ಧರ್ಮೋಪದೇಶಕಾಂಡ
33 ಸತ್ಯದೇವರ ಮನುಷ್ಯನಾದ ಮೋಶೆ ಸಾಯೋ ಮುಂಚೆ ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡ್ತಾ+ 2 ಹೀಗೆ ಹೇಳಿದ:
“ಯೆಹೋವ ಸಿನಾಯಿ ಬೆಟ್ಟದಿಂದ ಬಂದ,+
ಸೇಯೀರಿನಿಂದ ಅವ್ರ ಮೇಲೆ ಬೆಳಕು ಬೀರಿದ.
ಪಾರಾನಿನ ಬೆಟ್ಟದಿಂದ ಮಹಿಮೆ ತೋರಿಸಿದ,+
ಆತನ ಜೊತೆ ಕೋಟ್ಯಾನುಕೋಟಿ ಪವಿತ್ರ ದೇವದೂತರು ಇದ್ರು,+
ಬಲಗಡೆ ಆತನ ಯುದ್ಧವೀರರು ಇದ್ರು.+
7 ಮೋಶೆ ಯೆಹೂದನಿಗೆ ಹೀಗೆ ಆಶೀರ್ವಾದ ಮಾಡಿದ:+
“ಯೆಹೋವನೇ, ಯೆಹೂದನ ವಿನಂತಿ ಕೇಳಿಸ್ಕೊ,+
ಅವನನ್ನ ಮತ್ತೆ ಅವನ ಜನ್ರ ಜೊತೆ ಸೇರಿಸು.
ಅವನು ತನಗೆ ಸೇರಬೇಕಾಗಿದ್ದನ್ನ ತನ್ನ ತೋಳು ಬಲದಿಂದ ಉಳಿಸ್ಕೊಂಡ,
ತನ್ನ ಶತ್ರುಗಳನ್ನ ಸೋಲಿಸೋಕೆ ಅವನಿಗೆ ನೀನೇ ಸಹಾಯ ಮಾಡು.”+
8 ಲೇವಿ ಬಗ್ಗೆ ಮೋಶೆ ಹೀಗಂದ:+
“ದೇವರೇ, ನಿನ್ನ ತುಮ್ಮೀಮ್ ಮತ್ತು ಊರೀಮ್*+ ನಿನ್ನ ನಿಷ್ಠಾವಂತರಿಗೆ ಸೇರಿದೆ,+
ನೀನು ಅವನನ್ನ ಮಸ್ಸದಲ್ಲಿ ಪರೀಕ್ಷಿಸಿದೆ,+
ಅವನ ಜೊತೆ ಮೆರೀಬಾದ ನೀರಿನ ಹತ್ರ ಹೋರಾಡಿದೆ.+
ಅವರು ನಿನ್ನ ಮಾತು ಕೇಳಿದ್ರು,
ನಿನ್ನ ಒಪ್ಪಂದನ ಪಾಲಿಸಿದ್ರು.+
11 ಯೆಹೋವನೇ, ಅವನಿಗೆ ಹೆಚ್ಚು ಬಲ ಕೊಡು,
ಅವನ ಕೈಕೆಲಸ ನೋಡಿ ನೀನು ಆನಂದ ಪಡು.
ಅವನ ಶತ್ರುಗಳ ಕಾಲುಗಳನ್ನ* ಮುರಿದುಹಾಕು,
ಅವನನ್ನ ದ್ವೇಷಿಸೋರು ಇನ್ಯಾವತ್ತೂ ಅವನ ವಿರುದ್ಧ ಬರದೇ ಇರೋ ತರ ಮಾಡು.”
12 ಬೆನ್ಯಾಮೀನಿನ ಬಗ್ಗೆ ಮೋಶೆ ಹೀಗಂದ:+
“ಯೆಹೋವನಿಗೆ ಇಷ್ಟವಾದ ಇವನನ್ನ ಆತನು ಸಂರಕ್ಷಿಸಲಿ,
ದಿನವಿಡೀ ಆತನ ಆಶ್ರಯದಲ್ಲಿರಲಿ,
ಆತನ ಭುಜಗಳ ಮಧ್ಯ ವಾಸಿಸಲಿ.”
13 ಯೋಸೇಫನ ಬಗ್ಗೆ ಮೋಶೆ ಹೀಗಂದ:+
“ಯೆಹೋವ ಅವನ ಜಮೀನನ್ನ ಆಶೀರ್ವದಿಸಲಿ,+
ಆಕಾಶದಿಂದ ಇಬ್ಬನಿ, ಆಶೀರ್ವಾದ ಅಲ್ಲಿ ಸುರಿಲಿ,
ಬುಗ್ಗೆಗಳಿಂದ ನೀರು ಉಕ್ಕಿ ಹರಿಲಿ,+
14 ಸೂರ್ಯನ ಕಿರಣಗಳಿಂದ ಒಳ್ಳೊಳ್ಳೇ ಗಿಡಮರ ಬೆಳೀಲಿ,
ಪ್ರತಿ ತಿಂಗಳು ಒಳ್ಳೇ ಬೆಳೆ ಸಿಗಲಿ,+
15 ಜಮಾನದ ಬೆಟ್ಟಗಳು,*+ ಶಾಶ್ವತ ಬೆಟ್ಟಗಳು
ಅತ್ಯುತ್ತಮ ವಸ್ತುಗಳನ್ನ ಕೊಡ್ಲಿ,
16 ಭೂಮಿಯ ಸಿರಿಸಂಪತ್ತು ಅವನಿಗೆ ಸೇರಲಿ,+
ಮುಳ್ಳಿನ ಪೊದೆಯಲ್ಲಿ ಕಾಣಿಸ್ಕೊಂಡ ದೇವರು ಅವನನ್ನ ಮೆಚ್ಚಲಿ.+
ಈ ಆಶೀರ್ವಾದಗಳು ಯೋಸೇಫನ ತಲೆ ಮೇಲೆ ಸುರಿಲಿ,
ತನ್ನ ಅಣ್ಣತಮ್ಮಂದಿರಲ್ಲಿ ಆರಿಸ್ಕೊಂಡವನ ಮೇಲೆ ಅವು ಯಾವಾಗ್ಲೂ ಇರಲಿ.+
17 ಅವನ ಹಿರಿಮೆ ಮೊದ್ಲು ಹುಟ್ಟಿದ ಹೋರಿಯ ಹಿರಿಮೆ ತರ,
ಅವನ ಕೊಂಬುಗಳು ಕಾಡು ಕೋಣದ ಕೊಂಬುಗಳ ತರ.
ಅವನು ತನ್ನ ಕೊಂಬುಗಳಿಂದ ದೇಶ ದೇಶದ ಜನ್ರನ್ನ
ಭೂಮಿಯ ಕಟ್ಟಕಡೆಯ ತನಕನೂ ನೂಕ್ತಾನೆ.
ಆ ಕೊಂಬುಗಳೇ ಎಫ್ರಾಯೀಮಿನ ಸಾವಿರಾರು ವೀರರು,+
ಮನಸ್ಸೆಯ ಸಾವಿರಾರು ಶೂರರು.”
18 ಜೆಬುಲೂನನ ಬಗ್ಗೆ ಮೋಶೆ ಹೀಗಂದ:+
“ಜೆಬುಲೂನನೇ, ನಿನ್ನ ವ್ಯಾಪಾರದಲ್ಲಿ ಖುಷಿಪಡು,
ಇಸ್ಸಾಕಾರನೇ, ನಿನ್ನ ಡೇರೆಗಳಲ್ಲಿ ಸಂತೋಷಿಸು.+
19 ಅವರಿಬ್ರು ಸಮುದ್ರಗಳ ಸಮೃದ್ಧ ಸಿರಿಸಂಪತ್ತನ್ನ ಬಾಚ್ಕೊಳ್ತಾರೆ,
ಮರಳಲ್ಲಿ ಅಡಗಿರೋ ನಿಧಿನಿಕ್ಷೇಪಗಳನ್ನ ತಗೊಳ್ತಾರೆ.
ಹಾಗಾಗಿ ಅವರು ಜನ್ರನ್ನ ಬೆಟ್ಟಕ್ಕೆ ಕರೀತಾರೆ.
ಅಲ್ಲಿ ನೀತಿಯ ಬಲಿಗಳನ್ನ ಕೊಡ್ತಾರೆ.”
20 ಗಾದನ ಬಗ್ಗೆ ಮೋಶೆ ಹೀಗಂದ:+
“ಗಾದನ ಗಡಿಗಳನ್ನ ವಿಸ್ತರಿಸೋನು ಆಶೀರ್ವಾದ ಪಡೀತಾನೆ.+
ಅವನು ಸಿಂಹದ ತರ ಹೊಂಚು ಹಾಕಿದ್ದಾನೆ,
ತನ್ನ ಬೇಟೆಯ ತೋಳನ್ನ ಸೀಳೋಕೆ, ತಲೆ ಛಿದ್ರ ಮಾಡೋಕೆ ಕಾಯ್ತಾ ಇದ್ದಾನೆ.
ಅವನು ಜನ್ರ ಮುಖ್ಯಸ್ಥರ ಜೊತೆ ಸೇರ್ತಾನೆ.
ಯೆಹೋವನ ಪರವಾಗಿ ನ್ಯಾಯ ಸ್ಥಾಪಿಸ್ತಾನೆ,
ಆತನ ತೀರ್ಪುಗಳನ್ನ ಇಸ್ರಾಯೇಲಿನಲ್ಲಿ ಜಾರಿಗೆ ತರ್ತಾನೆ.”
22 ದಾನನ ಬಗ್ಗೆ ಮೋಶೆ ಹೀಗಂದ:+
“ದಾನ ಸಿಂಹದ ಮರಿ.+
ಅವನು ಬಾಷಾನಿನಿಂದ ಜಿಗಿತಾನೆ.”+
23 ನಫ್ತಾಲಿಯ ಬಗ್ಗೆ ಮೋಶೆ ಹೀಗಂದ:+
“ನಫ್ತಾಲಿಗೆ ಯೆಹೋವನ ಆಶೀರ್ವಾದ ಹೆಚ್ಚಾಗಿ ಸಿಗ್ಲಿ,
ಆತನ ಮೆಚ್ಚಿಕೆ ಪಡೆದು ಸಂತೃಪ್ತನಾಗಲಿ.
ನೀನು ಪಶ್ಚಿಮ, ದಕ್ಷಿಣದಲ್ಲಿರೋ ದೇಶನ ವಶ ಮಾಡ್ಕೋ.”
24 ಅಶೇರನ ಬಗ್ಗೆ ಮೋಶೆ ಹೀಗಂದ:+
“ಅಶೇರನ ವಂಶ ಬೆಳೀಲಿ.
ಅವನು ಅಣ್ಣತಮ್ಮಂದಿರ ಮೆಚ್ಚಿಕೆ ಪಡಿಲಿ,
ಅವನು ಎಣ್ಣೆಯಲ್ಲಿ ಸ್ನಾನ ಮಾಡ್ಲಿ.*
25 ನಿನ್ನ ಬಾಗಿಲ ಬೀಗಗಳು ಕಬ್ಬಿಣ ಮತ್ತು ತಾಮ್ರದ್ದು,+
ನೀನು ಜೀವನಪೂರ್ತಿ ಸುರಕ್ಷಿತನಾಗಿ ಇರ್ತಿಯ.
26 ಯೆಶುರೂನನ+ ಸತ್ಯ ದೇವರ ತರ ಬೇರೆ ಯಾರೂ ಇಲ್ಲ,+
ನಿನಗೆ ಸಹಾಯ ಮಾಡೋಕೆ ಆತನು ಆಕಾಶದಿಂದ ಸವಾರಿ ಮಾಡಿ ಬರ್ತಾನೆ,
ಮೋಡಗಳ ಮೇಲೆ ಸವಾರಿ ಮಾಡ್ತಾ ವೈಭವದಿಂದ ಬರ್ತಾನೆ.+
28 ಆ ದೇಶದಲ್ಲಿ ಇಸ್ರಾಯೇಲ ಸುರಕ್ಷಿತವಾಗಿ ವಾಸಿಸ್ತಾನೆ,
ಅಲ್ಲಿ ಯಾಕೋಬನ ವಂಶ* ಮಾತ್ರ ಇರುತ್ತೆ,
ಧಾನ್ಯ, ಹೊಸ ದ್ರಾಕ್ಷಾಮದ್ಯ ತುಂಬ ಇರುತ್ತೆ,+
ಆಕಾಶದಿಂದ ಇಬ್ಬನಿ ಬೀಳ್ತಾ ಇರುತ್ತೆ.+
29 ಇಸ್ರಾಯೇಲ್ಯರೇ, ನೀವು ಸಂತೋಷವಾಗಿ ಇರ್ತಿರ!+