ಗೀತೆ 42
“ನೀವು ಬಲಹೀನರಿಗೆ ನೆರವು ನೀಡಬೇಕು”
1. ಬಲಹೀನತೆಗಳು
ಇವೆ ಬಹಳ.
ಆದರೂ ಯೆಹೋವನ
ಪ್ರೀತಿ ಧಾರಾಳ.
ಆತನು ಕೃಪಾಳು,
ಪ್ರೀತಿ ಸ್ವರೂಪಿಯು.
ತೋರಿಸೋಣ ಆ ಪ್ರೀತಿ, ಕೊಟ್ಟು ನೆರವು.
2. ‘ನಾನೂ ಬಲಹೀನನು’
ಎಂದ ಪೌಲನು.
ಕ್ರಿಸ್ತ ರಕ್ತ ಕೊಂಡಿತು,
ಜೀವಕೊಟ್ಟಿತು.
ನಿತ್ರಾಣಿಗೆ ಶಕ್ತಿ
ದೇವರು ಕೊಡುವ.
ಪಟ್ಟು ಅನುತಾಪವ,
ಒರೆಸಿ ಬಾಷ್ಪ.
3. ಖಂಡಿಸದೆ ಅವರ,
ಬಲ ನೀಡೋಣ.
ನಮ್ಮ ದಯಾಶೀಲತೆ
ನೀಡುತೆ ಬಲ.
ನಮ್ಮ ಪರಿಶ್ರಮ
ಕೊಡಲಿ ಪ್ರೋತ್ಸಾಹ.
ಪಡೆಯುವರವರು
ನಿಜ ಸಾಂತ್ವನ.
(ಯೆಶಾ. 35:3, 4; 2 ಕೊರಿಂ. 11:29; ಗಲಾ. 6:2 ಸಹ ನೋಡಿ.)