ಗೀತೆ 139
ದೃಢವಾಗಿ ನಿಲ್ಲಲು ಅವರಿಗೆ ಕಲಿಸಿ
ಮುದ್ರಿತ ಸಂಚಿಕೆ
ಯೆಹೋವ ಸೆಳೆದವರಿಗೆ
ಶಿಕ್ಷಣ ಕೊಡುತ್ತೇವೆ.
ಸತ್ಯದಿ ಅವರ ಜೀವನ
ನೋಡಲು ಅತ್ಯಾನಂದ.
(ಪಲ್ಲವಿ)
ಕೇಳು ಯೆಹೋವ ದೇವರೇ,
ಆಗು ಅವರ ಆಸರೆ.
ಯೇಸು ನಾಮದಿ ಕೋರಿಕೆ, ಸಫಲತೆ
ನೀಡಿ ಮಾಡವರ ದೃಢ.
ಶೋಧನೆ ಜಯಿಸಲಿ ಎಂದು
ದಿನವೂ ಬೇಡಿದೆವು,
ಕಲಿತು ಕಾಳಜಿ ಪಡೆದು
ಬಲಿತು ಬೆಳೆದರು.
(ಪಲ್ಲವಿ)
ಕೇಳು ಯೆಹೋವ ದೇವರೇ,
ಆಗು ಅವರ ಆಸರೆ.
ಯೇಸು ನಾಮದಿ ಕೋರಿಕೆ, ಸಫಲತೆ
ನೀಡಿ ಮಾಡವರ ದೃಢ.
ನಿನ್ನಲಿ ನಿನ್ನ ಮಗನಲಿ
ನಂಬಿಕೆ ತೋರಿಸಲಿ,
ಸಹಿಸಿ ವಿಧೇಯರಾಗಲಿ
ಜೀವದೋಟ ಗೆಲ್ಲಲಿ.
(ಪಲ್ಲವಿ)
ಕೇಳು ಯೆಹೋವ ದೇವರೇ,
ಆಗು ಅವರ ಆಸರೆ.
ಯೇಸು ನಾಮದಿ ಕೋರಿಕೆ, ಸಫಲತೆ
ನೀಡಿ ಮಾಡವರ ದೃಢ.
(ಲೂಕ 6:48; ಅ. ಕಾ. 5:42; ಫಿಲಿಪ್ಪಿ 4:1 ಸಹ ನೋಡಿ)