ಯೆರೆಮೀಯ
14 ಬರಗಾಲಗಳ ವಿಷ್ಯದಲ್ಲಿ ಯೆಹೋವ ಯೆರೆಮೀಯನಿಗೆ ಏನು ಹೇಳಿದನಂದ್ರೆ,+
2 ಯೆಹೂದ ಎದೆ ಬಡ್ಕೊಳ್ತಿದೆ,+ ಅದ್ರ ಬಾಗಿಲುಗಳ ಬಣ್ಣ ಹೋಗಿದೆ.
ಅವು ಬೇಜಾರಾಗಿ ನೆಲದ ಮೇಲೆ ಕುಸಿದು ಬಿದ್ದಿವೆ,
ಯೆರೂಸಲೇಮಿಂದ ಗೋಳಾಟ ಕೇಳಿಸ್ತಿದೆ.
3 ಯಜಮಾನರು ತಮ್ಮ ಸೇವಕರನ್ನ* ನೀರು ತರೋಕೆ ಕಳಿಸ್ತಾರೆ.
ಅವರು ನೀರುಗುಂಡಿಗೆ* ಹೋದಾಗ ನೀರು ಸಿಗಲ್ಲ.
ಖಾಲಿ ಕೊಡ ಹಿಡ್ಕೊಂಡು ವಾಪಸ್ ಬರ್ತಾರೆ.
ನಾಚಿಕೆಯಿಂದ, ನಿರಾಶೆಯಿಂದ
ಅವರು ತಲೆ ಮುಚ್ಕೊಳ್ತಾರೆ.
4 ಯಾಕಂದ್ರೆ ದೇಶದಲ್ಲಿ ಮಳೆ ಇಲ್ಲದೆ ಭೂಮಿ ಬಿರುಕುಬಿಟ್ಟಿದೆ,+
ರೈತರು ಭಯದಿಂದ ತಲೆ ಮುಚ್ಕೊಂಡಿದ್ದಾರೆ.
5 ಬಯಲಲ್ಲಿ ಹುಲ್ಲು ಇಲ್ಲದ ಕಾರಣ
ಹೆಣ್ಣು ಜಿಂಕೆ ಸಹ ಆಗಷ್ಟೇ ಹೆತ್ತ ತನ್ನ ಮರಿಯನ್ನ ಬಿಟ್ಟು ಹೋಗುತ್ತೆ.
6 ಕಾಡುಕತ್ತೆಗಳು ಬೋಳು ಬೆಟ್ಟಗಳ ಮೇಲೆ ನಿಂತಿವೆ.
ಅವು ಗುಳ್ಳೆನರಿಗಳ ಹಾಗೆ ಏದುಸಿರು ಬಿಡ್ತಿವೆ,
ಮೇವು ಇಲ್ಲದೆ ದೃಷ್ಟಿ ಮಬ್ಬಾಗಿದೆ.+
7 ಯೆಹೋವನೇ, ನಾವು ತಪ್ಪು ಮಾಡಿದವರು ಅನ್ನೋದಕ್ಕೆ ನಾವು ಮಾಡಿದ ಪಾಪಗಳೇ ಸಾಕ್ಷಿ,
ಆದ್ರೂ ನಿನ್ನ ಹೆಸ್ರಿಗೋಸ್ಕರ ಹೆಜ್ಜೆ ತಗೊ,+
ನಾವು ತುಂಬ ಸಲ ನಿನಗೆ ನಂಬಿಕೆ ದ್ರೋಹ ಮಾಡಿದ್ದೀವಿ,+
ನಿನ್ನ ವಿರುದ್ಧ ಪಾಪ ಮಾಡಿದ್ದೀವಿ.
ಯಾಕೆ ರಾತ್ರಿ ಮಾತ್ರ ತಂಗೋ ಪ್ರಯಾಣಿಕನ ತರ ಇದ್ದೀಯ?
9 ಏನು ಮಾಡ್ದೆ ಸುಮ್ಮನೆ ನಿಂತಿರೋ ವ್ಯಕ್ತಿ ತರ ಯಾಕೆ ಇದ್ದೀಯ?
ತನ್ನ ಜನ್ರನ್ನ ಕಾಪಾಡೋಕೆ ಆಗದಿರೋ ಒಬ್ಬ ಶೂರನ ತರ ಯಾಕೆ ಇದ್ದೀಯ?
ನಮ್ಮ ಕೈಬಿಡಬೇಡ.
10 ಈ ಜನ್ರ ಬಗ್ಗೆ ಯೆಹೋವ ಹೇಳೋದು ಏನಂದ್ರೆ “ಅವರು ಅಲ್ಲಿ ಇಲ್ಲಿ ಅಲಿಯೋದಕ್ಕೆ ಇಷ್ಟಪಡ್ತಾರೆ,+ ಅವರು ತಮ್ಮ ಕಾಲುಗಳನ್ನ ತಡೆಯಲ್ಲ.+ ಹಾಗಾಗಿ ಯೆಹೋವನಾದ ನನಗೆ ಅವರು ಇಷ್ಟ ಇಲ್ಲ.+ ಅವರು ಮಾಡಿದ ತಪ್ಪುಗಳನ್ನ ನಾನು ನೆನಪಿಸ್ಕೊಳ್ತೀನಿ, ಅವರು ಮಾಡಿದ ಪಾಪಗಳಿಗೆ ಶಿಕ್ಷೆ ಕೊಡ್ತೀನಿ.”+
11 ಆಮೇಲೆ ಯೆಹೋವ ನನಗೆ “ಈ ಜನ್ರಿಗೆ ಒಳ್ಳೇದಾಗಬೇಕಂತ ನೀನು ಪ್ರಾರ್ಥಿಸಬೇಡ.+ 12 ಅವರು ಉಪವಾಸ ಮಾಡಿ ಸಹಾಯಕ್ಕಾಗಿ ಕೂಗಿಕೊಂಡಾಗ ನಾನು ಕಿವಿಗೊಡಲ್ಲ.+ ಅವರು ಸರ್ವಾಂಗಹೋಮ ಬಲಿಗಳನ್ನ, ಧಾನ್ಯ ಅರ್ಪಣೆಗಳನ್ನ ಅರ್ಪಿಸಿದ್ರೂ ಅದ್ರಿಂದ ನನಗೆ ಸಂತೋಷ ಆಗಲ್ಲ.+ ನಾನು ಅವ್ರನ್ನ ಯುದ್ಧ, ಬರಗಾಲ, ಅಂಟುರೋಗದಿಂದ* ನಾಶ ಮಾಡ್ತೀನಿ”+ ಅಂದನು.
13 ಆಗ ನಾನು “ಅಯ್ಯೋ, ವಿಶ್ವದ ರಾಜ ಯೆಹೋವನೇ! ಇಲ್ಲಿ ಪ್ರವಾದಿಗಳು ಜನ್ರಿಗೆ ‘ನೀವು ಯುದ್ಧದಿಂದಾಗಲಿ, ಬರಗಾಲದಿಂದಾಗಲಿ ಸಾಯಲ್ಲ. ಈ ದೇಶದಲ್ಲಿ ನಿಜ ಶಾಂತಿ ಇರೋ ತರ ದೇವರು ಮಾಡ್ತಾನೆ’ ಅಂತ ಹೇಳ್ತಿದ್ದಾರೆ” ಅಂದೆ.+
14 ಆಮೇಲೆ ಯೆಹೋವ ನನಗೆ ಹೀಗೆ ಹೇಳಿದನು: “ಆ ಪ್ರವಾದಿಗಳು ನನ್ನ ಹೆಸ್ರಲ್ಲಿ ಸುಳ್ಳು ಭವಿಷ್ಯವಾಣಿ ಹೇಳ್ತಿದ್ದಾರೆ.+ ನಾನು ಅವ್ರನ್ನ ಕಳಿಸಲಿಲ್ಲ, ಅವ್ರ ಹತ್ರ ಮಾತಾಡಲಿಲ್ಲ, ಬೇರೆಯವ್ರಿಗೆ ಹೋಗಿ ಹೇಳಿ ಅಂತನೂ ಹೇಳಲಿಲ್ಲ.+ ಅವರು ಸುಳ್ಳು ದರ್ಶನವನ್ನ, ಪ್ರಯೋಜನ ಇಲ್ಲದ ಕಣಿಯನ್ನ, ತಾವೇ ಹುಟ್ಟುಹಾಕಿದ ಭವಿಷ್ಯವಾಣಿಯನ್ನ ಹೇಳ್ತಿದ್ದಾರೆ. ಅದೆಲ್ಲ ಬರೀ ಮೋಸ.+ 15 ನಾನು ಕಳಿಸದಿದ್ರೂ ನನ್ನ ಹೆಸ್ರಲ್ಲಿ ಭವಿಷ್ಯ ಹೇಳ್ತಿರೋ, ‘ಈ ದೇಶದಲ್ಲಿ ಯುದ್ಧ ಆಗಲ್ಲ, ಬರಗಾಲ ಬರಲ್ಲ’ ಅಂತ ಹೇಳ್ತಿರೋ ಪ್ರವಾದಿಗಳ ಬಗ್ಗೆ ಯೆಹೋವ ಹೇಳೋದು ಏನಂದ್ರೆ ‘ಆ ಪ್ರವಾದಿಗಳು ಯುದ್ಧ, ಬರಗಾಲದಿಂದಾನೇ ಸಾಯ್ತಾರೆ.+ 16 ಅವ್ರ ಭವಿಷ್ಯವಾಣಿಗಳನ್ನ ಕೇಳಿ ನಂಬಿದ ಜನ್ರ ಶವಗಳನ್ನ ಬರಗಾಲ, ಯುದ್ಧದಿಂದಾಗಿ ಯೆರೂಸಲೇಮಿನ ಬೀದಿಗಳಲ್ಲಿ ಬಿಸಾಕ್ತಾರೆ. ಅವ್ರನ್ನ, ಅವ್ರ ಹೆಂಡತಿಯರನ್ನ, ಮಕ್ಕಳನ್ನ ಯಾರೂ ಸಮಾಧಿ ಮಾಡಲ್ಲ.+ ನಾನು ಅವ್ರ ಮೇಲೆ ತಕ್ಕ ಕಷ್ಟ ತರ್ತಿನಿ.’+
17 ನೀನು ಅವ್ರಿಗೆ ಈ ಮಾತುಗಳನ್ನ ಹೇಳು
‘ಹಗಲೂ ರಾತ್ರಿ ನನ್ನ ಕಣ್ಣಿಂದ ಕಣ್ಣೀರ ಧಾರೆ ಹರಿಯಲಿ, ಅದು ನಿಲ್ಲದಿರಲಿ,+
ಕನ್ಯೆಯಾದ ನನ್ನ ಮಗಳನ್ನ ಅಂದ್ರೆ ನನ್ನ ಜನ್ರನ್ನ ಜೋರಾಗಿ ಹೊಡೆದು ಜಜ್ಜಿದ್ದಾರೆ,+
ಇದ್ರಿಂದ ಅವಳಿಗೆ ಗಂಭೀರವಾಗಿ ಗಾಯ ಆಗಿದೆ.
18 ನಾನು ಪಟ್ಟಣದ ಹೊರಗೆ ಹೋಗಿ ನೋಡಿದ್ರೆ
ಕತ್ತಿಯಿಂದ ಸತ್ತು ಬಿದ್ದಿರೋರು ಕಾಣಿಸ್ತಾರೆ!+
ಪಟ್ಟಣದ ಒಳಗೆ ಬಂದ್ರೆ
ಬರಗಾಲದಿಂದ ಕಾಯಿಲೆ ಬಿದ್ದವರು ಕಾಣಿಸ್ತಾರೆ!+
ಪ್ರವಾದಿಗಳು ಪುರೋಹಿತರು ಅವ್ರಿಗೆ ಗೊತ್ತಿಲ್ಲದ
ಬೇರೆ ದೇಶದಲ್ಲಿ ಅಲಿತಿದ್ದಾರೆ.’”+
19 ದೇವರೇ, ನೀನು ಯೆಹೂದವನ್ನ ಪೂರ್ತಿ ಬಿಟ್ಟುಬಿಟ್ಟಿದ್ದೀಯಾ? ಚೀಯೋನ್ ಅಂದ್ರೆ ನಿನಗೆ ಇಷ್ಟ ಇಲ್ವಾ?+
ವಾಸಿನೇ ಆಗದಿರೋಷ್ಟು ಯಾಕೆ ಹೊಡೆದಿದ್ದೀಯಾ?+
ಇವತ್ತಲ್ಲ ನಾಳೆ ಶಾಂತಿ ಸಿಗುತ್ತೆ ಅಂತ ಅಂದ್ಕೊಂಡ್ವಿ, ಆದ್ರೆ ಏನೂ ಒಳ್ಳೆದಾಗಲಿಲ್ಲ,
ವಾಸಿಯಾಗೋ ಸಮಯ ಬರುತ್ತೆ ಅಂತ ಕಾಯ್ತಾ ಇದ್ವಿ, ಆದ್ರೆ ಭಯನೇ ಮುತ್ಕೊಂಡಿದೆ!+
20 ಯೆಹೋವನೇ, ನಾವು ಕೆಟ್ಟ ಕೆಲಸಗಳನ್ನ ಮಾಡಿದ್ದೀವಿ ಅಂತ,
ನಮ್ಮ ಪೂರ್ವಜರು ತಪ್ಪುಗಳನ್ನ ಮಾಡಿದ್ದಾರೆ ಅಂತ ಒಪ್ಪಿಕೊಳ್ತೀವಿ,
ನಾವು ನಿನ್ನ ವಿರುದ್ಧ ಪಾಪ ಮಾಡಿದ್ದೀವಿ.+
21 ನಿನ್ನ ಹೆಸ್ರಿಗೋಸ್ಕರ ನಮಗೆ ದಯೆ ತೋರಿಸು, ನಮ್ಮನ್ನ ತಿರಸ್ಕರಿಸಬೇಡ,+
ನಿನ್ನ ಮಹಿಮಾನ್ವಿತ ಸಿಂಹಾಸನವನ್ನ ಕೀಳಾಗಿ ನೋಡಬೇಡ.
ನೀನು ನಮ್ಮ ಜೊತೆ ಮಾಡಿರೋ ಒಪ್ಪಂದವನ್ನ ನೆನಪಿಸ್ಕೊ, ಅದನ್ನ ಮುರಿಬೇಡ.+
22 ಬೇರೆ ದೇಶದವ್ರ ಪ್ರಯೋಜನವಿಲ್ಲದ ಮೂರ್ತಿಗಳಿಗೆ ಮಳೆ ಬರಿಸೋಕೆ ಆಗುತ್ತಾ?
ಅಥವಾ ಆಕಾಶ ತಾನಾಗೇ ಮಳೆ ಸುರಿಸುತ್ತಾ?
ನಮ್ಮ ದೇವರಾದ ಯೆಹೋವನೇ, ಹಾಗೆ ಮಾಡೋಕೆ ನಿನ್ನಿಂದ ಮಾತ್ರ ಆಗುತ್ತೆ.+
ನಾವು ನಿನ್ನನ್ನೇ ನಂಬಿದ್ದೀವಿ,
ಯಾಕಂದ್ರೆ ಇದನ್ನೆಲ್ಲ ಮಾಡುವವನು ನೀನೊಬ್ಬನೇ.