ಕೀರ್ತನೆ
ನೆನಪಿನಲ್ಲಿಡೋಕೆ ದಾವೀದನ ಮಧುರ ಗೀತೆ.
38 ಯೆಹೋವನೇ ಕೋಪದಿಂದ ನನ್ನನ್ನ ತಿದ್ದಬೇಡ,
ಸಿಟ್ಟಿಂದ ನನ್ನನ್ನ ಸರಿಪಡಿಸಬೇಡ.+
2 ಯಾಕಂದ್ರೆ ನಿನ್ನ ಬಾಣ ನನ್ನೊಳಗೆ ಆಳವಾಗಿ ಹೋಗಿದೆ,
ನಿನ್ನ ಶಿಕ್ಷೆ ನನ್ನ ಮೇಲೆ ಭಾರವಾಗಿದೆ.+
4 ಯಾಕಂದ್ರೆ ನನ್ನ ತಪ್ಪುಗಳು ನನ್ನನ್ನ ಮುಳುಗಿಸಿಬಿಟ್ಟಿದೆ,+
ಅದು ಭಾರವಾದ ಹೊರೆ ತರ ಇದೆ, ನನ್ನಿಂದ ಹೊರಕ್ಕಾಗ್ತಿಲ್ಲ.
5 ನನ್ನ ದಡ್ಡತನದಿಂದ,
ನನ್ನ ಹುಣ್ಣುಗಳು ಕೀವುಗಟ್ಟಿ ಕೆಟ್ಟ ವಾಸನೆ ಬರ್ತಿದೆ.
6 ನಾನು ತುಂಬ ಸಂಕಟದಲ್ಲಿದ್ದೀನಿ, ತುಂಬ ಕುಗ್ಗಿಹೋಗಿದ್ದೀನಿ,
ಇಡೀ ದಿನ ದುಃಖದಲ್ಲಿ ಮುಳುಗಿ ಹೋಗಿರ್ತಿನಿ.
8 ನಾನು ಮರಗಟ್ಟಿ ಹೋಗಿದ್ದೀನಿ, ಸಂಪೂರ್ಣವಾಗಿ ನಲುಗಿಹೋಗಿದ್ದೀನಿ,
ನನ್ನ ಹೃದಯದ ಯಾತನೆ ಕಿರಿಚಾಡಿ ನರಳೋ ತರ ಮಾಡ್ತಿದೆ.
9 ಯೆಹೋವನೇ, ನನ್ನ ಬಯಕೆಗಳೆಲ್ಲ ನಿನ್ನ ಮುಂದಿದೆ,
ನನ್ನ ದುಃಖದ ನಿಟ್ಟುಸಿರು ನಿನಗೆ ಕಾಣ್ತಿದೆ.
10 ನನ್ನ ಹೃದಯ ಜೋರಾಗಿ ಬಡ್ಕೊಳ್ತಿದೆ, ನನಗೆ ಶಕ್ತಿನೇ ಇಲ್ಲದಾಗಿದೆ,
ನನ್ನ ಕಣ್ಣಿನ ದೃಷ್ಟಿ ಮೊಬ್ಬಾಗಿದೆ.+
11 ನನ್ನ ರೋಗದಿಂದಾಗಿ ನನ್ನ ಸ್ನೇಹಿತರು ನನ್ನ ದೂರ ಮಾಡಿ ಓಡಾಡ್ತಿದ್ದಾರೆ,
ನನ್ನ ಆಪ್ತಮಿತ್ರರು ನನ್ನಿಂದ ದೂರವಾಗಿದ್ದಾರೆ.
12 ನನ್ನ ಪ್ರಾಣ ತೆಗೀಬೇಕು ಅಂತಿರೋರು ಬಲೆ ಬೀಸಿದ್ದಾರೆ,
ನನಗೆ ಕೆಟ್ಟದ್ದನ್ನ ಮಾಡಬೇಕು ಅಂತಿರೋರು ನನ್ನ ವಿರುದ್ಧ ಮಾತಾಡಿದ್ದಾರೆ,+
ಅವರು ನನಗೆ ಮೋಸ ಮಾಡೋಕೆ ಇಡೀ ದಿನ ಕುತಂತ್ರ ಮಾಡ್ತಾರೆ.
14 ಏನೂ ಕೇಳದ ಕಿವುಡನ ತರ ಆಗಿದ್ದೀನಿ,
ನನ್ನ ಪರವಾಗಿ ಮಾತಾಡೋಕೆ ಆಗದ ಮೂಕನ ತರ ಆಗಿದ್ದೀನಿ.
16 ನಾನು ಹೀಗೆ ಹೇಳಿದ್ದೆ “ನನ್ನ ಕಾಲು ಜಾರಿದ್ರೆ,
ಅವರು ನನ್ನನ್ನ ನೋಡಿ ಖುಷಿಪಡಬಾರದು ಅಥವಾ ಕೊಚ್ಕೊಬಾರದು.”
17 ಯಾಕಂದ್ರೆ ನಾನು ಇನ್ನೇನು ಕುಸಿದು ಬೀಳ್ತಿದ್ದೆ,
ಯಾವಾಗ್ಲೂ ನೋವಿಂದ ನರಳ್ತಿದ್ದೆ.+
19 ಆದ್ರೆ ನನ್ನ ಶತ್ರುಗಳು ಚುರುಕಾಗಿದ್ದಾರೆ,* ಬಲಿಷ್ಠರಾಗಿದ್ದಾರೆ,
ಯಾವ ಕಾರಣನೂ ಇಲ್ಲದೆ ನನ್ನನ್ನ ದ್ವೇಷಿಸೋ ಜನ ಜಾಸ್ತಿ ಆಗಿದ್ದಾರೆ.
20 ಅವರು ಉಪಕಾರಕ್ಕೆ ಅಪಕಾರ ಮಾಡಿದ್ದಾರೆ,
ಒಳ್ಳೇದನ್ನ ಮಾಡದ ಹಾಗೆ ನನ್ನನ್ನ ತಡೆದಿದ್ದಾರೆ.
21 ಯೆಹೋವನೇ, ನನ್ನನ್ನ ಬಿಟ್ಟುಬಿಡಬೇಡ.
ದೇವರೇ, ನನ್ನಿಂದ ದೂರ ಉಳೀಬೇಡ.+
22 ಯೆಹೋವನೇ, ನನ್ನ ರಕ್ಷಕನೇ,+
ಬೇಗ ಬಂದು ನನಗೆ ಸಹಾಯಮಾಡು.