23 ಯೆಹೋವ ಅವಳಿಗೆ “ನಿನ್ನ ಹೊಟ್ಟೇಲಿ ಎರಡು ಗಂಡುಮಕ್ಕಳಿವೆ.*+ ಅವುಗಳಿಂದ ಎರಡು ಜನಾಂಗಗಳು ಬರುತ್ತೆ.+ ಅವುಗಳ ದಾರಿ ಬೇರೆ ಬೇರೆ ಆಗಿರುತ್ತೆ, ಒಂದು ಜನಾಂಗ ಇನ್ನೊಂದು ಜನಾಂಗಕ್ಕಿಂತ ಬಲಿಷ್ಠವಾಗಿ ಇರುತ್ತೆ.+ ದೊಡ್ಡವನು ಚಿಕ್ಕವನ ಸೇವೆಮಾಡ್ತಾನೆ”+ ಅಂದನು.
29 ಜನರು ನಿನ್ನ ಸೇವೆಮಾಡ್ಲಿ. ಜನಾಂಗಗಳು ನಿನಗೆ ತಲೆಬಾಗಲಿ. ನಿನ್ನ ಸಹೋದರರಿಗೆ ನೀನು ಒಡೆಯನಾಗಿರು. ನಿನ್ನ ಸಹೋದರರು ನಿನಗೆ ತಲೆಬಾಗಲಿ.+ ನಿನ್ನ ಮೇಲೆ ಶಾಪ ಹಾಕೋ ಪ್ರತಿಯೊಬ್ಬನಿಗೆ ಶಾಪ ತಟ್ಟಲಿ. ನಿನ್ನನ್ನ ಆಶೀರ್ವದಿಸೋ ಪ್ರತಿಯೊಬ್ಬನಿಗೆ ಆಶೀರ್ವಾದ ಸಿಗಲಿ.”+
37 ಅದಕ್ಕೆ ಇಸಾಕ “ಅವನನ್ನ ನಿನ್ನ ಒಡೆಯನಾಗಿ ನೇಮಿಸಿದ್ದೀನಿ.+ ಅವನ ಎಲ್ಲ ಅಣ್ಣತಮ್ಮಂದಿರು ಅವನಿಗೆ ಸೇವಕರಾಗಿ ಇರಬೇಕು ಅಂದಿದ್ದೀನಿ. ಊಟಕ್ಕೆ ದವಸಧಾನ್ಯ ಮತ್ತು ಹೊಸ ದ್ರಾಕ್ಷಾಮದ್ಯ ಯಾವಾಗಲೂ ಇರಲಿ ಅಂತ ಹೇಳಿದ್ದೀನಿ.+ ಮಗನೇ, ಈಗ ನಿನಗೆ ಆಶೀರ್ವದಿಸೋಕೆ ನನ್ನ ಹತ್ರ ಏನೂ ಉಳಿದಿಲ್ಲ” ಅಂದ.