3 ಯಜ್ಞವೇದಿಯ ಬೂದಿ* ತಗೊಂಡು ಹೋಗೋಕೆ ಬಕೀಟುಗಳನ್ನ ಮಾಡಬೇಕು. ಅಷ್ಟೇ ಅಲ್ಲ ಸಲಿಕೆಗಳನ್ನ, ಬೋಗುಣಿಗಳನ್ನ, ಕವಲುಗೋಲುಗಳನ್ನ, ಕೆಂಡ ಹಾಕೋ ಪಾತ್ರೆಗಳನ್ನ ಮಾಡಬೇಕು. ಯಜ್ಞವೇದಿಯ ಈ ಎಲ್ಲ ಉಪಕರಣಗಳನ್ನ ತಾಮ್ರದಿಂದ ಮಾಡಬೇಕು.+
11 ಆದ್ರೆ ಆ ಹೋರಿಯ ಚರ್ಮ, ಎಲ್ಲ ಮಾಂಸ, ತಲೆ, ಕಾಲುಗಳು, ಕರುಳುಗಳು, ಸಗಣಿ+12 ಹೀಗೆ ಉಳಿದ ಎಲ್ಲವನ್ನ ಪಾಳೆಯದ ಹೊರಗೆ ಯಜ್ಞವೇದಿಯ ಬೂದಿಯನ್ನ ಹಾಕೋ ಶುದ್ಧವಾದ ಸ್ಥಳಕ್ಕೆ ತಗೊಂಡು ಹೋಗಿ ಅಲ್ಲಿ ಕಟ್ಟಿಗೆಗಳ ಮೇಲಿಟ್ಟು ಬೆಂಕಿಯಿಂದ ಸುಡಬೇಕು.+ ಬೂದಿಯನ್ನ ಹಾಕೋ ಆ ಸ್ಥಳದಲ್ಲೇ ಅವುಗಳನ್ನ ಸುಡಬೇಕು.
10 ಪುರೋಹಿತ ನಾರುಬಟ್ಟೆಯಿಂದ ತಯಾರಿಸಿದ ಬಟ್ಟೆ ಹಾಕಬೇಕು.+ ಅವನ ಗುಪ್ತಾಂಗಗಳು ಕಾಣದ ಹಾಗೆ ನಾರಿನ ಚಡ್ಡಿ*+ ಹಾಕಬೇಕು. ಆಮೇಲೆ ಅವನು ಯಜ್ಞವೇದಿ ಮೇಲೆ ಬೆಂಕಿಯಿಂದ ಸುಟ್ಟುಹೋದ ಸರ್ವಾಂಗಹೋಮ ಬಲಿಯ ಬೂದಿ ತೆಗೆದು+ ಯಜ್ಞವೇದಿ ಪಕ್ಕಕ್ಕೆ ಹಾಕಬೇಕು.