ಮೀಕ
4 ಕೊನೇ ದಿನಗಳಲ್ಲಿ
ಯೆಹೋವನ ಆಲಯ ಇರೋ ಬೆಟ್ಟವನ್ನ+
ಎಲ್ಲ ಬೆಟ್ಟಗಳಿಗಿಂತ ಎತ್ತರದಲ್ಲಿ ದೃಢವಾಗಿ ಸ್ಥಾಪಿಸಲಾಗುತ್ತೆ,
ಅದನ್ನ ಎಲ್ಲ ಬೆಟ್ಟಗಳಿಗಿಂತ ಎತ್ತರಕ್ಕೆ ಏರಿಸಲಾಗುತ್ತೆ,
ಅಲ್ಲಿಗೆ ಜನ್ರು ಪ್ರವಾಹದ ತರ ಹರಿದು ಬರ್ತಾರೆ.+
2 ಅನೇಕ ದೇಶಗಳ ಜನ್ರು ಬಂದು
“ಬನ್ನಿ, ನಾವು ಯೆಹೋವನ ಬೆಟ್ಟಕ್ಕೆ ಹೋಗೋಣ,
ಯಾಕೋಬನ ದೇವರ ಆಲಯಕ್ಕೆ ಹೋಗೋಣ.+
ಆತನು ತನ್ನ ರೀತಿ-ನೀತಿಗಳ ಬಗ್ಗೆ ನಮಗೆ ಕಲಿಸ್ತಾನೆ,
ನಾವು ಆತನು ತೋರಿಸೋ ದಾರಿಗಳಲ್ಲಿ ನಡಿತೀವಿ” ಅಂತ ಹೇಳ್ತಾರೆ.
ಯಾಕಂದ್ರೆ ಚೀಯೋನಿಂದ ನಿಯಮನೂ* ಬರುತ್ತೆ,
ಯೆರೂಸಲೇಮಿಂದ ಯೆಹೋವನ ಮಾತುಗಳೂ ಬರುತ್ತೆ.
ಒಂದು ಜನಾಂಗ ಇನ್ನೊಂದು ಜನಾಂಗದ ವಿರುದ್ಧ ಕತ್ತಿ ಎತ್ತಲ್ಲ,
ಇನ್ಮುಂದೆ ಅವರು ಯುದ್ಧ ಮಾಡೋಕೆ ಕಲಿಯಲ್ಲ.+
4 ಅವ್ರಲ್ಲಿ ಪ್ರತಿಯೊಬ್ಬನು ತನ್ನ ದ್ರಾಕ್ಷಿಬಳ್ಳಿ ಕೆಳಗೆ, ಅಂಜೂರ ಮರದ ಕೆಳಗೆ ಕೂತ್ಕೊಳ್ತಾನೆ,*+
ಅವ್ರನ್ನ ಯಾರೂ ಹೆದರಿಸಲ್ಲ,+
ಸೈನ್ಯಗಳ ದೇವರಾದ ಯೆಹೋವನೇ ಇದನ್ನ ಹೇಳಿದ್ದಾನೆ.
5 ಎಲ್ಲ ಜನಾಂಗಗಳವರು ತಮ್ಮ ದೇವರ ಹೆಸ್ರಿಗೆ ತಕ್ಕ ಹಾಗೆ ಜೀವಿಸ್ತಾರೆ,
ಆದ್ರೆ ನಾವು ನಮ್ಮ ದೇವರಾದ ಯೆಹೋವನ ಹೆಸ್ರಿಗೆ ತಕ್ಕ ಹಾಗೆ ಯಾವಾಗ್ಲೂ ಜೀವಿಸ್ತೀವಿ.*+
6 ಯೆಹೋವ ಹೇಳೋದು ಏನಂದ್ರೆ,
“ಕುಂಟುತ್ತಿದ್ದ ಜನ್ರನ್ನ ನಾನು ಆ ದಿನದಲ್ಲಿ ಕೂಡಿಸ್ತೀನಿ,
ಚದರಿ ಹೋಗಿರುವವ್ರನ್ನ ಒಟ್ಟು ಸೇರಿಸ್ತೀನಿ,+
ಅಷ್ಟೇ ಅಲ್ಲ ನನ್ನಿಂದ ಶಿಕ್ಷೆ ಪಡ್ಕೊಂಡ ಜನ್ರನ್ನೂ ಒಟ್ಟುಗೂಡಿಸ್ತೀನಿ.
7 ಕುಂಟುತ್ತಿದ್ದ ಜನ್ರಲ್ಲಿ ಉಳಿದವ್ರನ್ನ ಕಾಪಾಡ್ತೀನಿ,+
ದೂರಕ್ಕೆ ಕಳಿಸಲಾದ ಜನ್ರನ್ನ ನಾನು ಒಂದು ಬಲಿಷ್ಠ ಜನಾಂಗವಾಗಿ ಮಾಡ್ತೀನಿ,+
ಯೆಹೋವ ಚೀಯೋನ್ ಬೆಟ್ಟದಿಂದ ಅವ್ರ ಮೇಲೆ ರಾಜನಾಗಿ ಆಳ್ತಾನೆ.
ಇವತ್ತಿಂದ ಶಾಶ್ವತಕ್ಕೂ ಆಳ್ತಾನೆ.
8 ಮಂದೆಯನ್ನ ಕಾಪಾಡೋ ಗೋಪುರವೇ,
ಚೀಯೋನ್ ಅನ್ನುವವಳ ಗುಡ್ಡವೇ,+
ಆರಂಭದಲ್ಲಿದ್ದ* ಆಳ್ವಿಕೆ ನಿನಗೆ ಸಿಗುತ್ತೆ,
ಹೌದು, ಅದು ನಿನಗೆ ಖಂಡಿತ ಸಿಗುತ್ತೆ.+
ಯೆರೂಸಲೇಮ್ ಪ್ರಜೆಗಳ ಮೇಲೆ ನೀನು ಮತ್ತೆ ರಾಜನಾಗ್ತೀಯ.+
9 ನೀನೀಗ ಅರಚಿಕೊಳ್ತಿರೋದು ಯಾಕೆ?
ನಿನಗೆ ರಾಜ ಇಲ್ವಾ?
ನಿನ್ನ ಸಲಹೆಗಾರ ನಾಶವಾದ್ನಾ?
ಅದಕ್ಕೆ ನಿನಗೆ ಹೆರಿಗೆ ನೋವಿನ ತರ ನೋವು ಬಂದಿದ್ಯಾ?+
10 ಚೀಯೋನ್ ಅನ್ನುವವಳೇ, ಗರ್ಭಿಣಿ ತರ
ನೋವಿಂದ ಒದ್ದಾಡು, ನರಳಾಡು.
ಯಾಕಂದ್ರೆ ಈಗ ನೀನು ಪಟ್ಟಣದಿಂದ ಹೋಗಿ ಬಯಲಲ್ಲಿ ವಾಸಿಸ್ತೀಯ.
ನೀನು ದೂರದ ಬಾಬೆಲಿಗೆ ಹೋಗ್ತೀಯ,+
ಅಲ್ಲಿ ನಿನ್ನನ್ನ ಕಾಪಾಡಲಾಗುತ್ತೆ,+
ಅಲ್ಲಿ ಯೆಹೋವ ನಿನ್ನನ್ನ ನಿನ್ನ ಶತ್ರುಗಳಿಂದ ಹಿಂದಕ್ಕೆ ಕೊಂಡುಕೊಳ್ತಾನೆ.+
11 ಅನೇಕ ಜನಾಂಗಗಳವರು ನಿನ್ನ ವಿರುದ್ಧ ಕೂಡಿಕೊಳ್ತಾರೆ,
‘ಚೀಯೋನ್ ಅಶುದ್ಧಳಾಗಲಿ,
ಅದನ್ನ ನಾವು ಕಣ್ಣಾರೆ ನೋಡೋಣ’ ಅಂತ ಹೇಳ್ತಾರೆ.
12 ಆದ್ರೆ ಯೆಹೋವನ ಆಲೋಚನೆ ಅವ್ರಿಗೆ ಗೊತ್ತಿಲ್ಲ,
ಆತನ ಉದ್ದೇಶ* ಅವ್ರಿಗೆ ಅರ್ಥವಾಗ್ತಿಲ್ಲ,
ಯಾಕಂದ್ರೆ ಆಗಷ್ಟೇ ಕೊಯ್ದ ತೆನೆಯ ಕಟ್ಟುಗಳನ್ನ ಕಣದಲ್ಲಿ ಕೂಡಿಸೋ ತರ ಆತನು ಅವ್ರನ್ನ ಕೂಡಿಸ್ತಾನೆ.