ತೀತನಿಗೆ ಬರೆದ ಪತ್ರ
2 ಆದ್ರೆ ನೀನು ಯಾವಾಗ್ಲೂ ಒಳ್ಳೇ* ಬೋಧನೆ ಪ್ರಕಾರ ಕಲಿಸ್ತಾ ಇರು.+ 2 ವಯಸ್ಸಾದ ಗಂಡಸ್ರಿಗೆ ಎಲ್ಲ ವಿಷ್ಯಗಳಲ್ಲಿ ಇತಿಮಿತಿ ಇರಬೇಕು. ಜವಾಬ್ದಾರಿಯಿಂದ ನಡ್ಕೊಬೇಕು. ತಿಳುವಳಿಕೆ, ದೃಢ ನಂಬಿಕೆ, ಅಪ್ಪಟ ಪ್ರೀತಿ ಅವ್ರಲ್ಲಿ ಇರಬೇಕು. ಕಷ್ಟಗಳನ್ನ ತಾಳ್ಕೊಬೇಕು. 3 ವಯಸ್ಸಾದ ಸ್ತ್ರೀಯರೂ ಭಯಭಕ್ತಿಯಿಂದ ನಡ್ಕೊಬೇಕು, ಸುಳ್ಳು ಹಬ್ಬಿಸಿ ಬೇರೆಯವ್ರ ಹೆಸ್ರು ಹಾಳು ಮಾಡಬಾರದು, ದ್ರಾಕ್ಷಾಮದ್ಯದ ಚಟ ಇರಬಾರದು, ಒಳ್ಳೇದನ್ನ ಕಲಿಸಬೇಕು. 4 ಆಗ ಅವರು ಯುವತಿಯರಿಗೆ ಗಂಡ ಮತ್ತು ಮಕ್ಕಳನ್ನ ಪ್ರೀತಿಸಬೇಕು, 5 ತಿಳುವಳಿಕೆಯಿಂದ ನಡಿಬೇಕು, ನೈತಿಕವಾಗಿ ಶುದ್ಧವಾಗಿ ಇರಬೇಕು, ಮನೆ ಕೆಲಸಗಳನ್ನ ಮಾಡಬೇಕು,* ಗಂಡನ ಮಾತು ಕೇಳಬೇಕು,+ ಒಳ್ಳೆಯವರಾಗಿ ಇರಬೇಕು ಅಂತ ಬುದ್ಧಿ ಹೇಳೋಕೆ* ಆಗುತ್ತೆ. ಹಾಗೆ ಮಾಡಿದ್ರೆ ದೇವರ ಸಂದೇಶಕ್ಕೆ ಕೆಟ್ಟ ಹೆಸ್ರು ಬರಲ್ಲ.
6 ಅದೇ ತರ ಯುವಕರಿಗೂ ತಿಳುವಳಿಕೆಯಿಂದ ನಡ್ಕೊಳ್ಳೋಕೆ ಪ್ರೋತ್ಸಾಹಿಸ್ತಾ ಇರು.+ 7 ಎಲ್ಲ ವಿಧದಲ್ಲೂ ಒಳ್ಳೇದನ್ನ ಮಾಡ್ತಾ ಮಾದರಿಯಾಗಿರು. ಶ್ರದ್ಧೆಯಿಂದ ಸತ್ಯವನ್ನ* ಕಲಿಸು.+ 8 ಹಾಗೆ ಕಲಿಸುವಾಗ ಯಾರೂ ಟೀಕಿಸದ ಹಾಗೆ ಒಳ್ಳೇ* ಮಾತುಗಳನ್ನ ಹೇಳು.+ ಆಗ ವಿರೋಧಿಗಳಿಗೆ ನಮ್ಮ ಬಗ್ಗೆ ಕೆಟ್ಟದಾಗಿ ಮಾತಾಡೋಕೆ ಅವಕಾಶ ಸಿಗದೆ ಅವ್ರಿಗೇ ಅವಮಾನ ಆಗುತ್ತೆ.+ 9 ಆಳುಗಳು ತಮ್ಮ ಯಜಮಾನರಿಗೆ ಎಲ್ಲ ವಿಷ್ಯದಲ್ಲೂ ಅಧೀನರಾಗಿರಬೇಕು,+ ಅವ್ರನ್ನ ಮೆಚ್ಚಿಸೋಕೆ ಪ್ರಯತ್ನಿಸಬೇಕು, ಎದುರು ಮಾತಾಡಬಾರದು, 10 ಯಜಮಾನರಿಗೆ ಸೇರಿದ್ದನ್ನ ಕದಿಬಾರದು,+ ಯಾವಾಗ್ಲೂ ನಂಬಿಗಸ್ತರು ಅಂತ ತೋರಿಸಬೇಕು. ಆಗ ನಮ್ಮ ರಕ್ಷಕನಾದ ದೇವರ ಬೋಧನೆಯ ಅಂದವನ್ನ ಎಲ್ಲ ರೀತಿಯಲ್ಲೂ ಹೆಚ್ಚಿಸೋಕೆ ಆಗುತ್ತೆ.+
11 ಎಲ್ಲ ತರದ ಜನ್ರಿಗೆ ರಕ್ಷಣೆ ತರೋ ಮೂಲಕ ದೇವರು ತನ್ನ ಅಪಾರ ಕೃಪೆ ತೋರಿಸಿದ್ದಾನೆ.+ 12 ಆ ಕೃಪೆ ದೇವರಿಗೆ ಇಷ್ಟ ಇಲ್ಲದ ನಡತೆಯನ್ನ ಲೋಕದ ಆಸೆಗಳನ್ನ ಬಿಟ್ಟುಬಿಡೋಕೆ ನಮಗೆ ತರಬೇತಿ ಕೊಡುತ್ತೆ.+ ಈ ಲೋಕದ* ಜನ್ರ ಮಧ್ಯ ತಿಳುವಳಿಕೆ, ನೀತಿ, ದೇವಭಕ್ತಿಯಿಂದ ಜೀವಿಸೋಕೆ ಕಲಿಸುತ್ತೆ.+ 13 ನಾವು ಆ ರೀತಿ ಜೀವಿಸಬೇಕು, ಯಾಕಂದ್ರೆ ಅದ್ಭುತ ನಿರೀಕ್ಷೆ ನಿಜ ಆಗೋದಕ್ಕೆ,+ ನಮ್ಮ ಮಹಾನ್ ದೇವರು ಮತ್ತು ನಮ್ಮ ರಕ್ಷಕ ಯೇಸು ಕ್ರಿಸ್ತ ಮಹಿಮೆಯಿಂದ ಕಾಣಿಸ್ಕೊಳ್ಳೋ ದಿನಕ್ಕೆ ನಾವು ಕಾಯ್ತಾ ಇದ್ದೀವಿ. 14 ಕ್ರಿಸ್ತ ನಮಗಾಗಿ ತನ್ನ ಜೀವವನ್ನೇ ಕೊಟ್ಟನು.+ ಹೀಗೆ ನಮ್ಮನ್ನ ಎಲ್ಲ ತರದ ಕೆಟ್ಟತನದಿಂದ ಬಿಡಿಸಿದನು.*+ ನಾವು ಆತನಿಗೆ ಸೇರಿದ ವಿಶೇಷ ಸೊತ್ತಾಗೋಕೆ ಮತ್ತು ಒಳ್ಳೇ ಕೆಲಸಗಳನ್ನ ಹುರುಪಿಂದ ಮಾಡೋ ಜನ್ರಾಗೋಕೆ ನಮ್ಮನ್ನ ಶುದ್ಧಮಾಡಿದನು.+
15 ನಿನಗೆ ಅಧಿಕಾರ ಇರೋದ್ರಿಂದ ಈ ವಿಷ್ಯಗಳನ್ನ ಬೇರೆಯವ್ರಿಗೆ ಕಲಿಸ್ತಾ, ಬುದ್ಧಿ ಹೇಳ್ತಾ,* ತಿದ್ದುತ್ತಾ ಇರು.+ ಯಾರೂ ನಿನ್ನ ಕಡೆ ಬೆರಳು ತೋರಿಸದ ಹಾಗೆ ನಡ್ಕೊ.