ಕೀರ್ತನೆ
ನಾಲ್ಕನೇ ಪುಸ್ತಕ
(ಕೀರ್ತನೆ 90-106)
ಸತ್ಯದೇವರ ಸೇವಕ ಮೋಶೆಯ+ ಪ್ರಾರ್ಥನೆ.
90 ಯೆಹೋವನೇ, ತಲತಲಾಂತರಗಳಿಂದ ನೀನೇ ನಮ್ಮ ವಾಸಸ್ಥಾನ.*+
2 ಬೆಟ್ಟಗಳು ಹುಟ್ಟೋಕೂ ಮುಂಚಿನಿಂದ
ಭೂಮಿ ಮತ್ತು ಅದ್ರ ಫಲವತ್ತಾದ ನೆಲವನ್ನ ನೀನು ಅಸ್ತಿತ್ವಕ್ಕೆ ತರೋದಕ್ಕಿಂತ* ಮುಂಚಿನಿಂದ ನೀನೇ ದೇವರು.+
ಹೌದು, ಯಾವಾಗ್ಲೂ ನೀನೇ ದೇವರಾಗಿದ್ದೆ, ಯಾವತ್ತೂ* ನೀನೇ ದೇವರಾಗಿ ಇರ್ತಿಯ.+
3 ಮನುಷ್ಯರು ಮತ್ತೆ ಮಣ್ಣಿಗೆ ಸೇರೋ ತರ ನೀನು ಮಾಡ್ತೀಯ.
“ಮನುಷ್ಯರೇ, ಮಣ್ಣಿಗೆ ವಾಪಸ್ ಹೋಗಿ” ಅಂತ ಹೇಳ್ತೀಯ.+
ಮುಂಜಾನೆ ಚಿಗುರೊಡೆಯೋ ಹುಲ್ಲಿನ ತರ ಇದ್ದಾರೆ.+
6 ಅದು ಬೆಳಿಗ್ಗೆ ಹುಟ್ಟಿ, ಹೊಸದಾಗಿ ಚಿಗುರುತ್ತೆ.
ಆದ್ರೆ ಸಂಜೆ ಅಷ್ಟು ಹೊತ್ತಿಗೆ ಒಣಗಿ ಬಾಡಿಹೋಗುತ್ತೆ.+
8 ನೀನು ನಮ್ಮ ತಪ್ಪುಗಳನ್ನ ನಿನ್ನ ಮುಂದೆನೇ ಇಟ್ಕೊಂಡಿದ್ದೀಯ,*+
ನಾವು ರಹಸ್ಯವಾಗಿ ಮಾಡಿರೋ ಪಾಪಗಳು ನಿನ್ನ ಮುಖದ ಕಾಂತಿಯಿಂದ ಬಯಲಾಗಿವೆ.+
ಆದ್ರೆ ಆ ವರ್ಷಗಳೂ ಕಷ್ಟ, ಕಣ್ಣೀರಿಂದಾನೇ ತುಂಬಿರುತ್ತೆ.
ಆ ವರ್ಷಗಳು ಬೇಗ ಕಳೆದುಹೋಗುತ್ತೆ ಮತ್ತು ನಾವು ಹಾರಿ ಹೋಗ್ತೀವಿ.+
11 ನಿನ್ನ ಕೋಪ ಎಷ್ಟಿದೆ ಅಂತ ಯಾರಿಂದ ಅಳೆಯೋಕಾಗುತ್ತೆ?
ನಿನ್ನ ಕ್ರೋಧವನ್ನ ಯಾರಿಂದ ಅರ್ಥಮಾಡಿಕೊಳ್ಳೋಕೆ ಆಗುತ್ತೆ? ನಿನ್ನ ಮೇಲಿನ ಭಯಕ್ಕಿಂತ ಅದು ದೊಡ್ಡದು.+
13 ಯೆಹೋವ, ಬಾ!+ ಇನ್ನು ಎಷ್ಟು ಹೊತ್ತು ಕಾಯಿಸ್ತೀಯ?+
ನಿನ್ನ ಸೇವಕರ ಮೇಲೆ ಕನಿಕರ ತೋರಿಸು.+
14 ಮುಂಜಾನೆನೇ ನಿನ್ನ ಶಾಶ್ವತ ಪ್ರೀತಿಯಿಂದ+ ನಮ್ಮನ್ನ ತೃಪ್ತಿಪಡಿಸು,
ಆಗ ನಾವು ಸಂತೋಷದಿಂದ ಜೈಕಾರ ಹಾಕ್ತೀವಿ ಮತ್ತು ನಾವು ಸಾಯೋ ತನಕ ಖುಷಿಖುಷಿಯಾಗಿ ಇರ್ತಿವಿ.+
15 ನೀನು ಎಷ್ಟು ದಿನ ನಮಗೆ ದುಃಖ ಕೊಟ್ಟಿದ್ದೀಯೋ, ಅಷ್ಟು ದಿನ ನಮಗೆ ಸಂತೋಷವನ್ನೂ ಕೊಡು,+
ನಾವು ಎಷ್ಟು ವರ್ಷ ಕಷ್ಟ ಪಟ್ಟಿದ್ದೀವೋ, ಅಷ್ಟು ವರ್ಷ ಖುಷಿಪಡೋ ತರ ಮಾಡು.+
16 ನಿನ್ನ ಸೇವಕರು ನೀನು ಮಾಡೋದನ್ನ ನೋಡ್ಲಿ.
ಅವರ ವಂಶದವರು ನಿನ್ನ ವೈಭವವನ್ನ ಕಾಣಲಿ.+
17 ನಮ್ಮ ದೇವರಾದ ಯೆಹೋವನ ಕೃಪೆ ನಮ್ಮ ಮೇಲಿರಲಿ,
ನಾವು ಕೈಹಾಕಿದ ಕೆಲಸಗಳೆಲ್ಲ ಚೆನ್ನಾಗಿ ಆಗಲಿ.
ಆ ಕೆಲಸಗಳೆಲ್ಲ ಅಭಿವೃದ್ಧಿ ಆಗಲಿ.+