21 ಅವತ್ತಿಂದ ಯೇಸು ಶಿಷ್ಯರಿಗೆ ‘ನಾನು ಯೆರೂಸಲೇಮಿಗೆ ಹೋಗಿ ಅಧಿಕಾರಿಗಳಿಂದ ಮುಖ್ಯ ಪುರೋಹಿತರಿಂದ ಪಂಡಿತರಿಂದ ತುಂಬ ಕಷ್ಟ ಅನುಭವಿಸಿ ಸಾಯಬೇಕಾಗುತ್ತೆ. ಆದ್ರೆ ಮೂರನೇ ದಿನ ಮತ್ತೆ ಬದುಕಿ ಬರ್ತಿನಿ’+ ಅಂತ ಹೇಳ್ತಿದ್ದನು.
22 ಯೇಸು ಮತ್ತು ಶಿಷ್ಯರು ಗಲಿಲಾಯಕ್ಕೆ ಬಂದಾಗ ಯೇಸು “ಮನುಷ್ಯಕುಮಾರನಿಗೆ ಮೋಸ ಮಾಡಿ ಶತ್ರುಗಳ ಕೈಗೆ ಒಪ್ಪಿಸ್ತಾರೆ.+23 ಅವರು ಅವನನ್ನ ಕೊಲ್ತಾರೆ. ಆದ್ರೆ ಮೂರನೇ ದಿನ ಅವನು ಬದುಕಿ ಬರ್ತಾನೆ”+ ಅಂದನು. ಇದನ್ನ ಕೇಳಿ ಶಿಷ್ಯರಿಗೆ ತುಂಬ ಬೇಜಾರಾಯ್ತು.
3 ನಾನು ಕಲಿತ ಅತೀ ಪ್ರಾಮುಖ್ಯ ವಿಷ್ಯವನ್ನ ನಿಮಗೂ ಕಲಿಸ್ದೆ. ಅದೇನಂದ್ರೆ ಪವಿತ್ರ ಗ್ರಂಥದಲ್ಲಿ ಹೇಳಿರೋ ಪ್ರಕಾರ ಕ್ರಿಸ್ತ ನಮ್ಮನ್ನ ಪಾಪದಿಂದ ಬಿಡಿಸೋಕೆ ಸತ್ತನು+4 ಮತ್ತು ಆತನನ್ನ ಸಮಾಧಿ ಮಾಡಿದ್ರು.+ ಪವಿತ್ರ ಗ್ರಂಥ ಹೇಳೋ ಹಾಗೆ+ ಮೂರನೇ ದಿನ+ ದೇವರು ಆತನಿಗೆ ಮತ್ತೆ ಜೀವ ಕೊಟ್ಟು ಎಬ್ಬಿಸಿದನು.+