-
ಮಹಾ ಪಟ್ಟಣವು ಧ್ವಂಸಗೊಳಿಸಲ್ಪಟ್ಟದ್ದುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
23. ಮಹಾ ಬಾಬೆಲಿನಿಂದ ಓಡಿಬರುವುದರ ತತ್ಪರತೆಯನ್ನು ಪರಲೋಕದಿಂದ ಬಂದ ಶಬ್ದವು ಹೇಗೆ ಒತ್ತಿಹೇಳುತ್ತದೆ?
23 ಮಹಾ ಬಾಬೆಲಿನಿಂದ ಪಲಾಯನಗೈಯುವುದು, ಲೋಕ ಧರ್ಮಗಳ ಸದಸ್ಯತನವನ್ನು ತ್ಯಜಿಸುವುದು ಮತ್ತು ಪೂರ್ಣ ಪ್ರತ್ಯೇಕವಾಗಿರುವುದು, ನಿಜವಾಗಿಯೂ ಅಷ್ಟು ಜರೂರಿಯದ್ದೋ? ಹೌದು, ಯಾಕಂದರೆ ಪ್ರಾಚೀನ ಕಾಲದಿಂದ ಬಂದ ಈ ಧಾರ್ಮಿಕ ಅತಿ ಘೋರ ವಸ್ತುವಾದ ಮಹಾ ಬಾಬೆಲಿನ ಕುರಿತು ದೇವರ ದೃಷ್ಟಿಕೋನವನ್ನು ನಾವು ತೆಗೆದುಕೊಳ್ಳುವ ಆವಶ್ಯಕತೆಯಿದೆ. ಅವಳನ್ನು ಮಹಾ ಜಾರಸ್ತ್ರೀಯಾಗಿ ಕರೆಯುವುದರಲ್ಲಿ ಆತನು ಶಬ್ದಗಳನ್ನು ನಯಗೊಳಿಸಲಿಲ್ಲ. ಆದುದರಿಂದ ಈಗ ಈ ಹಾದರಗಿತ್ತಿಯ ಕುರಿತು ಪರಲೋಕದಿಂದ ಬಂದ ಶಬ್ದವು ಯೋಹಾನನಿಗೆ ಹೆಚ್ಚನ್ನು ತಿಳಿಯಪಡಿಸುತ್ತದೆ: “ಏಕೆಂದರೆ ಅವಳ ಪಾಪಗಳು ರಾಶಿಯಾಗಿ ಒಟ್ಟು ಸೇರಿ ಆಕಾಶದ ತನಕವೂ ಬೆಳೆದಿವೆ, ಮತ್ತು ದೇವರು ಅವಳ ಅನ್ಯಾಯ ಕೃತ್ಯಗಳನ್ನು ಮನಸ್ಸಿಗೆ ತಂದುಕೊಂಡಿದ್ದಾನೆ. ಆಕೆ ತಾನು ಸಲ್ಲಿಸಿದಂತೆ ಆಕೆಗೂ ಸಲ್ಲಿಸಿರಿ, ಮತ್ತು ಆಕೆ ಮಾಡಿದ್ದಕ್ಕೆ ಪ್ರತಿಯಾಗಿ ಇಮ್ಮಡಿಯಾಗಿ ಮಾಡಿರಿ, ಹೌದು, ಆಕೆ ಮಾಡಿದ ಸಂಖ್ಯೆಯ ಎರಡರಷ್ಟು ಮಾಡಿರಿ; ಆಕೆ ಯಾವುದರಲ್ಲಿ ಮಿಶ್ರಣವನ್ನು ಹಾಕಿದಳೋ ಆದರಲ್ಲಿ ಅವಳಿಗಾಗಿ ಎರಡರಷ್ಟು ಮಿಶ್ರಣವನ್ನು ಹಾಕಿರಿ. ಅವಳು ಎಷ್ಟರ ಮಟ್ಟಿಗೆ ತನ್ನನ್ನು ಮಹಿಮೆಪಡಿಸಿಕೊಂಡು ಲಜ್ಜಾಹೀನ ಸುಖಭೋಗದಲ್ಲಿ ವಾಸಿಸಿದಳೋ, ಅಷ್ಟರ ಮಟ್ಟಿಗೆ ಅವಳಿಗೆ ಯಾತನೆಯನ್ನೂ ಶೋಕವನ್ನೂ ಕೊಡಿರಿ. ಏಕೆಂದರೆ ಅವಳು ತನ್ನ ಹೃದಯದಲ್ಲಿ ಹೇಳುತ್ತಿರುವುದು, ‘ನಾನು ರಾಣಿಯಾಗಿ ಕುಳಿತುಕೊಳ್ಳುತ್ತೇನೆ, ಮತ್ತು ನಾನು ವಿಧವೆಯಲ್ಲ, ಮತ್ತು ನಾನು ಶೋಕವನ್ನು ಎಂದಿಗೂ ಕಾಣೆನು.’ ಆ ಕಾರಣದಿಂದಲೇ ಅವಳ ವ್ಯಾಧಿಗಳು—ಮರಣ, ಶೋಕ ಮತ್ತು ಕ್ಷಾಮ—ಒಂದೇ ದಿನದಲ್ಲಿ ಬರುವುವು, ಮತ್ತು ಆಕೆ ಬೆಂಕಿಯಿಂದ ಸಂಪೂರ್ತಿಯಾಗಿ ಸುಡಲ್ಪಡುವಳು, ಏಕೆಂದರೆ ಆಕೆಗೆ ನ್ಯಾಯತೀರಿಸಿದ ಯೆಹೋವ ದೇವರು ಬಲಿಷ್ಠನಾಗಿದ್ದಾನೆ.”—ಪ್ರಕಟನೆ 18:5-8, NW.
-
-
ಮಹಾ ಪಟ್ಟಣವು ಧ್ವಂಸಗೊಳಿಸಲ್ಪಟ್ಟದ್ದುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
27. ಪ್ರಾಚೀನ ಬಾಬೆಲಿನ ತೀರ್ಪುಗಳ ಮತ್ತು ಮಹಾ ಬಾಬೆಲಿನ ಮೇಲೆ ಬರಲಿರುವ ತೀರ್ಪುಗಳ ನಡುವೆ ಯಾವೆಲ್ಲಾ ಸಮಾನತೆಗಳು ಇವೆ?
27 ಪ್ರಾಚೀನ ಬಾಬೆಲಿನ ಪತನ ಮತ್ತು ಪ್ರಾಪ್ತವಾಗುವ ಕೊನೆಯ ಧ್ವಂಸವು ಅವಳ ಪಾಪಗಳಿಗಾಗಿ ಒಂದು ಶಿಕ್ಷೆಯಾಗಿತ್ತು. “ಅದು ಹೊಂದಬೇಕಾದ ದಂಡನೆಯು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ.” (ಯೆರೆಮೀಯ 51:9) ತದ್ರೀತಿಯಲ್ಲಿ, ಯೆಹೋವನ ಗಮನಕ್ಕೆ ಸ್ವತಃ ತರಲ್ಪಡುವಂತಹ ರೀತಿಯಲ್ಲಿ ಮಹಾ ಬಾಬೆಲಿನ ಪಾಪಗಳು “ರಾಶಿಯಾಗಿ ಒಟ್ಟುಸೇರಿ ಆಕಾಶದ ತನಕವೂ ಬೆಳೆದಿವೆ.” ಅವಳು ಅನ್ಯಾಯ, ವಿಗ್ರಹಾರಾಧನೆ, ಅನೈತಿಕತೆ, ದಬ್ಬಾಳಿಕೆ, ಕಳ್ಳತನ ಮತ್ತು ಕೊಲೆಗಳ ದೋಷಿಯಾಗಿದ್ದಾಳೆ. ಪ್ರಾಚೀನ ಬಾಬೆಲಿನ ಪತನವು, ಯೆಹೋವನ ಆಲಯಕ್ಕೆ ಮತ್ತು ಆತನ ಸತ್ಯಾರಾಧಕರಿಗೆ ಅವಳೇನನ್ನು ಮಾಡಿದ್ದಳೋ ಅದಕ್ಕಾಗಿ ಭಾಗಶಃ ಮುಯ್ಯಿತೀರಿಸುವಿಕೆಯಾಗಿತ್ತು. (ಯೆರೆಮೀಯ 50:8, 14; 51:11, 35, 36) ಅಂತೆಯೇ ಮಹಾ ಬಾಬೆಲಿನ ಪತನವು ಮತ್ತು ಅವಳ ಕಟ್ಟಕಡೆಯ ನಾಶನವು ಶತಮಾನಗಳಿಂದಲೂ ಸತ್ಯಾರಾಧಕರಿಗೆಲ್ಲ ಅವಳೇನನ್ನು ಮಾಡಿದ್ದಾಳೋ ಅದಕ್ಕೆ ಮುಯ್ಯಿತೀರಿಸುವಿಕೆಯ ಅಭಿವ್ಯಕ್ತಿಗಳಾಗಿವೆ. ನಿಜವಾಗಿಯೂ, ಅವಳ ಕೊನೆಯ ನಾಶನವು “ನಮ್ಮ ದೇವರು ಮುಯ್ಯಿತೀರಿಸುವ ದಿನದ” ಪ್ರಾರಂಭವಾಗಿದೆ.—ಯೆಶಾಯ 34:8-10; 61:2; ಯೆರೆಮೀಯ 50:28.
28. ಮಹಾ ಬಾಬೆಲಿಗೆ ಯೆಹೋವನು ಯಾವ ನ್ಯಾಯದ ಮಟ್ಟವನ್ನು ಅನ್ವಯಿಸುತ್ತಾನೆ, ಮತ್ತು ಯಾಕೆ?
28 ಮೋಶೆಯ ನಿಯಮಶಾಸ್ತ್ರದ ಕೆಳಗೆ ಒಬ್ಬ ಇಸ್ರಾಯೇಲ್ಯನು ತನ್ನ ಸ್ವದೇಶಸ್ಥನಿಂದ ಕಳವು ಮಾಡಿದರೆ ಅವನು ಕನಿಷ್ಠ ಪಕ್ಷದಲ್ಲಿ ಎರಡರಷ್ಟು ಪರಿಹಾರವನ್ನು ಹಿಂದೆ ಕೊಡಬೇಕಿತ್ತು. (ವಿಮೋಚನಕಾಂಡ 22:1, 4, 7, 9) ಮಹಾ ಬಾಬೆಲಿನ ಬರಲಿರುವ ನಾಶನದಲ್ಲಿ, ಯೆಹೋವನು ಒಂದು ಸದೃಶ್ಯ ನ್ಯಾಯದ ಮಟ್ಟವನ್ನು ಅನ್ವಯಿಸಲಿರುವನು. ಅವಳು ಕೊಟ್ಟದ್ದಕ್ಕಿಂತಲೂ ಜಾಸ್ತಿಯಾಗಿ ಅವಳಿಗೆ ಎರಡು ಪಟ್ಟು ಪಡೆಯಲಿಕ್ಕಿದೆ. ಈ ನ್ಯಾಯದ ತೀಕ್ಷೈತೆಯನ್ನು ಕಡಮೆಮಾಡಲು ಯಾವುದೇ ಕರುಣೆಯಿರಲಾರದು ಯಾಕಂದರೆ ಮಹಾ ಬಾಬೆಲ್ ಅವಳ ಬಲಿಗಳಿಗೆ ಯಾವುದೇ ಕರುಣೆಯನ್ನು ತೋರಿಸಿಲ್ಲ. ಅವಳು ಭೂಜನರ ಮೇಲೆ ತನ್ನನ್ನು “ಲಜ್ಜಾಹೀನ ಸುಖ ಭೋಗದಲ್ಲಿ” ಇಟ್ಟುಕೊಳ್ಳಲು, ಪರಾವಲಂಬಿಯಾಗಿ ತಿಂದಿದ್ದಾಳೆ. ಈಗ ಅವಳು ಯಾತನೆಯನ್ನೂ, ಶೋಕವನ್ನೂ ಅನುಭವಿಸುವಳು. ಪ್ರಾಚೀನ ಬಾಬೆಲ್ ತಾನು ಒಂದು ಪೂರ್ಣ ಭದ್ರಸ್ಥಾನದಲ್ಲಿ ಇದ್ದೇನೆಂದು ಭಾವಿಸುತ್ತಾ, ಹೀಗೆ ಜಂಭಕೊಚ್ಚಿಕೊಂಡಿದ್ದಳು: “ನಾನು ವಿಧವೆಯಾಗಿ ಕೂತುಕೊಳ್ಳುವದಿಲ್ಲ. ಪುತ್ರಶೋಕವನ್ನು ಅನುಭವಿಸುವದಿಲ್ಲ.” (ಯೆಶಾಯ 47:8, 9, 11) ಮಹಾ ಬಾಬೆಲ್ ಕೂಡ ಭದ್ರವಾಗಿದ್ದಾಳೆಂದು ಭಾವಿಸುತ್ತಾಳೆ. ಆದರೆ ಅವಳ ನಾಶನವು ಫಕ್ಕನೇ, ಯಾರು “ಬಲಿಷ್ಠನಾಗಿ” ದ್ದಾನೋ ಆ ಯೆಹೋವನ ತೀರ್ಪಿಗನುಸಾರ “ಒಂದೇ ದಿನದಲ್ಲೋ” ಎಂಬಂತೆ ಸಂಭವಿಸಲಿರುವುದು!
-