ಯೆಶಾಯ
28 ಎಫ್ರಾಯೀಮಲ್ಲಿರೋ ಕುಡುಕರ ಆಕರ್ಷಕ* ಕಿರೀಟದ* ಗತಿಯನ್ನ ಏನು ಹೇಳಲಿ!+
ಬಾಡಿ ಹೋಗ್ತಿರೋ ಹೂವಿನ ತರ ಇರೋ ಅದ್ರ ಮಹಿಮಾನ್ವಿತ ಸೌಂದರ್ಯದ ಗತಿಯನ್ನ ಏನು ಹೇಳಲಿ!
ಅದು ದ್ರಾಕ್ಷಾಮದ್ಯದ ಮತ್ತಲ್ಲಿರುವವರ ಫಲವತ್ತಾದ ಕಣಿವೆಯ ತಲೆ ಮೇಲಿದೆ!
2 ಇಗೋ! ಬಲಿಷ್ಠನೂ ಶಕ್ತಿಶಾಲಿಯೂ ಆಗಿರೋ ವ್ಯಕ್ತಿಯೊಬ್ಬ ಯೆಹೋವನ ಹತ್ರ ಇದ್ದಾನೆ.
ಅವನು ಗುಡುಗಿನ ಜೊತೆ ಬರೋ ಆಲಿಕಲ್ಲಿನ ಮಳೆ ತರ, ನಾಶಕರ ಸುಂಟರಗಾಳಿ ತರ,
ಜಲಪ್ರವಾಹದ ಬಲಿಷ್ಠ ಚಂಡಮಾರುತದ ತರ ಬಂದು
ಆ ಕಿರೀಟವನ್ನ ಭೂಮಿಗೆ ಜೋರಾಗಿ ಅಪ್ಪಳಿಸ್ತಾನೆ.
4 ಫಲವತ್ತಾದ ಕಣಿವೆಯ ತಲೆ ಮೇಲಿನ,
ಬಾಡಿ ಹೋಗ್ತಿರೋ ಹೂವಿನ ಮಹಿಮಾನ್ವಿತ ಸೌಂದರ್ಯ
ಬೇಸಿಗೆಗೂ ಮುಂಚೆನೇ ಬಿಡೋ ಆರಂಭದ ಅಂಜೂರದ ತರ ಇರುತ್ತೆ.
ಯಾರಾದ್ರೂ ಅದನ್ನ ನೋಡಿದ್ರೆ ತಮ್ಮ ಕೈಯಿಂದ ಅದನ್ನ ತಗೊಂಡು ತಕ್ಷಣ ನುಂಗಿಬಿಡ್ತಾರೆ.
5 ಆ ದಿನ ಸೈನ್ಯಗಳ ದೇವರಾದ ಯೆಹೋವ ತನ್ನ ಜನ್ರಲ್ಲಿ ಉಳಿದಿರುವವರಿಗೆ+ ಮಹಿಮೆಯ ಕಿರೀಟ ಆಗ್ತಾನೆ, ಅಂದವಾದ ಹೂವಿನ ಹಾರ ಆಗ್ತಾನೆ. 6 ನ್ಯಾಯತೀರಿಸೋಕೆ ಕೂರುವವರಿಗೆ ಆತನು ನ್ಯಾಯವಾಗಿ ತೀರ್ಪು ಕೊಡೋಕೆ ಪ್ರೇರೇಪಿಸ್ತಾನೆ, ಪಟ್ಟಣದ ಬಾಗಿಲ ಹತ್ರ ಎದುರಾಳಿಗಳ ದಾಳಿಯನ್ನ ಎದುರಿಸುವವರಿಗೆ ಬಲ ಕೊಡ್ತಾನೆ.+
7 ಪುರೋಹಿತ ಮತ್ತು ಪ್ರವಾದಿ ಸಹ ದ್ರಾಕ್ಷಾಮದ್ಯ ಕುಡಿದು ದಾರಿ ತಪ್ಪಿದ್ದಾರೆ,
ಅವರ ಮದ್ಯಪಾನ ಅವ್ರನ್ನ ತೂರಾಡೋ ತರ ಮಾಡಿದೆ.
ಹೌದು, ಅವರು ಮದ್ಯಪಾನದಿಂದ ಅಡ್ಡದಾರಿ ಹಿಡಿದಿದ್ದಾರೆ.
ದ್ರಾಕ್ಷಾಮದ್ಯ ಅವ್ರನ್ನ ಗಲಿಬಿಲಿ ಮಾಡ್ತಿದೆ,
ಮದ್ಯಪಾನದಿಂದ ಅವರು ತೂರಾಡ್ತಿದ್ದಾರೆ.
ಅವ್ರ ದರ್ಶನ ಅವ್ರನ್ನ ದಾರಿ ತಪ್ಪಿಸ್ತಿದೆ,
ಸರಿಯಾದ ನಿರ್ಧಾರವನ್ನ ತಗೊಳ್ಳೋಕೆ ಅವ್ರಿಂದ ಆಗ್ತಿಲ್ಲ.+
8 ಅವ್ರ ಮೇಜುಗಳು ಹೊಲಸಾದ ವಾಂತಿಯಿಂದ ತುಂಬಿಹೋಗಿದೆ,
ವಾಂತಿಯಿಲ್ಲದ ಜಾಗನೇ ಇಲ್ಲ.
9 ಅವರು ಹೀಗೆ ಹೇಳ್ತಿದ್ದಾರೆ “ಅವನು ಯಾರಿಗೆ ಜ್ಞಾನವನ್ನ ಹಂಚೋಕೆ ಹೊರಟಿದ್ದಾನೆ?
ಅವನು ತನ್ನ ಸಂದೇಶವನ್ನ ಯಾರಿಗೆ ವಿವರಿಸಬೇಕು ಅಂತಿದ್ದಾನೆ?
ನಾವೇನು ಈಗ ತಾನೇ ಹಾಲು ಕುಡಿಯೋದನ್ನ ನಿಲ್ಲಿಸಿರೋ ಮಕ್ಕಳಾ?
ಇತ್ತೀಚೆಗೆ ತಾಯಿಯ ಎದೆಹಾಲು ಬಿಟ್ಟಿರೋ ಮಕ್ಕಳಾ?
10 ಯಾವಾಗ ನೋಡಿದ್ರೂ ಇದನ್ನೇ ಹೇಳ್ತಿರ್ತಾನೆ,
‘ಆಜ್ಞೆ ಮೇಲೆ ಆಜ್ಞೆ, ಆಜ್ಞೆ ಮೇಲೆ ಆಜ್ಞೆ,
ನಿಯಮದ ಮೇಲೆ ನಿಯಮ, ನಿಯಮದ ಮೇಲೆ ನಿಯಮ,+
ಸ್ವಲ್ಪ ಇಲ್ಲಿ, ಸ್ವಲ್ಪ ಅಲ್ಲಿ.’”
11 ಹಾಗಾಗಿ ತೊದಲ್ತಾ ಮಾತಾಡುವವರ ಮೂಲಕ, ವಿದೇಶಿ ಭಾಷೆಯನ್ನ ಮಾತಾಡುವವರ ಮೂಲಕ ದೇವರು ಈ ಜನ್ರ ಜೊತೆ ಮಾತಾಡ್ತಾನೆ.+ 12 ಆತನು ಒಮ್ಮೆ ಅವ್ರಿಗೆ “ಇದೊಂದು ವಿಶ್ರಾಂತಿಯ ಸ್ಥಳ. ಹೊಸ ಚೈತನ್ಯವನ್ನ ತುಂಬೋ ಸ್ಥಳ. ಹಾಗಾಗಿ ಬಳಲಿರುವವರು ಬಂದು ಇಲ್ಲಿ ವಿಶ್ರಾಂತಿ ಪಡ್ಕೊಳ್ಳಲಿ” ಅಂತ ಹೇಳಿದ್ದನು. ಆದ್ರೆ ಅವರು ಆತನ ಮಾತನ್ನ ತಿರಸ್ಕರಿಸಿದ್ರು.+ 13 ಹಾಗಾಗಿ ಯೆಹೋವ ಮತ್ತೆ ಅವ್ರಿಗೆ,
“ಆಜ್ಞೆ ಮೇಲೆ ಆಜ್ಞೆ, ಆಜ್ಞೆ ಮೇಲೆ ಆಜ್ಞೆ,
ನಿಯಮದ ಮೇಲೆ ನಿಯಮ, ನಿಯಮದ ಮೇಲೆ ನಿಯಮ,+
ಸ್ವಲ್ಪ ಇಲ್ಲಿ, ಸ್ವಲ್ಪ ಅಲ್ಲಿ” ಅಂತ ಹೇಳ್ತಾನೆ.
ಆದ್ರೆ ಅವರು ಆತನ ಮಾತನ್ನ ಕೇಳಿಸ್ಕೊಳ್ಳಲ್ಲ.
ಹಾಗಾಗಿ ಅವರು ನಡೆಯುವಾಗ ಎಡವಿ ಹಿಂದಕ್ಕೆ ಬೀಳ್ತಾರೆ,
ಅವರು ಗಾಯಗೊಳ್ತಾರೆ, ಸಿಕ್ಕಿಹಾಕಿಕೊಳ್ತಾರೆ, ಅವ್ರನ್ನ ಹಿಡ್ಕೊಂಡು ಹೋಗ್ತಾರೆ.+
14 ಜಂಬ ಕೊಚ್ಚಿಕೊಳ್ಳುವವರೇ, ಯೆರೂಸಲೇಮ್ ಜನ್ರ ಅಧಿಕಾರಿಗಳೇ,
ಯೆಹೋವನ ಮಾತನ್ನ ಕೇಳಿ.
15 ಯಾಕಂದ್ರೆ ನೀವು ಹೀಗೆ ಹೇಳ್ತೀರ
“ನಾವು ಮರಣದ ಜೊತೆ ಒಂದು ಒಪ್ಪಂದ ಮಾಡ್ಕೊಂಡಿದ್ದೀವಿ,+
ಸಮಾಧಿ* ಜೊತೆ ಒಂದು ಕರಾರನ್ನ ಮಾಡ್ಕೊಂಡಿದ್ದೀವಿ.
ರಭಸದಿಂದ ಹರಿಯೋ ಪ್ರವಾಹ ಹಾದುಹೋಗುವಾಗ
ಅದು ನಮ್ಮ ಹತ್ರ ಬರಲ್ಲ,
ಯಾಕಂದ್ರೆ ಸುಳ್ಳನ್ನ ನಾವು ನಮ್ಮ ಆಶ್ರಯವನ್ನಾಗಿ ಮಾಡ್ಕೊಂಡಿದ್ದೀವಿ.
ಸುಳ್ಳಿನಲ್ಲಿ ನಾವು ಅಡಗಿದ್ದೀವಿ.”+
16 ಹಾಗಾಗಿ ವಿಶ್ವದ ರಾಜನಾದ ಯೆಹೋವ ಹೀಗೆ ಹೇಳ್ತಿದ್ದಾನೆ
“ನಾನು ಚೀಯೋನಲ್ಲಿ ಅಡಿಪಾಯ ಹಾಕ್ತಿದ್ದೀನಿ, ಅದು ಪರೀಕ್ಷಿಸಿದ ಒಂದು ಕಲ್ಲಾಗಿರುತ್ತೆ,+
ಅದ್ರ ಮೇಲೆ ನಂಬಿಕೆ ಇಟ್ಟವರಲ್ಲಿ ಯಾರೂ ಹೆದರಲ್ಲ.+
ಅವ್ರ ಸುಳ್ಳಿನ ಆಶ್ರಯವನ್ನ ಆಲಿಕಲ್ಲಿನ ಮಳೆ ಕೊಚ್ಕೊಂಡು ಹೋಗುತ್ತೆ,
ಅವರು ಅಡಗಿಕೊಳ್ಳೋ ಸ್ಥಳ ಜಲಪ್ರವಾಹದಲ್ಲಿ ಮುಳುಗಿ ಹೋಗುತ್ತೆ.
ರಭಸದಿಂದ ಹರಿಯೋ ಪ್ರವಾಹ ಹಾದು ಹೋಗುವಾಗ
ಅದ್ರಿಂದ ನೀವು ನಾಶವಾಗ್ತೀರ.
ಅದು ಬೆಳ್ಳಂಬೆಳಿಗ್ಗೆನೇ ಹಾದು ಹೋಗುತ್ತೆ,
ಹಗಲೂರಾತ್ರಿ ಅನ್ನದೇ ಹಾದು ಹೋಗುತ್ತೆ.
ವಿಪರೀತ ಭಯನೇ ಅವರು ಕೇಳಿಸ್ಕೊಂಡ ಸಂದೇಶವನ್ನ ಅವ್ರಿಗೆ ಅರ್ಥಮಾಡಿಸುತ್ತೆ.”*
20 ಒಬ್ಬ ಕಾಲು ಚಾಚಿಕೊಂಡು ಮಲಗಬೇಕಂದ್ರೆ ಹಾಸಿಗೆಯ ಉದ್ದ ಸಾಲಲ್ಲ,
ಮುದುರಿಕೊಂಡು ಮಲಗಬೇಕಂದ್ರೆ ಹೊದಿಕೆಯ ಅಗಲ ಸಾಲಲ್ಲ.
21 ಯೆಹೋವ ಪೆರಾಚೀಮ್ ಬೆಟ್ಟದ ಮೇಲೆ ಎದ್ದು ನಿಂತ ಹಾಗೇ ಎದ್ದು ನಿಲ್ತಾನೆ,
ಗಿಬ್ಯೋನಿನ ಹತ್ರದಲ್ಲಿರೋ ಕಣಿವೆಯಲ್ಲಿ ಮಾಡಿದ ಹಾಗೇ ಮಾಡ್ತಾನೆ,+
ಹೀಗೆ ಆತನು ತನ್ನ ಕೆಲಸವನ್ನ, ತನ್ನ ಬೆರಗುಗೊಳಿಸೋ ಕೆಲಸವನ್ನ ಮಾಡ್ತಾನೆ,
ತನ್ನ ಕೆಲಸವನ್ನ, ತನ್ನ ಅಸಾಧಾರಣವಾದ ಕೆಲಸವನ್ನ ಮಾಡ್ತಾನೆ.+
22 ಈಗ ಅಣಕಿಸೋ ಮಾತುಗಳನ್ನ ಆಡಬೇಡಿ,+
ಹಾಗೆ ಮಾತಾಡಿ ನಿಮಗೆ ಬಿಗಿದಿರೋ ಕಟ್ಟು ಇನ್ನು ಬಿಗಿಯಾಗೋ ತರ ಮಾಡ್ಕೊಳ್ಳಬೇಡಿ,
ಯಾಕಂದ್ರೆ ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವ,
ದೇಶವನ್ನೆಲ್ಲ ನಿರ್ನಾಮ ಮಾಡೋಕೆ ನಿರ್ಣಯಿಸಿದ್ದಾನೆ ಅಂತ ನಾನು ಕೇಳಿಸ್ಕೊಂಡಿದ್ದೀನಿ.+
23 ನನ್ನ ಮಾತನ್ನ ಕಿವಿಗೊಟ್ಟು ಕೇಳಿ,
ನಾನು ಹೇಳೋದನ್ನ ಗಮನಕೊಟ್ಟು ಕೇಳಿಸ್ಕೊಳ್ಳಿ.
24 ಉಳುವವನು ಬೀಜವನ್ನ ಬಿತ್ತದೆ ದಿನವೆಲ್ಲಾ ಉಳುತ್ತಾ ಇರ್ತಾನಾ?
ಅವನು ಮಣ್ಣಿನ ಹೆಂಟೆಗಳನ್ನ ಒಡಿತಾ, ನೆಲವನ್ನ ಸಮಮಾಡ್ತಾನೇ ಇರ್ತಾನಾ?+
25 ಅವನು ನೆಲವನ್ನ ಸಮಮಾಡಿದ ಮೇಲೆ
ಕಪ್ಪು ಜೀರಿಗೆಯನ್ನ ತೂರಿ, ಜೀರಿಗೆಯನ್ನ ಬಿತ್ತಿ,
ಗೋದಿಯನ್ನ, ಸಿರಿಧಾನ್ಯವನ್ನ, ಬಾರ್ಲಿಯನ್ನ* ಅವುಗಳ ಸ್ಥಳದಲ್ಲಿ ನೆಡಲ್ವಾ?
ಅಂಚುಗಳಲ್ಲಿ ಬೇರೆ ಧಾನ್ಯವನ್ನ* ಬಿತ್ತಲ್ವಾ?+
ಅದ್ರ ಬದಲಿಗೆ ಕಪ್ಪು ಜೀರಿಗೆಯನ್ನ ದಂಡದಿಂದ,
ಜೀರಿಗೆಯನ್ನ ಕೋಲಿಂದ ಬಡಿಯಲಾಗುತ್ತೆ.
28 ಧಾನ್ಯವನ್ನ ಬಡಿಯುವಾಗ ಒಬ್ಬ ವ್ಯಕ್ತಿ ರೊಟ್ಟಿಗಾಗಿ ಅದನ್ನ ಪುಡಿಪುಡಿ ಮಾಡ್ತಾನಾ?
ಇಲ್ಲ, ಅವನು ಅದನ್ನ ಒಂದೇ ಸಮನೆ ಬಡೀತಾ ಇರಲ್ಲ.+
ಅವನು ತನ್ನ ಕುದುರೆ ಬಂಡಿಯ ಚಕ್ರಗಳನ್ನ ಅದ್ರ ಮೇಲೆ ಹಾಯಿಸುವಾಗ,
ಅದನ್ನ ಪುಡಿಪುಡಿ ಮಾಡಲ್ಲ.+