19 ಹೊಟ್ಟೆಪಾಡಿಗಾಗಿ ಇಡೀ ಜೀವನ ಬೆವರು ಸುರಿಸಿ ದುಡಿಬೇಕು. ಕೊನೆಗೆ ನೀನು ಮಣ್ಣಿಗೆ ಹೋಗ್ತಿಯ.+ ಯಾಕಂದ್ರೆ ನಿನ್ನನ್ನ ಮಾಡಿದ್ದು ಮಣ್ಣಿಂದಾನೇ. ನೀನು ಮಣ್ಣೇ, ಮತ್ತೆ ಮಣ್ಣಿಗೇ ಹೋಗ್ತಿಯ” ಅಂದನು.+
5 ಬದುಕಿರುವವ್ರಿಗೆ ಒಂದಿನ ತಾವು ಸಾಯ್ತೀವಂತ ಗೊತ್ತಿರುತ್ತೆ.+ ಆದ್ರೆ ಸತ್ತವ್ರಿಗೆ ಏನೂ ಗೊತ್ತಿರಲ್ಲ.+ ಅವರಿಗೆ ಇನ್ನು ಮುಂದೆ ಯಾವ ಪ್ರತಿಫಲನೂ ಸಿಗಲ್ಲ. ಅವ್ರ ನೆನಪು ಜನ್ರ ಮನಸ್ಸಿಂದ ಅಳಿಸಿಹೋಗುತ್ತೆ.+
10 ನಿನ್ನ ಕೈಯಿಂದ ಆಗೋ ಕೆಲಸನೆಲ್ಲ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಯಾಕಂದ್ರೆ ನೀನು ಸಮಾಧಿ* ಸೇರಿದ ಮೇಲೆ ಅಲ್ಲಿ ಯಾವುದೇ ಕೆಲಸ ಮಾಡಕ್ಕಾಗಲ್ಲ, ಯೋಚ್ನೆ ಮಾಡಕ್ಕಾಗಲ್ಲ, ಜ್ಞಾನ ಆಗ್ಲಿ ವಿವೇಕ ಆಗ್ಲಿ ಪಡಿಯೋಕೆ ಆಗಲ್ಲ.+