-
1 ಸಮುವೇಲ 13:13, 14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಅದಕ್ಕೆ ಸಮುವೇಲ “ನೀನು ಮೂರ್ಖತನದಿಂದ ನಡ್ಕೊಂಡಿದ್ದೀಯ. ನಿನ್ನ ದೇವರಾದ ಯೆಹೋವ ನಿನಗೆ ಕೊಟ್ಟ ಆಜ್ಞೆನ ಮೀರಿದ್ದೀಯ.+ ಆತನ ಮಾತು ಕೇಳಿದ್ರೆ ಯೆಹೋವ ನಿನ್ನ ರಾಜ್ಯಾನ ಇಸ್ರಾಯೇಲಿನ ಮೇಲೆ ಶಾಶ್ವತವಾಗಿ ಇರೋ ತರ ಮಾಡ್ತಿದ್ದನು. 14 ಆದ್ರೆ ಈಗ ನಿನ್ನ ರಾಜ್ಯ ಶಾಶ್ವತವಾಗಿರಲ್ಲ.+ ಯೆಹೋವ ತನ್ನ ಮನಸ್ಸಿಗೆ ತುಂಬ ಇಷ್ಟ ಆಗುವವನನ್ನ ಹುಡುಕ್ತಾನೆ.+ ಯೆಹೋವ ಅವನನ್ನ ತನ್ನ ಜನ್ರ ಮೇಲೆ ನಾಯಕನಾಗಿ ಮಾಡ್ತಾನೆ.+ ಯಾಕಂದ್ರೆ ನೀನು ಯೆಹೋವನ ಆಜ್ಞೆ ಪ್ರಕಾರ ನಡಿತಿಲ್ಲ”+ ಅಂದ.
-
-
1 ಸಮುವೇಲ 15:26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ಆದ್ರೆ ಸಮುವೇಲ ಸೌಲನಿಗೆ “ನಾನು ನಿನ್ನ ಜೊತೆ ಬರಲ್ಲ. ಯೆಹೋವನ ಮಾತು ಕೇಳೋಕೆ ನಿನಗಿಷ್ಟ ಇಲ್ಲದೆ ಇರೋದ್ರಿಂದ ಇನ್ನು ಮುಂದೆ ನೀನು ರಾಜನಾಗಿ ಇರೋದು ಯೆಹೋವನಿಗೆ ಇಷ್ಟ ಇಲ್ಲ. ನೀನು ಇಸ್ರಾಯೇಲಿನ ಮೇಲೆ ರಾಜನಾಗಿ ಆಳೋದನ್ನ ಮುಂದುವರಿಸಲ್ಲ”+ ಅಂದ.
-