-
1 ಸಮುವೇಲ 2:22-25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಏಲಿಗೆ ತುಂಬ ವಯಸ್ಸಾಗಿತ್ತು. ಅವನ ಮಕ್ಕಳು ಇಸ್ರಾಯೇಲ್ಯರ ಜೊತೆ ನಡ್ಕೊಳ್ತಿದ್ದ ರೀತಿ ಬಗ್ಗೆ,+ ದೇವದರ್ಶನದ ಡೇರೆಯ ಬಾಗಿಲಲ್ಲಿ ಸೇವೆ ಮಾಡ್ತಿದ್ದ ಸ್ತ್ರೀಯರ ಜೊತೆ ಇಡ್ತಿದ್ದ ಲೈಂಗಿಕ ಸಂಬಂಧದ ಬಗ್ಗೆ+ ಅವನು ಕೇಳಿಸ್ಕೊಂಡಿದ್ದ. 23 ಏಲಿ ತನ್ನ ಮಕ್ಕಳಿಗೆ “ನೀವ್ಯಾಕೆ ಇಂಥ ಕೆಲಸ ಮಾಡ್ತಿದ್ದೀರಾ? ಎಲ್ರಿಂದ ನಿಮ್ಮ ಬಗ್ಗೆ ಕೆಟ್ಟದ್ದನ್ನೇ ಕೇಳಿಸ್ಕೊಳ್ತಾ ಇದ್ದೀನಿ. 24 ನನ್ನ ಮಕ್ಕಳೇ, ಹಾಗೆ ಮಾಡಬೇಡಿ. ಯೆಹೋವನ ಜನ್ರ ಮಧ್ಯ ನಿಮ್ಮ ಬಗ್ಗೆ ಹಬ್ಬುತ್ತಿರೋ ವಿಷ್ಯಗಳು ಒಳ್ಳೇ ವಿಷ್ಯಗಳಲ್ಲ. 25 ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ವಿರುದ್ಧ ಪಾಪ ಮಾಡಿದ್ರೆ ಅವನಿಗಾಗಿ ಯಾರಾದ್ರೂ ಯೆಹೋವನಿಗೆ ಪ್ರಾರ್ಥನೆ ಮಾಡಬಹುದು.* ಆದ್ರೆ ಒಬ್ಬ ಮನುಷ್ಯ ಯೆಹೋವನ ವಿರುದ್ಧನೇ ಪಾಪ ಮಾಡಿದ್ರೆ+ ಅವನಿಗಾಗಿ ಯಾರು ತಾನೇ ಪ್ರಾರ್ಥಿಸ್ತಾರೆ?” ಅಂತಿದ್ದ. ಆದ್ರೂ ಅವರು ತಮ್ಮ ಅಪ್ಪನ ಮಾತು ಕೇಳಲಿಲ್ಲ. ಯೆಹೋವ ಅವ್ರನ್ನ ಸಾಯಿಸೋಕೆ ತೀರ್ಮಾನ ಮಾಡಿದನು.+
-