ಇಬ್ರಿಯರಿಗೆ ಬರೆದ ಪತ್ರ
7 ಈ ಮೆಲ್ಕಿಜೆದೇಕ ಸಾಲೇಮಿನ ರಾಜ, ಸರ್ವೋನ್ನತ ದೇವರ ಪುರೋಹಿತ. ರಾಜರನ್ನ ಪೂರ್ತಿ ಸೋಲಿಸಿ ವಾಪಸ್ ಬರ್ತಿದ್ದ ಅಬ್ರಹಾಮನನ್ನ ಅವನು ಭೇಟಿ ಮಾಡಿ ಆಶೀರ್ವಾದ ಮಾಡಿದ.+ 2 ಅಬ್ರಹಾಮ ತಂದಿದ್ದ ಎಲ್ಲದ್ರಲ್ಲಿ ಹತ್ತನೇ ಒಂದು ಭಾಗವನ್ನ ಅವನಿಗೆ ಕೊಟ್ಟ. ಮೆಲ್ಕಿಜೆದೇಕ ಅನ್ನೋ ಹೆಸ್ರಿನ ಅರ್ಥ “ನೀತಿಯ ರಾಜ.” ಅಷ್ಟೇ ಅಲ್ಲ ಅವನು ಸಾಲೇಮಿನ ರಾಜ ಅಂದ್ರೆ “ಶಾಂತಿಯ ರಾಜ.” 3 ಅವನ ಅಪ್ಪ ಅಮ್ಮ ಯಾರಂತ ಗೊತ್ತಿಲ್ಲ, ಅವನ ವಂಶಾವಳಿ ಬಗ್ಗೆ, ಅವನ ಹುಟ್ಟು ಸಾವಿನ ಬಗ್ಗೆ ಯಾವ ದಾಖಲೆನೂ ಇಲ್ಲ. ಈ ತರ ಅವನನ್ನ ದೇವರ ಮಗನಿಗೆ ಹೋಲಿಕೆಯಾಗಿ ಮಾಡಲಾಯ್ತು. ಅವನು ಯಾವಾಗ್ಲೂ ಪುರೋಹಿತನಾಗಿದ್ದಾನೆ.+
4 ಈ ಮೆಲ್ಕಿಜೆದೇಕ ಎಷ್ಟು ಶ್ರೇಷ್ಠ ವ್ಯಕ್ತಿ ಅಂತ ನೋಡಿ. ಕುಟುಂಬದ ಯಜಮಾನನಾದ* ಅಬ್ರಹಾಮ ಲೂಟಿ ಮಾಡಿ ತಂದ ಒಳ್ಳೊಳ್ಳೇ ವಸ್ತುಗಳಲ್ಲಿ ಹತ್ತನೇ ಒಂದು ಭಾಗವನ್ನ ಅವನಿಗೆ ಕೊಟ್ಟ.+ 5 ಲೇವಿ ವಂಶದಲ್ಲಿ+ ಪುರೋಹಿತರಾಗಿ ನೇಮಕ ಪಡೆದವರು ನಿಯಮ ಪುಸ್ತಕದಲ್ಲಿರೋ ಆಜ್ಞೆ ಪ್ರಕಾರ ಇಸ್ರಾಯೇಲ್ಯರಿಂದ ಅಂದ್ರೆ ತಮ್ಮ ಸಹೋದರರಿಂದ ಹತ್ತನೇ ಒಂದು ಭಾಗವನ್ನ ತಗೊಬೇಕಿತ್ತು ಅನ್ನೋದು ನಿಜ.+ ಅವರು ಅಬ್ರಹಾಮನ ವಂಶದವರಾಗಿದ್ರೂ ಹಾಗೆ ಮಾಡಬೇಕಿತ್ತು. 6 ಆದ್ರೆ ಮೆಲ್ಕಿಜೆದೇಕ ಲೇವಿಯ ವಂಶದವನಲ್ಲದೆ ಇದ್ರೂ ಹತ್ತನೇ ಒಂದು ಭಾಗವನ್ನ ಅಬ್ರಹಾಮನಿಂದ ತಗೊಂಡ ಅದ್ರಲ್ಲೂ ದೇವರು ಮಾತು ಕೊಟ್ಟಿದ್ದ ಅಬ್ರಹಾಮನಿಗೆ ಆಶೀರ್ವಾದ ಮಾಡ್ದ.+ 7 ದೊಡ್ಡವರು ಚಿಕ್ಕವ್ರನ್ನ ಆಶೀರ್ವದಿಸ್ತಾರೆ ಅನ್ನೋದನ್ನ ಎಲ್ರೂ ಒಪ್ತಾರೆ. 8 ಹತ್ತನೇ ಒಂದು ಭಾಗ ಪಡ್ಕೊಂಡ ಲೇವಿಯರು ಸಾಯುವಂಥ ಮನುಷ್ಯರಾಗಿದ್ರು. ಆದ್ರೆ ಹತ್ತನೇ ಒಂದು ಭಾಗ ಪಡ್ಕೊಂಡ ಇನ್ನೊಬ್ಬ ವ್ಯಕ್ತಿ ಬದುಕಿದ್ದಾನೆ. ಇದಕ್ಕೆ ಪವಿತ್ರ ಗ್ರಂಥ ಸಾಕ್ಷಿಕೊಡುತ್ತೆ.+ 9 ಒಂದರ್ಥದಲ್ಲಿ ಹತ್ತನೇ ಒಂದು ಭಾಗ ಪಡಿಯೋ ಲೇವಿ ಅಬ್ರಹಾಮನ ಮೂಲಕ ಮೆಲ್ಕಿಜೆದೇಕನಿಗೆ ಹತ್ತನೇ ಒಂದು ಭಾಗ ಕೊಟ್ಟ ಅಂತ ಹೇಳಬಹುದು. 10 ಯಾಕೆ ಹೀಗೆ ಹೇಳಬಹುದು ಅಂದ್ರೆ ಮೆಲ್ಕಿಜೆದೇಕ ಭೇಟಿ ಮಾಡಿದ ಅಬ್ರಹಾಮ ಲೇವಿಯ ಪೂರ್ವಜ. ಲೇವಿ ಅಬ್ರಹಾಮನ ವಂಶದಲ್ಲೇ ಮುಂದೆ ಹುಟ್ಟಲಿದ್ದ.+
11 ಇಸ್ರಾಯೇಲ್ಯರಿಗೆ ಕೊಟ್ಟ ನಿಯಮ ಪುಸ್ತಕದಲ್ಲಿ ಲೇವಿಯ ವಂಶದವರು ಪುರೋಹಿತರಾಗಿ ಸೇವೆ ಮಾಡೋದ್ರ ಬಗ್ಗೆನೂ ಇದೆ.+ ಆ ಪುರೋಹಿತರ ಸೇವೆಯಿಂದ ಒಬ್ಬನು ಪರಿಪೂರ್ಣನಾಗೋಕೆ ಆಗೋದಾದ್ರೆ ನಿಜವಾಗ್ಲೂ ಮೆಲ್ಕಿಜೆದೇಕನ ತರದ ಪುರೋಹಿತನ ಅಗತ್ಯ ಇತ್ತಾ?+ ಆರೋನನ ತರ ಇದ್ದ ಪುರೋಹಿತನೇ ಸಾಕಾಗಿತ್ತಲ್ವಾ? 12 ಪುರೋಹಿತ ಸ್ಥಾನ ಬದಲಾಗ್ತಿದೆ ಅಂದ್ಮೇಲೆ ನಿಯಮ ಪುಸ್ತಕನೂ ಬದಲಾಗ್ಲೇ ಬೇಕು.+ 13 ನಾವು ಯಾರ ಬಗ್ಗೆ ಮಾತಾಡ್ತಾ ಇದ್ದೀವೋ ಆ ವ್ಯಕ್ತಿ ಬೇರೆ ಕುಲದವನು. ಆ ಕುಲದಲ್ಲಿ ಯಾರನ್ನೂ ಯಜ್ಞವೇದಿ ಹತ್ರ ಸೇವೆ ಮಾಡೋಕೆ ಆರಿಸ್ಕೊಂಡಿಲ್ಲ.+ 14 ನಮ್ಮ ಪ್ರಭು ಯೆಹೂದ ಕುಲದಿಂದ ಬಂದ ಅನ್ನೋದು ಸ್ಪಷ್ಟ.+ ಆದ್ರೂ ಆ ಕುಲದಿಂದ ಪುರೋಹಿತರು ಬರ್ತಾರೆ ಅಂತ ಮೋಶೆ ಯಾವತ್ತೂ ಹೇಳಲಿಲ್ಲ.
15 ಇದ್ರಿಂದ ಮೆಲ್ಕಿಜೆದೇಕನ ಹಾಗೆ+ ಇನ್ನೊಬ್ಬ ಪುರೋಹಿತ+ ಬಂದಿದ್ದಾನೆ ಅನ್ನೋದು ಇನ್ನೂ ಹೆಚ್ಚು ಸ್ಪಷ್ಟವಾಗುತ್ತೆ. 16 ಅವನು ನಿಯಮ ಪುಸ್ತಕದ ಪ್ರಕಾರ ಯಾವ ಕುಲದಿಂದ ಬರಬೇಕಿತ್ತೋ ಆ ಕುಲದಿಂದ ಬಂದಿದ್ರಿಂದ ಪುರೋಹಿತ ಆಗಲಿಲ್ಲ, ನಾಶವಾಗದ ಜೀವ ಕೊಡೋ ಶಕ್ತಿ ಅವನಲ್ಲಿ ಇರೋದ್ರಿಂದಾನೇ ಪುರೋಹಿತನಾದ.+ 17 ಇದಕ್ಕೆ ಸಾಕ್ಷಿಯಾಗಿ ಒಂದು ವಚನದಲ್ಲಿ “ನೀನು ಮೆಲ್ಕಿಜೆದೇಕನ ತರ ಯಾವಾಗ್ಲೂ ಪುರೋಹಿತನಾಗಿ ಇರ್ತಿಯ” ಅಂತ ಇದೆ.+
18 ಮೊದಲಿದ್ದ ನಿಯಮಗಳನ್ನ ತೆಗೆದು ಹಾಕಲಾಯ್ತು. ಯಾಕಂದ್ರೆ ಅವುಗಳಿಗೆ ಶಕ್ತಿ ಇರಲಿಲ್ಲ, ಅವುಗಳಿಂದ ಏನೂ ಪ್ರಯೋಜನ ಇರಲಿಲ್ಲ.+ 19 ಯಾಕಂದ್ರೆ ಆ ನಿಯಮ ಪುಸ್ತಕ ಪಾಪವನ್ನ ಪೂರ್ತಿ ತೆಗೆದು ಹಾಕೋಕೆ ಇದ್ದಿದ್ದಲ್ಲ.+ ಆದ್ರೆ ದೇವರು ನಮಗೆ ಒಳ್ಳೇ ನಿರೀಕ್ಷೆ ಕೊಟ್ಟಿದ್ದಾನೆ.+ ಅದ್ರಿಂದ ನಾವು ಆತನಿಗೆ ಆಪ್ತರಾಗೋಕೆ ಆಗುತ್ತೆ.+ 20 ಅಷ್ಟೇ ಅಲ್ಲ ದೇವರು ಆಣೆ ಇಟ್ಟು ಹೇಳಿರೋದ್ರಿಂದ ಯೇಸು ಪುರೋಹಿತ ಆಗಿದ್ದಾನೆ. 21 ಪುರೋಹಿತರಾಗಿ ಸೇವೆ ಮಾಡಿದ ಬೇರೆಯವ್ರ ಬಗ್ಗೆ ದೇವರು ಏನೂ ಆಣೆ ಮಾಡಿ ಹೇಳಿರಲಿಲ್ಲ. ಆದ್ರೆ ಆತನ ಬಗ್ಗೆ “‘ನೀನು ಯಾವಾಗ್ಲೂ ಪುರೋಹಿತನಾಗಿ ಇರ್ತಿಯ’ ಅಂತ ಯೆಹೋವ* ಆಣೆ ಮಾಡಿದ್ದಾನೆ. ಆತನು ತನ್ನ ಮನಸ್ಸು ಬದಲಾಯಿಸಲ್ಲ.”*+ 22 ಹಾಗಾಗಿ ಯೇಸು ಒಂದು ಒಳ್ಳೇ ಒಪ್ಪಂದಕ್ಕೆ ಜಾಮೀನುದಾರನಾದ.+ 23 ಇನ್ನೊಂದು ವಿಷ್ಯ ಏನಂದ್ರೆ ಮರಣ ಇದ್ದಿದ್ರಿಂದ ಪುರೋಹಿತರು ತಮ್ಮ ಸೇವೆ ಮುಂದುವರಿಸ್ಕೊಂಡು ಹೋಗೋಕೆ ಆಗ್ತಿರಲಿಲ್ಲ. ಅದಕ್ಕೇ ಒಬ್ರಾದ ಮೇಲೆ ಒಬ್ರು ಅಂತ ತುಂಬ ಪುರೋಹಿತರು ಆಗಬೇಕಾಯ್ತು.+ 24 ಆದ್ರೆ ಆತನು ಯಾವಾಗ್ಲೂ ಜೀವಂತವಾಗಿ ಇರೋದ್ರಿಂದ+ ಆತನಾದ್ಮೇಲೆ ಬೇರೆಯವರು ಪುರೋಹಿತರಾಗಬೇಕಿಲ್ಲ. 25 ಹಾಗಾಗಿ ಆತನ ಮೂಲಕ ದೇವರಿಗೆ ಬೇಡುವವ್ರನ್ನ ಸಂಪೂರ್ಣವಾಗಿ ರಕ್ಷಿಸೋಕೆ ಆತನಿಗೆ ಸಾಮರ್ಥ್ಯ ಇದೆ. ಯಾಕಂದ್ರೆ ಅವ್ರಿಗಾಗಿ ದೇವರನ್ನ ಬೇಡೋಕೆ ಆತನು ಯಾವಾಗ್ಲೂ ಜೀವದಿಂದ ಇರ್ತಾನೆ.+
26 ನಮಗೆ ಬೇಕಾಗಿರೋದು ಇಂಥ ಒಬ್ಬ ಮಹಾ ಪುರೋಹಿತ. ಆತನು ನಿಷ್ಠಾವಂತ, ತಪ್ಪಿಲ್ಲದ, ಕಳಂಕ ಇಲ್ಲದ,+ ಪಾಪಿಗಳ ತರ ಇಲ್ಲದ, ಆಕಾಶಕ್ಕಿಂತ ಮೇಲಕ್ಕೆ ಏರಿಸಲಾದ ವ್ಯಕ್ತಿ.+ 27 ಬೇರೆ ಮಹಾ ಪುರೋಹಿತರ ಹಾಗೆ ಆತನು ಮೊದ್ಲು ತನ್ನ ಪಾಪಗಳಿಗಾಗಿ ಆಮೇಲೆ ಜನ್ರ ಪಾಪಗಳಿಗಾಗಿ ಬಲಿಗಳನ್ನ+ ಪ್ರತಿದಿನ ಕೊಡಬೇಕಾಗಿಲ್ಲ.+ ಯಾಕಂದ್ರೆ ಎಲ್ಲ ಕಾಲಕ್ಕೂ ಒಂದೇ ಸಲ ಆತನು ತನ್ನನ್ನೇ ಬಲಿಯಾಗಿ ಕೊಟ್ಟನು.+ 28 ನಿಯಮ ಪುಸ್ತಕದ ಪ್ರಕಾರ ಮಹಾ ಪುರೋಹಿತರಾದವರು ಪಾಪಿಗಳಾಗಿದ್ರು.+ ಆದ್ರೆ ನಿಯಮ ಪುಸ್ತಕ ಆದ್ಮೇಲೆ ದೇವರು ಆಣೆ ಮಾಡಿ+ ತನ್ನ ಮಗನನ್ನ ಮಹಾ ಪುರೋಹಿತನಾಗಿ ನೇಮಿಸ್ತೀನಿ ಅಂತ ಹೇಳಿದನು. ಆ ಮಗ ಯಾವಾಗ್ಲೂ ಸಂಪೂರ್ಣವಾಗಿ ಯೋಗ್ಯನಾಗಿದ್ದಾನೆ.*+