11 ಹಾಗಾಗಿ ತೊದಲ್ತಾ ಮಾತಾಡುವವರ ಮೂಲಕ, ವಿದೇಶಿ ಭಾಷೆಯನ್ನ ಮಾತಾಡುವವರ ಮೂಲಕ ದೇವರು ಈ ಜನ್ರ ಜೊತೆ ಮಾತಾಡ್ತಾನೆ.+ 12 ಆತನು ಒಮ್ಮೆ ಅವ್ರಿಗೆ “ಇದೊಂದು ವಿಶ್ರಾಂತಿಯ ಸ್ಥಳ. ಹೊಸ ಚೈತನ್ಯವನ್ನ ತುಂಬೋ ಸ್ಥಳ. ಹಾಗಾಗಿ ಬಳಲಿರುವವರು ಬಂದು ಇಲ್ಲಿ ವಿಶ್ರಾಂತಿ ಪಡ್ಕೊಳ್ಳಲಿ” ಅಂತ ಹೇಳಿದ್ದನು. ಆದ್ರೆ ಅವರು ಆತನ ಮಾತನ್ನ ತಿರಸ್ಕರಿಸಿದ್ರು.+