ಕೊರಿಂಥದವರಿಗೆ ಬರೆದ ಮೊದಲನೇ ಪತ್ರ
1 ದೇವರ ಇಷ್ಟದಿಂದ ಅಪೊಸ್ತಲನಾಗಿ+ ಇರೋಕೆ ಯೇಸು ಕ್ರಿಸ್ತ ಕರೆದಿರೋ ಪೌಲನಾದ ನಾನು, ನಮ್ಮ ಸಹೋದರ ಸೊಸ್ಥೆನನ ಜೊತೆಯಲ್ಲಿ 2 ಕೊರಿಂಥದಲ್ಲಿರೋ+ ದೇವರ ಸಭೆಗೆ ಈ ಪತ್ರ ಬರಿತಾ ಇದ್ದೀನಿ. ಅಷ್ಟೇ ಅಲ್ಲ ಬೇರೆಬೇರೆ ಜಾಗಗಳಲ್ಲಿ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸ್ರಲ್ಲಿ ನಂಬಿಕೆ ಇಟ್ಟವ್ರಿಗೂ*+ ಈ ಪತ್ರ ಬರಿತಾ ಇದ್ದೀನಿ. ಕ್ರಿಸ್ತ ಅವ್ರ ಮತ್ತು ನಮ್ಮ ಪ್ರಭು ಆಗಿದ್ದಾನೆ. ನೀವು ಕ್ರಿಸ್ತ ಯೇಸು ಜೊತೆ ಒಂದಾಗಿರಬೇಕು ಅಂತ ದೇವರು ನಿಮ್ಮನ್ನ ಆರಿಸ್ಕೊಂಡನು+ ಮತ್ತು ಪವಿತ್ರ ಜನ್ರಾಗಿ ಇರೋಕೆ ಕರೆದನು.
3 ನಮ್ಮ ತಂದೆಯಾದ ದೇವರಿಂದ ಮತ್ತು ಪ್ರಭು ಯೇಸು ಕ್ರಿಸ್ತನಿಂದ ನಿಮ್ಮೆಲ್ರಿಗೆ ಅಪಾರ ಕೃಪೆ, ಶಾಂತಿ ಸಿಗ್ಲಿ.
4 ದೇವರು ನಿಮಗೆ ಕ್ರಿಸ್ತ ಯೇಸು ಮೂಲಕ ಅಪಾರ ಕೃಪೆ ತೋರಿಸಿದ್ದಕ್ಕೆ ಯಾವಾಗ್ಲೂ ನನ್ನ ದೇವರಿಗೆ ಧನ್ಯವಾದ ಹೇಳ್ತೀನಿ. 5 ನೀವು ಕ್ರಿಸ್ತನ ಜೊತೆ ಒಂದಾಗಿ ಇರೋದ್ರಿಂದ ದೇವರು ನಿಮಗೆ ಎಲ್ಲ ಕೊಟ್ಟಿದ್ದಾನೆ. ದೇವರ ಮಾತನ್ನ ಹೇಳೋ ಒಳ್ಳೇ ಸಾಮರ್ಥ್ಯ ಮತ್ತು ಅದ್ರ ಪೂರ್ಣ ಜ್ಞಾನ ಕೊಟ್ಟಿದ್ದಾನೆ.+ 6 ಯಾಕಂದ್ರೆ ಕ್ರಿಸ್ತನ ಬಗ್ಗೆ ನಾನು ಕೊಟ್ಟ ಸಾಕ್ಷಿಯನ್ನ+ ನೀವು ಬಲವಾಗಿ ನಂಬಿದ್ದೀರ. 7 ಇದ್ರಿಂದ ನಮ್ಮ ಪ್ರಭು ಯೇಸು ಕ್ರಿಸ್ತ ಮತ್ತೆ ಬರೋ ಸಮಯಕ್ಕಾಗಿ ಕಾತುರದಿಂದ ಕಾಯ್ತಿರೋ ನಿಮಗೆ ಯಾವ ಸಾಮರ್ಥ್ಯದಲ್ಲೂ* ಕೊರತೆಯಿಲ್ಲ.+ 8 ಅಷ್ಟೇ ಅಲ್ಲ, ನಮ್ಮ ಪ್ರಭು ಯೇಸು ಕ್ರಿಸ್ತ ಮತ್ತೆ ಬರೋ ದಿನ ನಿಮ್ಮ ಮೇಲೆ ಆರೋಪ ಹೊರಿಸೋಕೆ ಯಾರಿಗೂ ಕಾರಣ ಇರಬಾರದು ಅಂತ ಕೊನೆ ತನಕ ದೃಢವಾಗಿರೋಕೆ ದೇವರು ನಿಮಗೆ ಸಹಾಯ ಮಾಡ್ತಾನೆ.+ 9 ದೇವರು ನಂಬಿಗಸ್ತನು,+ ಆತನು ತನ್ನ ಮಗನಾದ ನಮ್ಮ ಪ್ರಭು ಯೇಸು ಕ್ರಿಸ್ತನ ಜೊತೆ ಪಾಲುದಾರರಾಗೋಕೆ ನಿಮ್ಮನ್ನ ಕರೆದಿದ್ದಾನೆ.
10 ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ತರ ಇರಬೇಕು, ನಿಮ್ಮಲ್ಲಿ ಒಡಕು ಇರಬಾರದು,+ ನಿಮ್ಮೆಲ್ಲರ ಮನಸ್ಸು, ಯೋಚಿಸೋ ರೀತಿ ಒಂದೇ ತರ ಇದ್ದು ನೀವು ಸಂಪೂರ್ಣವಾಗಿ ಒಂದಾಗಿರಬೇಕು ಅಂತ ನಾನು ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸ್ರಲ್ಲಿ ನಿಮ್ಮನ್ನ ಬೇಡ್ಕೊಳ್ತೀನಿ.+ 11 ಯಾಕಂದ್ರೆ ನನ್ನ ಸಹೋದರರೇ, ನಿಮ್ಮೊಳಗೆ ಜಗಳ ಇದೆ ಅಂತ ಖ್ಲೋಯೆಯ ಕುಟುಂಬದಲ್ಲಿ ಸ್ವಲ್ಪ ಜನ ನನಗೆ ಹೇಳಿದ್ದಾರೆ. 12 ನಿಮ್ಮಲ್ಲಿ ಕೆಲವರು “ನಾನು ಪೌಲನ ಶಿಷ್ಯ” ಅಂತ ಹೇಳಿದ್ರೆ, ಇನ್ನು ಕೆಲವರು “ನಾನು ಅಪೊಲ್ಲೋಸನ+ ಶಿಷ್ಯ,” “ನಾನು ಕೇಫನ* ಶಿಷ್ಯ,” “ನಾನು ಕ್ರಿಸ್ತನ ಶಿಷ್ಯ” ಅಂತ ಹೇಳ್ತಿದ್ದೀರ. 13 ಕ್ರಿಸ್ತನನ್ನ ನಿಮ್ಮ ಮಧ್ಯ ನೀವೇ ಭಾಗ ಮಾಡ್ಕೊಂಡು ಬಿಟ್ಟಿದ್ದೀರಾ? ನಿಮಗೋಸ್ಕರ ಮರದ ಕಂಬದಲ್ಲಿ ಸತ್ತಿದ್ದು ಪೌಲನಾ? ನೀವು ದೀಕ್ಷಾಸ್ನಾನ ಪಡ್ಕೊಂಡಿದ್ದು ಪೌಲನ ಹೆಸ್ರಲ್ಲಾ? 14 ಕ್ರಿಸ್ಪ+ ಮತ್ತು ಗಾಯನನ್ನ+ ಬಿಟ್ಟು ಇನ್ಯಾರಿಗೂ ನಾನು ದೀಕ್ಷಾಸ್ನಾನ ಮಾಡಿಸದೆ ಇರೋದಕ್ಕೆ ದೇವರಿಗೆ ಧನ್ಯವಾದ ಹೇಳ್ತೀನಿ. 15 ಹಾಗಾಗಿ ನನ್ನ ಹೆಸ್ರಲ್ಲಿ ದೀಕ್ಷಾಸ್ನಾನ ಪಡ್ಕೊಂಡ್ರಿ ಅಂತ ನೀವ್ಯಾರೂ ಹೇಳೋಕೆ ಆಗಲ್ಲ. 16 ಹಾಂ, ನಾನು ಸ್ತೆಫನನ+ ಮನೆಯವ್ರಿಗೂ ದೀಕ್ಷಾಸ್ನಾನ ಮಾಡಿಸ್ದೆ. ಇವ್ರನ್ನ ಬಿಟ್ಟು ಬೇರೆ ಯಾರಿಗೂ ದೀಕ್ಷಾಸ್ನಾನ ಮಾಡಿಸಿದ್ದು ನನಗೆ ನೆನಪಿಲ್ಲ. 17 ಯಾಕಂದ್ರೆ ಕ್ರಿಸ್ತ ನನ್ನನ್ನ ಕಳಿಸಿದ್ದು ದೀಕ್ಷಾಸ್ನಾನ ಮಾಡಿಸೋಕೆ ಅಲ್ಲ, ಸಿಹಿಸುದ್ದಿ ಸಾರೋಕೆ. ಆತನು ನನ್ನನ್ನ ಕಳಿಸಿದ್ದು+ ಮೇಧಾವಿಗಳ ತರ ಮಾತಾಡಿ* ಸಾರೋಕೆ ಅಲ್ಲ. ಹಾಗೆ ಸಾರಿದ್ರೆ ಕ್ರಿಸ್ತನು ಹಿಂಸಾ ಕಂಬದ* ಮೇಲೆ ಸತ್ತಿದ್ದು ವ್ಯರ್ಥ ಆಗ್ತಿತ್ತು ಅಲ್ವಾ?
18 ಯಾಕಂದ್ರೆ ಹಿಂಸಾ ಕಂಬದ* ಮೇಲೆ ಕ್ರಿಸ್ತನು ಸತ್ತ ವಿಷ್ಯ ನಾಶ ಆಗೋ ಜನ್ರಿಗೆ ಹುಚ್ಚು ಮಾತಾಗಿದೆ,+ ಆದ್ರೆ ರಕ್ಷಣೆ ಪಡಿತಿರೋ ನಮಗೆ ಅದು ದೇವರ ಶಕ್ತಿಯನ್ನ ತೋರಿಸುತ್ತೆ.+ 19 “ನಾನು ವಿವೇಕಿಗಳ ವಿವೇಕವನ್ನ ನಾಶಮಾಡ್ತೀನಿ, ಬುದ್ಧಿವಂತರ ಬುದ್ಧಿವಂತಿಕೆ ತಳ್ಳಿಹಾಕ್ತೀನಿ”+ ಅಂತ ಬರೆದಿದೆ ಅಲ್ವಾ. 20 ಈ ಲೋಕದಲ್ಲಿರೋ* ವಿವೇಕಿಗಳಿಗೆ, ಪಂಡಿತರಿಗೆ,* ವಾದ ಮಾಡುವವ್ರಿಗೆ ಏನಾಯ್ತು? ಈ ಲೋಕದ ವಿವೇಕ ಹುಚ್ಚುತನ ಅಂತ ದೇವರು ತೋರಿಸಿದ್ದಾನೆ ಅಲ್ವಾ. 21 ಈ ಲೋಕದ ಜನ್ರು ಅವ್ರ ವಿವೇಕದ+ ಮೇಲೆ ನಂಬಿಕೆ ಇಟ್ಟಿದ್ರಿಂದ ದೇವರನ್ನ ತಿಳ್ಕೊಳ್ಳಲಿಲ್ಲ.+ ನಾವು ಸಾರೋ ಸಂದೇಶವನ್ನ ಆ ಜನ್ರು ಅರ್ಥ ಇಲ್ಲದ ಮಾತು ಅಂತ ಹೇಳ್ತಾರೆ.+ ಆದ್ರೆ ಆ ಸಂದೇಶದಿಂದಾನೇ ದೇವರು ನಂಬುವಂಥ ಜನ್ರನ್ನ ರಕ್ಷಿಸೋಕೆ ಇಷ್ಟಪಟ್ಟನು. ಹೀಗೆ ದೇವರು ತನ್ನ ವಿವೇಕವನ್ನ ತೋರಿಸಿದನು.
22 ಯೆಹೂದ್ಯರು ಅದ್ಭುತಗಳನ್ನ+ ಕೇಳ್ತಾರೆ, ಗ್ರೀಕರು ವಿವೇಕವನ್ನ ಹುಡುಕ್ತಾರೆ. 23 ಆದ್ರೆ ನಾವು ಕ್ರಿಸ್ತನು ಮರದ ಕಂಬದ ಮೇಲೆ ಸತ್ತ ಅಂತ ಸಾರ್ತಿವಿ. ಇದು ಯೆಹೂದ್ಯರಿಗೆ ಜೀರ್ಣ ಮಾಡ್ಕೊಳ್ಳೋಕೆ ಆಗದ ವಿಷ್ಯ, ಬೇರೆ ಜನ್ರಿಗೆ ಇದು ಹುಚ್ಚುಮಾತು.+ 24 ಹಾಗಿದ್ರೂ ದೇವರು ಕರೆದಿರೋ ಯೆಹೂದ್ಯರಿಗೂ ಗ್ರೀಕರಿಗೂ ಕ್ರಿಸ್ತನೇ ದೇವರ ಅದ್ಭುತ ಮತ್ತು ವಿವೇಕ ಆಗಿದ್ದಾನೆ.+ 25 ದೇವರ ಯಾವ ಮಾತುಗಳನ್ನ ಜನ್ರು ಹುಚ್ಚುತನ ಅಂದ್ಕೊಳ್ತಾರೋ ಅದು ಮನುಷ್ಯರ ಬುದ್ಧಿಗಿಂತ ದೊಡ್ಡದು. ದೇವರ ಯಾವ ಮಾತುಗಳಿಗೆ ಜನ್ರು ಶಕ್ತಿ ಇಲ್ಲ ಅಂದ್ಕೊಳ್ತಾರೋ ಅದು ಮನುಷ್ಯರ ಶಕ್ತಿಗಿಂತ ದೊಡ್ಡದು.+
26 ಸಹೋದರರೇ, ದೇವರು ನಿಮ್ಮನ್ನ ಕರೆದಾಗ ನೀವು ಎಂಥವರಾಗಿದ್ರಿ ಅಂತ ಗೊತ್ತಲ್ವಾ? ನಿಮ್ಮಲ್ಲಿ ತುಂಬ ಜನ ಮನುಷ್ಯರ ದೃಷ್ಟಿಯಲ್ಲಿ ಬುದ್ಧಿ ಇಲ್ಲದೆ ಇರುವವರು,+ ಶಕ್ತಿ ಇಲ್ಲದವರು, ಬಡ* ಕುಟುಂಬದಲ್ಲಿ ಹುಟ್ಟಿದವರು ಆಗಿದ್ರಿ.+ 27 ದೇವರು ವಿವೇಕಿಗಳಿಗೆ ನಾಚಿಕೆ ಆಗೋ ತರ ಈ ಲೋಕದ ದೃಷ್ಟಿಯಲ್ಲಿ ಬುದ್ಧಿ ಇಲ್ಲದವ್ರನ್ನ ಆರಿಸ್ಕೊಂಡನು. ದೇವರು ಶಕ್ತಿಶಾಲಿಗಳಿಗೆ ನಾಚಿಕೆ ಆಗೋ ತರ ಈ ಲೋಕದ ದೃಷ್ಟಿಯಲ್ಲಿ ಶಕ್ತಿ ಇಲ್ಲದವ್ರನ್ನ ಆರಿಸ್ಕೊಂಡನು.+ 28 ಹೆಸ್ರು ಮಾಡಿದ ಜನ್ರಿಗೆ ನಾಚಿಕೆ ಆಗೋ ತರ ಮಾಡೋಕೆ ದೇವರು ಈ ಲೋಕದ ದೃಷ್ಟಿಯಲ್ಲಿ ಕೀಳಾದ, ಲೆಕ್ಕಕ್ಕೆ ಬಾರದ, ಏನೂ ಅಲ್ಲದ ಜನ್ರನ್ನ ಆರಿಸ್ಕೊಂಡನು.+ 29 ಯಾರಿಗೂ ತನ್ನ ಮುಂದೆ ಕೊಚ್ಕೊಳ್ಳೋಕೆ ಆಗಬಾರದು ಅಂತ ದೇವರು ಹೀಗೆ ಮಾಡಿದನು. 30 ನೀವು ಆತನಿಂದಾನೇ ಕ್ರಿಸ್ತ ಯೇಸು ಜೊತೆ ಒಂದಾಗಿದ್ದೀರ. ದೇವರ ವಿವೇಕ ಮತ್ತು ನೀತಿಯನ್ನ+ ಕ್ರಿಸ್ತ ನಮಗೆ ತೋರಿಸ್ಕೊಡ್ತಾನೆ. ಆತನಿಂದ ನಾವು ಪವಿತ್ರರಾಗೋಕೆ+ ಮತ್ತು ಆತನು ಕೊಟ್ಟ ಬಿಡುಗಡೆ ಬೆಲೆಯ ಮೂಲಕ ರಕ್ಷಣೆ ಪಡಿಯೋಕೆ ಆಗುತ್ತೆ.+ 31 ಹಾಗಾಗಿ ವಚನ ಹೇಳೋ ಹಾಗೆ “ಹೆಮ್ಮೆಪಡುವವನು ಯೆಹೋವನ* ಬಗ್ಗೆ ಹೆಮ್ಮೆಪಡ್ಲಿ.”+