ಯೆಶಾಯ
12 ಆ ದಿನ ನೀನು ಖಂಡಿತ ಹೀಗೆ ಹೇಳ್ತೀಯ
“ಯೆಹೋವನೇ, ನಿನಗೆ ಧನ್ಯವಾದ,
ಯಾಕಂದ್ರೆ ನನ್ನ ಮೇಲೆ ನಿನಗೆ ಕೋಪ ಇದ್ರೂ
ಕ್ರಮೇಣ ನಿನ್ನ ಕೋಪ ಕಡಿಮೆ ಆಯ್ತು, ನೀನು ನನ್ನನ್ನ ಸಂತೈಸಿದೆ.+
ನಾನು ಆತನ ಮೇಲೆ ಭರವಸೆ ಇಡ್ತೀನಿ, ನನಗೆ ಭಯ ಇರಲ್ಲ,+
ಯಾಕಂದ್ರೆ ಯಾಹು* ಯೆಹೋವ ನನ್ನ ಶಕ್ತಿ ಮತ್ತು ಬಲ,
ಆತನೇ ನನ್ನ ರಕ್ಷಣೆ ಆಗಿದ್ದಾನೆ.”+
3 ನೀನು ಖುಷಿಖುಷಿಯಾಗಿ ರಕ್ಷಣೆಯ ಬುಗ್ಗೆಗಳಿಂದ
ನೀರನ್ನ ಸೇದ್ತೀಯ.+
4 ಆ ದಿನ ನೀನು ಹೀಗೆ ಹೇಳ್ತೀಯ
“ಯೆಹೋವನಿಗೆ ಧನ್ಯವಾದ ಹೇಳಿ, ಆತನ ಹೆಸ್ರಲ್ಲಿ ಪ್ರಾರ್ಥಿಸಿ,
ಆತನ ಕೆಲಸಗಳ ಬಗ್ಗೆ ಜನಾಂಗಗಳಿಗೆ ಹೇಳಿ!+
ಆತನ ಹೆಸ್ರು ಶ್ರೇಷ್ಠ ಅಂತ ಪ್ರಕಟಿಸಿ.+
5 ಯೆಹೋವನಿಗೆ ಸ್ತುತಿ ಗೀತೆ ಹಾಡಿ.*+ ಯಾಕಂದ್ರೆ ಆತನು ಮಹತ್ತಾದ ವಿಷ್ಯಗಳನ್ನ ಮಾಡಿದ್ದಾನೆ.+
ಆ ವಿಷ್ಯಗಳು ಇಡೀ ಭೂಮಿಗೆ ಗೊತ್ತಾಗಲಿ.