-
1 ಸಮುವೇಲ 19:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಹಾಗೆಯೇ ಯೋನಾತಾನ ತನ್ನ ತಂದೆ ಸೌಲನ ಹತ್ರ ದಾವೀದನ ಬಗ್ಗೆ ಒಳ್ಳೇ ವಿಷ್ಯಗಳನ್ನ ಮಾತಾಡಿದ.+ ಅವನು ಸೌಲನಿಗೆ “ರಾಜನೇ, ನೀನು ನಿನ್ನ ಸೇವಕ ದಾವೀದನ ವಿರುದ್ಧ ಪಾಪ ಮಾಡಬಾರದು. ಅವನು ನಿನ್ನ ವಿರುದ್ಧ ಯಾವ ಪಾಪನೂ ಮಾಡಿಲ್ಲ, ಅವನು ಮಾಡಿರೋದೆಲ್ಲ ನಿನಗೆ ಪ್ರಯೋಜನ ತಂದಿದೆ.
-
-
1 ಸಮುವೇಲ 25:23, 24ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಅಬೀಗೈಲ್ ದಾವೀದನನ್ನ ನೋಡಿದ ತಕ್ಷಣ ಕತ್ತೆ ಮೇಲಿಂದ ಬೇಗಬೇಗ ಇಳಿದು ದಾವೀದನ ಮುಂದೆ ಮಂಡಿಯೂರಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದಳು. 24 ಆಮೇಲೆ ದಾವೀದನ ಕಾಲಿಗೆ ಬಿದ್ದು: “ನನ್ನ ಒಡೆಯನೇ, ನಡೆದ ಅಪರಾಧ ನನ್ನ ಮೇಲಿರಲಿ. ನಿನ್ನ ಸೇವಕಿಗೆ ಮಾತಾಡೋದಕ್ಕೆ ಅಪ್ಪಣೆ ಕೊಡು. ನಿನ್ನ ಸೇವಕಿ ಹೇಳೋದನ್ನ ಕೇಳು.
-