ಗೀತೆ 75
ನಮ್ಮ ಅತ್ಯಾನಂದಕ್ಕೆ ಕಾರಣಗಳು
1. ವಿಪುಲ ಕಾರಣಗಳಿವೆ
ನಮ್ಮ ಅತ್ಯಾನಂದಕ್ಕಿಂದು.
ಜನಾಂಗಗಳ ಇಷ್ಟವಸ್ತು
ಕೂಡಿ ಬರುತ್ತದೆಯೆಂದು.
ನಮ್ಮ ಹೃದಯಾನಂದ ಸ್ಥಿರ
ದೇವರ ವಾಕ್ಯಾಧಾರಿತ.
ಬೋಧನಾ ಭಾಗಿಗಳು ನಾವು,
ಹೀಗೆಮ್ಮ ನಂಬಿಕೆ ಸ್ಥಿರ.
ನಮ್ಮಾನಂದ ಕಾರಣ ಗಾಢ
ಹೃದದಲ್ಲಿ ಉರಿಯುತೆ.
ಕಷ್ಟ ಪರೀಕ್ಷೆಯು ಬಂದರೂ
ಯೆಹೋವ ಕೊಡುವ ತಾಳ್ಮೆ.
(ಪಲ್ಲವಿ)
ಯೆಹೋವನೆಮ್ಮ ಆನಂದ,
ಹರ್ಷ ಆತನ ಕೈಕಾರ್ಯ.
ಆತನ ಯೋ ಚನೆಯು ಅಗಾಧ,
ಸೌಜನ್ಯ, ಶಕ್ತಿ ವಿಪುಲ.
2. ಆಕಾಶ, ಸಾಗರ, ಭೂನೆಲ
ಈ ಸೃಷ್ಟಿಯ ಕಾರ್ಯವನ್ನೂ
ಸೃಷ್ಟಿ ಗ್ರಂಥವನ್ನೂ ವೀಕ್ಷಿಸಿ
ಪ್ರಶಂಸಿಸುತ್ತೇವವನ್ನು.
ನಾವೀಗ ಮಹಾ ಸಾಕ್ಷಿ ಕೊಟ್ಟು
ದೇವರಾಜ್ಯ ಸಾರುತ್ತೇವೆ.
ಅದರ ಹುಟ್ಟು, ಆಶೀರ್ವಾದ,
ಇವನ್ನು ಘೋಷಿಸುತ್ತೇವೆ.
ನಿತ್ಯೋಲ್ಲಾಸ ಸಮೀಪವಿದೆ,
ಕಷ್ಟ ಹೋಗಿ ಸುಖಾವಸ್ಥೆ.
ನೂತನ ಭೂಮ್ಯಾಕಾಶಗಳು
ನಿತ್ಯಾನಂದ ತರುತ್ತವೆ.
(ಪಲ್ಲವಿ)
ಯೆಹೋವನೆಮ್ಮ ಆನಂದ,
ಹರ್ಷ ಆತನ ಕೈಕಾರ್ಯ.
ಆತನ ಯೋ ಚನೆಯು ಅಗಾಧ,
ಸೌಜನ್ಯ, ಶಕ್ತಿ ವಿಪುಲ.
(ಧರ್ಮೋ. 16:15; ಯೆಶಾ. 12:6; ಯೋಹಾ. 15:11 ಸಹ ನೋಡಿ.)