ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಮಧುರ ಗೀತೆ.
2 ಪ್ರಾರ್ಥನೆ ಕೇಳುವವನೇ, ಎಲ್ಲ ರೀತಿಯ ಜನ್ರು* ನಿನ್ನ ಹತ್ರ ಬರ್ತಾರೆ.+
ನಿನ್ನ ಆಲಯದಲ್ಲಿರೋ, ನಿನ್ನ ಪವಿತ್ರ ಮಂದಿರದಲ್ಲಿರೋ*+ ಒಳ್ಳೇತನದಿಂದ
ನಾವು ತೃಪ್ತರಾಗ್ತೀವಿ.+
5 ನಮ್ಮ ರಕ್ಷಕನಾಗಿರೋ ದೇವರೇ,
ಆಶ್ಚರ್ಯ ಹುಟ್ಟಿಸೋ ನಿನ್ನ ನೀತಿಯ ಕೆಲಸಗಳಿಂದ ನೀನು ನಮಗೆ ಉತ್ರ ಕೊಡ್ತೀಯ,+
ಭೂಮಿಯ ಮೂಲೆಮೂಲೆಯಲ್ಲಿ ಇರೋರಿಗೂ ನೀನೇ ಭರವಸೆ,+
ಸಮುದ್ರದಾಚೆ ದೂರದೂರದಲ್ಲಿ ಇರೋರಿಗೂ ನೀನೇ ಭರವಸೆ.
6 ನೀನು ನಿನ್ನ ಶಕ್ತಿಯಿಂದ ಬೆಟ್ಟಗಳನ್ನ ದೃಢವಾಗಿ ಸ್ಥಾಪಿಸಿದ್ದೀಯ,
ನೀನು ಬಲವನ್ನ ಬಟ್ಟೆ ತರ ಹಾಕ್ಕೊಂಡಿದ್ದೀಯ.+
8 ದೂರದಲ್ಲಿ ಇರೋರು ನಿನ್ನ ಕೆಲಸಗಳನ್ನ* ನೋಡಿದಾಗ ಅವ್ರಿಗೆ ಮಾತೇ ಬರಲ್ಲ,+
ಪೂರ್ವದಿಂದ ಪಶ್ಚಿಮದ ತನಕ ಇರೋ ಜನ್ರೆಲ್ಲ ಸಂತೋಷದಿಂದ ಜೈಕಾರ ಹಾಕೋ ಹಾಗೆ ನೀನು ಮಾಡ್ತೀಯ.
9 ನೀನು ಭೂಮಿಯ ಆರೈಕೆ ಮಾಡ್ತೀಯ,
ಅದು ಸಮೃದ್ಧವಾಗಿ ಬೆಳೆ ಕೊಡೋ ಹಾಗೆ ಮಾಡ್ತೀಯ,+
ನದಿಯಲ್ಲಿ ನೀರು ತುಂಬಿ ತುಳುಕೋ ಹಾಗೆ ಮಾಡ್ತೀಯ,
ನೀನು ಜನ್ರಿಗೆ ಆಹಾರ ಕೊಡ್ತೀಯ,+
ಅದಕ್ಕೇ ಭೂಮಿನ ಸಿದ್ಧಮಾಡಿದ್ದೀಯ.
10 ನೀನು ಅದ್ರ ನೇಗಿಲಸಾಲನ್ನ ತೋಯಿಸ್ತೀಯ, ಅದ್ರ ಮಣ್ಣಿನ ಗಡ್ಡೆಗಳನ್ನ* ಸಮಮಾಡ್ತೀಯ,
ನೀನು ಮಳೆ ಹನಿಗಳಿಂದ ಮಣ್ಣನ್ನ ಮೃದುಮಾಡಿ, ಅದ್ರ ಬೆಳೆಯನ್ನ ಆಶೀರ್ವಾದ ಮಾಡ್ತೀಯ.+
11 ನೀನು ಇಡೀ ವರ್ಷಕ್ಕೆ ನಿನ್ನ ಒಳ್ಳೇತನದ ಕಿರೀಟ ತೊಡಿಸ್ತೀಯ,
ನೀನು ನಡೆಯೋ ದಾರಿ ಒಳ್ಳೇತನದಿಂದ ತುಂಬಿ ತುಳುಕುತ್ತೆ.+
13 ಹುಲ್ಲುಗಾವಲು ಕುರಿಗಳಿಂದ ತುಂಬಿಹೋಗಿದೆ,
ಒಳ್ಳೇ ತೆನೆ ಕಣಿವೆಯಲ್ಲೆಲ್ಲ ರತ್ನದ ಕಂಬಳಿ ತರ ಹಾಸಿಕೊಂಡಿದೆ.+
ಅವು ಜೈಕಾರ ಹಾಕ್ತಾ ಹಾಡ್ತವೆ.+