ಯೆಶಾಯ
14 ಯೆಹೋವ ಯಾಕೋಬನಿಗೆ ಕರುಣೆ ತೋರಿಸ್ತಾನೆ.+ ಇಸ್ರಾಯೇಲನನ್ನ ಮತ್ತೊಂದು ಸಲ ಆರಿಸ್ಕೊಳ್ತಾನೆ.+ ಅವ್ರನ್ನ ಅವ್ರ ದೇಶದಲ್ಲಿ ವಾಸಿಸೋ ತರ ಮಾಡ್ತಾನೆ.*+ ವಿದೇಶಿಯರು ಅವ್ರ ಜೊತೆ ಸೇರ್ಕೊಂಡು ಯಾಕೋಬನ ಮನೆತನದವರ ಜೊತೆ ಒಂದಾಗ್ತಾರೆ.+ 2 ವಿದೇಶಿಯರು ಇಸ್ರಾಯೇಲ್ಯರನ್ನ ಅವ್ರ ಸ್ವಂತ ದೇಶಕ್ಕೆ ಕರ್ಕೊಂಡು ಹೋಗ್ತಾರೆ. ಯೆಹೋವನ ದೇಶದಲ್ಲಿ ಇಸ್ರಾಯೇಲ್ ಮನೆತನ ಆ ವಿದೇಶಿಯರನ್ನ ದಾಸ ದಾಸಿಯರನ್ನಾಗಿ ಮಾಡ್ಕೊಳ್ಳುತ್ತೆ.+ ತಮ್ಮನ್ನ ಬಂದಿಗಳನ್ನಾಗಿ ಮಾಡ್ಕೊಂಡಿದ್ದವರನ್ನ ಇಸ್ರಾಯೇಲ್ಯರು ಬಂದಿವಾಸಿಗಳನ್ನಾಗಿ ಮಾಡ್ಕೊಳ್ತಾರೆ. ತಮ್ಮ ಮೇಲೆ ದಬ್ಬಾಳಿಕೆ ಮಾಡಿ ಕೆಲಸ ಮಾಡಿಸ್ಕೊಳ್ಳುತ್ತಿದ್ದವರ* ಮೇಲೆ ಅಧಿಕಾರ ನಡೆಸ್ತಾರೆ.
3 ಯಾವ ದಿನ ಯೆಹೋವ ನಿನ್ನ ದುಃಖ-ಸಂಕಟವನ್ನ ಮತ್ತು ನಿನ್ನ ಕಳವಳವನ್ನ ದೂರಮಾಡ್ತಾನೋ, ನಿನ್ನನ್ನ ಕಠಿಣ ಗುಲಾಮಗಿರಿಯಿಂದ ಬಿಡಿಸ್ತಾನೋ ಆ ದಿನ ನೀನು+ 4 ಬಾಬೆಲಿನ ರಾಜನ ಬಗ್ಗೆ ಅಪಹಾಸ್ಯ ಮಾಡ್ತಾ ಹೀಗೆ ಹೇಳ್ತೀಯ*
“ದಬ್ಬಾಳಿಕೆ ಹೇಗೆ ಅಂತ್ಯ ಆಯ್ತು ಅಂತ ನೋಡಿ!
ಒತ್ತಾಯ ಮಾಡಿ ಬೇರೆಯವ್ರಿಂದ ಕೆಲಸ ಮಾಡಿಸ್ತಿದ್ದವನು* ಹೇಗೆ ನಾಶವಾದ ಅಂತ ನೋಡಿ!+
5 ಯೆಹೋವ ಕೆಟ್ಟವನ ಕೋಲನ್ನ,
ಅಧಿಕಾರಿಗಳ ಕೋಲನ್ನ ಮುರಿದು ಹಾಕಿದನು,+
6 ಅವರು ತುಂಬ ಕೋಪದಿಂದ ಜನಾಂಗಗಳ ಜನ್ರನ್ನ ಹೊಡಿತಾ ಇದ್ರು,+
ಕೋಪದಿಂದ ಕಠೋರವಾಗಿ ಹಿಂಸಿಸಿ ಜನಾಂಗಗಳನ್ನ ವಶಮಾಡ್ಕೊಳ್ತಾ ಬಂದ್ರು,+
7 ಈಗ ಇಡೀ ಭೂಮಿ ಗಲಭೆಯಿಲ್ಲದೆ ನೆಮ್ಮದಿಯಿಂದ ಇದೆ,
ಜನ ಹರ್ಷಧ್ವನಿ ಎತ್ತಿದ್ದಾರೆ.+
8 ನಿನಗೆ ಬಂದ ಗತಿ ನೋಡಿ ಜುನಿಪರ್ ಮರಗಳು ಲೆಬನೋನಿನ ದೇವದಾರು ಮರಗಳ ಜೊತೆ ಹರ್ಷಿಸಿದ್ವು.
ಅವು ಹೀಗೆ ಹೇಳ್ತವೆ ‘ನಿನ್ನನ್ನ ಬೀಳಿಸಿದ್ದು ಒಳ್ಳೇದೇ ಆಯ್ತು,
ಅವತ್ತಿಂದ ಮರ ಕಡಿಯುವವರಲ್ಲಿ ಯಾರೂ ನಮ್ಮ ಹತ್ರ ಬರ್ತಿಲ್ಲ.’
ನಿನ್ನಿಂದಾಗಿ ಅದು ಮರಣನಿದ್ರೆಯಲ್ಲಿ ಇರುವವರನ್ನ,
ದಬ್ಬಾಳಿಕೆ ಮಾಡ್ತಿದ್ದ ಭೂಮಿಯ ಎಲ್ಲ ಅಧಿಕಾರಿಗಳನ್ನ* ಎಬ್ಬಿಸುತ್ತೆ.
ಎಲ್ಲ ಜನಾಂಗಗಳ ರಾಜರನ್ನ ಅವರವ್ರ ಸಿಂಹಾಸನದಿಂದ ಏಳಿಸುತ್ತೆ.
10 ಅವ್ರೆಲ್ಲ ನಿನಗೆ ಹೀಗೆ ಹೇಳ್ತಾರೆ
‘ನೀನು ನಮ್ಮ ತರ ಆಗಿಬಿಟ್ಯಾ?
ನೀನು ನಮ್ಮ ತರ ಬಲಹೀನನಾದ್ಯಾ?
12 ಹೊಳೆಯೋ ನಕ್ಷತ್ರವೇ, ಸೂರ್ಯೋದಯದ ಪುತ್ರನೇ,
ನೀನು ಆಕಾಶದಿಂದ ಹೇಗೆ ಕೆಳಗೆ ಬಿದ್ದೆ?
ಜನಾಂಗಗಳನ್ನ ಸೋಲಿಸಿದವನೇ,
ನೀನು ಹೇಗೆ ಮುರಿದು ಕೆಳಗೆ ಬಿದ್ದೆ?+
13 ನೀನು ನಿನ್ನ ಹೃದಯದಲ್ಲಿ ಹೀಗೆ ಅಂದ್ಕೊಂಡಿದ್ದೆ ‘ನಾನು ಆಕಾಶಕ್ಕೆ ಏರಿ ಹೋಗ್ತೀನಿ.+
ನಾನು ನನ್ನ ಸಿಂಹಾಸನವನ್ನ ದೇವರ ನಕ್ಷತ್ರಗಳಿಗಿಂತ ಎತ್ತರಕ್ಕೆ ಏರಿಸ್ತೀನಿ,+
ನಾನು ಉತ್ತರದ ತುಂಬ ದೂರದ ಸ್ಥಳದಲ್ಲಿ,
ಸಭೆ ಸೇರೋ ಬೆಟ್ಟದ ಮೇಲೆ ಕೂತ್ಕೊಳ್ತೀನಿ.+
14 ನಾನು ಮೋಡಗಳಿಗಿಂತ ಮೇಲಕ್ಕೆ ಏರಿಹೋಗ್ತೀನಿ,
ನಾನು ನನ್ನನ್ನೇ ಸರ್ವೋನ್ನತನ ಹಾಗೆ ಮಾಡ್ಕೊಳ್ತೀನಿ.’
16 ನಿನ್ನನ್ನ ನೋಡುವವರೆಲ್ಲ ದಿಟ್ಟಿಸಿ ನೋಡ್ತಾರೆ,
ಅವರು ನಿನ್ನನ್ನ ಚೆನ್ನಾಗಿ ಗಮನಿಸ್ತಾ ಹೀಗೆ ಹೇಳ್ತಾರೆ
‘ಭೂಮಿಯನ್ನ ಅಲ್ಲಾಡಿಸಿದವನು,
ಸಾಮ್ರಾಜ್ಯಗಳನ್ನ ನಡುಗಿಸಿದವನು ಇವನಾ?+
17 ಫಲವತ್ತಾದ ಭೂಮಿಯನ್ನ ಬರಡು ಭೂಮಿಯಾಗಿ* ಮಾಡಿದವನು
ಅದ್ರ ಪಟ್ಟಣಗಳನ್ನ ಕೆಡವಿಬಿಟ್ಟವನು,+
ಜೈಲಲ್ಲಿ ಇದ್ದವರನ್ನ ಮನೆಗೆ ಕಳಿಸೋಕೆ ಒಪ್ಪದಿದ್ದವನು ಇವನಾ?’+
19 ಆದ್ರೆ ನಿನ್ನನ್ನ ಮಾತ್ರ ಸಮಾಧಿ ಮಾಡಲಿಲ್ಲ,
ಅಸಹ್ಯವಾಗಿರೋ ಮೊಳಕೆ ತರ ನಿನ್ನನ್ನ ಎಸೆಯಲಾಯ್ತು,
ಕತ್ತಿಯಿಂದ ಹತಿಸಲಾದ ಗುಂಡಿಯಲ್ಲಿ ಕಲ್ಲುಗಳ ಮಧ್ಯೆ ಬಿದ್ದಿರೋ
ಶವಗಳ ರಾಶಿಯ ಕೆಳಗೆ ನಿನ್ನ ಶವವನ್ನ ಹಾಕಿ ಮುಚ್ಚಿಹಾಕಲಾಯ್ತು,
ನೀನು ಕಾಲ್ತುಳಿತಕ್ಕೆ ಒಳಗಾದ ಶವದ ತರ ಆಗಿದ್ದೀಯ.
20 ನಿನ್ನನ್ನು ರಾಜರ ಜೊತೆ ಸಮಾಧಿ ಮಾಡಲ್ಲ,
ಯಾಕಂದ್ರೆ ನೀನು ನಿನ್ನ ಸ್ವಂತ ದೇಶವನ್ನ ನಾಶಮಾಡಿದೆ,
ನೀನು ನಿನ್ನ ಸ್ವಂತ ಜನ್ರನ್ನ ಕೊಂದುಹಾಕಿದೆ.
ಕೆಡುಕರ ಮಕ್ಕಳ ಹೆಸ್ರನ್ನ ಜನ ಇನ್ನು ಯಾವತ್ತೂ ಎತ್ತಲ್ಲ.
21 ಅವನ ಮಕ್ಕಳನ್ನ ಕೊಂದುಹಾಕೋಕೆ ಒಂದು ಸ್ಥಳ ಸಿದ್ಧಪಡಿಸಿ,
ಯಾಕಂದ್ರೆ ಅವರ ಪೂರ್ವಜರು ಪಾಪ ಮಾಡಿ ಅಪರಾಧಿಗಳಾಗಿದ್ದಾರೆ.
ಹಾಗಾಗಿ ಅವ್ರಿಗೆ ಭೂಮಿಯನ್ನ ವಶಮಾಡ್ಕೊಳ್ಳೋಕೆ ಆಗಲ್ಲ,
ದೇಶವನ್ನ ತಮ್ಮ ಪಟ್ಟಣಗಳಿಂದ ತುಂಬಿಸೋಕೆ ಆಗಲ್ಲ.”
22 ಸೈನ್ಯಗಳ ದೇವರಾದ ಯೆಹೋವ “ನಾನು ಅವ್ರ ವಿರುದ್ಧ ಎದ್ದೇಳ್ತೀನಿ”+ ಅಂತ ಘೋಷಿಸ್ತಾನೆ.
ಯೆಹೋವ ಹೀಗೆ ಹೇಳ್ತಾನೆ “ನಾನು ಬಾಬೆಲಿನ ಹೆಸ್ರನ್ನ ಅಳಿಸಿ ಹಾಕ್ತೀನಿ. ಅಲ್ಲಿ ಬದುಕುಳಿದವರನ್ನ, ಅದ್ರ ಸಂತತಿಯನ್ನ ಮತ್ತು ಅದ್ರ ಮುಂದಿನ ತಲೆಮಾರನ್ನ ಹೇಳಹೆಸ್ರಿಲ್ಲದ ಹಾಗೆ ಮಾಡ್ತೀನಿ.”+
23 ಸೈನ್ಯಗಳ ದೇವರಾದ ಯೆಹೋವ ಹೀಗೆ ಘೋಷಿಸ್ತಾನೆ “ನಾನು ಅದನ್ನ ಮುಳ್ಳುಹಂದಿಗಳ ಸೊತ್ತಾಗಿ ಮಾಡ್ತೀನಿ. ಅದ್ರ ಪ್ರದೇಶವನ್ನೆಲ್ಲಾ ಬರಡು ಭೂಮಿಯನ್ನಾಗಿ ಮಾಡ್ತೀನಿ. ಸರ್ವನಾಶ ಅನ್ನೋ ಪೊರಕೆಯಿಂದ ಅದನ್ನ ಗುಡಿಸಿಬಿಡ್ತೀನಿ.”+
24 ಸೈನ್ಯಗಳ ದೇವರಾದ ಯೆಹೋವ ಹೀಗೆ ಪ್ರಮಾಣಮಾಡಿದ್ದಾನೆ
“ನಾನು ಅಂದ್ಕೊಂಡಿರೋದು ತಪ್ಪದೇ ನಿಜ ಆಗುತ್ತೆ,
ನಾನು ನಿರ್ಧರಿಸಿರೋದು ನಿಜವಾಗುತ್ತೆ.
ಅದ್ರ ನೊಗವನ್ನ ನನ್ನ ಜನ್ರ ಮೇಲಿಂದ ತೆಗೆಯಲಾಗುತ್ತೆ,
ಅದ್ರ ಭಾರವನ್ನ ಅವ್ರ ಭುಜಗಳ ಮೇಲಿಂದ ಇಳಿಸಲಾಗುತ್ತೆ.”+
26 ಇಡೀ ಭೂಮಿಯ ವಿರುದ್ಧವಾಗಿ ತಗೊಂಡಿರೋ ನಿರ್ಧಾರ ಇದೇ,
ಎಲ್ಲಾ ಜನಾಂಗಗಳನ್ನ ಶಿಕ್ಷಿಸೋಕೆ ಎತ್ತಿರೋ ಕೈ ಇದೇ.
ಆತನು ಎತ್ತಿರೋ ಕೈಯನ್ನ,
ಯಾರು ಹಿಂದಕ್ಕೆ ತಳ್ಳೋಕಾಗುತ್ತೆ?+
28 ರಾಜ ಆಹಾಜ ತೀರಿಹೋದ+ ವರ್ಷದಲ್ಲಿ ಈ ಸಂದೇಶನ ಕೊಡಲಾಯ್ತು
29 “ಫಿಲಿಷ್ಟಿಯರೇ, ಹೊಡೆಯುವವನ ಕೋಲು ಮುರಿದು ಹೋಯಿತು ಅಂತ ನಿಮ್ಮಲ್ಲಿ ಯಾರೂ ಖುಷಿಪಡಬೇಡಿ.
30 ದೀನ ಜನ್ರ ಮೊದಲ ಮಕ್ಕಳು ಹೊಟ್ಟೆತುಂಬ ಊಟಮಾಡ್ತಾರೆ,
ಬಡವರು ನಿಶ್ಚಿಂತೆಯಿಂದ ನಿದ್ದೆ ಮಾಡ್ತಾರೆ.
ಆದ್ರೆ ನಿನ್ನ ಜನ ಬರಗಾಲದಿಂದ ಸಾಯೋ ತರ ಮಾಡ್ತೀನಿ,
ನಿನ್ನಲ್ಲಿ ಮಿಕ್ಕವರನ್ನ ಕೊಂದುಹಾಕ್ತೀನಿ.+
31 ಪಟ್ಟಣವೇ, ಗಟ್ಟಿಯಾಗಿ ಅಳು! ಬಾಗಿಲೇ, ಗೋಳಾಡು!
ಫಿಲಿಷ್ಟಿಯದ ಜನ್ರೇ, ನೀವು ಧೈರ್ಯ ಕಳ್ಕೊಳ್ತೀರ!
ಯಾಕಂದ್ರೆ ಉತ್ತರದಿಂದ ಒಂದು ಹೊಗೆ ಬರ್ತಿದೆ,
ಶತ್ರು ಸೈನ್ಯದಲ್ಲಿ ಒಬ್ಬ ಸೈನಿಕನೂ ಹಿಂದೆ ಉಳಿದಿಲ್ಲ.”
32 ಅವರು ಜನಾಂಗಗಳ ಸಂದೇಶವಾಹಕರಿಗೆ ಏನಂತ ಉತ್ರ ಕೊಡ್ತಾರೆ?
ಯೆಹೋವ ಚೀಯೋನಿಗೆ ಅಡಿಪಾಯ ಹಾಕಿದ ಅಂತ ಉತ್ರ ಕೊಡ್ತಾರೆ,+
ಆತನ ಪ್ರಜೆಗಳಲ್ಲಿರೋ ದೀನರು ಅಲ್ಲಿ ಆಶ್ರಯ ಪಡ್ಕೊಳ್ತಾರೆ ಅಂತ ಹೇಳ್ತಾರೆ.