ಕೀರ್ತನೆ
ನನ್ನ ತನುಮನವೆಲ್ಲ ಯೆಹೋವನನ್ನ ಹೊಗಳಲಿ.+
2 ನನ್ನ ಜೀವನಪರ್ಯಂತ ನಾನು ಯೆಹೋವನನ್ನ ಕೊಂಡಾಡ್ತೀನಿ.
ನಾನು ಸಾಯೋ ತನಕ ನನ್ನ ದೇವರನ್ನ ಹಾಡಿಹೊಗಳ್ತೀನಿ.*
4 ಮನುಷ್ಯನ ಉಸಿರು ಹೋದಾಗ ಮಣ್ಣಿಗೆ ಸೇರ್ತಾನೆ.+
ಆ ದಿನಾನೇ ಅವನ ಯೋಚನೆಗಳೆಲ್ಲ ಅಳಿದು ಹೋಗುತ್ತೆ.+
7 ಅನ್ಯಾಯ ಆದವ್ರಿಗೆ ಆತನು ನ್ಯಾಯ ಸಿಗೋ ತರ ಮಾಡ್ತಾನೆ,
ಹಸಿದವ್ರಿಗೆ ಊಟ ಕೊಡ್ತಾನೆ.+
ಯೆಹೋವ ಕೈದಿಗಳನ್ನ ಬಿಡಿಸ್ತಾನೆ.+
8 ಯೆಹೋವ ಕುರುಡರ ಕಣ್ಣನ್ನ ತೆರೀತಾನೆ,+
ಯೆಹೋವ ಕುಗ್ಗಿ ಹೋಗಿರೋರನ್ನ ಎದ್ದು ನಿಲ್ಲೋ ತರ ಮಾಡ್ತಾನೆ,+
ಯೆಹೋವ ನೀತಿವಂತರನ್ನ ಪ್ರೀತಿಸ್ತಾನೆ.
9 ಯೆಹೋವ ವಿದೇಶಿಯರನ್ನ ರಕ್ಷಿಸ್ತಾನೆ,
ಅನಾಥರನ್ನ, ವಿಧವೆಯರನ್ನ ಪರಿಪಾಲಿಸ್ತಾನೆ,+
10 ಯೆಹೋವ ಯಾವಾಗ್ಲೂ ರಾಜನಾಗಿ ಇರ್ತಾನೆ,+
ಚೀಯೋನೇ, ನಿನ್ನ ದೇವರು ಯುಗಯುಗಾಂತರಕ್ಕೂ ರಾಜನಾಗಿ ಇರ್ತಾನೆ.
ಯಾಹುವನ್ನ ಸ್ತುತಿಸಿ!*