-
ಸರ್ಪನ ತಲೆಯನ್ನು ಜಜ್ಜುವುದುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
3. ಸೈತಾನನಿಗೆ ಸಂಭವಿಸುವುದರ ಕುರಿತು ಯೋಹಾನನು ನಮಗೆ ಏನು ಹೇಳುತ್ತಾನೆ?
3 ಅನಂತರ ಸ್ವತಃ ಸೈತಾನನಿಗೂ, ಅವನ ದೆವ್ವಗಳಿಗೂ ಏನು ಕಾದಿರಿಸಲ್ಪಟ್ಟಿದೆ? ಯೋಹಾನನು ನಮಗನ್ನುವುದು: “ಮತ್ತು ಒಬ್ಬ ದೇವದೂತನು ತನ್ನ ಕೈಯಲ್ಲಿ ಅಧೋಲೋಕದ ಬೀಗದ ಕೈ ಮತ್ತು ದೊಡ್ಡ ಸರಪಣಿಯೊಂದಿಗೆ ಪರಲೋಕದಿಂದ ಇಳಿದು ಬರುವುದನ್ನು ನಾನು ಕಂಡೆನು. ಮತ್ತು ಅವನು, ಯಾರು ಪಿಶಾಚನೂ ಸೈತಾನನೂ ಆಗಿದ್ದಾನೋ, ಆ ಪುರಾತನವಾದ ಘಟಸರ್ಪವನ್ನು ವಶಕ್ಕೆ ತೆಗೆದುಕೊಂಡು ಅವನನ್ನು ಸಾವಿರ ವರುಷ ಬಂಧಿಸಿದನು. ಮತ್ತು ಆ ಸಾವಿರ ವರುಷ ತೀರುವ ತನಕ ಸೈತಾನನು ಇನ್ನೂ ಜನಾಂಗಗಳನ್ನು ಮರುಳುಗೊಳಿಸಲು ಆಗದಂತೆ ದೇವದೂತನು ಅವನನ್ನು ಅಧೋಲೋಕಕ್ಕೆ ದೊಬ್ಬಿ ಅದನ್ನು ಮುಚ್ಚಿ ಅವನ ಮೇಲೆ ಅದಕ್ಕೆ ಮುದ್ರೆಹಾಕಿದನು. ಈ ಸಂಗತಿಗಳಾದ ಮೇಲೆ ಅವನನ್ನು ಸ್ವಲ್ಪಕಾಲ ಬಿಟ್ಟುಬಿಡಬೇಕು.”—ಪ್ರಕಟನೆ 20:1-3, NW.
-
-
ಸರ್ಪನ ತಲೆಯನ್ನು ಜಜ್ಜುವುದುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
5. ಪಿಶಾಚನಾದ ಸೈತಾನನೊಂದಿಗೆ ಅಧೋಲೋಕದ ದೇವದೂತನು ಹೇಗೆ ವ್ಯವಹರಿಸುತ್ತಾನೆ, ಮತ್ತು ಯಾಕೆ?
5 ಅಗ್ನಿವರ್ಣದ ಮಹಾ ಘಟಸರ್ಪನು ಪರಲೋಕದಿಂದ ಉಚ್ಚಾಟಿಸಲ್ಪಟ್ಟಾಗ, ಅವನು “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ . . . ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪ” ಎಂದು ಉಲ್ಲೇಖಿಸಲ್ಪಟ್ಟಿರುತ್ತಾನೆ. (ಪ್ರಕಟನೆ 12:3, 9) ಈಗ, ಸೆರೆಹಿಡಿಯಲ್ಪಟ್ಟು ಮತ್ತು ಅಧೋಲೋಕಕ್ಕೆ ಹಾಕಲ್ಪಡುವ ಈ ಬಿಂದುವಿನಲ್ಲಿ ಅವನನ್ನು ಪುನಃ ಪೂರ್ಣವಾಗಿ “ಯಾರು ಪಿಶಾಚನೂ ಸೈತಾನನೂ ಆಗಿದ್ದಾನೋ ಆ ಪುರಾತನ ಸರ್ಪವಾದ ಘಟಸರ್ಪ” ಎಂದು ವರ್ಣಿಸಲಾಗಿದೆ. ಈ ಕುಖ್ಯಾತ ನುಂಗುವವನು, ವಂಚಕನು, ಅಪನಿಂದಕನು, ಮತ್ತು ವಿರೋಧಿಯು ಸರಪಳಿಯಲ್ಲಿ ಕಟ್ಟಲ್ಪಟ್ಟು, “ಅಧೋಲೋಕಕ್ಕೆ” ದೊಬ್ಬಲ್ಪಟ್ಟಿದ್ದಾನೆ, ಅವನು “ಇನ್ನೂ ಜನಗಳನ್ನು ಮರುಳುಗೊಳಿಸಲು ಆಗದಂತೆ” ಅದನ್ನು ಮುಚ್ಚಿ, ಅದಕ್ಕೆ ಭದ್ರವಾಗಿ ಮುದ್ರೆ ಹಾಕಲ್ಪಡುತ್ತದೆ. ಸಾವಿರ ವರುಷಗಳ ತನಕ ಸೈತಾನನನ್ನು ಅಧೋಲೋಕಕ್ಕೆ ಹಾಕುವುದರ ಮೂಲಕ, ಆ ಸಮಯದಲ್ಲಿ ಮಾನವ ಕುಲದ ಮೇಲಿನ ಅವನ ಪ್ರಭಾವವು, ಒಂದು ನೆಲಮಾಳಿಗೆಯ ಕಾರಾಗೃಹದಲ್ಲಿರುವ ಒಬ್ಬ ಕೈದಿಗಿಂತಲೂ ಏನೂ ಅಧಿಕವಾಗಿರುವುದಿಲ್ಲ. ಅಧೋಲೋಕದ ದೇವದೂತನು ಸೈತಾನನಿಗೆ ನೀತಿಯ ರಾಜ್ಯದೊಂದಿಗೆ ಯಾವುದೇ ಸಂಪರ್ಕವಿರುವುದರಿಂದ ಅವನನ್ನು ಪೂರ್ಣವಾಗಿ ತೊಲಗಿಸುತ್ತಾನೆ. ಮಾನವ ಕುಲಕ್ಕೆ ಎಂತಹ ಉಪಶಮನ!
-
-
ಸರ್ಪನ ತಲೆಯನ್ನು ಜಜ್ಜುವುದುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
7. (ಎ) ಸೈತಾನನು ಮತ್ತು ಅವನ ದೆವ್ವಗಳು ಅಧೋಲೋಕದಲ್ಲಿರುವಾಗ, ಯಾವ ಸ್ಥಿತಿಯಲ್ಲಿರುವರು, ಮತ್ತು ನಾವು ಹೇಗೆ ಬಲ್ಲೆವು? (ಬಿ) ಹೇಡಿಸ್ ಮತ್ತು ಅಧೋಲೋಕ ಅಂದರೆ ಒಂದೆಯೋ? (ಪಾದಟಿಪಣ್ಟಿ ನೋಡಿರಿ.)
7 ಅಧೋಲೋಕದಲ್ಲಿರುವಾಗ, ಸೈತಾನ ಮತ್ತು ಅವನ ದೆವ್ವಗಳು ಕ್ರಿಯಾತ್ಮಕವಾಗಿರುವವೂ? ಒಳ್ಳೇದು, “ಮೊದಲು ಇತ್ತು, ಈಗ ಇಲ್ಲ, ಮತ್ತು ಅಧೋಲೋಕದಿಂದ ಏರಿ” ಬರುವ ಕಡುಗೆಂಪು ಬಣ್ಣದ, ಏಳು ತಲೆಗಳ ಕಾಡು ಮೃಗವನ್ನು ನೆನಪಿಸಿಕೊಳ್ಳಿರಿ. (ಪ್ರಕಟನೆ 17:8) ಅಧೋಲೋಕದಲ್ಲಿದ್ದಾಗ, ಅದು ‘ಇಲ್ಲ’ ವಾಗಿತ್ತು. ಅದು ಕಾರ್ಯವಿಹೀನವಾಗಿತ್ತು, ನಿಷ್ಕ್ರಿಯವಾಗಿತ್ತು, ಬಹುತರವಾಗಿ ಮೃತವಾಗಿತ್ತು. ಹಾಗೆಯೇ, ಯೇಸುವಿನ ಕುರಿತು ಮಾತಾಡುವಾಗ, ಅಪೊಸ್ತಲ ಪೌಲನು ಹೇಳಿದ್ದು: “ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರುವದಕ್ಕೆ ಯಾರು ಪ್ರೇತಲೋಕಕ್ಕೆ [ಅಧೋಲೋಕಕ್ಕೆ, NW] ಇಳಿದುಹೋದಾರು?” (ರೋಮಾಪುರ 10:7) ಆ ಅಧೋಲೋಕದಲ್ಲಿರುವಾಗ, ಯೇಸುವು ಮೃತನಾಗಿದ್ದನು.a ಹಾಗಾದರೆ, ಸೈತಾನ ಮತ್ತು ದೆವ್ವಗಳು, ಅವರ ಸಾವಿರ ವರುಷದ ಅಧೋಲೋಕದ ಹಾಕಲ್ಪಡುವಿಕೆಯಲ್ಲಿ ಮರಣದಂತಹ ನಿಷ್ಕ್ರಿಯ ಸ್ಥಿತಿಯಲ್ಲಿ ಇರುವರು ಎಂದು ತೀರ್ಮಾನಿಸುವುದು ಸಮಂಜಸವಾಗಿದೆ. ನೀತಿಯನ್ನು ಪ್ರೀತಿಸುವವರಿಗೆ ಎಂತಹ ಶುಭ ವಾರ್ತೆ!
-