-
2 ಅರಸು 6:16, 17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಅದಕ್ಕೆ ಎಲೀಷ “ಹೆದರಬೇಡ!+ ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ”+ ಅಂದ. 17 ಎಲೀಷ “ಯೆಹೋವನೇ, ದಯವಿಟ್ಟು ಇವನ ಕಣ್ಣುಗಳನ್ನ ತೆರಿ. ಇವನೂ ನೋಡೋಕಾಗೋ ತರ ಮಾಡು”+ ಅಂತ ಪ್ರಾರ್ಥಿಸಿದ. ತಕ್ಷಣ ಯೆಹೋವ ಆ ಸೇವಕನ ಕಣ್ಣುಗಳನ್ನ ತೆರೆದನು. ಆಗ ಆ ಸೇವಕ ಸುತ್ತ ಇರೋ ಬೆಟ್ಟ ಪ್ರದೇಶದಲ್ಲೆಲ್ಲ ಪ್ರಜ್ವಲಿಸೋ ಕುದುರೆಗಳು ಮತ್ತು ಅಗ್ನಿಮಯ ಯುದ್ಧರಥಗಳು+ ಎಲೀಷನ ರಕ್ಷಣೆಗಾಗಿ ಬಂದು ನಿಂತಿರೋದನ್ನ ಕಂಡ.+
-
-
2 ಪೂರ್ವಕಾಲವೃತ್ತಾಂತ 20:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಯಹಜೀಯೇಲ ಹೀಗೆ ಹೇಳಿದ “ಯೆಹೂದದ ಜನ್ರೇ, ಯೆರೂಸಲೇಮಿನ ನಿವಾಸಿಗಳೇ ಮತ್ತು ರಾಜ ಯೆಹೋಷಾಫಾಟನೇ ನೀವೆಲ್ಲರೂ ಗಮನಕೊಟ್ಟು ಕೇಳಿ. ಯೆಹೋವ ನಿಮಗೆ ಹೀಗೆ ಹೇಳುತ್ತಿದ್ದಾನೆ ‘ಆ ದೊಡ್ಡ ಸೈನ್ಯ ನೋಡಿ ನೀವು ಭಯಪಡಬೇಡಿ, ಹೆದರಬೇಡಿ. ಯಾಕಂದ್ರೆ ಯುದ್ಧ ನಿಮ್ಮದಲ್ಲ. ದೇವರದ್ದೇ.+
-