-
ಲೂಕ 2:29-32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
29 “ವಿಶ್ವದ ರಾಜ, ನೀನು ಹೇಳಿದ ಹಾಗೆ ಮಗುವನ್ನ ನೋಡಿದೆ. ಈಗ ನಾನು ಸತ್ರೂ ಪರ್ವಾಗಿಲ್ಲ. ಸಂತೋಷವಾಗಿ ಜೀವಬಿಡ್ತೀನಿ.+ 30 ಯಾಕಂದ್ರೆ ನೀನು ಹೇಗೆ ನಮ್ಮನ್ನ ರಕ್ಷಿಸ್ತೀಯ ಅಂತ ನನಗೆ ಕಾಣ್ತಿದೆ.+ 31 ಆತನನ್ನ ಎಲ್ಲ ದೇಶದ ಜನ ನೋಡಬೇಕಂತಾನೇ ನೀನು ಕಳಿಸಿದ್ದೀಯ.+ 32 ಆತನು, ಜನ್ರನ್ನ ಮುಚ್ಚಿರೋ ಕತ್ತಲೆಯನ್ನ+ ತೆಗೆದುಹಾಕೋ ಬೆಳಕು.+ ನಿನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ಬೀರೋ ಬೆಳಕು.”
-
-
ಅ. ಕಾರ್ಯ 18:5, 6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಸೀಲ+ ಮತ್ತು ತಿಮೊತಿ+ ಮಕೆದೋನ್ಯದಿಂದ ಬಂದ ಮೇಲೆ ಪೌಲ ಜಾಸ್ತಿ ಸಮಯ ಸಿಹಿಸುದ್ದಿ ಸಾರೋಕೆ ಕೊಡ್ತಿದ್ದ. ಯೇಸುನೇ ಕ್ರಿಸ್ತ ಅಂತ ಯೆಹೂದ್ಯರಿಗೆ ಆಧಾರ ತೋರಿಸಿ ವಿವರಿಸ್ತಿದ್ದ.+ 6 ಆದ್ರೆ ಆ ಯೆಹೂದ್ಯರು ಪೌಲನನ್ನ ವಿರೋಧಿಸಿದ್ರು. ಹಾಗಾಗಿ ಪೌಲ ತನ್ನ ಬಟ್ಟೆ ಝಾಡಿಸಿ+ ಅವ್ರಿಗೆ “ನಿಮ್ಗೆ ಏನೇ ಆದ್ರೂ ಅದಕ್ಕೆ ಕಾರಣ ನೀವೇ.+ ಅದಕ್ಕೆ ಜವಾಬ್ದಾರಿ ನಾನಲ್ಲ.+ ಇವತ್ತಿಂದ ನಾನು ಯೆಹೂದ್ಯರಲ್ಲದ ಜನ್ರ ಹತ್ರ ಹೋಗ್ತೀನಿ”+ ಅಂದ.
-