ಕೀರ್ತನೆ
ל [ಲಾಮೆದ್]
10 ಯೆಹೋವನೇ, ಯಾಕೆ ನೀನು ಅಷ್ಟು ದೂರ ಇದ್ದೀಯ?
ಕಷ್ಟಕಾಲದಲ್ಲಿ ಯಾಕೆ ನನ್ನ ಜೊತೆ ಕಣ್ಣಾಮುಚ್ಚಾಲೆ ಆಡ್ತೀಯ?+
נ [ನೂನ್]
ಅವನು ಯೆಹೋವನಿಗೆ ಗೌರವ ಕೊಡಲ್ಲ.
4 ದುಷ್ಟನು ಗರ್ವದಿಂದಾಗಿ ದೇವರನ್ನ ಹುಡುಕಲ್ಲ,
ಅವನ ಮನಸ್ಸಲ್ಲಿ ಯಾವಾಗ್ಲೂ “ದೇವರಿಲ್ಲ” ಅನ್ನೋ ಯೋಚನೆನೇ ಓಡ್ತಿರುತ್ತೆ.+
ಅವನು ತನ್ನ ಶತ್ರುಗಳನ್ನೆಲ್ಲ ಅಣಕಿಸ್ತಾನೆ.
6 ಅವನು ಮನಸ್ಸಲ್ಲಿ, “ನನ್ನನ್ನ ಯಾರೂ ಅಲ್ಲಾಡಿಸಕ್ಕಾಗಲ್ಲ,
ತೊಂದರೆ ನನ್ನ ಹತ್ರ ಯಾವತ್ತೂ ಸುಳಿಯಲ್ಲ” ಅಂದುಕೊಳ್ತಾನೆ.+
פ [ಪೇ]
7 ಅವನ ಬಾಯಲ್ಲಿ ಶಾಪ, ಸುಳ್ಳು ಮತ್ತು ಬೆದರಿಕೆನೇ ತುಂಬಿದೆ.+
ಅವನ ನಾಲಿಗೆಯ ಕೆಳಗೆ ತೊಂದ್ರೆ ಮತ್ತು ಹಾನಿ ಬಚ್ಚಿಟ್ಕೊಂಡಿದೆ.+
8 ಅವನು ಹಳ್ಳಿಗಳ ಹತ್ರ ಹೊಂಚುಹಾಕಿ ಕೂತಿರ್ತಾನೆ,
ಅಮಾಯಕನನ್ನ ಕೊಲ್ಲೋಕೆ ಅಲ್ಲಿಂದ ಎದ್ದುಬರ್ತಾನೆ.+
ע [ಅಯಿನ್]
ಅವನ ಕಣ್ಣು ಮುಗ್ಧನನ್ನ ಬಲಿ ತಗೊಳ್ಳೋಕೇ ನೋಡ್ತಾ ಇರುತ್ತೆ.+
9 ಅವನು ಗುಹೆಯಲ್ಲಿ* ಬಚ್ಚಿಟ್ಕೊಂಡಿರೋ ಸಿಂಹದ ತರ ಕಾಯ್ತಾ ಕೂತಿರ್ತಾನೆ.+
ನಿಸ್ಸಹಾಯಕನನ್ನ ಹಿಡಿಯೋಕೆ ಅವನು ಹೊಂಚುಹಾಕ್ತಾನೆ.
ಆ ನಿಸ್ಸಹಾಯಕ ಬಲೆಗೆ ಬಿದ್ದ ತಕ್ಷಣ ಅವನನ್ನ ಹಿಡೀತಾನೆ.+
10 ಆ ಅಮಾಯಕನನ್ನ ಜಜ್ಜಿ ಕೆಳಗೆ ಬೀಳಿಸ್ತಾನೆ,
ನಿಸ್ಸಹಾಯಕರು ಅವನ ಬಿಗಿ ಮುಷ್ಟಿಯಲ್ಲಿ* ಸಿಕ್ಕಿಹಾಕೊಳ್ತಾರೆ.
11 “ದೇವರು ಮರೆತುಹೋಗಿದ್ದಾನೆ.+
ಆತನು ತನ್ನ ಮುಖನ ತಿರುಗಿಸಿಕೊಂಡಿದ್ದಾನೆ.
ಆತನು ಯಾವತ್ತೂ ನೋಡಲ್ಲ” ಅಂತ ದುಷ್ಟ ತನ್ನ ಮನಸ್ಸಲ್ಲಿ ಅಂದುಕೊಳ್ತಾನೆ.+
ק [ಕೊಫ್]
12 ಯೆಹೋವನೇ, ದಯವಿಟ್ಟು ನಿನ್ನ ಶಕ್ತಿಯನ್ನ ತೋರಿಸು.+
ನಿಸ್ಸಹಾಯಕರನ್ನ ಮರೀಬೇಡ.+
13 ದುಷ್ಟನು ಯಾಕೆ ದೇವರಿಗೆ ಗೌರವ ಕೊಡಲ್ಲ?
“ದೇವರು ನನ್ನಿಂದ ಲೆಕ್ಕಕೇಳಲ್ಲ” ಅಂತ ಅವನು ಮನಸ್ಸಲ್ಲಿ ಅಂದುಕೊಳ್ತಾನೆ.
ר [ರೆಶ್]
14 ಆದ್ರೆ ನೀನು ಕಷ್ಟಗಳನ್ನ ಬಾಧೆಗಳನ್ನ ನಿಜವಾಗ್ಲೂ ನೋಡ್ತೀಯ.
ನೀನು ಎಲ್ಲ ಗಮನಿಸ್ತೀಯ, ಆಮೇಲೆ ವಿಷ್ಯಗಳನ್ನ ನಿನ್ನ ಕೈಗೆ ತಗೊತೀಯ.+
ש [ಶಿನ್]
15 ದುಷ್ಟನ ಮತ್ತು ಕೆಡುಕನ ಕೈಯನ್ನ ಮುರಿ,+
ಅವನ ದುಷ್ಟತನವನ್ನ ಬೇರುಸಮೇತ ಕಿತ್ತುಹಾಕು.
16 ಯೆಹೋವ ಯಾವಾಗಲೂ ರಾಜನಾಗಿ ಇರ್ತಾನೆ.+
ದುಷ್ಟ ಜನಾಂಗಗಳು ಭೂಮಿ ಮೇಲೆ ಇಲ್ಲದೆ ಹೋಗಿವೆ.+
ת [ಟಾವ್]
17 ಆದ್ರೆ ಯೆಹೋವನೇ, ನೀನು ದೀನರ ಕೋರಿಕೆಯನ್ನ ಕೇಳಿಸಿಕೊಳ್ತೀಯ.+
ಅವ್ರ ಹೃದಯಗಳನ್ನ ಬಲಪಡಿಸಿ+ ಅವ್ರ ಪ್ರಾರ್ಥನೆಗೆ ಗಮನ ಕೊಡ್ತೀಯ.+
18 ಅನಾಥರಿಗೂ ಜಜ್ಜಿಹೋದವರಿಗೂ ನ್ಯಾಯ ಕೊಡ್ತೀಯ.+
ಆಗ ಮಣ್ಣಿಂದ ಆದ ಮಾಮೂಲಿ ಮನುಷ್ಯ ಅವ್ರನ್ನ ಹೆದರಿಸೋಕೆ ಆಗಲ್ಲ.+