ಯೆಶಾಯ
52 ಚೀಯೋನೇ+ ಎದ್ದೇಳು! ಎದ್ದು ಶಕ್ತಿಯನ್ನ ತೊಟ್ಕೊ!+
ಯೆರೂಸಲೇಮೇ, ಪವಿತ್ರ ಪಟ್ಟಣವೇ, ನಿನ್ನ ಸುಂದರವಾದ ಬಟ್ಟೆಗಳನ್ನ ಧರಿಸ್ಕೊ!+
ಯಾಕಂದ್ರೆ ಇನ್ನು ಮುಂದೆ ಸುನ್ನತಿ ಆಗದೇ ಇರುವವರು ಮತ್ತು ಅಶುದ್ಧರು ನಿನ್ನನ್ನ ಪ್ರವೇಶಿಸಲ್ಲ.+
2 ಯೆರೂಸಲೇಮೇ, ಎದ್ದು ಧೂಳನ್ನ ಒದರಿ ಸಿಂಹಾಸನದ ಮೇಲೆ ಕೂತ್ಕೂ.
ಚೀಯೋನ್ ಪಟ್ಟಣವೇ, ನಿನ್ನ ಕುತ್ತಿಗೆಗೆ ಹಾಕಿರೋ ಬೇಡಿಗಳನ್ನ ತೆಗೆದುಹಾಕು.+
4 ವಿಶ್ವದ ರಾಜನಾದ ಯೆಹೋವ ಹೀಗೆ ಹೇಳ್ತಿದ್ದಾನೆ
“ಮೊದಲು ನನ್ನ ಜನ್ರು ವಿದೇಶಿಯರ ತರ ವಾಸಿಸೋಕೆ ಈಜಿಪ್ಟಿಗೆ ಹೋದ್ರು,+
ಆಮೇಲೆ ಅಶ್ಶೂರ್ಯರು ಕಾರಣವಿಲ್ಲದೆ ಅವ್ರ ಮೇಲೆ ದಬ್ಬಾಳಿಕೆ ಮಾಡಿದ್ರು.”
5 ಯೆಹೋವ ಹೀಗೆ ಹೇಳ್ತಿದ್ದಾನೆ “ಯಾವುದೇ ಬೆಲೆಯನ್ನ ತೆರದೆ ನನ್ನ ಜನ್ರನ್ನ ಕರ್ಕೊಂಡು ಹೋಗಲಾಗಿದೆ.
ಇಂಥ ಪರಿಸ್ಥಿತಿಯಲ್ಲಿ ನಾನು ಏನು ಮಾಡಲಿ?”
ಯೆಹೋವ ಹೀಗೆ ಹೇಳ್ತಿದ್ದಾನೆ “ನನ್ನ ಜನ್ರ ಮೇಲೆ ಆಳ್ವಿಕೆ ಮಾಡ್ತಿರುವವರು ಅವ್ರ ವಿಜಯದ ಬಗ್ಗೆ ಕೊಚ್ಕೊಳ್ತಿದ್ದಾರೆ,+
ದಿನವಿಡೀ ಅವರು ನನ್ನ ಹೆಸ್ರನ್ನ ಅಗೌರವಿಸ್ತಾ ಇರ್ತಾರೆ.+
6 ಆ ಕಾರಣದಿಂದಾಗಿ ನನ್ನ ಜನ್ರು ನನ್ನ ಹೆಸ್ರನ್ನ ತಿಳ್ಕೊಳ್ತಾರೆ,+
ಹೌದು, ಮಾತಾಡ್ತಿರುವವನು ನಾನೇ ಅಂತ ಆ ದಿನ ಅವರು ಅರ್ಥ ಮಾಡ್ಕೊಳ್ತಾರೆ.
ಇಗೋ! ಅದು ನಾನೇ!”
7 ಸಿಹಿಸುದ್ದಿ ತರುವವನ ಕಾಲುಗಳು ಬೆಟ್ಟಗಳ ಮೇಲೆ ಎಷ್ಟೋ ಸುಂದರವಾಗಿವೆ.+
ಅವನು ಶಾಂತಿಯನ್ನ ಹೇಳ್ತಾನೆ,+
ಒಳ್ಳೇ ವಿಷ್ಯಗಳ ಬಗ್ಗೆ ಸಿಹಿಸುದ್ದಿ ತಗೊಂಡು ಬರ್ತಾನೆ,
ರಕ್ಷಣೆಯನ್ನ ತಿಳಿಸ್ತಾನೆ,
ಚೀಯೋನಿಗೆ “ನಿನ್ನ ದೇವರು ರಾಜನಾಗಿದ್ದಾನೆ!”+ ಅಂತ ಹೇಳ್ತಾನೆ.
8 ಕೇಳು! ನಿನ್ನ ಕಾವಲುಗಾರರು ಸಂತೋಷದಿಂದ ಕೂಗ್ತಿದ್ದಾರೆ.
ಅವರು ಒಟ್ಟಾಗಿ ಹರ್ಷಧ್ವನಿಗೈತಿದ್ದಾರೆ,
ಯಾಕಂದ್ರೆ ಚೀಯೋನಲ್ಲಿ ಇರುವವ್ರನ್ನ ಯೆಹೋವ ಮತ್ತೆ ಒಟ್ಟುಸೇರಿಸ್ತಿರೋದು ಅವ್ರಿಗೆ ಸ್ಪಷ್ಟವಾಗಿ ಕಾಣಿಸ್ತಿದೆ.
9 ಹಾಳು ಬಿದ್ದಿರೋ ಯೆರೂಸಲೇಮಿನ ಸ್ಥಳಗಳೇ,+ ಉಲ್ಲಾಸಪಡಿ, ಒಟ್ಟಾಗಿ ಹರ್ಷಧ್ವನಿಗೈರಿ.
ಯಾಕಂದ್ರೆ ಯೆಹೋವ ತನ್ನ ಜನ್ರನ್ನ ಸಂತೈಸಿದ್ದಾನೆ,+ ಯೆರೂಸಲೇಮನ್ನ ಬಿಡಿಸ್ಕೊಂಡು ಬಂದಿದ್ದಾನೆ.+
10 ಎಲ್ಲ ಜನಾಂಗಗಳು ತನ್ನ ಪವಿತ್ರ ಬಲವನ್ನ ನೋಡೋ ತರ ಯೆಹೋವ ಮಾಡಿದ್ದಾನೆ,+
ನಮ್ಮ ದೇವರ ರಕ್ಷಣಾ ಕೆಲಸಗಳನ್ನ* ಭೂಮಿ ಮೇಲಿರೋ ಪ್ರತಿಯೊಬ್ರೂ ನೋಡ್ತಾರೆ.+
11 ಯೆಹೋವನ ಆಲಯದಲ್ಲಿರೋ ಪಾತ್ರೆಗಳನ್ನ ಹೊತ್ಕೊಳ್ಳುವವ್ರೇ,+
ಆ ಸ್ಥಳವನ್ನ ಬಿಟ್ಟು ಬನ್ನಿ! ಅಲ್ಲಿಂದ ಹೊರಗೆ ಬನ್ನಿ!+ ಅಶುದ್ಧವಾಗಿರೋ ಯಾವುದನ್ನೂ ಮುಟ್ಟಬೇಡಿ.+
ಅಲ್ಲಿಂದ ಹೊರಗೆ ಬನ್ನಿ.+ ನಿಮ್ಮನ್ನ ನೀವು ಶುದ್ಧವಾಗಿ ಇಟ್ಕೊಳ್ಳಿ!
12 ನೀವು ಅಲ್ಲಿಂದ ಹೆದರಿ ಹೋಗಬೇಕಾಗಿಲ್ಲ,
ನೀವು ಅಲ್ಲಿಂದ ಓಡಿ ಹೋಗಬೇಕಾಗಿಲ್ಲ,
ಯಾಕಂದ್ರೆ ಯೆಹೋವನೇ ನಿಮ್ಮ ಮುಂದೆಮುಂದೆ ಹೋಗ್ತಾನೆ,+
ಇಸ್ರಾಯೇಲಿನ ದೇವರು ನಿಮ್ಮ ರಕ್ಷಣೆಗಾಗಿ ನಿಮ್ಮ ಹಿಂದೆಹಿಂದೆ ಬರ್ತಾನೆ.+
13 ಇಗೋ! ನನ್ನ ಸೇವಕ+ ತಿಳುವಳಿಕೆಯಿಂದ* ಕ್ರಿಯೆಗೈತಾನೆ.
ಅವನನ್ನ ಮೇಲೇರಿಸಲಾಗುತ್ತೆ,
ಅವನನ್ನ ಉನ್ನತಕ್ಕೇರಿಸಲಾಗುತ್ತೆ, ಘನತೆಗೇರಿಸಲಾಗುತ್ತೆ.+
14 ಬೇರೆಲ್ಲ ಮನುಷ್ಯರಿಗಿಂತ ವಿಚಿತ್ರವಾಗಿದ್ದ ಅವನ ರೂಪವನ್ನ ಕಂಡು,
ಮಾನವಕುಲದಲ್ಲೇ ಬೇರೆಲ್ಲರಿಗಿಂತ ವಿಕಾರಗೊಂಡಿದ್ದ ಅವನ ಆಕಾರವನ್ನ ಕಂಡು,
ತುಂಬ ಜನ ಅವನನ್ನ ಅಚ್ಚರಿಯಿಂದ ದುರುಗುಟ್ಟಿ ನೋಡಿದ್ರು.