ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ, ಇದನ್ನ ತಂತಿವಾದ್ಯಗಳ ಜೊತೆ ಹಾಡಬೇಕು. ಮಸ್ಕಿಲ್.* “ದಾವೀದ ಇಲ್ಲೇ ಬಚ್ಚಿಟ್ಕೊಂಡಿದ್ದಾನೆ” ಅಂತ ಜೀಫ್ಯರು ಸೌಲನಿಗೆ ಹೇಳಿದ್ರು.+ ಆಗ ದಾವೀದ ಈ ಕೀರ್ತನೆ ರಚಿಸಿದ.
2 ದೇವರೇ, ನನ್ನ ಪ್ರಾರ್ಥನೆಯನ್ನ ಕೇಳು,+
ನನ್ನ ಬಿನ್ನಹಗಳಿಗೆ ಗಮನಕೊಡು.
3 ಯಾಕಂದ್ರೆ ಅಪರಿಚಿತರು ನನ್ನ ವಿರುದ್ಧ ಬಂದಿದ್ದಾರೆ,
ಕ್ರೂರಿಗಳು ನನ್ನ ಜೀವ ತೆಗೀಬೇಕು ಅಂತಿದ್ದಾರೆ.+
ದೇವರ ಕಡೆ ಅವ್ರಿಗೆ ಒಂಚೂರು ಗೌರವ ಇಲ್ಲ.*+ (ಸೆಲಾ)
4 ನೋಡು! ದೇವರು ನನ್ನ ಸಹಾಯಕ,+
ನನಗೆ ಸಹಕಾರ ಕೊಡೋರ ಜೊತೆ ಯೆಹೋವ ಇದ್ದಾನೆ.
5 ನನ್ನ ಎದುರಾಳಿಗಳು ಕೊಡೋ ಕಷ್ಟಗಳನ್ನ ಆತನು ಅವ್ರಿಗೇ ವಾಪಸ್ ಕೊಡ್ತಾನೆ,+
ನನ್ನ ದೇವರೇ, ನೀನು ನಂಬಿಗಸ್ತನಾಗಿ ಇರೋದ್ರಿಂದ ಅವ್ರನ್ನ ನಾಶಮಾಡು.+
6 ನಾನು ನನ್ನ ಮನಸಾರೆ ನಿನಗೆ ಬಲಿ ಕೊಡ್ತೀನಿ.+
ಯೆಹೋವನೇ, ನಾನು ನಿನ್ನ ಹೆಸ್ರನ್ನ ಹೊಗಳ್ತೀನಿ. ಯಾಕಂದ್ರೆ ಅದೇ ಒಳ್ಳೇದು.+