-
ಮತ್ತಾಯ 21:23-27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಯೇಸು ದೇವಾಲಯದಲ್ಲಿ ಕಲಿಸ್ತಿದ್ದಾಗ ಮುಖ್ಯ ಪುರೋಹಿತರು, ಹಿರಿಯರು ಬಂದು “ಯಾವ ಅಧಿಕಾರದಿಂದ ನೀನು ಇದೆಲ್ಲ ಮಾಡ್ತಿದ್ದೀಯ? ಯಾರು ನಿನಗೆ ಅಧಿಕಾರ ಕೊಟ್ರು?” ಅಂತ ಕೇಳಿದ್ರು.+ 24 ಅದಕ್ಕೆ ಯೇಸು “ನಾನೂ ನಿಮಗೆ ಒಂದು ಪ್ರಶ್ನೆ ಕೇಳ್ತೀನಿ. ಅದಕ್ಕೆ ಉತ್ರ ಕೊಟ್ರೆ ನಾನು ಯಾವ ಅಧಿಕಾರದಿಂದ ಇದೆಲ್ಲ ಮಾಡ್ತಾ ಇದ್ದೀನಿ ಅಂತ ಹೇಳ್ತೀನಿ. 25 ದೀಕ್ಷಾಸ್ನಾನ ಮಾಡಿಸೋ ಅಧಿಕಾರ ಯೋಹಾನನಿಗೆ ಯಾರು ಕೊಟ್ರು? ದೇವರಾ? ಮನುಷ್ಯರಾ?” ಅಂದನು. ಅದಕ್ಕೆ ಅವರು ಒಬ್ಬರಿಗೊಬ್ರು “‘ದೇವರು’ ಅಂತ ಹೇಳಿದ್ರೆ ‘ನೀವ್ಯಾಕೆ ಅವನನ್ನ ನಂಬಲಿಲ್ಲ?’ ಅಂತ ಕೇಳ್ತಾನೆ.+ 26 ‘ಮನುಷ್ಯರು’ ಅಂತ ಹೇಳಿದ್ರೆ ಈ ಜನ್ರೆಲ್ಲ ನಮ್ಮನ್ನ ಸುಮ್ನೆ ಬಿಡಲ್ಲ. ಯಾಕಂದ್ರೆ ಅವ್ರೆಲ್ಲ ಯೋಹಾನ ಒಬ್ಬ ಪ್ರವಾದಿ ಅಂತ ನಂಬ್ತಾರೆ” ಅಂತ ಮಾತಾಡ್ಕೊಂಡ್ರು. 27 ಹಾಗಾಗಿ ಅವರು “ನಮಗೆ ಗೊತ್ತಿಲ್ಲ” ಅಂತ ಉತ್ರ ಕೊಟ್ರು. ಆಗ ಯೇಸು “ಹಾಗಾದ್ರೆ ಯಾವ ಅಧಿಕಾರದಿಂದ ಇದನ್ನೆಲ್ಲ ಮಾಡ್ತೀನಿ ಅಂತ ನಾನೂ ನಿಮಗೆ ಹೇಳಲ್ಲ” ಅಂದನು.
-
-
ಮಾರ್ಕ 11:27-33ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ಅವರು ಮತ್ತೆ ಯೆರೂಸಲೇಮಿಗೆ ಬಂದ್ರು. ಯೇಸು ದೇವಾಲಯದಲ್ಲಿ ನಡಿತಿದ್ದಾಗ ಮುಖ್ಯ ಪುರೋಹಿತರು, ಪಂಡಿತರು, ಹಿರಿಯರು ಬಂದು 28 “ಯಾವ ಅಧಿಕಾರದಿಂದ ನೀನು ಇದೆಲ್ಲ ಮಾಡ್ತಿದ್ದೀಯ? ಈ ಅಧಿಕಾರ ನಿಂಗ್ಯಾರು ಕೊಟ್ರು?” ಅಂತ ಕೇಳಿದ್ರು.+ 29 ಯೇಸು ಅವ್ರಿಗೆ “ನಾನೂ ಒಂದು ಪ್ರಶ್ನೆ ಕೇಳ್ತೀನಿ. ನೀವು ಅದಕ್ಕೆ ಉತ್ರ ಕೊಟ್ರೆ ನಾನು ಯಾವ ಅಧಿಕಾರದಿಂದ ಇದೆಲ್ಲ ಮಾಡ್ತಾ ಇದ್ದೀನಿ ಅಂತ ಹೇಳ್ತೀನಿ. 30 ದೀಕ್ಷಾಸ್ನಾನ ಮಾಡಿಸೋ ಅಧಿಕಾರ ಯೋಹಾನನಿಗೆ+ ಯಾರು ಕೊಟ್ರು? ದೇವರಾ? ಮನುಷ್ಯರಾ? ಉತ್ರ ಕೊಡಿ” ಅಂದನು.+ 31 ಆಗ ಅವರು ಒಬ್ರಿಗೊಬ್ರು “ನಾವು ಏನಾದ್ರೂ ದೇವರು ಅಂತ ಹೇಳಿದ್ರೆ, ‘ಹಾಗಾದ್ರೆ ನೀವ್ಯಾಕೆ ಅವನನ್ನ ನಂಬಲಿಲ್ಲ?’ ಅಂತಾನೆ. 32 ಮನುಷ್ಯರು ಅಂತ ಹೇಳಿದ್ರೆ ಜನ ನಮ್ಮನ್ನ ಸುಮ್ನೆ ಬಿಡ್ತಾರಾ?” ಅಂತ ಮಾತಾಡ್ಕೊಂಡ್ರು. ಯೋಹಾನ ಒಬ್ಬ ಪ್ರವಾದಿ ಅಂತ ಜನ ನಂಬಿದ್ರು.+ ಹಾಗಾಗಿ ಅವರು ಜನ್ರಿಗೆ ಹೆದರಿ 33 “ನಮಗೆ ಗೊತ್ತಿಲ್ಲ” ಅಂತ ಉತ್ರ ಕೊಟ್ರು. ಆಗ ಯೇಸು “ಹಾಗಾದ್ರೆ ಯಾವ ಅಧಿಕಾರದಿಂದ ಇದನ್ನೆಲ್ಲ ಮಾಡ್ತೀನಿ ಅಂತ ನಾನೂ ಹೇಳಲ್ಲ” ಅಂದನು.
-