ಯೋಹಾನನಿಗೆ ಕೊಟ್ಟ ಪ್ರಕಟನೆ
9 ಐದನೇ ದೇವದೂತ ತುತ್ತೂರಿ ಊದಿದ.+ ಆಗ ಆಕಾಶದಿಂದ ಭೂಮಿಗೆ ಒಂದು ನಕ್ಷತ್ರ ಬಿದ್ದಿದ್ದನ್ನ ನಾನು ನೋಡ್ದೆ. ಅಗಾಧ ಸ್ಥಳದ ಬೀಗದ ಕೈಯನ್ನ+ ದೇವರು ಆ ನಕ್ಷತ್ರಕ್ಕೆ ಕೊಟ್ಟಿದ್ದ. 2 ಆತನು ಅಗಾಧ ಸ್ಥಳವನ್ನ ತೆರೆದ. ಆಗ ದೊಡ್ಡ ಒಲೆಯಿಂದ ಹೊಗೆ ಬರೋ ತರ ಅದ್ರಿಂದ ಹೊಗೆ ಮೇಲೆ ಬಂತು. ಆ ಹೊಗೆಯಿಂದ ಸೂರ್ಯ ಮತ್ತು ಗಾಳಿ ಕಪ್ಪಾಯ್ತು.+ 3 ಆ ಹೊಗೆಯೊಳಗಿಂದ ಮಿಡತೆಗಳು ಬಂದ್ವು. ಅವು ಭೂಮಿಗೆ ಹೋದ್ವು.+ ದೇವರು ಭೂಮಿಯಲ್ಲಿದ್ದ ಚೇಳುಗಳಿಗೆ ಕೊಟ್ಟ ಅಧಿಕಾರವನ್ನೇ ಇವಕ್ಕೂ ಕೊಟ್ಟನು. 4 ದೇವರು ಆ ಮಿಡತೆಗಳಿಗೆ ಭೂಮಿ ಮೇಲಿರೋ ಹಸಿರು ಹುಲ್ಲು, ಗಿಡಗಳು, ಮರಗಳಿಗೆ ಏನೂ ಹಾನಿ ಮಾಡಬಾರದು. ಆದ್ರೆ ಯಾರ ಹಣೆ ಮೇಲೆ ದೇವರ ಮುದ್ರೆ ಇಲ್ವೋ ಅವ್ರಿಗೆ ಮಾತ್ರ ಹಾನಿ ಮಾಡು ಅಂತ ಹೇಳಿದನು.+
5 ಆ ಮಿಡತೆಗಳಿಗೆ ಐದು ತಿಂಗಳು ಮಾತ್ರ ಅವ್ರಿಗೆ ಹಿಂಸೆ ಕೊಡೋ ಅಧಿಕಾರ ಇತ್ತು. ಆ ಮಿಡತೆಗಳು ಕಚ್ಚಿದಾಗ ಚೇಳು ಕಚ್ಚಿದಷ್ಟು ನೋವಾಗ್ತಿತ್ತು.+ 6 ಆಗ ಜನ್ರಿಗೆ ಎಷ್ಟು ನೋವಾಗುತ್ತೆ ಅಂದ್ರೆ ಅವರು ಸಾಯಬೇಕು ಅಂದ್ಕೊಳ್ತಾರೆ. ಆದ್ರೆ ಸಾಯಲ್ಲ. ಅವರು ಸಾಯಬೇಕು ಅಂತ ಇಷ್ಟಪಟ್ರೂ ಸಾವು ಅವ್ರನ್ನ ನೋಡಿ ಓಡಿಹೋಗುತ್ತೆ.
7 ಆ ಮಿಡತೆಗಳು ನೋಡೋಕೆ ಯುದ್ಧಕ್ಕೆ ತಯಾರಾಗಿದ್ದ ಕುದುರೆಗಳ ತರ ಇದ್ವು.+ ಅವುಗಳ ತಲೆ ಮೇಲೆ ಬಂಗಾರದ ಕಿರೀಟ ತರ ಏನೋ ಇತ್ತು. ಅವುಗಳ ಮುಖ ನೋಡೋಕೆ ಗಂಡಸ್ರ ಮುಖದ ತರ ಇತ್ತು. 8 ಆದ್ರೆ ಅದಕ್ಕೆ ಹುಡುಗಿಯರ ತರ ಉದ್ದ ಕೂದಲಿತ್ತು. ಅದ್ರ ಹಲ್ಲು ಸಿಂಹದ ಹಲ್ಲಿನ ತರ ಇತ್ತು.+ 9 ಸೈನಿಕನಿಗೆ ಕಬ್ಬಿಣದ ಎದೆಕವಚ ಇರೋ ತರ ಅದಕ್ಕೂ ಎದೆಕವಚ ಇತ್ತು. ಆ ಮಿಡತೆಗಳು ರೆಕ್ಕೆ ಬಡಿದಾಗ ಯುದ್ಧಕ್ಕೆ ಹೋಗೋ ಯುದ್ಧ ರಥಗಳ ಶಬ್ದ ಬರ್ತಿತ್ತು.+ 10 ಅಷ್ಟೇ ಅಲ್ಲ ಆ ಮಿಡತೆಗಳಿಗೆ ಬಾಲ ಇತ್ತು. ಚೇಳಿನ ತರ ಆ ಬಾಲಗಳಿಗೆ ಕೊಂಡಿ ಇತ್ತು. ಐದು ತಿಂಗಳು ಜನ್ರಿಗೆ ಹಿಂಸೆ ಕೊಡೋ ಅಧಿಕಾರ ಆ ಬಾಲಕ್ಕಿತ್ತು.+ 11 ಆ ಮಿಡತೆಗಳಿಗೆ ಒಬ್ಬ ರಾಜ ಇದ್ದ. ಅವನು ಅಗಾಧ ಸ್ಥಳದ ದೇವದೂತ.+ ಅವನಿಗೆ ಹೀಬ್ರು ಭಾಷೆಯಲ್ಲಿ ಅಬ್ಯಾಡನ್* ಅನ್ನೋ ಹೆಸ್ರಿದ್ರೆ, ಗ್ರೀಕ್ ಭಾಷೆಯಲ್ಲಿ ಅಪಾಲ್ಯನ್* ಅನ್ನೋ ಹೆಸ್ರಿತ್ತು.
12 ಒಂದು ದೊಡ್ಡ ಕಷ್ಟ ಮುಗಿತು. ಆದ್ರೆ ಇನ್ನೆರಡು ದೊಡ್ಡ ಕಷ್ಟಗಳು+ ಬರ್ತಾ ಇದ್ವು.
13 ಆರನೇ ದೇವದೂತ+ ತುತ್ತೂರಿ ಊದಿದ.+ ಆಗ ದೇವರ ಮುಂದಿದ್ದ ಚಿನ್ನದ ಯಜ್ಞವೇದಿಯ+ ಕೊಂಬುಗಳಿಂದ ಒಂದು ಧ್ವನಿ ಕೇಳಿಸ್ತು. 14 ತುತ್ತೂರಿಯನ್ನ ಹಿಡಿದಿರೋ ಆರನೇ ದೇವದೂತನಿಗೆ ಆ ಧ್ವನಿ ಹೀಗೆ ಹೇಳ್ತು: “ಯೂಫ್ರೆಟಿಸ್ ಮಹಾ ನದಿ+ ಹತ್ರ ಕಟ್ಟಿಹಾಕಿರೋ ಆ ನಾಲ್ಕು ದೇವದೂತರನ್ನ ಬಿಟ್ಟುಬಿಡು.” 15 ಮೂರರಲ್ಲಿ ಒಂದು ಭಾಗದ ಮನುಷ್ಯರನ್ನ ಕೊಲ್ಲೋಕೆ ಆ ನಾಲ್ಕು ದೇವದೂತರನ್ನ ದೇವರೇ ಆ ಸಮಯಕ್ಕಾಗಿ, ಆ ದಿನಕ್ಕಾಗಿ, ಆ ತಿಂಗಳಿಗಾಗಿ, ಆ ವರ್ಷಕ್ಕಾಗಿ ಸಿದ್ಧ ಮಾಡಿದನು.
16 ಸೈನ್ಯದಲ್ಲಿದ್ದ ಕುದುರೆ ಸವಾರರ ಸಂಖ್ಯೆ ನನಗೆ ಕೇಳಿಸ್ತು. ಅವ್ರ ಸಂಖ್ಯೆ 20 ಕೋಟಿ ಆಗಿತ್ತು. 17 ದಿವ್ಯದರ್ಶನದಲ್ಲಿ ನಾನು ಆ ಕುದುರೆಗಳನ್ನ, ಅದ್ರ ಮೇಲೆ ಕೂತಿದ್ದ ಸವಾರರನ್ನ ನೋಡ್ದೆ. ಅವರು ಕೆಂಪು, ನೀಲಿ ಹಳದಿ ಬಣ್ಣದ ಎದೆಕವಚ ಹಾಕಿದ್ರು. ಆ ಕುದುರೆಯ ತಲೆ ಸಿಂಹದ ತಲೆ ತರ ಇತ್ತು.+ ಅದ್ರ ಬಾಯಿಂದ ಬೆಂಕಿ, ಹೊಗೆ, ಗಂಧಕ ಬರ್ತಾ ಇತ್ತು. 18 ಈ ಮೂರು ಕಷ್ಟಗಳಿಂದ ಅಂದ್ರೆ ಕುದುರೆ ಬಾಯಿಂದ ಬರ್ತಿದ್ದ ಬೆಂಕಿ, ಹೊಗೆ ಮತ್ತು ಗಂಧಕದಿಂದ ಮೂರನೇ ಒಂದು ಭಾಗದಷ್ಟು ಜನ ಸತ್ತುಹೋದ್ರು. 19 ಯಾಕಂದ್ರೆ ಆ ಕುದುರೆಗಳ ಶಕ್ತಿ ಅದ್ರ ಬಾಯಲ್ಲಿ ಮತ್ತು ಬಾಲದಲ್ಲಿ ಇತ್ತು. ಅದ್ರ ಬಾಲ ಹಾವಿನ ತರ ಇತ್ತು. ಅದ್ರ ತುದಿಯಲ್ಲಿ ಹಾವಿನ ತಲೆ ಇತ್ತು. ಅವು ಆ ಬಾಲದಿಂದ ಜನ್ರಿಗೆ ಹಾನಿ ಮಾಡ್ತಾ ಇದ್ವು.
20 ಆದ್ರೆ ಈ ಕಷ್ಟಗಳಿಂದ ಸಾಯದೇ ಇರೋ ಬೇರೆ ಜನ ತಮ್ಮ ತಪ್ಪುಗಳಿಗೆ ಪಶ್ಚಾತ್ತಾಪ ಪಡಲಿಲ್ಲ. ಅವರು ಕೆಟ್ಟ ದೇವದೂತರಿಗೆ, ಮೂರ್ತಿಗಳಿಗೆ ಆರಾಧನೆ ಮಾಡೋದನ್ನ ನಿಲ್ಲಿಸಲಿಲ್ಲ. ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರದಿಂದ ಮಾಡಿರೋ ಮೂರ್ತಿಗಳು ನೋಡಲ್ಲ, ಕೇಳಲ್ಲ, ನಡಿಯಲ್ಲ.+ 21 ಅಷ್ಟೇ ಅಲ್ಲ ಆ ಜನ್ರು ತಾವು ಮಾಡಿದ ಕೊಲೆ, ಮಾಟಮಂತ್ರ, ಲೈಂಗಿಕ ಅನೈತಿಕತೆ* ಮತ್ತು ಕಳ್ಳತನಕ್ಕಾಗಿ ಪಶ್ಚಾತ್ತಾಪ ಪಡಲಿಲ್ಲ.