ಯೆರೆಮೀಯ
29 ನೆಬೂಕದ್ನೆಚ್ಚರ ಯೆರೂಸಲೇಮಿಂದ ಬಾಬೆಲಿಗೆ ಹಿಡ್ಕೊಂಡು ಹೋಗಿದ್ದ ಎಲ್ಲ ಜನ್ರಿಗೆ, ಅವ್ರಲ್ಲಿದ್ದ ಹಿರಿಯರಿಗೆ, ಪ್ರವಾದಿಗಳಿಗೆ, ಪುರೋಹಿತರಿಗೆ ಪ್ರವಾದಿ ಯೆರೆಮೀಯ ಯೆರೂಸಲೇಮಿಂದ ಒಂದು ಪತ್ರ ಕಳಿಸಿದ. 2 ಅಷ್ಟರಲ್ಲೇ ರಾಜ ಯೆಕೊನ್ಯ,+ ರಾಜಮಾತೆ,+ ಆಸ್ಥಾನದ ಅಧಿಕಾರಿಗಳು, ಯೆಹೂದದ ಮತ್ತು ಯೆರೂಸಲೇಮಿನ ಅಧಿಕಾರಿಗಳು, ಕರಕುಶಲಗಾರರು, ಲೋಹದ ಕೆಲಸಗಾರರು* ಯೆರೂಸಲೇಮಿಂದ ಕೈದಿಗಳಾಗಿ ಹೋಗಿದ್ರು.+ 3 ಯೆಹೂದದ ರಾಜ ಚಿದ್ಕೀಯ+ ಶಾಫಾನನ+ ಮಗನಾದ ಎಲ್ಲಾಸನಿಗೆ, ಹಿಲ್ಕೀಯನ ಮಗ ಗೆಮರ್ಯನಿಗೆ ಬಾಬೆಲಿನ ರಾಜ ನೆಬೂಕದ್ನೆಚ್ಚರನ ಹತ್ರ ಹೋಗೋಕೆ ಅಪ್ಪಣೆ ಕೊಟ್ಟಿದ್ದ. ಅವ್ರ ಕೈಯಲ್ಲೇ ಯೆರೆಮೀಯ ಆ ಪತ್ರ ಕಳಿಸಿದ. ಪತ್ರದಲ್ಲಿ ಏನು ಬರೆದಿತ್ತಂದ್ರೆ
4 “ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಯೆರೂಸಲೇಮಿಂದ ಬಾಬೆಲಿಗೆ ಕೈದಿಗಳಾಗಿ ಹೋಗೋ ತರ ಮಾಡಿದ ಎಲ್ಲ ಜನ್ರಿಗೆ ಹೇಳೋ ವಿಷ್ಯ ಏನಂದ್ರೆ 5 ‘ನೀವು ಅಲ್ಲಿ ಮನೆ ಕಟ್ಕೊಂಡು ವಾಸ ಮಾಡಿ. ತೋಟ ಮಾಡ್ಕೊಂಡು ಅದ್ರ ಫಲ ತಿನ್ನಿ. 6 ಮದ್ವೆ ಮಾಡ್ಕೊಳ್ಳಿ, ಮಕ್ಕಳು ಮಾಡ್ಕೊಳ್ಳಿ. ನಿಮ್ಮ ಗಂಡುಮಕ್ಕಳಿಗೆ ಮದುವೆ ಮಾಡಿಸಿ, ಹೆಣ್ಣುಮಕ್ಕಳನ್ನ ಮದುವೆ ಮಾಡ್ಕೊಡಿ. ಅವ್ರಿಗೂ ಗಂಡುಹೆಣ್ಣು ಮಕ್ಕಳಾಗಲಿ. ಅಲ್ಲಿ ನಿಮ್ಮ ಸಂಖ್ಯೆ ಕಡಿಮೆಯಾಗದೆ, ಹೆಚ್ಚಾಗ್ಲಿ. 7 ನಿಮ್ಮನ್ನ ನಾನು ಕೈದಿಗಳಾಗಿ ಕಳಿಸಿರೋ ಆ ಪಟ್ಟಣದಲ್ಲಿ ಶಾಂತಿ-ಸಮಾಧಾನವಾಗಿ ಇರಿ. ಆ ಪಟ್ಟಣಕ್ಕಾಗಿ ಯೆಹೋವನ ಹತ್ರ ಪ್ರಾರ್ಥನೆ ಮಾಡಿ. ಯಾಕಂದ್ರೆ ಆ ಪಟ್ಟಣದಲ್ಲಿ ಶಾಂತಿ ಇದ್ರೆ ನೀವೂ ಶಾಂತಿಯಿಂದ ಬದುಕ್ತೀರ.+ 8 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ನಿಮ್ಮಲ್ಲಿರೋ ಪ್ರವಾದಿಗಳ, ಕಣಿ ಹೇಳುವವರ ಮಾತು ಕೇಳಿ ಮೋಸ ಹೋಗಬೇಡಿ.+ ಅವರು ತಾವು ನೋಡಿದ ಕನಸನ್ನ ನಿಮಗೆ ಹೇಳಿದ್ರೆ ಕೇಳಿಸ್ಕೊಳ್ಳಬೇಡಿ. 9 ಯಾಕಂದ್ರೆ ‘ಅವರು ನನ್ನ ಹೆಸ್ರಲ್ಲಿ ಸುಳ್ಳು ಭವಿಷ್ಯ ಹೇಳ್ತಿದ್ದಾರೆ. ನಾನು ಅವ್ರನ್ನ ಕಳಿಸಲಿಲ್ಲ’+ ಅಂತ ಯೆಹೋವ ಹೇಳ್ತಾನೆ.”’”
10 “ಯೆಹೋವ ಹೇಳೋದು ಏನಂದ್ರೆ ‘ನೀವು ಬಾಬೆಲಲ್ಲಿ 70 ವರ್ಷ ಕಳೆದ್ಮೇಲೆ ನಿಮಗೆ ಗಮನ ಕೊಡ್ತೀನಿ.+ ನಿಮಗೆ ಮಾತು ಕೊಟ್ಟ ಹಾಗೆ ನಿಮ್ಮನ್ನ ವಾಪಸ್ ಈ ಊರಿಗೆ ಕರ್ಕೊಂಡು ಬರ್ತಿನಿ.’+
11 ಯೆಹೋವ ಹೇಳೋದು ಏನಂದ್ರೆ ‘ನಿಮಗೆ ಒಳ್ಳೇದು ಮಾಡಬೇಕಂತ ಯೋಚ್ನೆ ಮಾಡಿದ್ದೀನಿ. ನೀವು ಶಾಂತಿ ನೆಮ್ಮದಿಯಿಂದ ಬದುಕಬೇಕು, ನಿಮಗೆ ಕೆಟ್ಟದು ಆಗಬಾರದು,+ ನಿಮ್ಮ ಭವಿಷ್ಯ ಚೆನ್ನಾಗಿರಬೇಕು, ನೀವು ಒಳ್ಳೇದನ್ನ ಎದುರುನೋಡಬೇಕು ಅನ್ನೋದೇ ನನ್ನ ಆಸೆ.+ 12 ನೀವು ನನ್ನನ್ನ ಬೇಡ್ಕೊಳ್ತೀರ, ನನ್ನ ಹತ್ರ ಬಂದು ಪ್ರಾರ್ಥನೆ ಮಾಡ್ತೀರ, ನಿಮ್ಮ ಪ್ರಾರ್ಥನೆ ಕೇಳ್ತೀನಿ.’+
13 ‘ನೀವು ನನ್ನ ಕಡೆ ತಿರುಗಿ ಬಂದು ನನ್ನನ್ನ ಆರಾಧನೆ ಮಾಡ್ತೀರ,+ ಯಾಕಂದ್ರೆ ನೀವು ಪೂರ್ಣ ಹೃದಯದಿಂದ ನನ್ನ ಮಾರ್ಗದರ್ಶನಕ್ಕಾಗಿ ಹುಡುಕ್ತೀರ.*+ 14 ನಿಮ್ಮ ಆರಾಧನೆಯನ್ನ ಸ್ವೀಕರಿಸ್ತೀನಿ’*+ ಅಂತ ಯೆಹೋವ ಹೇಳ್ತಾನೆ. ‘ನಿಮ್ಮಲ್ಲಿ ಕೈದಿಗಳಾಗಿ ಹೋದವ್ರನ್ನ ಒಟ್ಟುಸೇರಿಸ್ತೀನಿ. ನಿಮ್ಮನ್ನ ಯಾವ್ಯಾವ ಜನ್ರ ಮಧ್ಯ, ಯಾವ್ಯಾವ ಜಾಗಗಳಿಗೆ ಚದರಿಸಿಬಿಟ್ಟಿದ್ದೀನೋ ಆ ಎಲ್ಲ ಜನ್ರಿಂದ ಮತ್ತು ಜಾಗಗಳಿಂದ ನಿಮ್ಮನ್ನ ಒಟ್ಟುಸೇರಿಸ್ತೀನಿ.+ ನೀವು ಎಲ್ಲಿಂದ ಕೈದಿಗಳಾಗಿ ಹೋಗೋ ತರ ಮಾಡಿದ್ನೋ ಅಲ್ಲಿಗೆ ನಿಮ್ಮನ್ನ ವಾಪಸ್ ಕರ್ಕೊಂಡು ಬರ್ತಿನಿ’+ ಅಂತ ಯೆಹೋವ ಹೇಳ್ತಾನೆ.
15 ಆದ್ರೆ ನೀವು ‘ನಮಗಾಗಿ ಯೆಹೋವ ಬಾಬೆಲಲ್ಲೇ ಪ್ರವಾದಿಗಳನ್ನ ಕೊಟ್ಟಿದ್ದಾನೆ’ ಅಂತ ಹೇಳಿದ್ದೀರ.
16 ದಾವೀದನ ಸಿಂಹಾಸನದಲ್ಲಿ ಕೂತಿರೋ ರಾಜನ+ ಬಗ್ಗೆ, ನಿಮ್ಮ ಜೊತೆ ಕೈದಿಗಳಾಗಿ ಹೋಗದೆ ಈ ಪಟ್ಟಣದಲ್ಲೇ ವಾಸ ಮಾಡ್ತಿರೋ ನಿಮ್ಮೆಲ್ಲ ಸಹೋದರರ ಬಗ್ಗೆ ಯೆಹೋವ ಹೇಳೋದು ಏನಂದ್ರೆ 17 ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ “ಅವ್ರ ಮೇಲೆ ಕತ್ತಿ, ಬರಗಾಲ, ಅಂಟುರೋಗ*+ ಬರೋ ಹಾಗೆ ಮಾಡ್ತೀನಿ. ತಿನ್ನೋಕೆ ಆಗದಷ್ಟು ಕೆಟ್ಟುಹೋಗಿರೋ ಅಂಜೂರ ಹಣ್ಣುಗಳ ತರ ಅವ್ರನ್ನ ಮಾಡಿಬಿಡ್ತೀನಿ.”’+
18 ‘ಕತ್ತಿ,+ ಬರಗಾಲ, ಅಂಟುರೋಗದಿಂದ ಅವರು ಕಷ್ಟ ಪಡೋ ತರ ಮಾಡ್ತೀನಿ. ಅವ್ರ ಪಾಡು ನೋಡಿ ಭೂಮಿಯ ಎಲ್ಲ ರಾಜ್ಯಗಳಿಗೆ ಗಾಬರಿ ಆಗುತ್ತೆ.+ ನಾನು ಅವ್ರನ್ನ ಯಾವ ಜನ್ರ ಮಧ್ಯ ಕಳಿಸಿಬಿಟ್ಟಿದ್ದೀನೋ ಆ ಎಲ್ಲ ಜನ್ರು ಅವ್ರಿಗೆ ಶಾಪ ಹಾಕ್ತಾರೆ, ಅವ್ರನ್ನ ನೋಡಿ ಬೆಚ್ಚಿಬೀಳ್ತಾರೆ, ಸೀಟಿ ಹೊಡೆದು ಗೇಲಿ ಮಾಡ್ತಾರೆ,+ ಅವಮಾನ ಮಾಡ್ತಾರೆ.+ 19 ಯಾಕಂದ್ರೆ ನನ್ನ ಸೇವಕರಾದ ಪ್ರವಾದಿಗಳ ಮೂಲಕ ನನ್ನ ಮಾತುಗಳನ್ನ ಪದೇಪದೇ* ಹೇಳಿ ಕಳಿಸಿದ್ರೂ ಕಿವಿಗೇ ಹಾಕೊಳ್ಳಲಿಲ್ಲ’+ ಅಂತ ಯೆಹೋವ ಹೇಳ್ತಾನೆ.
‘ನೀವು ಕೂಡ ನನ್ನ ಮಾತು ಕೇಳಲಿಲ್ಲ’+ ಅಂತ ಯೆಹೋವ ಹೇಳ್ತಾನೆ.
20 ಹಾಗಾಗಿ ನಾನು ಯೆರೂಸಲೇಮಿಂದ ಬಾಬೆಲಿಗೆ ಕೈದಿಗಳಾಗಿ ಕಳಿಸಿದ ಎಲ್ಲ ಜನ್ರೇ, ಯೆಹೋವನಾದ ನನ್ನ ಮಾತು ಕೇಳಿ. 21 ನನ್ನ ಹೆಸ್ರಲ್ಲಿ ಸುಳ್ಳು ಭವಿಷ್ಯ ಹೇಳ್ತಿರೋ+ ಕೋಲಾಯನ ಮಗ ಅಹಾಬನ ಬಗ್ಗೆ, ಮಾಸೇಯನ ಮಗ ಚಿದ್ಕೀಯನ ಬಗ್ಗೆ ಸೈನ್ಯಗಳ ದೇವರೂ ಇಸ್ರಾಯೇಲಿನ ದೇವರೂ ಆದ ಯೆಹೋವ ಹೇಳೋದು ಏನಂದ್ರೆ ‘ನಾನು ಅವ್ರಿಬ್ರನ್ನ ಬಾಬೆಲಿನ ರಾಜ ನೆಬೂಕದ್ನೆಚ್ಚರನ* ಕೈಗೆ ಕೊಡ್ತೀನಿ. ಅವನು ಅವ್ರನ್ನ ನಿಮ್ಮ ಕಣ್ಮುಂದೆನೇ ಸಾಯಿಸ್ತಾನೆ. 22 ಅವ್ರಿಗೆ ಬರೋ ಗತಿ ಬಾಬೆಲಲ್ಲಿ ಕೈದಿಗಳಾಗಿರೋ ಯೆಹೂದದ ಜನ್ರೆಲ್ಲರ ಬಾಯಲ್ಲಿ ಶಪಿಸೋ ಮಾತಾಗುತ್ತೆ. ಶಾಪ ಹಾಕುವಾಗ ಅವರು “ಬಾಬೆಲಿನ ರಾಜ ಬೆಂಕಿಯಲ್ಲಿ ಸುಟ್ಟ ಚಿದ್ಕೀಯ, ಅಹಾಬನಿಗಾದ ಅದೇ ಗತಿಯನ್ನ ಯೆಹೋವ ನಿನಗೂ ತರಲಿ!” ಅಂತಾರೆ. 23 ಯಾಕಂದ್ರೆ ಅವರು ನೆರೆಯವರ ಹೆಂಡತಿಯರ ಜೊತೆ ವ್ಯಭಿಚಾರ ಮಾಡಿದ್ದಾರೆ, ನನ್ನ ಹೆಸ್ರಲ್ಲಿ ಸುಳ್ಳುಸುಳ್ಳು ವಿಷ್ಯಗಳನ್ನ ಹೇಳಿದ್ದಾರೆ. ಆದ್ರೆ ಆ ವಿಷ್ಯಗಳನ್ನ ಹೇಳಬೇಕಂತ ನಾನು ಅವ್ರಿಗೆ ಹೇಳಿರಲಿಲ್ಲ.+ ಹೀಗೆ ಅವರು ಇಸ್ರಾಯೇಲಲ್ಲಿ ನಾಚಿಕೆಗೆಟ್ಟ ಕೆಲಸಗಳನ್ನ ಮಾಡಿದ್ದಾರೆ.+
“ಇದೆಲ್ಲ ನನಗೆ ಗೊತ್ತು, ಇದಕ್ಕೆ ನಾನೇ ಸಾಕ್ಷಿ”+ ಅಂತ ಯೆಹೋವ ಹೇಳ್ತಾನೆ.’”
24 “ನೀನು ನೆಹೆಲಾಮಿನ ಶೆಮಾಯನಿಗೆ+ ಹೀಗೆ ಹೇಳು 25 ‘ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ನೀನು ಯೆರೂಸಲೇಮಲ್ಲಿರೋ ಎಲ್ಲ ಜನ್ರಿಗೆ, ಮಾಸೇಯನ ಮಗ ಪುರೋಹಿತನಾದ ಚೆಫನ್ಯನಿಗೆ,+ ಎಲ್ಲ ಪುರೋಹಿತರಿಗೆ ನಿನ್ನ ಹೆಸ್ರಲ್ಲಿ ಪತ್ರಗಳನ್ನ ಕಳಿಸಿದ್ದೀಯ. ಆ ಪತ್ರಗಳಲ್ಲಿ 26 ‘ಚೆಫನ್ಯ, ಪುರೋಹಿತ ಯೆಹೋಯಾದನ ಬದಲು ಯೆಹೋವ ನಿನ್ನನ್ನ ಪುರೋಹಿತ ಮಾಡಿದ್ದಾನೆ. ಹೀಗೆ ನಿನಗೆ ಯೆಹೋವನ ಆಲಯದ ಮೇಲ್ವಿಚಾರಣೆ ಮಾಡೋ, ಪ್ರವಾದಿ ತರ ನಟಿಸೋನನ್ನ ಹಿಡಿದು ಕೋಳಗಳನ್ನ*+ ಹಾಕೋ ಜವಾಬ್ದಾರಿ ಕೊಟ್ಟಿದ್ದಾನೆ. 27 ಹಾಗಿದ್ಮೇಲೆ ನಿಮ್ಮ ಪ್ರವಾದಿಯಾಗಿ ನಟಿಸ್ತಿರೋ ಅನಾತೋತಿನ+ ಯೆರೆಮೀಯನನ್ನ ನೀನ್ಯಾಕೆ ಗದರಿಸಲಿಲ್ಲ?+ 28 ಅವನು ಬಾಬೆಲಲ್ಲಿರೋ ನಮಗೆ ಕೂಡ ಸಂದೇಶ ಕಳಿಸಿ “ನೀವಲ್ಲಿ ತುಂಬ ವರ್ಷ ಇರ್ತಿರ, ಅಲ್ಲಿ ಮನೆ ಕಟ್ಕೊಂಡು ವಾಸ ಮಾಡಿ. ತೋಟ ಮಾಡ್ಕೊಂಡು ಅದ್ರ ಫಲ ತಿನ್ನಿ, ...”+ ಅಂದಿದ್ದಾನೆ!’ ಅಂತ ಬರಿದಿದ್ದೀಯ.”’”
29 ಶೆಮಾಯ ಬರೆದ ಪತ್ರವನ್ನ ಪುರೋಹಿತ ಚೆಫನ್ಯ+ ಪ್ರವಾದಿ ಯೆರೆಮೀಯನ ಮುಂದೆ ಓದಿದಾಗ 30 ಯೆಹೋವ ಯೆರೆಮೀಯನಿಗೆ ಹೇಳಿದ್ದೇನಂದ್ರೆ 31 “ಕೈದಿಗಳಾಗಿ ಹೋದವ್ರಿಗೆಲ್ಲ ಹೀಗೆ ಬರಿ ‘ನೆಹೆಲಾಮಿನ ಶೆಮಾಯನ ಬಗ್ಗೆ ಯೆಹೋವ ಹೇಳೋದು ಏನಂದ್ರೆ “ನಾನು ಶೆಮಾಯನನ್ನ ಕಳಿಸಲಿಲ್ಲ. ಆದ್ರೂ ಅವನು ಭವಿಷ್ಯವಾಣಿಗಳನ್ನ ಹೇಳಿ ನೀವು ಸುಳ್ಳು ಮಾತುಗಳನ್ನ ನಂಬೋ ತರ ಮಾಡೋಕೆ ಪ್ರಯತ್ನ ಮಾಡಿದ.+ 32 ಹಾಗಾಗಿ ಯೆಹೋವ ಹೀಗೆ ಹೇಳ್ತಾನೆ ‘ನಾನು ನೆಹೆಲಾಮಿನ ಶೆಮಾಯನಿಗೆ, ಅವನ ವಂಶದವರಿಗೆ ಶಿಕ್ಷೆ ಕೊಡ್ತೀನಿ. ಅವನ ವಂಶದವರಲ್ಲಿ ಒಬ್ಬ ಕೂಡ ಈ ಜನ್ರ ಮಧ್ಯ ಬದುಕಿ ಉಳಿಯಲ್ಲ. ನಾನು ನನ್ನ ಜನ್ರಿಗೆ ಮಾಡೋ ಒಳ್ಳೇ ವಿಷ್ಯಗಳನ್ನ ಅವನು ನೋಡಲ್ಲ. ಯಾಕಂದ್ರೆ ಯೆಹೋವನ ವಿರುದ್ಧ ತಿರುಗಿ ಬೀಳೋ ತರ ಅವನು ಜನ್ರನ್ನ ಪ್ರಚೋದಿಸಿದ್ದಾನೆ’ ಅಂತಾನೆ ಯೆಹೋವ.”’”