49 ಭೂಮಿಯ ಯಾವುದೋ ಮೂಲೆಯಲ್ಲಿರೋ ಒಂದು ಜನಾಂಗ ನಿಮ್ಮ ವಿರುದ್ಧ ಬರೋ ಹಾಗೆ ಯೆಹೋವ ಮಾಡ್ತಾನೆ.+ ಹದ್ದು ತನ್ನ ಬೇಟೆ ಮೇಲೆ ತಟ್ಟನೆ ಬೀಳೋ ತರ+ ಆ ಜನಾಂಗ ನಿಮ್ಮ ಮೇಲೆ ದಿಢೀರಂತ ದಾಳಿ ಮಾಡುತ್ತೆ. ಅವರ ಭಾಷೆ ನಿಮಗೆ ಅರ್ಥ ಆಗಲ್ಲ.+50 ಕ್ರೂರಿಗಳಾದ ಆ ಜನ್ರು ವಯಸ್ಸಾದವರ ಮೇಲೆ, ಮಕ್ಕಳ ಮೇಲೆ ದಯೆ ತೋರಿಸಲ್ಲ.+
24ಯೆಹೋಯಾಕೀಮನ ಕಾಲದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ+ ಯೆಹೂದದ ಮೇಲೆ ದಾಳಿ ಮಾಡಿದ. ಯೆಹೋಯಾಕೀಮ ಮೂರು ವರ್ಷ ಅವನ ಅಧೀನದಲ್ಲಿದ್ದ. ಆಮೇಲೆ ಅವನು ನೆಬೂಕದ್ನೆಚ್ಚರನ ವಿರುದ್ಧ ತಿರುಗಿಬಿದ್ದ.
5 ಯೆಹೋಯಾಕೀಮ+ ರಾಜನಾದಾಗ ಅವನಿಗೆ 25 ವರ್ಷ. ಅವನು ಯೆರೂಸಲೇಮಿಂದ 11 ವರ್ಷ ಆಳಿದ. ತನ್ನ ದೇವರಾದ ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡ್ತಿದ್ದ.+6 ಬಾಬೆಲಿನ ರಾಜ ನೆಬೂಕದ್ನೆಚ್ಚರ+ ಯೆಹೋಯಾಕೀಮನ ವಿರುದ್ಧ ಬಂದು, ಅವನನ್ನ ಬಾಬೆಲಿಗೆ ಕರ್ಕೊಂಡು ಹೋಗೋಕೆ ತಾಮ್ರದ ಎರಡು ಬೇಡಿಗಳಿಂದ ಬಂಧಿಸಿದ.+