ತೀತನಿಗೆ ಬರೆದ ಪತ್ರ
3 ಸಹೋದರರು ಸರ್ಕಾರಗಳ, ಅಧಿಕಾರಿಗಳ ಮಾತು ಕೇಳಬೇಕು,+ ಒಳ್ಳೇ ಕೆಲಸಗಳನ್ನ ಮಾಡೋಕೆ ತಯಾರಾಗಿ ಇರಬೇಕು, 2 ಯಾರ ಬಗ್ಗೆನೂ ತಪ್ಪಾಗಿ ಮಾತಾಡಬಾರದು, ಜಗಳಗಂಟರಾಗಿ ಇರಬಾರದು, ‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ಇರಬಾರದು,*+ ಎಲ್ರ ಜೊತೆ ಯಾವಾಗ್ಲೂ ಸೌಮ್ಯವಾಗಿ ನಡ್ಕೊಬೇಕು+ ಅಂತ ನೀನು ಯಾವಾಗ್ಲೂ ಅವ್ರಿಗೆ ನೆನಪಿಸು. 3 ಯಾಕಂದ್ರೆ ಒಂದು ಕಾಲದಲ್ಲಿ ನಾವೂ ಬುದ್ಧಿ ಇಲ್ಲದವರು, ಮಾತು ಕೇಳದವರು, ಮೋಸ ಹೋದವರು, ಬೇರೆ ಬೇರೆ ಆಸೆ ಸುಖಕ್ಕೆ ಗುಲಾಮರು ಆಗಿದ್ವಿ. ಕೆಟ್ಟದು ಮಾಡ್ತಾ, ಹೊಟ್ಟೆಕಿಚ್ಚು ಪಡ್ತಾ ಇದ್ವಿ, ತುಂಬ ಕೆಟ್ಟವ್ರಾಗಿದ್ವಿ, ಒಬ್ರನ್ನೊಬ್ರು ದ್ವೇಷಿಸ್ತಾ ಇದ್ವಿ.
4 ಆದ್ರೂ ನಮ್ಮ ರಕ್ಷಕ ದೇವರು ಮನುಷ್ಯರಿಗೆ ದಯೆ ತೋರಿಸಿ+ ನಮ್ಮ ಮೇಲೆ ಎಷ್ಟು ಪ್ರೀತಿಯಿದೆ ಅಂತ ತೋರಿಸಿದನು. 5 ದೇವರು ನಮ್ಮನ್ನ ರಕ್ಷಿಸಿದ್ದು ಆತನು ಕರುಣಾಮಯಿ ಆಗಿರೋದ್ರಿಂದ+ ಬಿಟ್ರೆ ನಾವೇನೋ ದೊಡ್ಡ ಕೆಲಸಗಳನ್ನ ಮಾಡಿದ್ದೀವಿ ಅಂತಲ್ಲ.+ ಆತನು ನಮ್ಮನ್ನ ಶುದ್ಧ ಮಾಡಿ, ಪವಿತ್ರಶಕ್ತಿಯ ಮೂಲಕ+ ನಮ್ಮನ್ನ ಹೊಸದಾಗಿ ಮಾಡಿ ನಮ್ಮನ್ನ ರಕ್ಷಿಸಿದನು.+ ಹಾಗೆ ಶುದ್ಧ ಮಾಡಿದ್ರಿಂದ ನಾವು ಇವತ್ತು ಜೀವಂತ ಇದ್ದೀವಿ. 6 ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕ ಆತನು ಆ ಪವಿತ್ರಶಕ್ತಿಯನ್ನ ನಮ್ಮ ಮೇಲೆ ಧಾರಾಳವಾಗಿ ಸುರಿದನು.+ 7 ಹೀಗೆ ಆತನು ತನ್ನ ಅಪಾರ ಕೃಪೆಯಿಂದ ನಾವು ನೀತಿವಂತರು ಅಂತ ತೀರ್ಪಾಗಿ+ ಶಾಶ್ವತ ಜೀವ+ ಅನ್ನೋ ನಿರೀಕ್ಷೆಯನ್ನ ಆಸ್ತಿಯಾಗಿ+ ಪಡ್ಕೊಳ್ಳೋಕೆ ಆಯ್ತು.
8 ಇದೆಲ್ಲ ನಂಬುವಂಥ ಮಾತು, ನೀನು ಇದನ್ನ ಯಾವಾಗ್ಲೂ ಒತ್ತಿ ಹೇಳಬೇಕಂತ ಇಷ್ಟಪಡ್ತೀನಿ. ಆಗ ದೇವರನ್ನ ನಂಬಿದವರು ಒಳ್ಳೇ ಕೆಲಸಕ್ಕೆ ಯಾವಾಗ್ಲೂ ಪೂರ್ತಿ ಗಮನಕೊಡೋಕೆ ಆಗುತ್ತೆ. ಈ ಮಾತುಗಳಿಂದ ಜನ್ರಿಗೆ ಒಳ್ಳೇದಾಗುತ್ತೆ, ತುಂಬ ಪ್ರಯೋಜನ ಆಗುತ್ತೆ.
9 ಹುಚ್ಚು ವಾದ-ವಿವಾದ, ವಂಶಾವಳಿ ಬಗ್ಗೆ ಚರ್ಚೆ, ನಿಯಮ ಪುಸ್ತಕದ ಬಗ್ಗೆ ಜಗಳ ಇದೆಲ್ಲದ್ರಿಂದ ನೀನು ದೂರ ಇರು. ಯಾಕಂದ್ರೆ ಅದ್ರಿಂದ ಏನೂ ಪ್ರಯೋಜನ ಇಲ್ಲ, ಸುಮ್ನೆ ವ್ಯರ್ಥ.+ 10 ಸುಳ್ಳು ಬೋಧನೆ ಹಬ್ಬಿಸುವವನಿಗೆ+ ಒಂದು ಸಲ, ಎರಡು ಸಲ ಬುದ್ಧಿ ಹೇಳು.*+ ಕೇಳದಿದ್ರೆ ಅವನ ಸಹವಾಸ ಮಾಡಬೇಡ.+ 11 ಯಾಕಂದ್ರೆ ಅವನು ಒಳ್ಳೇ ದಾರಿ ಬಿಟ್ಟು ಹೋಗಿದ್ದಾನೆ, ಪಾಪ ಮಾಡ್ತಿದ್ದಾನೆ. ಅವನು ಮಾಡಿದ ಕೆಲಸಕ್ಕಾಗಿ ಈಗಾಗ್ಲೇ ತೀರ್ಪಾಗಿದೆ ಅಂತ ನಿನಗೆ ಗೊತ್ತಿದೆ ತಾನೇ.
12 ಚಳಿಗಾಲದಲ್ಲಿ ನಾನು ನಿಕೊಪೊಲಿಯಲ್ಲಿ ಇರಬೇಕು ಅಂದ್ಕೊಂಡಿದ್ದೀನಿ. ಹಾಗಾಗಿ ಅರ್ತೆಮ ಅಥವಾ ತುಖಿಕನನ್ನ+ ನಾನು ನಿನ್ನ ಹತ್ರ ಕಳಿಸಿದಾಗ ನೀನು ಅಲ್ಲಿಗೆ ಆದಷ್ಟು ಬೇಗ ಬಾ. 13 ನಿಯಮ ಪುಸ್ತಕದಲ್ಲಿ ಪ್ರವೀಣನಾದ ಜೇನನಿಗೆ ಮತ್ತು ಅಪೊಲ್ಲೋಸನಿಗೆ ಬೇಕಾದದ್ದನ್ನೆಲ್ಲ ನೋಡಿ ಕೊಡು. ಯಾಕಂದ್ರೆ ಪ್ರಯಾಣದಲ್ಲಿ ಅವ್ರಿಗೆ ಏನು ಕಮ್ಮಿ ಆಗಬಾರದು.+ 14 ನಮ್ಮ ಜನ್ರೂ ಯಾವಾಗ್ಲೂ ಒಳ್ಳೇ ಕೆಲಸ ಮಾಡೋದನ್ನ ಕಲೀಲಿ. ಆಗ ಕಷ್ಟ ಬಂದಾಗ ಸಹಾಯ ಮಾಡೋಕೆ ಅವ್ರಿಗೆ ಆಗುತ್ತೆ.+ ಅವರು ಸೋಮಾರಿಗಳಾಗಿ ಇರಲ್ಲ.+
15 ನನ್ನ ಜೊತೆ ಇರುವವ್ರೆಲ್ಲ ನಿನಗೆ ವಂದನೆ ಹೇಳಿದ್ದಾರೆ. ನಮ್ಮನ್ನ ಪ್ರೀತಿಸೋ ವಿಶ್ವಾಸಿಗಳಿಗೆ ನನ್ನ ವಂದನೆ ಹೇಳು.
ದೇವರು ನಿಮ್ಮೆಲ್ಲರಿಗೂ ಅಪಾರ ಕೃಪೆ ತೋರಿಸ್ಲಿ.