ಹಬಕ್ಕೂಕ
ಆತನು ನನಗೆ ಯಾವ ಸಂದೇಶ ಕೊಡ್ತಾನೆ ಅಂತ ಕಾಯ್ತಾ ಇರ್ತಿನಿ,
ಆತನು ನನ್ನನ್ನ ತಿದ್ದಿದಾಗ ಏನು ಹೇಳಬೇಕಂತ ಯೋಚಿಸ್ತಾ ಇರ್ತಿನಿ.
2 ಆಮೇಲೆ ಯೆಹೋವ ನನಗೆ ಹೀಗೆ ಉತ್ತರಕೊಟ್ಟನು:
“ದರ್ಶನದಲ್ಲಿ ನೋಡಿದ್ದನ್ನ ಬರಿ, ಹಲಗೆಗಳ ಮೇಲೆ ನೀಟಾಗಿ ಅದನ್ನ ಕೆತ್ತು,+
ಅದು ನಿಜ ಆಗೋದು ತಡ ಆಗ್ತಿದೆ ಅಂತ ಅನಿಸಿದ್ರೂ ಅದಕ್ಕಾಗಿ ಕಾದಿರು!*+
ಯಾಕಂದ್ರೆ ಅದು ಖಂಡಿತ ನೆರವೇರುತ್ತೆ.
ತಡವಾಗಲ್ಲ!
4 ಗರ್ವದಿಂದ ಉಬ್ಕೊಂಡಿರೋ ವ್ಯಕ್ತಿಯನ್ನ ನೋಡು,
ಅವನ ಹೃದಯದಲ್ಲಿ ಪ್ರಾಮಾಣಿಕತೆ ಅನ್ನೋದೇ ಇಲ್ಲ.
ಆದ್ರೆ ನೀತಿವಂತ ತನ್ನ ನಂಬಿಕೆಯಿಂದಾನೇ* ಜೀವಿಸ್ತಾನೆ.+
5 ನಿಜ, ದ್ರಾಕ್ಷಾಮದ್ಯ ಮೋಸ ಮಾಡುತ್ತೆ,
ಅದಕ್ಕೇ ಅಹಂಕಾರಿ ತನ್ನ ಗುರಿ ಮುಟ್ಟಲ್ಲ.
ಅವನು ತನ್ನ ಹಸಿವನ್ನ ಸಮಾಧಿಯಷ್ಟು* ದೊಡ್ಡದಾಗಿ ಮಾಡ್ಕೊಳ್ತಾನೆ,
ಸಾವಿನ ತರ ಅವನಿಗೆ ತೃಪ್ತಿನೇ ಆಗಲ್ಲ.
ಅವನು ಜನಾಂಗಗಳನ್ನೆಲ್ಲ ಒಟ್ಟುಸೇರಿಸ್ತಾ ಇರ್ತಾನೆ,
ತನಗಾಗಿ ದೇಶಗಳ ಜನ್ರನ್ನೆಲ್ಲ ಸೇರಿಸ್ತಾ ಇರ್ತಾನೆ.+
6 ಅವ್ರೆಲ್ಲ ಅವನ ವಿರುದ್ಧ ಗಾದೆ ಹೇಳ್ತಾರೆ, ಅಣಕಿಸಿ ಮಾತಾಡ್ತಾರೆ, ಒಗಟುಗಳನ್ನ ಹೇಳ್ತಾರೆ.+
ಅವರು ಹೀಗಂತಾರೆ:
‘ಬೇರೆಯವರ ವಸ್ತುಗಳಿಂದ ತನ್ನ ಖಜಾನೆಯನ್ನ ಎಲ್ಲಿ ತನಕ ಕೂಡಿಸ್ಕೊಳ್ತಾ ಇರ್ತಾನೆ,
ಅವನ ಗತಿಯನ್ನ ಏನು ಹೇಳಲಿ!
ಯಾಕಂದ್ರೆ ಅವನು ಇದ್ರಿಂದ ಅವನ ಸಾಲನ ಇನ್ನೂ ಜಾಸ್ತಿ ಮಾಡ್ಕೊಳ್ತಾ ಇದ್ದಾನೆ.
7 ನಿನಗೆ ಸಾಲ ಕೊಟ್ಟವರು ಇದ್ದಕ್ಕಿದ್ದ ಹಾಗೆ ನಿನ್ನ ವಿರುದ್ಧ ಬರಲ್ವಾ?
ಅವರು ನಿದ್ದೆಯಿಂದ ಎದ್ದು ನೀನು ಒದ್ದಾಡೋ ತರ ಮಾಡ್ತಾರೆ,
ಅವರು ನಿನ್ನನ್ನ ಕೊಳ್ಳೆ ಹೊಡಿತಾರೆ.+
8 ನೀನು ಎಷ್ಟೋ ಜನಾಂಗಗಳನ್ನ ಕೊಳ್ಳೆ ಹೊಡೆದೆ,
ಹಾಗಾಗಿ ಅದ್ರಲ್ಲಿ ಉಳಿದಿರೋ ಜನ್ರೆಲ್ಲ ನಿನ್ನನ್ನ ಕೊಳ್ಳೆ ಹೊಡಿತಾರೆ,+
ನೀನು ಮನುಷ್ಯರ ರಕ್ತನ ಸುರಿಸಿದೆ,
ಭೂಮಿಯನ್ನ ಮತ್ತು ಪಟ್ಟಣಗಳನ್ನ ಹಾಳುಮಾಡಿದೆ,
ಅದ್ರಲ್ಲಿ ವಾಸಿಸೋ ಜನ್ರಿಗೆ ಹಿಂಸೆ ಕೊಟ್ಟೆ.+
9 ಕಷ್ಟದಿಂದ ತಪ್ಪಿಸ್ಕೊಳ್ಳೋಕೆ ತನ್ನ ಗೂಡನ್ನ ಎತ್ತರವಾದ ಸ್ಥಳದಲ್ಲಿ ಕಟ್ಟಬೇಕು ಅಂದ್ಕೊಂಡು
ತನ್ನ ಮನೆಯವರಿಗೋಸ್ಕರ ಲಾಭ ಮಾಡುವವರ ಗತಿ ಏನು ಹೇಳಲಿ!
10 ನಿನ್ನ ಕುತಂತ್ರಗಳಿಂದ ನೀನು ನಿನ್ನ ಕುಟುಂಬದವರು ತಲೆ ತಗ್ಗಿಸೋ ತರ ಮಾಡಿದ್ದೀಯ.
ಎಷ್ಟೋ ಜನಾಂಗಗಳ ಜನ್ರನ್ನ ನಾಶ ಮಾಡಿ ನಿನ್ನ ವಿರುದ್ಧನೇ ಪಾಪ ಮಾಡಿದ್ದೀಯ.+
11 ನಿನ್ನ ವಿರುದ್ಧ ಗೋಡೆಯಿಂದ ಕಲ್ಲು ಕೂಗುತ್ತೆ,
ಚಾವಣಿಯಿಂದ ತೊಲೆ ಅದಕ್ಕೆ ಹೌದು ಅಂತ ಉತ್ತರ ಕೊಡುತ್ತೆ.
12 ರಕ್ತ ಸುರಿಸಿ ಪಟ್ಟಣ ಕಟ್ಟುವವನ ಗತಿ ಏನು ಹೇಳೋದು!
ಕೆಟ್ಟ ಕೆಲಸಗಳಿಂದ ಪಟ್ಟಣ ಮಾಡುವವನ ಗತಿ ಏನು ಹೇಳೋದು!
13 ದೇಶಗಳ ಜನ್ರು ಯಾವುದಕ್ಕಾಗಿ ಕಷ್ಟಪಡ್ತಿದ್ದಾರೋ ಅವೆಲ್ಲ ಬೆಂಕಿ ಪಾಲಾಗೋದು ಸೈನ್ಯಗಳ ದೇವರಾದ ಯೆಹೋವನಿಂದಾನೇ ಅಲ್ವಾ?
ಜನಾಂಗಗಳು ಯಾವುದಕ್ಕಾಗಿ ಕಷ್ಟಪಡ್ತಿದ್ವೋ ಅವೆಲ್ಲ ವ್ಯರ್ಥ ಆಗೋದು ಆತನಿಂದಾನೇ ಅಲ್ವಾ?+
15 ತನ್ನ ಗೆಳೆಯರನ್ನ ಬೆತ್ತಲೆಯಾಗಿ ನೋಡೋಕೆ,
ಮದ್ಯದಲ್ಲಿ ಅವ್ರಿಗೆ ಕೋಪ, ರೋಷ ಬೆರೆಸಿ,
ಅಮಲು ಏರೋ ತನಕ ಅವ್ರಿಗೆ ಕುಡಿಸುವವನ ಗತಿ ಏನು ಹೇಳೋದು!
16 ನೀನು ಗೌರವದಿಂದ ಅಲ್ಲ ಅವಮಾನದಿಂದ ತುಂಬಿ ಹೋಗ್ತೀಯ.
ನೀನೂ ಕುಡಿದು ನಿನ್ನ ಸುನ್ನತಿಯಾಗದ ಸ್ಥಿತಿಯನ್ನ ತೋರಿಸ್ತೀಯ.*
ಯೆಹೋವನ ಬಲಗೈಯಲ್ಲಿ ಇರೋ ಲೋಟದಿಂದ ನೀನು ಕುಡಿಯೋ ಹಾಗೆ ಆತನು ಮಾಡ್ತಾನೆ,+
ಅವಮಾನ ನಿನ್ನ ಗೌರವವನ್ನ ಮುಚ್ಚಿಬಿಡುತ್ತೆ.
17 ನೀನು ಲೆಬನೋನಿಗೆ ಕೊಟ್ಟ ಹಿಂಸೆ ನಿನ್ನನ್ನ ಆವರಿಸುತ್ತೆ,
ನೀನು ಪ್ರಾಣಿಗಳಿಗೆ ಆತಂಕ ಹುಟ್ಟಿಸಿ ನಾಶಮಾಡಿದ ತರಾನೇ ನಿನಗೂ ನಾಶನ ಬರುತ್ತೆ,
ಯಾಕಂದ್ರೆ ನೀನು ಮನುಷ್ಯರ ರಕ್ತವನ್ನ ಸುರಿಸಿದೆ,
ಭೂಮಿಯನ್ನ ಮತ್ತು ಪಟ್ಟಣಗಳನ್ನ ಹಾಳುಮಾಡಿದೆ,
ಅದ್ರಲ್ಲಿ ವಾಸಿಸೋ ಜನ್ರಿಗೆ ಹಿಂಸೆ ಕೊಟ್ಟೆ.+
18 ಶಿಲ್ಪಿಗೆ ತಾನು ಕೆತ್ತಿದ ಮೂರ್ತಿಯಿಂದ ಏನು ಪ್ರಯೋಜನ?
ಅದನ್ನ ಕೆತ್ತಿದವನು ಅವನೇ ತಾನೇ?
ಅಚ್ಚಲ್ಲಿ ಹೊಯ್ದು ಮಾಡಿದ ಮೂರ್ತಿಯಿಂದ, ಸುಳ್ಳು ಕಲಿಸೋದ್ರಿಂದ ಏನು ಪ್ರಯೋಜನ?
ಆದ್ರೂ ಅವನ್ನ ತಯಾರು ಮಾಡೋ ವ್ಯಕ್ತಿ ಅದನ್ನೇ ನಂಬ್ತಾನೆ,
ಪ್ರಯೋಜನಕ್ಕೆ ಬಾರದ ಆ ಮೂಕ ಗೊಂಬೆಗಳನ್ನ ಮಾಡ್ತಾ ಹೋಗ್ತಾನೆ.+
19 ಕಟ್ಟಿಗೆಗೆ “ಎದ್ದೇಳು” ಅಂತ ಹೇಳುವವನ ಗತಿ ಏನು ಹೇಳೋದು!
ಮಾತಾಡದ ಕಲ್ಲಿಗೆ “ಎದ್ದೇಳು, ನಮಗೆ ಕಲಿಸು” ಅಂತ ಹೇಳುವವನ ಗತಿ ಏನು ಹೇಳೋದು!
20 ಯೆಹೋವ ತನ್ನ ಪವಿತ್ರ ಆಲಯದಲ್ಲಿದ್ದಾನೆ.+
ಇಡೀ ಭೂಮಿಯೇ, ಆತನ ಮುಂದೆ ಮೌನವಾಗಿರು!’”+