ಭಾನುವಾರ, ನವೆಂಬರ್ 17
ಮೂರ್ಖನಿಂದ ದೂರ ಇರು. —ಜ್ಞಾನೋ. 14:7.
ನಾವು ಮೂರ್ಖರ ತರ ಇರಬಾರದು. ದೇವರ ನೀತಿ ನಿಯಮಗಳನ್ನ, ದೇವರ ವಿವೇಕದ ಮಾತುಗಳನ್ನ ಪಾಲಿಸೋಕೆ ಆಸೆಯನ್ನ ಬೆಳೆಸಿಕೊಳ್ಳಬೇಕು. ಈ ಆಸೆನ ಇನ್ನೂ ಜಾಸ್ತಿ ಬೆಳೆಸಿಕೊಳ್ಳೋಕೆ ದೇವರ ವಿವೇಕ ಬೇಡ ಅಂತ ಹೇಳುವವರ ಜೀವನದ ಜೊತೆ ನಾವು ನಮ್ಮ ಜೀವನನ ಹೋಲಿಸಿ ನೋಡಿಕೊಳ್ಳಬೇಕು. ಅವರ ಜೀವನದಲ್ಲಿ ಏನೆಲ್ಲ ಸಮಸ್ಯೆಗಳಿದೆ ಅನ್ನೋದರ ಬಗ್ಗೆ ಯೋಚನೆ ಮಾಡಬೇಕು. ಆಗ ದೇವರ ಮಾತನ್ನ ಕೇಳಿದ್ರಿಂದ ನಮ್ಮ ಜೀವನ ಎಷ್ಟು ಚೆನ್ನಾಗಿದೆ ಅಂತ ನಮಗೆ ಅರ್ಥ ಆಗುತ್ತೆ. (ಕೀರ್ತ. 32:8, 10) ಯೆಹೋವ ಎಲ್ಲರಿಗೂ ವಿವೇಕ ಸಿಗೋ ತರ ಮಾಡಿದ್ದಾನೆ. ಹಾಗಂತ ಅದನ್ನ ಪಡಕೊಳ್ಳಬೇಕು ಅಂತ ಆತನು ಯಾರನ್ನೂ ಒತ್ತಾಯ ಮಾಡಲ್ಲ. ಆದ್ರೆ ವಿವೇಕದ ಮಾತನ್ನ ಯಾರೆಲ್ಲ ಕೇಳಲ್ವೋ ಅವರಿಗೆ ಏನಾಗುತ್ತೆ ಅಂತ ಆತನು ಹೇಳಿದ್ದಾನೆ. (ಜ್ಞಾನೋ. 1:29-32) ಅವರಿಗೆ “ತಮ್ಮ ಕೆಲಸಗಳಿಗೆ ತಕ್ಕ ಪ್ರತಿಫಲ ಸಿಗುತ್ತೆ.” ಅವರು ಜೀವನದಲ್ಲಿ ಹೋಗ್ತಾ-ಹೋಗ್ತಾ ಕಷ್ಟ, ತೊಂದ್ರೆ, ಸಮಸ್ಯೆಗಳನ್ನ ಅನುಭವಿಸ್ತಾರೆ. ಅಷ್ಟೇ ಅಲ್ಲ, ಮುಂದೆ ಯೆಹೋವ ಅವರನ್ನ ನಾಶ ಮಾಡ್ತಾನೆ. ಆದ್ರೆ ಯಾರು ಯೆಹೋವನ ಮಾತನ್ನ ಕೇಳ್ತಾರೋ ಅದನ್ನ ಪಾಲಿಸ್ತಾರೋ ಅವರ ಬಗ್ಗೆ ಯೆಹೋವ ಹೀಗೆ ಮಾತು ಕೊಟ್ಟಿದ್ದಾನೆ: “ನನ್ನ ಮಾತು ಕೇಳಿದವನು ಸುರಕ್ಷಿತವಾಗಿ ಇರ್ತಾನೆ, ಯಾವುದೇ ಆತಂಕ ಇಲ್ಲದೆ ಆರಾಮಾಗಿ ಇರ್ತಾನೆ.”—ಜ್ಞಾನೋ. 1:33. w22.10 20-21 ¶11-13
ಸೋಮವಾರ, ನವೆಂಬರ್ 18
ಯೆಹೋವನಿಗೆ ಭಯಪಡೋ ಜನ್ರೆಲ್ಲ ಖುಷಿಯಾಗಿ ಇರ್ತಾರೆ, ಆತನ ದಾರಿಯಲ್ಲಿ ನಡಿಯೋ ಜನ್ರೆಲ್ಲ ಭಾಗ್ಯವಂತರು. —ಕೀರ್ತ. 128:1.
ಯೆಹೋವನಿಗೆ ಭಯಪಡೋದು ಅಂದ್ರೆ ಆತನ ಮೇಲೆ ಗೌರವ ಇರೋದ್ರಿಂದ ಆತನಿಗೆ ಇಷ್ಟ ಆಗದಿರೋ ವಿಷಯಗಳನ್ನ ಮಾಡದೇ ಇರೋದು. (ಜ್ಞಾನೋ. 16:6) ಹಾಗಾಗಿ ಬೈಬಲಲ್ಲಿ ಯೆಹೋವ ಯಾವುದು ಸರಿ, ಯಾವುದು ತಪ್ಪು ಅಂತ ಕಲಿಸಿಕೊಟ್ಟಿದ್ದಾನೋ ಅದನ್ನ ತಿಳಿದುಕೊಂಡು ಅದೇ ತರ ನಡಕೊಳ್ಳೋಕೆ ನಾವು ಪ್ರಯತ್ನ ಮಾಡಬೇಕು. (2 ಕೊರಿಂ. 7:1) ಆತನು ದ್ವೇಷಿಸೋ ವಿಷಯಗಳನ್ನ ಬಿಟ್ಟು, ಆತನಿಗೆ ಇಷ್ಟ ಆಗೋ ವಿಷಯಗಳನ್ನ ಮಾಡಿದ್ರೆ ಮಾತ್ರ ನಾವು ಖುಷಿಯಾಗಿ ಇರ್ತೀವಿ. (ಕೀರ್ತ. 37:27; 97:10; ರೋಮ. 12:9) ಯಾವುದು ಸರಿ, ಯಾವುದು ತಪ್ಪು ಅಂತ ನಿರ್ಧಾರ ಮಾಡೋ ಹಕ್ಕು ಅಥವಾ ಅಧಿಕಾರ ಯೆಹೋವ ದೇವರಿಗೆ ಇದೆ ಅಂತ ಒಬ್ಬ ವ್ಯಕ್ತಿಗೆ ಗೊತ್ತಿದ್ರೆ ಮಾತ್ರ ಸಾಕಾಗಲ್ಲ. ಆ ನೀತಿ-ನಿಯಮಗಳನ್ನ ಅವನು ಜೀವನದಲ್ಲಿ ಪಾಲಿಸಬೇಕು. (ರೋಮ. 12:2) ಯೆಹೋವನ ನೀತಿ-ನಿಯಮಗಳು ನಮ್ಮ ಒಳ್ಳೇದಕ್ಕೆ ಅಂತ ತಿಳಿದುಕೊಂಡು ನಾವು ಅದನ್ನ ಪಾಲಿಸಬೇಕು. ಆಗ ನಾವು ಜೀವನದಲ್ಲಿ ಖುಷಿಯಾಗಿ ಇರ್ತೀವಿ. (ಜ್ಞಾನೋ. 12:28) ಇದನ್ನ ಚೆನ್ನಾಗಿ ತಿಳಿದುಕೊಂಡಿದ್ದ ದಾವೀದ ಯೆಹೋವನ ಬಗ್ಗೆ ಹೀಗೆ ಹೇಳಿದ: “ನೀನು ನನಗೆ ಜೀವನದ ದಾರಿಯನ್ನ ತೋರಿಸ್ಕೊಡ್ತೀಯ. ನೀನು ಇರೋ ಕಡೆ ತುಂಬ ಖುಷಿ ಇರುತ್ತೆ. ನಿನ್ನ ಬಲಗಡೆ ಯಾವಾಗ್ಲೂ ಸಂತೋಷ ಇರುತ್ತೆ.”—ಕೀರ್ತ. 16:11. w22.10 8 ¶9-10
ಮಂಗಳವಾರ, ನವೆಂಬರ್ 19
ಮಗ ತನ್ನಿಷ್ಟಕ್ಕೆ ತಾನೇ ಏನೂ ಮಾಡಲ್ಲ. ಅಪ್ಪ ಯಾವ ಕೆಲಸಗಳನ್ನ ಮಾಡ್ತಾನೆ ಅಂತ ಮಗ ನೋಡ್ತಾನೆ, ಅದನ್ನೇ ಮಾಡ್ತಾನೆ. —ಯೋಹಾ. 5:19.
ಯೇಸು ತನ್ನ ಬಗ್ಗೆ ಯಾವಾಗಲೂ ಸರಿಯಾಗೇ ಯೋಚಿಸುತ್ತಿದ್ದನು. ಅದಕ್ಕೆ ಆತನು ದೀನನಾಗಿ ನಡೆದುಕೊಂಡನು. ಯೇಸು ಭೂಮಿಗೆ ಬರೋಕೆ ಮುಂಚೆ ಯೆಹೋವನ ಜೊತೆ ತುಂಬ ಅದ್ಭುತವಾದ ಕೆಲಸಗಳನ್ನ ಮಾಡಿದ್ದಾನೆ. ಆತನಿಂದಾನೇ “ಸ್ವರ್ಗ, ಭೂಮಿಯಲ್ಲಿರೋ ಎಲ್ಲ ವಿಷ್ಯಗಳು . . . ಸೃಷ್ಟಿ ಆಯ್ತು.” (ಕೊಲೊ. 1:16) ಆತನಿಗೆ ದೀಕ್ಷಾಸ್ನಾನ ಆದಮೇಲೆ, ತನ್ನ ಅಪ್ಪನ ಜೊತೆ ಏನೆಲ್ಲಾ ಮಾಡಿದ್ದನೋ ಅದೆಲ್ಲಾ ಆತನ ನೆನಪಿಗೆ ಬಂತು. (ಮತ್ತಾ. 3:16; ಯೋಹಾ. 17:5) ಹಾಗಂತ ಆತನು ಅಹಂಕಾರಿ ಆಗಿಬಿಡಲಿಲ್ಲ, ಬೇರೆಯವರಿಗಿಂತ ನಾನೇ ಮೇಲು ಅಂತ ಯಾವತ್ತೂ ಅಂದುಕೊಳ್ಳಲಿಲ್ಲ. ಬದಲಿಗೆ, “ಮನುಷ್ಯಕುಮಾರ ಸಹ ಸೇವೆ ಮಾಡಿಸ್ಕೊಳ್ಳೋಕೆ ಬರಲಿಲ್ಲ. ಸೇವೆ ಮಾಡೋಕೆ ಬಂದ. ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ ಕೊಡೋಕೆ ಬಂದ” ಅಂತ ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾ. 20:28) ಅಷ್ಟೇ ಅಲ್ಲ, ಆತನು ಯಾವತ್ತೂ ತನಗೆ ಇಷ್ಟ ಬಂದಿದ್ದನ್ನ ಮಾಡೋಕೆ ಹೋಗ್ತಿರಲಿಲ್ಲ, ಯಾವಾಗಲೂ ಯೆಹೋವನ ಹತ್ರ ಒಂದು ಮಾತು ಕೇಳುತ್ತಿದ್ದನು. ಇದರಿಂದ ಯೇಸುಗೆ ಎಷ್ಟು ದೀನತೆ ಇತ್ತು ಅಂತ ನಮಗೆ ಗೊತ್ತಾಗುತ್ತೆ. ನಾವೆಲ್ಲರೂ ಯೇಸು ತರನೇ ಇರಬೇಕು. w22.05 24 ¶13