ಕೀರ್ತನೆ
ಸಬ್ಬತ್ ದಿನಕ್ಕಾಗಿ ಇರೋ ಮಧುರ ಗೀತೆ.
92 ಸರ್ವೋನ್ನತನೇ, ನಿನ್ನ ಹೆಸ್ರನ್ನ ಹಾಡಿ ಹೊಗಳೋದು* ಒಳ್ಳೇದು.
ಯೆಹೋವನಿಗೆ ಧನ್ಯವಾದ ಹೇಳೋದೂ ಒಳ್ಳೇದೇ.+
2 ಬೆಳಿಗ್ಗೆ ನಿನ್ನ ಶಾಶ್ವತ ಪ್ರೀತಿಯನ್ನ,+
ರಾತ್ರಿ ನಿನ್ನ ನಂಬಿಗಸ್ತಿಕೆಯನ್ನ ಹೇಳೋದು ಒಳ್ಳೇದು.
3 ಹತ್ತು ತಂತಿಗಳಿರೋ ತಂತಿವಾದ್ಯದ ಜೊತೆ,
ವೀಣೆಯ ಮಧುರ ಸಂಗೀತದ ಜೊತೆ ಸ್ತುತಿಸೋದು ಒಳ್ಳೇದು.+
4 ಯಾಕಂದ್ರೆ ಯೆಹೋವನೇ, ನಿನ್ನ ಕೆಲಸಗಳಿಂದ ನನ್ನನ್ನ ಖುಷಿಪಡಿಸಿದ್ದೀಯ,
ಆ ಕೆಲಸಗಳನ್ನ ನೋಡಿ ಸಂಭ್ರಮದಿಂದ ನಾನು ಜೈಕಾರ ಹಾಕ್ತೀನಿ.
5 ಯೆಹೋವನೇ, ನಿನ್ನ ಕೆಲಸಗಳು ಎಷ್ಟು ಶ್ರೇಷ್ಠ!+
ನಿನ್ನ ಯೋಚನೆಗಳು ಎಷ್ಟು ಆಳ!+
6 ವಿವೇಕ ಇಲ್ಲದವನು ಅವುಗಳನ್ನ ತಿಳ್ಕೊಳ್ಳೋಕೆ ಆಗಲ್ಲ,
ಯಾವ ಮೂರ್ಖನೂ ಈ ವಿಷ್ಯನ ಅರ್ಥಮಾಡ್ಕೊಳ್ಳೋಕೆ ಆಗಲ್ಲ.+
8 ಆದ್ರೆ ಯೆಹೋವನೇ, ನೀನು ಯಾವಾಗ್ಲೂ ಉನ್ನತ ಸ್ಥಾನದಲ್ಲಿ ಇರ್ತಿಯ.
9 ಯೆಹೋವನೇ, ನೀನು ನಿನ್ನ ಶತ್ರುಗಳ ಸೋಲನ್ನ ನೋಡು,
ಅವರು ಹೇಗೆ ನಾಶವಾಗಿ ಹೋಗ್ತಾರೆ ಅಂತ ನೋಡು,
ತಪ್ಪು ಮಾಡೋರೆಲ್ಲ ಚೆಲ್ಲಾಪಿಲ್ಲಿ ಆಗ್ತಾರೆ.+
10 ಆದ್ರೆ ನೀನು ನನಗೆ ಜಾಸ್ತಿ ಬಲ ಕೊಟ್ಟು ನನ್ನಲ್ಲಿ ಕಾಡುಕೋಣದ ಶಕ್ತಿಯನ್ನ ತುಂಬ್ತೀಯ,
ತಾಜಾ ಎಣ್ಣೆಯನ್ನ ತ್ವಚೆಗೆ ಹಚ್ಕೊಂಡು ಚೈತನ್ಯ ಪಡ್ಕೊತೀನಿ.+
11 ನನ್ನ ಶತ್ರುಗಳ ಸೋಲನ್ನ ನನ್ನ ಕಣ್ಣು ನೋಡುತ್ತೆ,+
ನನ್ನ ಮೇಲೆ ಆಕ್ರಮಣಮಾಡೋ ದುಷ್ಟಜನ್ರು ಬಿದ್ದುಹೋಗೋದನ್ನ ನನ್ನ ಕಿವಿ ಕೇಳಿಸ್ಕೊಳ್ಳುತ್ತೆ.
13 ಅವರು ಯೆಹೋವನ ಆಲಯದಲ್ಲಿ ಇದ್ದಾರೆ,
ನಮ್ಮ ದೇವರ ಅಂಗಳದಲ್ಲಿ ಅವರು ವೃದ್ಧಿಯಾಗ್ತಾರೆ.+
15 ಯೆಹೋವ ನೀತಿವಂತ ಅಂತ ಅವರು ಪ್ರಕಟಿಸ್ತಾರೆ.
ಆತನು ನನ್ನ ಬಂಡೆ,+ ಆತನಲ್ಲಿ ಅನೀತಿ ಅನ್ನೋದೇ ಇಲ್ಲ.