5 ತಾಳಿಕೊಳ್ಳೋಕೆ ಮತ್ತು ಸಾಂತ್ವನ ಪಡಿಯೋಕೆ ನಮಗೆ ಸಹಾಯ ಮಾಡೋ ದೇವರು ಕ್ರಿಸ್ತ ಯೇಸುವಿನ ಮನಸ್ಸನ್ನ ನಿಮಗೆ ಕೊಡ್ಲಿ. 6 ಆಗ ನೀವು ಒಂದಾಗಿದ್ದು+ ಒಂದೇ ಸ್ವರದಲ್ಲಿ ನಮ್ಮ ಪ್ರಭು ಯೇಸು ಕ್ರಿಸ್ತನ ತಂದೆಯಾಗಿರೋ ದೇವರಿಗೆ ಗೌರವ ಕೊಡ್ತೀರ.
10 ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ತರ ಇರಬೇಕು, ನಿಮ್ಮಲ್ಲಿ ಒಡಕು ಇರಬಾರದು,+ ನಿಮ್ಮೆಲ್ಲರ ಮನಸ್ಸು, ಯೋಚಿಸೋ ರೀತಿ ಒಂದೇ ತರ ಇದ್ದು ನೀವು ಸಂಪೂರ್ಣವಾಗಿ ಒಂದಾಗಿರಬೇಕು ಅಂತ ನಾನು ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸ್ರಲ್ಲಿ ನಿಮ್ಮನ್ನ ಬೇಡ್ಕೊಳ್ತೀನಿ.+
11 ಸಹೋದರರೇ, ಕೊನೇಲಿ ನಾನು ಪ್ರೋತ್ಸಾಹಿಸೋದು ಏನಂದ್ರೆ ಯಾವಾಗ್ಲೂ ಖುಷಿಯಾಗಿರಿ, ಸರಿ ದಾರೀಲಿ ನಡಿತಾ ಇರಿ, ಸಾಂತ್ವನ ಪಡ್ಕೊಳ್ತಾ ಇರಿ,+ ಯಾವಾಗ್ಲೂ ನಿಮ್ಮ ಯೋಚ್ನೆ ಒಂದೇ ತರ ಇರಲಿ,+ ಶಾಂತಿಯಿಂದ ಜೀವಿಸಿ.+ ಆಗ ಪ್ರೀತಿ ಮತ್ತು ಶಾಂತಿಯ ದೇವರು ನಿಮ್ಮ ಜೊತೆ ಇರ್ತಾನೆ.+
8 ಕೊನೆದಾಗಿ ಇನ್ನೊಂದು ವಿಷ್ಯ, ನಿಮ್ಮೆಲ್ರ ಯೋಚ್ನೆ ಒಂದೇ ತರ ಇರಬೇಕು.*+ ಬೇರೆಯವ್ರ ನೋವನ್ನ ಅರ್ಥ ಮಾಡ್ಕೊಬೇಕು. ಒಂದೇ ಕುಟುಂಬದವ್ರ ತರ ಪ್ರೀತಿ ತೋರಿಸಬೇಕು. ದಯೆಯಿಂದ ಮೃದುವಾಗಿ ನಡ್ಕೊಬೇಕು.+ ನಿಮ್ಮಲ್ಲಿ ದೀನತೆ+ ಇರಬೇಕು.