-
2 ಅರಸು 9:1-3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಪ್ರವಾದಿ ಎಲೀಷ ಪ್ರವಾದಿಗಳ ಗಂಡು ಮಕ್ಕಳಲ್ಲಿ ಒಬ್ಬನನ್ನ ಕರೆದು ಹೀಗಂದ: “ನೀನು ಬೇಗ ತಯಾರಾಗಿ,* ಎಣ್ಣೆ ತಗೊಂಡು ರಾಮೋತ್-ಗಿಲ್ಯಾದಿಗೆ+ ಹೋಗು. 2 ನೀನು ಅಲ್ಲಿ ನಿಂಷಿಯ ಮೊಮ್ಮಗನೂ ಯೆಹೋಷಾಫಾಟನ ಮಗನೂ ಆದ ಯೇಹುವನ್ನ+ ಹುಡುಕು. ಅವನು ಸಹೋದರರ ಜೊತೆ ಇರ್ತಾನೆ. ನೀನು ಅವನನ್ನ ಅವ್ರ ಮಧ್ಯದಿಂದ ಕರ್ಕೊಂಡು ಒಳಗಿನ ಕೋಣೆಗೆ ಹೋಗು. 3 ಎಣ್ಣೆಯನ್ನ ಅವನ ತಲೆ ಮೇಲೆ ಸುರಿದು “‘ನಾನು ನಿನ್ನನ್ನ ಇಸ್ರಾಯೇಲ್ಯರ ಮೇಲೆ ರಾಜನನ್ನಾಗಿ ಅಭಿಷೇಕಿಸಿದ್ದೀನಿ’+ ಅಂತ ಯೆಹೋವ ಹೇಳಿದ್ದಾನೆ” ಅಂತ ಹೇಳು. ಆಮೇಲೆ ಬಾಗಿಲನ್ನ ತೆರೆದು ತಡಮಾಡದೆ ಅಲ್ಲಿಂದ ಓಡಿಹೋಗು.”
-
-
2 ಅರಸು 9:30-33ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
30 ಯೇಹು ಇಜ್ರೇಲಿಗೆ+ ಬಂದ ವಿಷ್ಯ ಈಜೆಬೇಲಳ+ ಕಿವಿಗೆ ಬಿತ್ತು. ಹಾಗಾಗಿ ಅವಳು ತನ್ನ ಕಣ್ಣಿಗೆ ಕಾಡಿಗೆ ಹಚ್ಕೊಂಡು ತನ್ನ ಕೂದಲನ್ನ ಅಲಂಕಾರ ಮಾಡ್ಕೊಂಡು ಕಿಟಕಿಯಿಂದ ಕೆಳಗೆ ನೋಡ್ತಿದ್ದಳು. 31 ಯೇಹು ಅರಮನೆಯ ಪ್ರಾಕಾರದೊಳಕ್ಕೆ ಬಂದಾಗ ಅವಳು “ತನ್ನ ಒಡೆಯನನ್ನ ಕೊಂದ ಜಿಮ್ರಿಗೆ ಏನಾಯ್ತು ಅಂತ ನಿನಗೆ ನೆನಪಿದ್ಯಾ?”+ ಅಂತ ಕೇಳಿದಳು. 32 ಕಿಟಕಿ ಕಡೆ ನೋಡಿ ಯೇಹು “ನನ್ನ ಪಕ್ಷದವರು ಯಾರಾದ್ರೂ ಅಲ್ಲಿದ್ದೀರಾ? ಹೇಳಿ!”+ ಅಂತ ಕೂಗಿದ. ತಕ್ಷಣ ಇಬ್ಬರು-ಮೂವರು ಆಸ್ಥಾನದ ಅಧಿಕಾರಿಗಳು ಅವನ ಕಡೆ ಬಗ್ಗಿ ನೋಡಿದ್ರು. 33 ಅವನು ಆ ಅಧಿಕಾರಿಗಳಿಗೆ “ಅವಳನ್ನು ಕೆಳಗೆ ದೊಬ್ಬಿ!” ಅಂದ. ಆಗ ಅವರು ಅವಳನ್ನ ಕೆಳಕ್ಕೆ ದೊಬ್ಬಿದ್ರು. ಅವಳ ರಕ್ತ ಗೋಡೆಗೂ ಕುದುರೆಗಳಿಗೂ ಸಿಡಿತು. ಆಗ ಯೇಹು ತನ್ನ ಕುದುರೆಗಳಿಂದ ಅವಳನ್ನ ತುಳಿಸಿದ.
-