮತ್ತೆ ನ್ಯಾಯಸಮ್ಮತವಾಗಿ ತೀರ್ಮಾನಿಸಿದ್ದು: “ಮಾರಾಟವು ಮುಂದುವರಿಯುತ್ತಾ ಕಡಮೆಯಾಗುವ ಯಾವುದೆ ವ್ಯಾಪಾರ ಸಂಸ್ಥೆ ಒಂದೇ ಅಂತಿಮ ಆಪತಿಗ್ತೆ ತಯಾರಾಗಿರಬೇಕು ಇಲ್ಲವೆ ತನ್ನ ಉತ್ಪನ್ನ ಮತ್ತು ಮಾರಾಟವನ್ನು ಉತ್ತಮಗೊಳಿಸಲು ಕ್ರಮ ಕೈಕೊಳ್ಳಬೇಕು.”
ಸುಳ್ಳು ಧರ್ಮವು “ತನ್ನ ಉತ್ಪನ್ನ ಮತ್ತು ಮಾರಾಟವನ್ನು ಉತ್ತಮ” ಗೊಳಿಸುತ್ತದೆಂಬುದನ್ನು ಯಾವುದೂ ಸೂಚಿಸುವುದಿಲ್ಲ. ದೇವಭಯವಿರುವ ವ್ಯಕ್ತಿಗಳಿಗಿರುವ ಆಶಾವಾದಕ್ಕಿರುವ ಒಂದೇ ಆಧಾರವು, ಯಾವುದರ ಆತ್ಮಿಕ ನೀರಿನ ಹರಿಯುವ ತೊರೆಗಳು ಬತ್ತಿಹೋಗುವ ಅಪಾಯದಲ್ಲಿಲ್ಲವೊ ಅಂಥ ಒಂದೇ ಸತ್ಯ ಧರ್ಮಕ್ಕೆ ತಿರುಗುವುದರಲ್ಲಿದೆ. ಸುಳ್ಳು ಧರ್ಮದ ವಿಷಯ ಹೇಳುವುದಾದರೆ, “ಲೆಕ್ಕ ತೀರಿಸುವ ಸಮಯ ನಿಕಟವಿದೆ.” ಆ ಲೇಖನ ಮಂದಿನ ಸಂಚಿಕೆಯಲ್ಲಿ ಬರುವಾಗ ಅದರ ವಿಷಯ ಹೆಚ್ಚು ಕಲಿಯಿರಿ. (g89 11/22)
[ಪುಟ 20ರಲ್ಲಿರುವಚೌಕ]
ಯೆಹೋವನ ಸಾಕ್ಷಿಗಳು: ಅವರ ನೀರುಗಳು ಬತ್ತಿಹೋಗುತ್ತಾ ಇಲ್ಲ
“ಸಾಂಪ್ರದಾಯಿಕ ಧರ್ಮಗಳು ನಿಧಾನವಾಗಿ ಅವನತಿ ಹೊಂದಿ ಅವುಗಳ ಚರ್ಚ್ ಮತ್ತು ದೇವಸ್ಥಾನಗಳು ಯಾವಾಗಲೂ ಹೆಚ್ಚೆಚ್ಚು ಖಾಲಿಯಾಗುತ್ತಿರುವಾಗ ಯೆಹೋವನ ಸಾಕ್ಷಿಗಳು ಹೆಚ್ಚುತ್ತಿರುವ ಸದಸ್ಯತನವನ್ನು ಪಡೆಯುವುದಲ್ಲದೆ ತಮ್ಮ ಹೊಸ ಸದಸ್ಯರುಗಳನ್ನು ಕೂಡಿಸಲು ಹಿಂದಿನ ಚರ್ಚ್ ಕಟ್ಟಡ ಮತ್ತು ಇತರ ಸೌಕರ್ಯಗಳನ್ನೂ ಪಡೆಯುತ್ತಿದ್ದಾರೆ.”—ಲಿ ಪಿಟೀಟ್ ಜರ್ನಲ್, ಕೆನೇಡಿಯನ್ ಪತ್ರಿಕೆ.
“ಇಟೆಲಿಯಲ್ಲಿ ಅವರು 45 ಸಾವಿರ ಮಂದಿ ಇದ್ದಾರೆ. . .ಇಂದು ಈ ಪಂಥದಲ್ಲಿ ನಿಜ ಪತ್ರಿಕೆಗಳಿವೆ, ಅವು ಉತ್ತಮ ಮತ್ತು ಅಭಿರುಚಿಯದ್ದೂ ಆಗಿವೆ(ಅವುಗಳಲ್ಲಿ ಲೋಕವ್ಯಾಪಕವಾದ ವಾರ್ತೆ ಮತ್ತು ಲೇಖನಗಳಿವೆ. ಅವರು ಅತ್ಯಾಧುನಿಕ ಚಿಕ್ಕ ಪುಸ್ತಕಗಳನ್ನು ಮುದ್ರಿಸುತ್ತಾರೆ ಮಾತ್ರವಲ್ಲ, ಅತ್ಯಂತ ನಿಪುಣ ಬೈಬಲ್ ತಜ್ಞರಿಗೂ ಉತ್ತರ ಕೊಡುತ್ತಾರೆ. ಅವರು ಹಿಬ್ರುವಿನಿಂದ ನೇರವಾಗಿ ಭಾಷಾಂತರಿಸಿದ ಬೈಬಲುಗಳನ್ನು ವಿತರಣೆ ಮಾಡುತ್ತಾರೆ. . .ಈ ವಿಧಾನಗಳಿಂದಾಗಿ ಸಾಕ್ಷಿಗಳಿಗೆ ಭಾರಿ ಜಯ ದೊರಕಿದೆ.”—ಫ್ಯಾಮಿಲಿಯ ಮೇಸಿ, ಇಟೆಲಿಯ ಕ್ಯಾಥಲಿಕ್ ಪತ್ರಿಕೆ(1975ರಲ್ಲಿ ಬರೆದುದು; ಎಪ್ರಿಲ್ 1989ರೊಳಗೆ ಇಟೆಲಿಯಲ್ಲಿ ಯೆಹೋವನ ಸಾಕ್ಷಿಗಳ ಸಂಖ್ಯೆ 1,69,646ಕ್ಕೆ ಏರಿತ್ತು.)
“[ಯೆಹೋವನ ಸಾಕ್ಷಿಗಳು] ನೂರಾರು ಮಂದಿಗೆ ದೀಕ್ಷಾಸ್ನಾನ ಕೊಡುವಾಗ ನಾವು ಇಬ್ಬರು, ಮೂವರಿಗೆ ಕೊಡುತ್ತೇವೆ.”—ದಿ ಇವ್ಯಾಂಜಲಿಸ್ಟ್, ದಿ ಇವ್ಯಾಂಜಲಿಸ್ಟ್ ಟ್ರ್ಯಾಕ್ಟ್ ಡಿಸ್ಟ್ರಿಬ್ಯೂಟರ್ಸ್ನ ಅಧಿಕೃತ ಪತ್ರಿಕೆ. (1962ರಲ್ಲಿ ಈ ಹೇಳಿಕೆ ಮಾಡಲ್ಪಟ್ಟಾಗ ಯೆಹೋವನ ಸಾಕ್ಷಿಗಳು 69,649 ಮಂದಿಗೆ ದೀಕ್ಷಾಸ್ನಾನ ಕೊಟ್ಟರು; 1988ರಲ್ಲಿ ಹೊಸದಾಗಿ ಸ್ನಾನ ಹೊಂದಿದವರ ಸಂಖ್ಯೆ 2,39,262 ಆಗಿತ್ತು.)
“ನಾನು 1962ರಲ್ಲಿ ಯೆಹೋವನ ಸಾಕ್ಷಿಗಳ ಅಧ್ಯಯನವನ್ನು ಈ ಅಭಿಪ್ರಾಯದಿಂದ ಮುಗಿಸಿದೆ: ‘ನೂತನ ಲೋಕ ಸಮಾಜ ಥಟ್ಟನೆ ನಿಂತು ಬಿಡುತ್ತದೆಂಬುದು ಸಂಶಯಾಸ್ಪದ.‘ . . .ಇಂದು[1979] ಅಂದಿಗಿಂತ ಇಮ್ಮಡಿಗೂ ಹೆಚ್ಚು ಸಾಕ್ಷಿಗಳಿದ್ದಾರೆ. ವಾಚ್ಟವರ್ ಸೊಸೈಟಿ ಬರುವ ದಶಕದಲ್ಲಿ ಗಾತ್ರದಲ್ಲಿ ಪ್ರಾಯಶಃ ಇಮ್ಮಡಿಯಾಗಬಹುದೆಂದು ಸಕಲ ಸೂಚನೆಗಳು ತೋರಿಸುತ್ತವೆ.”—ವಿಲ್ಯಂ ಜೆ. ವೇಲನ್, ಯು.ಎಸ್. ಕ್ಯಾಥಲಿಕ್ ಪತ್ರಿಕೆಯಲ್ಲಿ. (1962ರ 9,89,192 ಸಾಕ್ಷಿಗಳು 1988ರೊಳಗೆ 35,92,654ರಷ್ಟು ಬೆಳೆದರು.)
1970ರಿಂದ ಜರ್ಮನಿಯ ಫೆಡರಲ್ ರಿಪಬ್ಲಿಕ್(ಮತ್ತು ವೆಸ್ಟ್ ಬರ್ಲಿನ್)ನ ಯೆಹೋವನ ಸಾಕ್ಷಿಗಳ ಸಂಖ್ಯೆ 38 ಪ್ರತಿಶತ ಏರಿತು. ಕಳೆದ 30 ವರ್ಷಗಳಲ್ಲಿ ನೆದರ್ಲೆಂಡ್ಸಿನಲ್ಲಿ ಯೆಹೋವನ ಸಾಕ್ಷಿಗಳ ಸಭೆಗಳ ಸಂಖ್ಯೆ 161ರಿಂದ 317ಕ್ಕೆ, ಬ್ರಿಟನಿನಲ್ಲಿ, 825ರಿಂದ 1,257ಕ್ಕೆ ಏರಿ, ಎರಡು ದೇಶಗಳಲ್ಲಿಯೂ ಅನೇಕ ಹೊಸ ರಾಜ್ಯ ಸಭಾಗೃಹಗಳ ನಿರ್ಮಾಣವನ್ನು ಅನಿವಾರ್ಯ ಮಾಡಿತು.—“ಉಜ್ವಲ ಹೊರನೋಟ ಕುಂದುತ್ತದೆ” ಎಂಬ ಉಪ ಶಿರೋನಾಮದ ಕೆಳಗೆ 3ನೇ ಪರಿಚ್ಛೇದ ಹೋಲಿಸಿ.
[ಪುಟ 21 ರಲ್ಲಿರುವಚಿತ್ರ]
ಇಂದಿನ ಜಗತ್ತಿನ ಗೊಂದಲ, ಗಲಿಬಿಲಿಗಳಲ್ಲಿ ಧರ್ಮವನ್ನು ಅಧಿಕಾಂಶ ಅಸಡ್ಡೆ ಮಾಡಲಾಗುತ್ತದೆ