ಎರಡನೇ ಸಮುವೇಲ
22 ಯೆಹೋವ ದಾವೀದನನ್ನ ಅವನ ಎಲ್ಲ ಶತ್ರುಗಳ ಕೈಯಿಂದ,+ ಸೌಲನ ಕೈಯಿಂದ+ ಬಿಡಿಸಿದಾಗ ದಾವೀದ ಯೆಹೋವನಿಗಾಗಿ ಈ ಹಾಡನ್ನ ಹಾಡಿದ.+
2 “ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ,+ ಆತನೇ ನನ್ನ ರಕ್ಷಕ.+
3 ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,
ನನ್ನ ಗುರಾಣಿ,+ ನನ್ನ ರಕ್ಷಣೆಯ* ಕೊಂಬು,* ನನ್ನ ಸುರಕ್ಷಿತ ಸ್ಥಾನ* ಆತನೇ,+
ನಾನು ರಕ್ಷಣೆಗಾಗಿ ಓಡಿಹೋಗೋ ಜಾಗ ನೀನೇ,+ ನನ್ನ ರಕ್ಷಕ ನೀನೇ,+
ದೌರ್ಜನ್ಯವಾಗದ ಹಾಗೆ ನನ್ನನ್ನ ಕಾಪಾಡುವವನೂ ನೀನೇ.
4 ಸ್ತುತಿಗೆ ಯೋಗ್ಯನಾಗಿರೋ ಯೆಹೋವನನ್ನ ನಾನು ಕೂಗಿ ಕರಿತೀನಿ,
ಆತನು ಶತ್ರುಗಳಿಂದ ನನ್ನನ್ನ ಬಿಡಿಸ್ತಾನೆ.
7 ಕಷ್ಟದಲ್ಲಿರುವಾಗ ಯೆಹೋವನನ್ನ ಕರೆದೆ,+
ನನ್ನ ದೇವರನ್ನ ಕರಿತಾ ಇದ್ದೆ.
ಆಗ ಆತನು ನನ್ನ ಕೂಗನ್ನ ತನ್ನ ಆಲಯದಿಂದ ಕೇಳಿಸ್ಕೊಂಡನು,
ಸಹಾಯಕ್ಕಾಗಿ ನಾನು ಮಾಡಿದ ಪ್ರಾರ್ಥನೆ ಆತನ ಕಿವಿ ಮುಟ್ತು.+
11 ಆತನು ಕೆರೂಬಿಯ ಮೇಲೆ+ ಹತ್ತಿ ಹಾರುತ್ತಾ ಬಂದನು.
ದೇವದೂತನ* ರೆಕ್ಕೆಗಳ ಮೇಲೆ ಕಾಣಿಸ್ಕೊಂಡನು.+
12 ಆತನು ದಟ್ಟವಾದ ಕಪ್ಪು ಮೋಡಗಳಲ್ಲಿ,
ಕತ್ತಲನ್ನ ತನ್ನ ಸುತ್ತ ಡೇರೆ ತರ ಹಾಕೊಂಡನು.+
13 ಆತನ ಮುಂದಿದ್ದ ಉಜ್ವಲ ಬೆಳಕಿಂದ ಉರಿಯೋ ಕೆಂಡಗಳು ಬಂದವು.
15 ಆತನು ತನ್ನ ಬಾಣಗಳನ್ನ+ ಬಿಟ್ಟು ಶತ್ರುಗಳು ದಿಕ್ಕುಪಾಲಾಗೋ ಹಾಗೆ ಮಾಡಿದನು,
ಮಿಂಚಿಂದ ಅವರು ಗಲಿಬಿಲಿ ಆಗೋ ತರ ಮಾಡಿದನು.+
17 ಆತನು ಸ್ವರ್ಗದಿಂದ ಕೈಚಾಚಿ,
ನನ್ನನ್ನ ಹಿಡಿದು ಆಳವಾದ ನೀರಿಂದ ಮೇಲೆ ಎತ್ತಿದನು.+
18 ನನ್ನ ಬಲಿಷ್ಠ ಶತ್ರುವಿನಿಂದ ನನ್ನನ್ನ ಬಿಡಿಸಿ ಕಾಪಾಡಿದನು+
ದ್ವೇಷಿಸುವವರ ಕೈಯಿಂದ, ನನಗಿಂತ ಶಕ್ತಿಶಾಲಿಗಳ ಕೈಯಿಂದ ರಕ್ಷಿಸಿದನು.
19 ನನ್ನ ಕಷ್ಟದ ದಿನಗಳಲ್ಲಿ ಅವರು ನನಗೆ ತಿರುಗಿಬಿದ್ರು,+
ಆದ್ರೆ ಯೆಹೋವ ನನಗೆ ಬೆಂಬಲವಾಗಿ ನಿಂತನು.
22 ಯಾಕಂದ್ರೆ ಯೆಹೋವನ ದಾರಿಯಲ್ಲೇ ನಡಿತಿದ್ದೀನಿ,
ನನ್ನ ದೇವರನ್ನ ಬಿಟ್ಟು ನಾನು ಕೆಟ್ಟದು ಮಾಡಲಿಲ್ಲ.
29 ಯೆಹೋವನೇ, ನೀನೇ ನನ್ನ ದೀಪ.+
ಯೆಹೋವನೇ ನನ್ನ ಅಂಧಕಾರವನ್ನ ಬೆಳಗಿಸುವವನು.+
30 ನಿನ್ನ ಸಹಾಯದಿಂದ ಲೂಟಿಗಾರರ ಮೇಲೆ ದಾಳಿ ಮಾಡಬಲ್ಲೆ,
ದೇವರ ಬಲದಿಂದ ನಾನು ಗೋಡೆ ಜಿಗಿಬಲ್ಲೆ.+
ಆತನಲ್ಲಿ ಆಶ್ರಯಪಡೆಯೋ ಎಲ್ರಿಗೂ ಆತನು ಗುರಾಣಿ.+
32 ಯೆಹೋವನನ್ನ ಬಿಟ್ಟು ಬೇರೆ ದೇವರಿದ್ದಾನಾ?+
ನಮ್ಮ ದೇವರನ್ನ ಬಿಟ್ಟು ಬೇರೆ ಬಂಡೆ ಇದ್ಯಾ?+
34 ನನ್ನ ಕಾಲುಗಳನ್ನ ಜಿಂಕೆ ಕಾಲುಗಳ ತರ ಮಾಡ್ತಾನೆ,
ನನ್ನನ್ನ ಉನ್ನತ ಸ್ಥಳಗಳಲ್ಲಿ ನಿಲ್ಲಿಸ್ತಾನೆ.+
35 ಯುದ್ಧಕ್ಕಾಗಿ ನನ್ನ ಕೈಗಳಿಗೆ ತರಬೇತಿ ಕೊಡ್ತಾನೆ,
ಹಾಗಾಗಿ ನನ್ನ ಕೈಗಳು ತಾಮ್ರದ ಬಿಲ್ಲನ್ನೂ ಬಗ್ಗಿಸುತ್ತೆ.
38 ನನ್ನ ಶತ್ರುಗಳ ಹಿಂದೆ ಹೋಗಿ ಸರ್ವನಾಶ ಮಾಡ್ತೀಯ,
ಅವರು ನಾಶ ಆಗೋ ತನಕ ನಾನು ವಾಪಸ್ ಬರಲ್ಲ.
39 ಅವರು ಎದ್ದೇಳದ ಹಾಗೆ ಅಳಿಸಿಹಾಕ್ತೀನಿ, ತುಳಿದುಬಿಡ್ತಿನಿ.+
ಅವರು ನನ್ನ ಕಾಲ ಕೆಳಗೆ ಬೀಳ್ತಾರೆ.
42 ಅವರು ಸಹಾಯಕ್ಕಾಗಿ ಕೂಗ್ತಾರೆ ಆದ್ರೆ ಯಾರೂ ಬರಲ್ಲ,
ಯೆಹೋವನನ್ನ ಕೂಗಿದ್ರೂ ಆತನು ಉತ್ತರ ಕೊಡಲ್ಲ.+
43 ಅವರನ್ನ ಕುಟ್ಟಿ ಧೂಳಿನ ತರ ಮಾಡ್ತೀನಿ,
ತುಳಿದು, ಬೀದಿಯ ಮಣ್ಣಿನ ತರ ಪುಡಿಪುಡಿ ಮಾಡ್ತೀನಿ.
44 ತಪ್ಪು ಹುಡುಕೋ ಜನ್ರಿಂದ ನನ್ನನ್ನ ಕಾಪಾಡ್ತೀಯ,+
ನನ್ನನ್ನ ಕಾಪಾಡಿ ದೇಶದ ಮುಖ್ಯಸ್ಥ ಆಗೋ ಹಾಗೆ ಮಾಡ್ತೀಯ,+
ನನಗೆ ಪರಿಚಯನೇ ಇಲ್ಲದ ಜನ್ರು ನನ್ನ ಸೇವೆ ಮಾಡ್ತಾರೆ.+
45 ವಿದೇಶಿಯರು ನನ್ನ ಮುಂದೆ ಅಂಗಲಾಚ್ತಾರೆ,+
ನನ್ನ ಬಗ್ಗೆ ಕೇಳಿಸ್ಕೊಳ್ಳೋ ವಿಷ್ಯಗಳಿಂದ ನನಗೆ ಬೆಲೆ ಕೊಡ್ತಾರೆ.
46 ವಿದೇಶಿಯರು ಧೈರ್ಯ ಕಳ್ಕೊಳ್ತಾರೆ,
ತಮ್ಮ ಆಶ್ರಯ ಸ್ಥಳಗಳಿಂದ ನಡುಗ್ತಾ ಹೊರಗೆ ಬರ್ತಾರೆ.
47 ಯೆಹೋವ ಜೀವ ಇರೋ ದೇವರು! ನನ್ನ ಬಂಡೆಯಾಗಿರೋ ಆತನಿಗೆ ಹೊಗಳಿಕೆ ಸಿಗಲಿ!+
ನನ್ನ ರಕ್ಷಣೆಯ ಬಂಡೆಯಾಗಿರೋ ದೇವರಿಗೆ ಗೌರವ ಸಲ್ಲಲಿ.+
49 ಶತ್ರುಗಳಿಂದ ನನ್ನನ್ನ ಕಾಪಾಡ್ತಾನೆ.